ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Stock Market Today: ಸೆನ್ಸೆಕ್ಸ್‌, ನಿಫ್ಟಿ ಸತತ 3ನೇ ದಿನ ಕುಸಿತ ಕಾರಣವೇನು?

Share Market Today 17th December 2025: ಬುಧವಾರ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 120 ಅಂಕ ಕುಸಿತಕ್ಕೀಡಾಗಿದ್ದು, 84,560ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ 42 ಅಂಕ ಕಳೆದುಕೊಂಡು 25,819ಕ್ಕೆ ಸ್ಥಿರವಾಯಿತು. ಸತತವಾಗಿ ಕಳೆದ ಮೂರು ದಿನಗಳಿಂದ ಸೆನ್ಸೆಕ್ಸ್ ಮತ್ತು ನಿಫ್ಟಿ ಕುಸಿದಿದ್ದು, ಹೂಡಿಕೆದಾರರಿಗೆ ಭಾರಿ ನಷ್ಟವಾಗಿದೆ.

ಸತತ 3ನೇ ದಿನವೂ ಕುಸಿದ ಸೆನ್ಸೆಕ್ಸ್‌, ನಿಫ್ಟಿ

ಸಾಂದರ್ಭಿಕ ಚಿತ್ರ -

ಮುಂಬೈ, ಡಿ. 17: ಬುಧವಾರ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ (Sensex) 120 ಅಂಕ ಕುಸಿತಕ್ಕೀಡಾಗಿದ್ದು, 84,560ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ (Nifty) 42 ಅಂಕ ಕಳೆದುಕೊಂಡು 25,819ಕ್ಕೆ ಸ್ಥಿರವಾಯಿತು. ಸತತವಾಗಿ ಕಳೆದ ಮೂರು ದಿನಗಳಿಂದ ಸೆನ್ಸೆಕ್ಸ್ ಮತ್ತು ನಿಫ್ಟಿ ನೆಗೆಟಿವ್‌ ವಲಯದಲ್ಲಿದೆ (Share Market Today 17th December 2025). ಡಾಲರ್‌ ಎದುರು ರುಪಾಯಿ ಮೌಲ್ಯ ಇಳಿಕೆ, ವಿದೇಶಿ ಹೂಡಿಕೆಯ ಹೊರ ಹರಿವಿನ ಪರಿಣಾಮ ಸೂಚ್ಯಂಕ ಇಳಿಯುತ್ತಿದೆ. ಭಾರತ ಮತ್ತು ಅಮೆರಿಕದ ವಾಣಿಜ್ಯ ಒಪ್ಪಂದ ವಿಳಂಬವಾಗಿರುವುದು ಕೂಡ ಪ್ರಭಾವ ಬೀರಿದೆ. ಒಟ್ಟಾರೆಯಾಗಿ ಬಿಎಸ್‌ಇ ಲಿಸ್ಟೆಡ್‌ ಕಂಪನಿಗಳ ಮಾರುಕಟ್ಟೆ ಮೌಲ್ಯವು 467 ಲಕ್ಷ ಕೋಟಿ ರುಪಾಯಿಗಳಿಂದ 466 ಲಕ್ಷ ಕೋಟಿ ರುಪಾಯಿಗೆ ಇಳಿದಿದೆ.

ಹೂಡಿಕೆದಾರರಿಗೆ 1 ಲಕ್ಷದ 6 ಸಾವಿರ ಕೋಟಿ ರುಪಾಯಿ ನಷ್ಟ ಉಂಟಾಯಿತು. ಈಗ ಹೈಲೈಟ್ಸ್‌ ನೋಡೋಣ.

