ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅರ್ಬನ್ ಕ್ರೂಸರ್ ಹೈರೈಡರ್‌ಗೆ ವಿಶೇಷ ‘ಪ್ರೆಸ್ಟೀಜ್ ಪ್ಯಾಕೇಜ್’ ಅನ್ನು ಪರಿಚಯಿಸಿದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್

ಪ್ರತಿಯೊಂದು ಆಕ್ಸೆಸರಿಯನ್ನು ಕೂಡ ಹೈರೈಡರ್‌ನ ವಿಶಿಷ್ಟ ಎಸ್‌ಯುವಿ ಗುಣಲಕ್ಷಣಗಳೊಂದಿಗೆ ಸಂಪೂರ್ಣವಾಗಿ ಬೆರೆಯುವಂತೆ ರೂಪಿಸಲಾಗಿದೆ. ಈ ಎಸ್ ಯು ವಿಯ ದೃಢವಾದ ನಿಲುವು, ಕ್ರೋಮ್ ವಿಶೇಷತೆಗಳು ಮತ್ತು ಆಕರ್ಷಕ ಸಿಲೂಯೆಟ್ ಅನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯು ತ್ತದೆ. ಜೊತೆಗೆ ಹೆಚ್ಚಿನ ರಕ್ಷಣೆ ಮತ್ತು ಬಾಳಿಕೆಯನ್ನು ಒದಗಿಸುತ್ತದೆ.

ವಿಶೇಷ ‘ಪ್ರೆಸ್ಟೀಜ್ ಪ್ಯಾಕೇಜ್’ ಅನ್ನು ಪರಿಚಯಿಸಿದ ಟೊಯೋಟಾ

Profile Ashok Nayak Jul 11, 2025 6:21 PM

ಬೆಂಗಳೂರು: ಗ್ರಾಹಕರಿಗೆ ಹೆಚ್ಚಿನ ಸಂತೋಷ ಒದಗಿಸಲು ಬದ್ಧವಾಗಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಸಂಸ್ಥೆಯು ತನ್ನ ಜನಪ್ರಿಯ ಸೆಲ್ಫ್-ಚಾರ್ಜಿಂಗ್ ಹೈಬ್ರಿಡ್ ಎಸ್‌ಯುವಿ—ಅರ್ಬನ್ ಕ್ರೂಸರ್ ಹೈರೈಡರ್‌ಗೆ ಸೀಮಿತ ಅವಧಿಯ ‘ಪ್ರೆಸ್ಟೀಜ್ ಪ್ಯಾಕೇಜ್’ ಅನ್ನು ಪರಿಚಯಿಸಿದೆ.

ಈಗಾಗಲೇ ಆಕರ್ಷಕ ಮತ್ತು ಅತ್ಯಾಧುನಿಕ ಶೈಲಿಯನ್ನು ಹೊಂದಿರುವ ಈ ಎಸ್‌ಯುವಿಯ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಲು ಈ ವಿಶೇಷ ಆಕ್ಸೆಸರಿ ಬಂಡಲ್ ಅನ್ನು ವಿನ್ಯಾಸಗೊಳಿಸ ಲಾಗಿದ್ದು, ಇದು ಗ್ರಾಹಕರ ಅರ್ಬನ್ ಕ್ರೂಸ್ ಹೈರೈಡರ್ ನ ಸ್ಟೈಲ್, ಆಕರ್ಷಣೆ ಮತ್ತು ಕಾರ್ಯ ನಿರ್ವಹಣೆಯನ್ನು ಹೆಚ್ಚಿಸಲಿದೆ.

2025ರ ಜುಲೈ ತಿಂಗಳಿಂದ ಲಭ್ಯವಿರುವ ಈ ಪ್ರೆಸ್ಟೀಜ್ ಪ್ಯಾಕೇಜ್‌ ನಲ್ಲಿ ಅತ್ಯುತ್ತಮ ನಗರ ಶೈಲಿಯ ವಿನ್ಯಾಸಕ್ಕೆ ಪರಿಪೂರ್ಣವಾಗಿ ಹೊಂದಿಕೊಳ್ಳುವ 10 ಉನ್ನತ- ಮೌಲ್ಯದ, ಡೀಲರ್‌ ಶಿಪ್ ನಲ್ಲಿ ಅಳವಡಿಸಲಾಗುವ ಒರಿಜಿನಲ್ ಆಕ್ಸೆಸರಿಗಳು ಸೇರಿವೆ, ಈ ಪ್ಯಾಕೇಜ್ ನಲ್ಲಿ ಈ ಕೆಳಗಿನವು ಲಭ್ಯ ವಿರುತ್ತವೆ:

