ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮಹಾರಾಷ್ಟ್ರದ ಛತ್ರಪತಿ ಸಂಭಾಜಿ ನಗರದಲ್ಲಿ ಹೊಸ ಕಚೇರಿ ಉದ್ಘಾಟಿಸಿದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್

ಮಹಾರಾಷ್ಟ್ರ ಪ್ರದೇಶದಲ್ಲಿ ಗ್ರೀನ್‌ಫೀಲ್ಡ್ ಉತ್ಪಾದನಾ ಘಟಕವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಜುಲೈ 2024ರಲ್ಲಿ ಟಿಕೆಎಂ ಮತ್ತು ಮಹಾರಾಷ್ಟ್ರ ಸರ್ಕಾರದ ನಡುವೆ ತಿಳಿವಳಿಕೆ ಪತ್ರಕ್ಕೆ (ಎಂಓಯು) ಸಹಿ ಹಾಕಲಾಗಿತ್ತು. ಆ ಒಪ್ಪಂದದ ಭಾಗವಾಗಿಯೇ ಈ ಕಚೇರಿಯನ್ನು ತೆರೆಯಲಾಗಿದೆ.

ಹೊಸ ಕಚೇರಿ ಉದ್ಘಾಟಿಸಿದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್

Profile Ashok Nayak Jul 6, 2025 4:38 PM

ಛತ್ರಪತಿ ಸಂಭಾಜಿ ನಗರ: ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಮಹಾರಾಷ್ಟ್ರದ ಛತ್ರಪತಿ ಸಂಭಾಜಿ ನಗರ (ಸಿಎಸ್ಎನ್) ದಲ್ಲಿ ತನ್ನ ಹೊಸ ಸಿಟಿ ಕಚೇರಿಯನ್ನು ಉದ್ಘಾಟಿಸಿದೆ. ಮಹಾರಾಷ್ಟ್ರ ರಾಜ್ಯದಲ್ಲಿ ತನ್ನ ಉಪಸ್ಥಿತಿಯನ್ನು ಬಲಪಡಿಸುವ ಮತ್ತು ಭಾರತದ ಆಟೋ ಮೋಟಿವ್ ಉದ್ಯಮಕ್ಕೆ ಮಹತ್ತರ ಕೊಡುಗೆ ನೀಡುವ ತನ್ನ ಬದ್ಧತೆಯನ್ನು ಸಾರಲು ಈ ಕಚೇರಿಯು ಟಿಕೆಎಂ ಸಂಸ್ಥೆಗೆ ಮಹತ್ವದ ಮೈಲುಗಲ್ಲಾಗಿದೆ.

ಮಹಾರಾಷ್ಟ್ರ ಪ್ರದೇಶದಲ್ಲಿ ಗ್ರೀನ್‌ಫೀಲ್ಡ್ ಉತ್ಪಾದನಾ ಘಟಕವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಜುಲೈ 2024ರಲ್ಲಿ ಟಿಕೆಎಂ ಮತ್ತು ಮಹಾರಾಷ್ಟ್ರ ಸರ್ಕಾರದ ನಡುವೆ ತಿಳಿವಳಿಕೆ ಪತ್ರಕ್ಕೆ (ಎಂಓಯು) ಸಹಿ ಹಾಕಲಾಗಿತ್ತು. ಆ ಒಪ್ಪಂದದ ಭಾಗವಾಗಿಯೇ ಈ ಕಚೇರಿಯನ್ನು ತೆರೆಯಲಾಗಿದೆ.

ಹೊಸ ಕಚೇರಿಯು ಟಿಕೆಎಂನ ಪ್ರಾದೇಶಿಕ ಕಾರ್ಯಾಚರಣೆಗಳನ್ನು ಸುಗಮವಾಗಿ ನಡೆಸಲು ನೆರವಾಗಲಿದೆ ಮತ್ತು ಸುಸ್ಥಿರತೆ, ನೈಪುಣ್ಯ ಹೊಂದಿರುವ ಕಾರ್ಮಿಕರ ಸೃಷ್ಟಿ, ಉದ್ಯೋಗ ಸೃಷ್ಟಿ ಮತ್ತು ಮಹಾರಾಷ್ಟ್ರದ ಜನ ಸಮುದಾಯಕ್ಕೆ ಕೊಡುಗೆ ನೀಡುವ ಗಮನದೊಂದಿಗೆ ಕೈಗಾರಿಕಾ ಅಭಿವೃದ್ಧಿಗೆ ತನ್ನ ದೀರ್ಘಕಾಲೀನ ಬದ್ಧತೆಯನ್ನು ತೋರುವ ಪ್ರಮುಖ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ.

