Sin Tax: ಮದ್ಯ, ಸಿಗರೇಟ್ ಬೆಲೆ ಏರಿಕೆಯಾಗುತ್ತಾ? ಸಿನ್ ಟ್ಯಾಕ್ಸ್ ಬಗ್ಗೆ ಸಚಿವೆ ನಿರ್ಮಲಾ ಹೇಳಿದ್ದೇನು?
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸಿದ್ದು, ಯಾವ ವಸ್ತುಗಳ ಬೆಲೆ ಏರಿಕೆಯಾಯ್ತು, ಯಾವ ವಸ್ತುಗಳ ಬೆಲೆ ಇಳಿಕೆಯಾಯ್ತು ಎನ್ನುವ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಈ ಮಧ್ಯೆ ಸಿನ್ ಟ್ಯಾಕ್ಸ್‌ಗೆ ಒಳಪಡುವ ಮದ್ಯ ಮತ್ತು ಸಿಗರೇಟ್ ಮತ್ತೆ ದುಬಾರಿಯಾಗಲಿದ್ಯಾ ಎನ್ನುವ ಬಹುತೇಕರ ಪ್ರಶ್ನೆಗೆ ಇಲ್ಲಿದೆ ಉತ್ತರ.
ಹೊಸದಿಲ್ಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಮೋದಿ 3.0 ಸರ್ಕಾರದ 2ನೇ ಮತ್ತು ತಮ್ಮ 8ನೇ ಬಜೆಟ್ ಅನ್ನು ಶನಿವಾರ (ಫೆ. 1) ಮಂಡಿಸಿದ್ದಾರೆ. ಮಧ್ಯಮ ವರ್ಗ ಜನರಿಗೆ, ರೈತರಿಗೆ ಅನುಕೂಲವಾಗುವಂತೆ ಹಲವು ಕೊಡುಗೆಗಳನ್ನು ಅವರು ಘೋಷಿಸಿದ್ದಾರೆ. ಈ ಮಧ್ಯೆ ಸಿನ್ ಟ್ಯಾಕ್ಸ್ (Sin Tax)ನಲ್ಲಿ ಒಳಪಡುವ ಸಿಗರೇಟ್ ಮತ್ತು ಮದ್ಯದ ಬೆಲೆ ಏರಿಕೆಯಾಗಿದ್ಯಾ ಎನ್ನುವ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಈ ಪ್ರಶ್ನೆಗೆ ಇಲ್ಲಿದೆ ಉತ್ತರ.
ಸಾಮಾನ್ಯವಾಗಿ ಪ್ರತಿ ಬಜೆಟ್‌ನಲ್ಲಿ ಮದ್ಯ, ಸಿಗರೇಟ್‌ನಂತಹ ವಸ್ತುಗಳಿಗೆ ಹೆಚ್ಚಿನ ತೆರಿಗೆ ವಿಧಿಸಲಾಗುತ್ತದೆ. ಹೀಗಾಗಿ ಪ್ರತಿ ಬಾರಿಯೂ ಇವುಗಳ ಬೆಲೆ ಏರಿಕೆಯಾಗುತ್ತವೆ. ಹಾಗಾದರೆ ಈ ಬಜೆಟ್‌ನಲ್ಲಿ ಏನಾಗಿದೆ?
ಸರ್ಕಾರ ಈ ಬಾರಿ ಸಿನ್ ಟ್ಯಾಕ್ಸ್ (Sin Tax) ಹೆಚ್ಚಿಸಲಿದೆ. ಇದರಿಂದ ಮದ್ಯ, ಸಿಗರೇಟ್, ತಂಬಾಕು ಉತ್ಪನ್ನಗಳ ಬೆಲೆ ಹೆಚ್ಚಿಸಬಹುದು ಎಂಬ ಊಹಾಪೋಹ ಬಜೆಟ್‌ಗೂ ಮುನ್ನವೇ ಹರಿದಾಡಿತ್ತು. ಆದರೆ ಈ ವರ್ಷದ ಬಜೆಟ್‌ನಲ್ಲಿ ಸರ್ಕಾರ ಸಿನ್ ಟ್ಯಾಕ್ಸ್ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ. ಅದಾಗ್ಯೂ ಆಲ್ಕೋಹಾಲ್, ಸಿಗರೇಟ್, ತಂಬಾಕು ದುಬಾರಿಯಾಗಲಿದೆ.