  1. ಪ್ರೀಮಿಯಂ ಡೋರ್ ವೈಸರ್ – ಸ್ಟೇನ್‌ಲೆಸ್ ಸ್ಟೀಲ್ ಇನ್ಸರ್ಟ್‌ ನೊಂದಿಗೆ
  2. ಹುಡ್ ಎಂಬ್ಲಮ್
  3. ರೇರ್ ಡೋರ್ ಲಿಡ್ ಗಾರ್ನಿಶ್
  4. ಫೆಂಡರ್ ಗಾರ್ನಿಶ್
  5. ಬಾಡಿ ಕ್ಲಾಡಿಂಗ್
  6. ಫ್ರಂಟ್ ಬಂಪರ್ ಗಾರ್ನಿಶ್
  7. ಹೆಡ್ ಲ್ಯಾಂಪ್ ಗಾರ್ನಿಶ್
  8. ರೇರ್ ಬಂಪರ್ ಗಾರ್ನಿಶ್
  9. ರೇರ್ ಲ್ಯಾಂಪ್ ಗಾರ್ನಿಶ್ – ಕ್ರೋಮ್
  10. ಬ್ಯಾಕ್ ಡೋರ್ ಗಾರ್ನಿಶ್

ಇದನ್ನೂ ಓದಿ: Vishweshwar Bhat Column: ಆಟೋ ಪೈಲಟ್‌ ಬಗ್ಗೆ ಸಂದೇಹ

ಪ್ರತಿಯೊಂದು ಆಕ್ಸೆಸರಿಯನ್ನು ಕೂಡ ಹೈರೈಡರ್‌ನ ವಿಶಿಷ್ಟ ಎಸ್‌ಯುವಿ ಗುಣಲಕ್ಷಣಗಳೊಂದಿಗೆ ಸಂಪೂರ್ಣವಾಗಿ ಬೆರೆಯುವಂತೆ ರೂಪಿಸಲಾಗಿದೆ. ಈ ಎಸ್ ಯು ವಿಯ ದೃಢವಾದ ನಿಲುವು, ಕ್ರೋಮ್ ವಿಶೇಷತೆಗಳು ಮತ್ತು ಆಕರ್ಷಕ ಸಿಲೂಯೆಟ್ ಅನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯು ತ್ತದೆ. ಜೊತೆಗೆ ಹೆಚ್ಚಿನ ರಕ್ಷಣೆ ಮತ್ತು ಬಾಳಿಕೆಯನ್ನು ಒದಗಿಸುತ್ತದೆ.

ಬಿ-ಎಸ್‌ಯುವಿ ವಿಭಾಗದಲ್ಲಿ ಸಂಚಲನ

ಅರ್ಬನ್ ಕ್ರೂಸರ್ ಹೈರೈಡರ್‌ ನ ವಿಶಿಷ್ಟ ಆಕರ್ಷಣೆ ಎಂದರೆ ಇದರಲ್ಲಿ ವಿಭಾಗದಲ್ಲಿಯೇ ಮೊದಲ ನೆಯದಾದ ಸೆಲ್ಫ್-ಚಾರ್ಜಿಂಗ್ ಸ್ಟ್ರಾಂಗ್ ಹೈಬ್ರಿಡ್ ಎಲೆಕ್ಟ್ರಿಕ್ ಪವರ್‌ಟ್ರೇನ್ ಇದೆ. ಈ ವ್ಯವಸ್ಥೆಯು ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಶಕ್ತಿಯನ್ನು ಬುದ್ಧಿವಂತಿಕೆಯಿಂದ ಸಂಯೋಜಿಸಿ ಅತ್ಯುತ್ತಮ ಇಂಧನ ದಕ್ಷತೆ ಮತ್ತು ಸುಗಮ, ಶಬ್ದರಹಿತ ಕಾರ್ಯಕ್ಷಮತೆಯನ್ನು ನೀಡುತ್ತದೆ. ಟೊಯೋಟಾದ 1.5ಲೀ ಟಿ ಎನ್ ಜಿ ಎ ಆಟ್ಕಿನ್ಸನ್ ಸೈಕಲ್ ಎಂಜಿನ್ ಮತ್ತು ಅತ್ಯಾಧುನಿಕ ಎಲೆಕ್ಟ್ರಿಕ್ ಮೋಟಾರ್‌ ನಿಂದ ಚಾಲಿತವಾದ ಹೈಬ್ರಿಡ್ ವೇರಿಯೆಂಟ್ ನಗರ ಮತ್ತು ಹೆದ್ದಾರಿ ಚಾಲನೆಗೆ ಸೂಕ್ತವಾಗಿದೆ.

