ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Stock Market Outlook: ನಿಫ್ಟಿಗೆ 22,500ರಲ್ಲಿ ಸಿಗುತ್ತಾ ಸಪೋರ್ಟ್?‌

ನಿಫ್ಟಿ 50 ಇಂಡೆಕ್ಸ್‌ ಕಳೆದ ಶುಕ್ರವಾರ 22,800 ಅಂಕಗಳ ಮಟ್ಟಕ್ಕಿಂತ ಕೆಳಕ್ಕಿಳಿದಿತ್ತು. 22,795ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತ್ತು. ಮೆಟಲ್‌ ಸೆಕ್ಟರ್‌ ಮಾತ್ರ ಗಳಿಕೆಯನ್ನು ದಾಖಲಿಸಿತ್ತು. ಮತ್ತೊಂದು ಕಡೆ ಆಟೊಮೊಬೈಲ್‌, ಫಾರ್ಮಾ, ಹೆಲ್ತ್‌ಕೇರ್‌ ಸೂಚ್ಯಂಕಗಳು 2% ಇಳಿಕೆ ದಾಖಲಿಸಿದ್ದವು. ಹಾಗಾದರೆ ಮುಂದಿನ ವಾರ ಸ್ಟಾಕ್‌ ಮಾರ್ಕೆಟ್‌ನಲ್ಲಿ ಏನಾಗಬಹುದು?

ನಿಫ್ಟಿಗೆ 22,500ರಲ್ಲಿ ಸಿಗುತ್ತಾ ಸಪೋರ್ಟ್?‌

ಸಾಂದರ್ಭಿಕ ಚಿತ್ರ.

Keshava Prasad B Keshava Prasad B Feb 23, 2025 5:32 PM

l ಕೇಶವ ಪ್ರಸಾದ್‌ ಬಿ.

ಮುಂಬೈ: ನಿಫ್ಟಿ 50 (Nifty 50) ಇಂಡೆಕ್ಸ್‌ ಕಳೆದ ಶುಕ್ರವಾರ 22,800 ಅಂಕಗಳ ಮಟ್ಟಕ್ಕಿಂತ ಕೆಳಕ್ಕಿಳಿದಿತ್ತು. 22,795ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತ್ತು. ಮೆಟಲ್‌ ಸೆಕ್ಟರ್‌ ಮಾತ್ರ ಗಳಿಕೆಯನ್ನು ದಾಖಲಿಸಿತ್ತು. ಅಂದರೆ ಅಮೆರಿಕದ ಟಾರಿಫ್‌ಗಳು ಚೀನಾದ ಡಂಪಿಂಗ್‌ ಪ್ರಾಕ್ಟೀಸ್‌ ವಿರುದ್ಧ ದೇಶೀಯ ಉತ್ಪಾದಕರನ್ನು ಸಂರಕ್ಷಿಸುವುದಾಗಿದೆ ಎಂದು ಷೇರು ಹೂಡಿಕೆದಾರರು ನಿರಾಳರಗಿದ್ದರು (Stock Market Outlook). ಮತ್ತೊಂದು ಕಡೆ ಆಟೊಮೊಬೈಲ್‌, ಫಾರ್ಮಾ, ಹೆಲ್ತ್‌ಕೇರ್‌ ಸೂಚ್ಯಂಕಗಳು 2% ಇಳಿಕೆ ದಾಖಲಿಸಿದ್ದವು. ಹಾಗಾದರೆ ಮುಂದಿನ ವಾರ ಸ್ಟಾಕ್‌ ಮಾರ್ಕೆಟ್‌ನಲ್ಲಿ ಏನಾಗಬಹುದು? ಇಲ್ಲಿದೆ ವಿವರ.