ಇದನ್ನೂ ಓದಿ: Vinayaka V Bhat Column: ಹೊಸಬಾಳೆಯವರು ಹೊಸದೇನನ್ನೂ ಹೇಳಿರಲಿಲ್ಲ...

7000 ಚದರ ಅಡಿಗಳಷ್ಟು ವಿಸ್ತೀರ್ಣ ಹೊಂದಿರುವ ಚಿಕಲ್ತಾನದ ಪ್ರೊಝೋನ್ ಮಾಲ್‌ ನ ಪಕ್ಕದ ಎಬಿಸಿ ಈಸ್ಟ್‌ ನಲ್ಲಿ ಸ್ಥಾಪಿತಗೊಂಡಿರುವ ಈ ಹೊಸ ಕಚೇರಿಯನ್ನು ಟಿಕೆಎಂನ ಅಧ್ಯಕ್ಷ, ಎಂಡಿ ಮತ್ತು ಸಿಇಓ ಶ್ರೀ ಮಸಕಜು ಯೋಶಿಮುರಾ ಮತ್ತು ಗ್ರೀನ್‌ಫೀಲ್ಡ್ ಪ್ರಾಜೆಕ್ಟ್ ಕಾರ್ಪೊರೇಟ್ ಪ್ಲಾನಿಂಗ್ ನ ಡೆಪ್ಯೂಟಿ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಸ್ವಪ್ನೇಶ್ ಮಾರು ಅವರು ಉದ್ಘಾಟಿಸಿದರು.

ಈ ಹೊಸ ಕಚೇರಿಯು ಮಹಾರಾಷ್ಟ್ರದಲ್ಲಿ ಟಿಕೆಎಂನ ಉಪಸ್ಥಿತಿಯನ್ನು ಬಲಪಡಿಸಲಿದೆ ಮತ್ತು ಈ ಪ್ರದೇಶವನ್ನು ಉತ್ಪಾದನಾ ಕೇಂದ್ರವಾಗಿ ಮಾರ್ಪಡಿಸುವ ಮತ್ತು ಸ್ಥಳೀಯ ಪ್ರಾಧಿಕಾರಗಳು, ಕೈಗಾರಿಕಾ ಸಂಸ್ಥೆಗಳೊಂದಿಗೆ ಗಾಢ ಸಂಪರ್ಕವನ್ನು ಹೊಂದುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸ ಲಿದೆ.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಟಿಕೆಎಂನ ಗ್ರೀನ್‌ಫೀಲ್ಡ್ ಪ್ರಾಜೆಕ್ಟ್ ಕಾರ್ಪೊ ರೇಟ್ ಪ್ಲಾನಿಂಗ್ ನ ಡೆಪ್ಯೂಟಿ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಸ್ವಪ್ನೇಶ್ ಮಾರು ಅವರು, “ಛತ್ರಪತಿ ಸಂಭಾಜಿ ನಗರದಲ್ಲಿ ನಮ್ಮ ಹೊಸ ಕಚೇರಿಯ ಉದ್ಘಾಟನೆ ಆಗಿರುವುದು ಸಂತೋಷ ತಂದಿದೆ. ಈ ಕಚೇರಿಯು ಸ್ಥಳೀಯವಾಗಿ ಉತ್ತಮ ಮಾರುಕಟ್ಟೆ ಸಂಪರ್ಕ ಗಳಿಸಲು ನೆರವಾಗುವ ಮೂಲಕ ಮತ್ತು ಪಾಲುದಾರರೊಂದಿಗಿನ ಸಂಬಂಧವನ್ನು ಬಲಪಡಿಸುವ ಮೂಲಕ ಹೆಚ್ಚು ಪ್ರಾದೇಶಿಕ ವಿಧಾನದ ಮೂಲಕ ಮುಂದುವರಿಯಲು ಸಹಾಯ ಮಾಡುತ್ತದೆ.