ಏನಿದು ಸಿನ್ ಟ್ಯಾಕ್ಸ್?
ವ್ಯಕ್ತಿಗಳಿಗೆ ಮತ್ತು ಸಮಾಜಕ್ಕೆ ಹಾನಿಕಾರಕ ವಸ್ತುಗಳನ್ನು ಮಾರಾಟ ಮಾಡುವುದು ಪಾಪದ ಕೆಲಸ. ಅದಕ್ಕೆ ಹೆಚ್ಚಿನ ತೆರಿಗೆ ವಿಧಿಸುವುದು ನೈತಿಕತೆಯ ಕ್ರಮ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಅದಕ್ಕೆ ಸಿನ್ ಟ್ಯಾಕ್ಸ್ ಅಥವಾ ಪಾಪ ತೆರಿಗೆ ಎಂದು ಕರೆಯಲಾಗುತ್ತದೆ. ಆರೋಗ್ಯಕ್ಕೆ ಹಾನಿ ಉಂಟು ಮಾಡುವ ತಂಬಾಕು ಉತ್ಪನ್ನಗಳು, ಆಲ್ಕೋಹಾಲ್ ಉತ್ಪನ್ನಗಳು ಮಾತ್ರವಲ್ಲದೆ ಸಮಾಜದ ಸ್ವಾಸ್ಥ್ಯಕ್ಕೆ ಮಾರಕವಾಗುವ ಲಾಟರಿ, ಗ್ಯಾಂಬ್ಲಿಂಗ್ ಇತ್ಯಾದಿ ಆಟಗಳನ್ನೂ ಸಿನ್ ಟ್ಯಾಕ್ಸ್‌ಗೆ ಒಳಪಡುತ್ತದೆ. ಇವುಗಳ ಬಳಕೆಯನ್ನು ನಿಯಂತ್ರಿಸಲು ಹೆಚ್ಚಿನ ತೆರಿಗೆ ಹೇರಲಾಗುತ್ತದೆ. ಭಾರತ ಮಾತ್ರವಲ್ಲ ಅನೇಕ ರಾಷ್ಟ್ರಗಳು ಆದಾಯವನ್ನು ಗಳಿಸಲು ಮತ್ತು ನಾಗರಿಕರನ್ನು ಆರೋಗ್ಯಕರ ಆಯ್ಕೆಗಳತ್ತ ಸೆಳೆಯಲು ಪಾಪ ತೆರಿಗೆಗಳನ್ನು ವಿಧಿಸುತ್ತವೆ. 2017ರಲ್ಲಿ ಭಾರತದಲ್ಲಿ ಸಿನ್ ಟ್ಯಾಕ್ಸ್ ಜಾರಿಗೆ ಬಂತು.
ಈ ಸುದ್ದಿಯನ್ನೂ ಓದಿ: Union Budget 2025-26: 1 ಗಂಟೆ 14 ನಿಮಿಷ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್; ಇಲ್ಲಿದೆ ಅತೀ ದೀರ್ಘ, ಕಡಿಮೆ ಅವಧಿಯ ಬಜೆಟ್ ಭಾಷಣಗಳ ವಿವರ
ಅಗ್ಗವಾಗುವ ವಸ್ತುಗಳು
ಟಿ.ವಿ., ಮೊಬೈಲ್, ವಿದ್ಯುತ್ ಕಾರು, ಇವಿ ಬ್ಯಾಟರಿ, ಕ್ಯಾನ್ಸರ್ ಔಷಧಗಳು, ಸ್ವದೇಶಿ ಬಟ್ಟೆ.
ದುಬಾರಿಯಾಗುವ ವಸ್ತುಗಳು
ಫ್ಯಾಟ್ ಪ್ಯಾನೆಲ್ ಡಿಸ್‌ಪ್ಲೇ, ನೇಯ್ಗೆಯ ಬಟ್ಟೆಗಳು, ಐಷರಾಮಿ ಸರಕುಗಳು, ಆಲ್ಕೋಹಾಲ್, ತಂಬಾಕು, ಟೆಲಿಕಾಂ ಉಪಕರಣ, ಸಿಗರೇಟ್, ಚಿನ್ನ, ಬೆಳ್ಳಿ ಆಮದು ಸುಂಕ ಏರಿಕೆ, ವಿಮಾನ ಇಂಧನ, ವಿಮಾನ ಟಿಕೆಟ್ ದರ.