ಲೆಮೊನ್‌ ಮಾರ್ಕೆಟ್ಸ್‌ ಸಂಸ್ಥೆಯ ವಿಶ್ಲೇಷಕ ಗೌರವ್‌ ಗಾರ್ಗ್‌ ಅವರ ಪ್ರಕಾರ, ನಿಫ್ಟಿ 50 ಇಂಡೆಕ್ಸ್‌ಗೆ 22,800 ರ ಮಟ್ಟದಲ್ಲಿ ಕೀ ಸಪೋರ್ಟ್‌ ಲೆವೆಲ್‌ ಕೈ ತಪ್ಪಿದೆ. ಮುಂದಿನ ಕ್ರಿಟಿಕಲ್‌ ಸಪೋರ್ಟ್‌ ಲೆವೆಲ್‌ ಯಾವುದು ಎಂದರೆ 22,500 ಹಾಗೂ 23,000 ಮತ್ತು 23,200ರ ಮಟ್ಟದಲ್ಲಿ ರೆಸಿಸ್ಟೆನ್ಸ್‌ ಲೆವೆಲ್‌ ಇದೆ. ಹೀಗಾಗಿ ಮುಂದಿನ ವಾರ ನಿಫ್ಟಿ 22,500-23,200ರ ಮಟ್ಟದಲ್ಲಿ ಟ್ರೇಡ್‌ ನಡೆಸುವ ನಿರೀಕ್ಷೆ ಇದೆ ಎಂದು ಗೌರವ್‌ ವಿವರಿಸಿದ್ದಾರೆ. ಸ್ಟಾಕ್‌ ಮಾರ್ಕೆಟ್‌ ಪರಿಭಾಷೆಯಲ್ಲಿ ಸಪೋರ್ಟ್‌ ಲೆವೆಲ್‌ ಎಂದರೆ, ಆ ಮಟ್ಟಕ್ಕಿಂತ ಕೆಳಕ್ಕೆ ಇಳಿಯಲ್ಲ. ರೆಸಿಸ್ಟೆನ್ಸ್‌ ಲೆವೆಲ್‌ ಎಂದರೆ, ಆ ಮಟ್ಟ ದಾಟಿದರೆ ಸೂಚ್ಯಂಕ ಏರುವ ಚಾನ್ಸ್‌ ಇಲ್ಲ ಎಂದರ್ಥ. ಹೀಗಾಗಿ ಮುಂದಿನ ವಾರ 22,500-23,200 ಮಟ್ಟದಲ್ಲಿ ನಿಫ್ಟಿ ವಹಿವಾಟು ನಡೆಸುವ ಸಾಧ್ಯತೆ ಇದೆ.

ಈ ವಾರ ಷೇರು ಮಾರುಕಟ್ಟೆ ಮೇಲೆ ಪ್ರಭಾವ ಬೀರಲಿರುವ ಪ್ರಮುಖ ಬೆಳವಣಿಗೆಗಳ ಬಗ್ಗೆ ನೋಡೋಣ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರ ನಿರ್ಗಮನ, ಟ್ರಂಪ್‌ ಅವರ ಟಾರಿಫ್‌ ವಾರ್‌, ಜಾಗತಿಕ ವ್ಯಾಪಾರದ ಅನಿಶ್ಚಿತತೆಗಳು ಸ್ಟಾಕ್‌ ಮಾರ್ಕೆಟ್‌ ಮೇಲೆ ಪ್ರಭಾವ ಬೀರಬಹುದು. ಫೆಬ್ರವರಿಯ ಕೊನೆಯ ವಾರದಲ್ಲಿ ಭಾರತದ ಮೂರನೇ ತ್ರೈಮಾಸಿಕದ ಜಿಡಿಪಿ ಡೇಟಾ , F&O ಎಕ್ಸ್‌ಪೈರಿ ಮಾರುಕಟ್ಟೆ ಮೇಲೆ ಪ್ರಭಾವ ಬೀರಬಹುದು. ಫೆಬ್ರವರಿ 28ಕ್ಕೆ ಜಿಡಿಪಿ ಅಂಕಿ ಅಂಶಗಳು ಪ್ರಕಟವಾಗಲಿದೆ. ವಿಶ್ಲೇಷಕರ ಪ್ರಕಾರ ಮೂರನೇ ತ್ರೈಮಾಸಿಕದ ಜಿಡಿಪಿ ಗ್ರೋತ್‌ ರೇಟ್‌ 6.2%-6.4% ಇರಬಹುದು. ಇದು ನಾಲ್ಕು ವರ್ಷದಲ್ಲಿಯೇ ಕನಿಷ್ಠವಾಗಿದೆ.