ನಿಯೋ ಡ್ರೈವ್ (ಮೈಲ್ಡ್-ಹೈಬ್ರಿಡ್) ವೇರಿಯೆಂಟ್ ಗಳು 1.5ಲೀ ಕೆ-ಸೀರೀಸ್ ಎಂಜಿನ್‌ನೊಂದಿಗೆ ದೊರೆಯಲಿದ್ದು, ಈ ಕಾರು 5-ಸ್ಪೀಡ್ ಮ್ಯಾನುಯಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ ಮಿಷನ್‌ ನಲ್ಲಿ ದೊರೆಯಲಿದೆ. ಹೆಚ್ಚಿನ ಸೌಲಭ್ಯ ಒದಗಿಸಲು ಆಯ್ದ ಟ್ರಿಮ್‌ ಗಳು, ಬುದ್ಧಿವಂತ ಆಲ್-ವೀಲ್ ಡ್ರೈವ್ (ಎಡಬ್ಲ್ಯೂಡಿ) ವ್ಯವಸ್ಥೆಯನ್ನು ಹೊಂದಿದ್ದು, ಈ ವ್ಯವಸ್ಥೆಗಳು ಹೈರೈಡರ್ ಅನ್ನು ದಕ್ಷತೆಯಷ್ಟೇ ಬಹುಮುಖವಾಗಿಸುತ್ತದೆ.

ಟೊಯೋಟಾದ ಜಾಗತಿಕ ಎಸ್‌ಯುವಿ ಡಿಎನ್ಎಯನ್ನು ಪ್ರತಿಬಿಂಬಿಸುವ ಹೈರೈಡರ್ ಎಸ್ ಯು ವಿ ಕ್ರಿಸ್ಟಲ್ ಆಕ್ರಿಲಿಕ್ ಗ್ರಿಲ್, ಟ್ವಿನ್ ಎಲ್ಇಡಿ ಡಿ ಆರ್ ಎಲ್ ಗಳು ಮತ್ತು 17-ಇಂಚಿನ ಅಲಾಯ್ ವೀಲ್‌ ಗಳನ್ನು ಹೊಂದಿದೆ. ಒಳಗಡೆ, ಕ್ಯಾಬಿನ್ ಆರಾಮದಾಯಕತೆ ಮತ್ತು ಅನುಕೂಲತೆ ಎರಡ ನ್ನೂ ಒದಗಿಸುತ್ತಿದ್ದು, ವೆಂಟಿಲೇಟೆಡ್ ಲೆದರ್ ಸೀಟ್‌ ಗಳು, ಪಾನೋರಾಮಿಕ್ ಸನ್‌ರೂಫ್, ವೈರ್‌ ಲೆಸ್ ಆಪಲ್ ಕಾರ್‌ಪ್ಲೇ/ಆಂಡ್ರಾಯ್ಡ್ ಆಟೋ ಜೊತೆ ಹೊಂದಿಕೊಳ್ಳುವ 9-ಇಂಚಿನ ಟಚ್‌ ಸ್ಕ್ರೀನ್‌, ವೈರ್‌ಲೆಸ್ ಚಾರ್ಜಿಂಗ್, ಆಂಬಿಯೆಂಟ್ ಲೈಟಿಂಗ್ ಮತ್ತು 360-ಡಿಗ್ರಿ ಕ್ಯಾಮೆರಾ ಹೊಂದಿದೆ. ಹಿಂದುಗಡೆ ರಿಕ್ಲೈನಿಂಗ್ ಸೀಟ್‌ಗಳು, ರೇರ್ ಏಸಿ ವೆಂಟ್‌ಗಳು, ಯು ಎಸ್ ಬಿ ಪೋರ್ಟ್‌ ಗಳು ಮತ್ತು 60:40 ಸ್ಪ್ಲಿಟ್ ರೇರ್ ಸೀಟ್‌ ನಂತಹ ವ್ಯವಸ್ಥೆಗಳಿದ್ದು, ಈ ಎಲ್ಲವೂ ಈ ಕಾರನ್ನು ಆಧುನಿಕ ಭಾರತೀಯ ಕುಟುಂಬಗಳಿಗೆ ಸೂಕ್ತವಾಗಿಸುತ್ತವೆ.