ಮುಂದಿನ ದಿನಗಳಲ್ಲಿ ಉದ್ಯೋಗ ಸೃಷ್ಟಿ, ನೈಪುಣ್ಯದ ಪ್ರತಿಭೆಗಳನ್ನು ಪೋಷಿಸುವುದು ಮತ್ತು ಸುಸ್ಥಿರ ಬೆಳವಣಿಗೆಯನ್ನು ಸಾಧ್ಯವಾಗಿಸುವ ನಿಟ್ಟಿನಲ್ಲಿ ಈ ಮರಾಠವಾಡದ ಸಾಮರ್ಥ್ಯವನ್ನು ಅನಾವರಣಗೊಳಿಸಲು ನಾವು ವಿಶ್ವದರ್ಜೆಯ ಉತ್ಪಾದನಾ ಘಟಕಗಳನ್ನು ಈ ಪ್ರದೇಶಕ್ಕೆ ತರುವ ಉದ್ದೇಶ ಹೊಂದಿದ್ದೇವೆ. ಸರ್ಕಾರದ ಉತ್ತಮ ಬೆಂಬಲದೊಂದಿಗೆ, ನಮ್ಮ ಉಪಸ್ಥಿತಿಯು ಪ್ರಾದೇಶಿಕ ಬದಲಾವಣೆಗೆ ಉತ್ತೇಜಕ ವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ವಿಕಸಿತ ಭಾರತ @2047ರ ರಾಷ್ಟ್ರೀಯ ದೃಷ್ಟಿಕೋನಕ್ಕೆ ಪೂರಕವಾಗಿ ಕೆಲಸ ಮಾಡಲಿದ್ದೇವೆ” ಎಂದು ಹೇಳಿದರು.

‘ಗ್ರೋ ಇಂಡಿಯಾ – ಗ್ರೋ ವಿತ್ ಇಂಡಿಯಾ’ ತತ್ವದಿಂದ ಮುನ್ನಡೆಯುತ್ತಿರುವ ಟೊಯೋಟಾ ಭಾರತದ ಬೆಳವಣಿಗೆಯ ಸಾಮರ್ಥ್ಯದಲ್ಲಿ ಇಟ್ಟಿರುವ ಆಳವಾದ ನಂಬಿಕೆಗೆ ಛತ್ರಪತಿ ಸಂಭಾಜಿ ನಗರದ ಕಚೇರಿ ಉದ್ಘಾಟನೆಯು ಉತ್ತಮ ಪುರಾವೆಯಾಗಿದೆ. ಗಟ್ಟಿಯಾದ ಪರಂಪರೆಯ ಬೆಳಕಿನಲ್ಲಿ ಆವಿಷ್ಕಾರ, ಸುಸ್ಥಿರತೆ, ಮತ್ತು ಪ್ರಾದೇಶಿಕ ಸಬಲೀಕರಣದ ಭವಿಷ್ಯದ ಉದ್ದೇಶ ಹೊಂದಿರುವ ಟಿಕೆಎಂ ಪ್ರಾದೇಶಿಕ ಅವಶ್ಯಕತೆಗಳು ಮತ್ತು ರಾಷ್ಟ್ರೀಯ ಅಭಿವೃದ್ಧಿ ಗುರಿಗಳನ್ನು ಬೆಂಬಲಿಸುವ ಉತ್ತಮವಾದ ಸಾರಿಗೆ ವ್ಯವಸ್ಥೆಯನ್ನು ಒದಗಿಸುವ ತನ್ನ ಬದ್ಧತೆಗೆ ಬದ್ಧವಾಗಿದೆ.

ಎಂಓಯು ಪ್ರಕಾರ ಯೋಜನೆ ಮುನ್ನಡೆಯುತ್ತಿದ್ದು, ಟಿಕೆಎಂ ಸ್ಥಳೀಯ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಪ್ರಮುಖ ಯೋಜನೆಗಳನ್ನು ಜಾರಿಗೆ ತರಲು ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಇವುಗಳಲ್ಲಿ ಉದ್ಯಮ-ಸಂಬಂಧಿತ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳ ಆರಂಭ ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ಬೆಂಬಲ, ಮೂಲಸೌಕರ್ಯ ಸುಧಾರಣೆಗಳು ಮತ್ತು ಅಗತ್ಯ ಕಲಿಕೆಯ ಸಂಪನ್ಮೂಲಗಳ ಒದಗಿಸುವಿಕೆ ಇತ್ಯಾದಿ ಒಳಗೊಂಡಿದ್ದು, ಇವೆಲ್ಲಾ ಯೋಜನೆಗಳು ವಿಶ್ವದರ್ಜೆಯ ನೈಪುಣ್ಯ ಹೊಂದಿರುವ ಪ್ರತಿಭೆಯ ಸೃಷ್ಟಿಗೆ ಕೊಡುಗೆ ನೀಡುವ ಮೂಲಕ ಒಳಗೊಳ್ಳುವಿಕೆಯ ಮತ್ತು ಸುಸ್ಥಿರ ಬೆಳವಣಿಗೆ ಸಾಧಿಸುವ ಕಡೆಗಿನ ಟಿಕೆಎಂನ ಬದ್ಧತೆಯನ್ನು ಮತ್ತಷ್ಟು ಬಲಪಡಿಸುತ್ತದೆ.