  • ನಿಫ್ಟಿ 50 ಇಂಡೆಕ್ಸ್‌ನಲ್ಲಿ ಹೆಚ್ಚು ಲಾಭ ಗಳಿಸಿದ ಷೇರುಗಳ ವಿವರಗಳನ್ನು ನೋಡೋಣ. ನಿಫ್ಟಿ 50 ಇಂಡೆಕ್ಸ್‌ನಲ್ಲಿ ಇವತ್ತು 24 ಷೇರುಗಳು ಲಾಭ ಗಳಿಸಿದರೆ, 26 ಷೇರುಗಳು ನಷ್ಟಕ್ಕೀಡಾಯಿತು. ಶ್ರೀರಾಮ್‌ ಫೈನಾನ್ಸ್‌ (2.7%), ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (1.58%), ಹಿಂಡಾಲ್ಕೊ ಇಂಡಸ್ಟ್ರೀಸ್‌ (1.30%) ಷೇರು ಲಾಭ ಗಳಿಸಿತು.
  • ನಿಫ್ಟಿ 50 ಇಂಡೆಕ್ಸ್‌ನಲ್ಲಿ ಹೆಚ್ಚು ನಷ್ಟಕ್ಕೀಡಾದ ಷೇರುಗಳು: ಮ್ಯಾಕ್ಸ್‌ ಹೆಲ್ತ್‌ಕೇರ್‌ ಇನ್‌ಸ್ಟಿಟ್ಯೂಟ್‌ (3.71%), ಅಪೊಲೊ ಆಸ್ಪತ್ರೆ (1.98%), ಟ್ರೆಂಟ್‌ (1.66%)
  • ವಲಯಾವಾರು ಸೂಚ್ಯಂಕಗಳು ಹೇಗಿತ್ತು ಎಂಬುದನ್ನು ನೋಡೋಣ. ಪಿಎಸ್‌ಯು ಬ್ಯಾಂಕ್‌ ಇಂಡೆಕ್ಸ್‌ 1.29% ಏರಿಕೆ ದಾಖಲಿಸಿತು. ನಿಫ್ಟಿ ಐಟಿ 0.29%, ಲೋಹ 0.25%, ತೈಲ ಮತ್ತು ಅನಿಲ 0.23% ಏರಿತು. ಮಾಧ್ಯಮ, ಕನ್‌ ಸ್ಯೂಮರ್‌ ಡ್ಯೂರಬಲ್ಸ್‌, ರಿಯಾಲ್ಟಿ, ಎಫ್‌ಎಂಸಿಜಿ ಇಂಡೆಕ್ಸ್‌ಗಳು ಇಳಿಯಿತು.
  • ವಾಲ್ಯೂಮ್‌ ದೃಷ್ಟಿಯಿಂದ ಹೆಚ್ಚು ಸಕ್ರಿಯವಾಗಿದ್ದ ಷೇರುಗಳು: ವೊಡಾಫೋನ್‌ ಐಡಿಯಾ: 62 ಕೋಟಿ ಷೇರುಗಳು ಟ್ರೇಡ್‌ ಆಗಿತ್ತು. ಮೀಶೋ 18 ಕೋಟಿ ಷೇರು, ಓಲಾ ಎಲೆಕ್ಟ್ರಿಕ್‌ ಮೊಬಿಲಿಟಿಯ 15 ಕೋಟಿ ಷೇರುಗಳು ಟ್ರೇಡ್‌ ಆಗಿತ್ತು.
  • ಬಿಎಸ್‌ಇನಲ್ಲಿ 12 ಷೇರುಗಳು 15% ಗೂ ಹೆಚ್ಚು ಏರಿಕೆ ದಾಖಲಿಸಿವೆ. ಮೀಶೊ, ಟಿಸಿಐ ಫೈನಾನ್ಸ್, ಶಿಶ್‌ ಇಂಡಸ್ಟ್ರೀಸ್‌, ಟ್ರಾನ್ಸ್‌ ವಾರಂಟಿ ಫೈನಾನ್ಸ್‌, ಅಪೆಕ್ಸ್‌ ಫ್ರೋಜನ್‌ ಫುಡ್ಸ್‌ ಸೇರಿದಂತೆ 12 ಷೇರುಗಳ ದರಗಳು 15% ಗಿಂತಲೂ ಮೇಲಕ್ಕೇರಿತು.
  • ಬಿಎಸ್‌ಇನಲ್ಲಿ ಇವತ್ತು ಟ್ರೇಡ್‌ ನಡೆಸಿದ 4,328 ಷೇರುಗಳ ಪೈಕಿ 1,475 ಷೇರುಗಳು ಲಾಭ ಗಳಿಸಿದರೆ, 2,694 ಷೇರುಗಳು ನಷ್ಟಕ್ಕೀಡಾದವು.
  • ಬಿಎಸ್‌ಇಯಲ್ಲಿ ಸುಮಾರು 200 ಷೇರುಗಳು 52 ವಾರಗಳಲ್ಲಿನ ಕನಿಷ್ಟ ಮಟ್ಟಕ್ಕೆ ಇಳಿಯಿತು. ಅವುಗಳಲ್ಲಿ ಎಸಿಸಿ, ಆರ್‌ಇಸಿ, ಕೋಲ್ಗೇಟ್‌ ಪಾಮೊಲಿವ್‌ ಇಂಡಿಯಾ, ಮ್ಯಾನ್‌ ಕೈಂಡ್‌ ಫಾರ್ಮಾ, ಯುನೈಟೆಡ್‌ ಬ್ರೇವರೀಸ್‌, ಪೇಜ್‌ ಇಂಡಸ್ಟ್ರೀಸ್‌ ಇತ್ತು.

ಆಮದು ಸುಂಕ ಹೆಚ್ಚಿಸಿದ ಮೆಕ್ಸಿಕೊದೊಂದಿಗೆ ಆದ್ಯತೆ ವ್ಯಾಪಾರ ಒಪ್ಪಂದಕ್ಕೆ ಮುಂದಾದ ಭಾರತ

2025ರಲ್ಲಿ ಷೇರು ಪೇಟೆಗೆ ಕಠಿಣ ವರ್ಷವಾಗಿದ್ದರೂ, ಖ್ಯಾತ ಹೂಡಿಕೆದಾರ, ದಿವಂಗತ ರಾಕೇಶ್‌ ಜುಂಜುನ್‌ ವಾಲಾ ಅವರ ಪತ್ನಿ ರೇಖಾ ಜುಂಜುನ್‌ವಾಲಾ ಪ್ರವಾಹದ ವಿರುದ್ಧ ಈಜಿ ಗೆದ್ದಿದ್ದಾರೆ. ಅವರ ಪೋರ್ಟ್‌ ಫೋಲಿಯೊಗೆ ಅಂಥ ಸಮಸ್ಯೆಯಾಗಿಲ್ಲ. ಬದಲಿಗೆ 40,589 ಕೋಟಿ ರುಪಾಯಿಗಳಿಂದ 41,379 ಕೋಟಿ ರುಪಾಯಿಗೆ ಮೌಲ್ಯ ಏರಿಕೆ ಆಗಿದೆ. ಅವರು 25 ಲಿಸ್ಟೆಡ್‌ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡಿದ್ದಾರೆ.

ಇ-ಕಾಮರ್ಸ್‌ ಕಂಪನಿ ಮೀಶೋದ ಐಪಿಒ ಉತ್ತಮ ಪರ್ಫಾಮೆನ್ಸ್‌ ಕೊಟ್ಟಿದೆ. ಹೂಡಿಕೆದಾರರ ಮೌಲ್ಯದಲ್ಲಿ 47,000 ಕೋಟಿ ರುಪಾಯಿ ವೃದ್ಧಿಯಾಗಿದೆ.