ಟೊಯೋಟಾ 66 ವಿಶೇಷ ಆಕ್ಸೆಸರಿಗಳು, 3-ವರ್ಷ/ 1,00,000 ಕಿಮೀ ವಾರಂಟಿ (5 ವರ್ಷ/2,20,000 ಕಿಮೀ ವರೆಗೆ ವಿಸ್ತರಿಸಬಹುದು) ಮತ್ತು 8-ವರ್ಷ/1,60,000 ಕಿಮೀ ಹೈಬ್ರಿಡ್ ಬ್ಯಾಟರಿ ವಾರಂಟಿ ಹೊಂದಿದ್ದು, ಈ ಮೂಲಕ ಉತ್ತಮ ಮಾಲೀಕತ್ವ ಅನುಭವ ಒದಗಿಸುತ್ತದೆ. ವಿಶೇಷವಾಗಿ ಪ್ರೀಮಿ ಯಂ ಮತ್ತು ತೊಂದರೆ-ಮುಕ್ತ ಡ್ರೈವಿಂಗ್ ಅನುಭವವನ್ನು ನೀಡುತ್ತದೆ.

2022ರಲ್ಲಿ ಬಿಡುಗಡೆಗೊಂಡ ಅರ್ಬನ್ ಕ್ರೂಸರ್ ಹೈರೈಡರ್ ಭಾರತದ ಎಸ್‌ಯುವಿ ಖರೀದಿದಾರ ರಲ್ಲಿ ಜನಪ್ರಿಯತೆಯನ್ನು ಗಳಿಸಿದ್ದು, ಇತ್ತೀಚೆಗೆ ಇದು 1,00,000 ಯೂನಿಟ್ ಮಾರಾಟದ ಮೈಲಿ ಗಲ್ಲನ್ನು ದಾಟಿದೆ. ಇದು ಟೊಯೋಟಾದ ಹೈಬ್ರಿಡ್ ತಂತ್ರಜ್ಞಾನದ ಮೇಲೆ ಹೆಚ್ಚುತ್ತಿರುವ ವಿಶ್ವಾಸ ಮತ್ತು ಸುಸ್ಥಿರ ಸಾರಿಗೆ ಕಡೆಗಿನ ಅದರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಆಕರ್ಷಕ ವಿನ್ಯಾಸ, ವಿಶಾಲವಾದ ಒಳಾಂಗಣ, ಮತ್ತು ಅತ್ಯುತ್ತಮ ವಿಶ್ವಾಸಾರ್ಹತೆಯೊಂದಿಗೆ ಹೈರೈಡರ್ ಆನಂದಕರ ಮಾಲೀಕತ್ವದ ಅನುಭವವನ್ನು ನೀಡುತ್ತದೆ.

ಆಸಕ್ತ ಗ್ರಾಹಕರು ತಮ್ಮ ಹತ್ತಿರದ ಟೊಯೋಟಾ ಡೀಲರ್‌ಶಿಪ್‌ಗೆ ಭೇಟಿ ನೀಡಬಹುದಾಗಿದ್ದು, ಅಲ್ಲಿ ಪ್ರೆಸ್ಟೀಜ್ ಪ್ಯಾಕೇಜ್ ಕುರಿತು ತಿಳಿಯಬಹುದು ಮತ್ತು ಟೊಯೋಟಾ ಹೈಬ್ರಿಡ್ ಎಸ್‌ಯುವಿ ಅನ್ನು ಡ್ರೈವಿಂಗ್ ಮಾಡುವ ಆನಂದವನ್ನು ಅರಿಯಬಹುದು.