ಬಕೆಟ್‌ನಲ್ಲಿ ಬಿದ್ದು 11 ತಿಂಗಳ ಮಗು ಸಾವು; ಮನನೊಂದು ಆತ್ಮಹತ್ಯೆಗೆ ಶರಣಾದ ತಾಯಿ
ಮನೆಯ ಬಾತ್ ರೂಮ್ ಬಕೆಟ್ ನೀರಿನಲ್ಲಿ ಮಗು ಬಿದ್ದು ಸಾವನ್ನಪ್ಪಿದ ಬಳಿಕ ಮನನೊಂದ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಚಂದ್ರಾಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಗುವನ್ನು ಅಗಸ್ತ್ಯ ಎಂದು ಗುರುತಿಸಲಾಗಿದ್ದು, ಮೃತ ತಾಯಿ ಪ್ರತಿಭಾ ಎಂದು ಹೇಳಲಾಗಿದೆ.
ಸಂಗ್ರಹ ಚಿತ್ರ -
ಬೆಂಗಳೂರು: ಮನೆಯ ಬಾತ್ ರೂಮ್ ಬಕೆಟ್ ನೀರಿನಲ್ಲಿ ಮಗು ಬಿದ್ದು (Self Harming) ಸಾವನ್ನಪ್ಪಿದ ಬಳಿಕ ಮನನೊಂದ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಚಂದ್ರಾಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಗುವನ್ನು ಅಗಸ್ತ್ಯ ಎಂದು ಗುರುತಿಸಲಾಗಿದ್ದು, ಮೃತ ತಾಯಿ ಪ್ರತಿಭಾ ಎಂದು ಹೇಳಲಾಗಿದೆ. 29 ವರ್ಷದ ಪ್ರತಿಭಾ ಹಾಗೂ ಆಕೆ ಗಂಡ ಮಹಂತೇಶ್ ಇಬ್ಬರು ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದಾರೆ. ಈ ದಂಪತಿಗೆ 11 ತಿಂಗಳ ಹಿಂದಷ್ಟೇ ಗಂಡು ಮಗು ಜನಿಸಿದೆ. ಗಂಡ-ಹೆಂಡತಿ ಇಬ್ಬರು ಮನೆಯಿಂದಲೇ ಕೆಲಸ ಮಾಡುತ್ತಿದ್ದರು.
ತಾಯಿ- ಮಗು ಇಬ್ಬರೇ ಮನೆಯಲ್ಲಿದ್ದರು. ಈ ವೇಳೇ ತಾಯಿ ಪ್ರತಿಭಾ ಒಣಗಾಕಿದ್ದ ಬಟ್ಟೆ ತರಲು ಟೆರಸ್ ಗೆ ಹೋಗಿದ್ದು, ತಾಯಿ ಇಲ್ಲದ ವೇಳೆ ಮಗು ಬಚ್ಚಲು ಮನೆಯಲ್ಲಿದ್ದ ಬಕೆಟ್ ಬಳಿ ಹೋಗಿ ನೀರಿನಲ್ಲಿ ಮುಳುಗಿ ಮಗು ಸಾವನ್ನಪ್ಪಿದೆ. ಮಗು ಸಾವನ್ನಪ್ಪಿದ್ದನ್ನು ಕಂಡು ಗಾಬರಿಯಾದ ಪ್ರತಿಭಾ, ಮಗುವಿನ ಸಾವಿಗೆ ತಾನೇ ಕಾರಣ ಅಂತ ಡೆತ್ ನೋಟ್ ಬರೆದು ನೇಣಿಗೆ ಶರಣಾಗಿದ್ದಾರೆ. ಮನೆಗೆ ಗಂಡ ಮಹೇಶ್ ಬಂದಾಗ ಬಾಗಿಲು ತೆಗೆದಿರಲಿಲ್ಲ.
ಸ್ಪೇರ್ ಕೀ ಮೂಲಕ ಬಾಗಿಲು ತೆಗೆದು ನೋಡಿದ್ರೆ ತಾಯಿ ಮಗು ಶವವಾಗಿ ಪತ್ತೆಯಾಗಿದ್ದಾರೆ. ಡೆತ್ ನೋಟ್ ನೋಡಿ ಗಂಡ ಮಹೇಶ್ ಕೂಡ ಆಘಾತಗೊಂಡಿದ್ದಾರೆ. ನಂತರ ಪೊಲೀಸರಿ ಮಾಹಿತಿ ನೀಡಲಾಗಿದೆ. ಸದ್ಯ ಚಂದ್ರಾ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Self Harming: ಹುಟ್ಟು ಹಬ್ಬದ ದಿನವೇ ನೇಣು ಬಿಗಿದು ಹೆಲ್ತ್ ಇನ್‌ಸ್ಪೆಕ್ಟರ್ ಆತ್ಮಹತ್ಯೆ
ಡೆತ್ ನೋಟ್‌ನಲ್ಲೇನಿದೆ?
ನಾನು ಬಟ್ಟೆ ಒಣಹಾಕಿದ್ದು, ಅದನ್ನ ತರಲು ಟೆರೆಸ್‌ಗೆ ಹೋಗಿದ್ದೆ. ಈ ವೇಳೆ ಮಗು ಆಟ ಆಡಿಕೊಂಡು ಬಚ್ಚಲು ಮನೆಗೆ ಹೋಗಿದೆ. ಆ ವೇಳೆ ಬಕೆಟ್‌ನಲ್ಲಿ ಮುಳುಗಿ ಸತ್ತಿದೆ. ನನ್ನ ಮಗುವನ್ನ ಉಳಿಸಿಕೊಳ್ಳಲು ಆಗಿಲ್ಲ. ನನ್ನ ಮಗುವಿನ ಸಾವಿಗೆ ನಾನೇ ಕಾರಣ. ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರೋದಾಗಿ ಪ್ರತಿಭಾ ಡೆತ್ ನೋಟ್‌ನಲ್ಲಿ ಬರೆದಿದ್ದಾರೆ.