ಎಫ್‌ಐಐಗಳು 2025ರಲ್ಲಿ ಇದುವರೆಗೆ 1 ಲಕ್ಷದ 12 ಸಾವಿರ ಕೋಟಿ ರುಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಹೀಗಿದ್ದರೂ, ಡೊಮೆಸ್ಟಿಕ್‌ ಇನ್‌ ಸ್ಟಿಟ್ಯೂಷನಲ್‌ ಇನ್ವೆಸ್ಟರ್ಸ್‌ 16,582 ಕೋಟಿ ರುಪಾಯಿಗಳ ಹೂಡಿಕೆಯನ್ನು ಕಳೆದ ವಾರ ಮಾಡಿದ್ದಾರೆ. ಫೆಬ್ರವರಿ 27ರಂದು ಅಮೆರಿಕದ 4ನೇ ತ್ರೈಮಾಸಿಕದ ಅಂದಾಜು ಜಿಡಿಪಿ ಡೇಟಾ ಪ್ರಕಟವಾಗಲಿದೆ.

ಈ ಸುದ್ದಿಯನ್ನೂ ಓದಿ: Stock Market Outlook: ಈ ವಾರ ಸೆನ್ಸೆಕ್ಸ್‌, ನಿಫ್ಟಿ ಮತ್ತಷ್ಟು ಕುಸಿತ? ಮಾರ್ಚ್‌ ಅಂತ್ಯಕ್ಕೆ ಬುಲ್‌ ರನ್?

ಇನ್ನು ಐಪಿಒ ಮತ್ತು ಕಾರ್ಪೊರೇಟ್‌ ಸುದ್ದಿಗಳ ಬಗ್ಗೆ ಹೇಳುವುದಿದ್ದರೆ, ಮೂರು ಹೊಸ ಎಸ್‌ಎಂಇ ಐಪಿಒಗಳು ಈ ವಾರ ನಡೆಯಲಿವೆ.

ಕ್ವಾಲಿಟಿ ಪವರ್‌ ಎಲೆಕ್ಟ್ರಿಕಲ್‌ ಎಕ್ವಿಪ್‌ಮೆಂಟ್ಸ್‌ ಫೆಬ್ರವರಿ 24ರಂದು ಐಪಿಒ ನಡೆಸಲಿದೆ. ಎಸ್‌ಬಿಐ ಕಾರ್ಡ್ಸ್‌, ಪವರ್‌ ಫೈನಾನ್ಸ್‌ ಕಾರ್ಪೊರೇಷನ್‌ ಡಿವಿಡೆಂಡ್‌ ವಿತರಿಸಲಿದೆ. ಒಟ್ಟಾರೆಯಾಗಿ ಮಾರುಕಟ್ಟೆಯ ಕರೆಕ್ಷನ್‌ ಬಗ್ಗೆ ಹೂಡಿಕೆದಾರರು ಎಚ್ಚರಿಕೆಯಿಂದ ವೀಕ್ಷಿಸಬೇಕಾಗುತ್ತದೆ. ನಿಫ್ಟಿ 22,700 ಅಂಕಗಳಿಗಿಂತ ಕೆಳಕ್ಕೆ ಇಳಿಯುತ್ತಾ ಅಥವಾ ರಿಬೌಂಡ್‌ ಆಗುತ್ತಾ ಎಂದು ಕಾದು ನೋಡಬೇಕಾಗಿದೆ. ಹೀಗಿದ್ದರೂ, ದೀರ್ಘಕಾಲೀನ ಹೂಡಿಕೆದಾರರು ಹೆಚ್ಚು ಯೋಚಿಸಬೇಕಾದ ಅವಶ್ಯಕತೆ ಇಲ್ಲ ಎನ್ನುತ್ತಾರೆ ತಜ್ಞರು.