ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಾಲಿವುಡ್‌ನಿಂದ ಬದಲಾಗಬಹುದೇ ನಟಿ ಅನುಷ್ಕಾ ಶೆಟ್ಟಿ ಅದೃಷ್ಟ? ಅಚ್ಚರಿ ಮೂಡಿಸಿದ ಸ್ವೀಟಿಯ ಹೊಸ ಸಿನಿಮಾ

ನಟಿ ಅನುಷ್ಕಾ ಶೆಟ್ಟಿ ಅವರು 'ಬಾಹುಬಲಿ 2' ನಂತರ ಎದುರಿಸುತ್ತಿರುವ ಸೋಲುಗಳಿಗೆ 'ಕಥನಾರ್' ಚಿತ್ರದ ಮೂಲಕ ಬ್ರೇಕ್ ಹಾಕಲು ಸಜ್ಜಾಗಿದ್ದಾರೆ. ಮಲಯಾಳಂನ ಜಯಸೂರ್ಯ ನಟನೆಯ ಈ ಅದ್ದೂರಿ ಚಿತ್ರದಲ್ಲಿ ಅನುಷ್ಕಾ ಪ್ರಮುಖ ಪಾತ್ರ ಮಾಡಿದ್ದು, ಸಿನಿಮಾ 15 ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ.

ಅನುಷ್ಕಾ ಶೆಟ್ಟಿ ಅದೃಷ್ಟ ಬದಲಿಸುತ್ತಾ ಮಾಲಿವುಡ್? 15 ಭಾಷೆಗಳಲ್ಲಿ 'ಕಥನಾರ್'

-

Avinash GR
Avinash GR Apr 2, 2026 12:17 PM

ಅನುಷ್ಕಾ ಶೆಟ್ಟಿ ಅವರು ಕಳೆದ ಘಾಟಿ ಸಿನಿಮಾದಲ್ಲಿ ನಟಿಸಿದ್ದರು. ಆದರೆ ಆ ಸಿನಿಮಾ ಹೇಳಿಕೊಳ್ಳುವಂತಹ ಯಶಸ್ಸನ್ನು ಪಡೆಯಲಿಲ್ಲ. ಬಾಹುಬಲಿ 2 ನಂತರ ಅನುಷ್ಕಾ ಅವರ ಸಿನಿಜರ್ನಿ ತುಂಬಾ ಸ್ಲೋ ಆಗಿದೆ. ನಟಿಸಿರುವುದು ಬರೀ ನಾಲ್ಕೇ ಸಿನಿಮಾಗಳಾದರೂ ಗೆಲುವು ತುಂಬಾ ವಿರಳ. ಈ ನಡುವೆ ಅವರು ತಮ್ಮ ಅದೃಷ್ಟ ಪರೀಕ್ಷೆಗಾಗಿ ಮಲಯಾಳಂ ಚಿತ್ರರಂಗಕ್ಕೆ ಅವರು ಕಾಲಿಟ್ಟಿದ್ದಾರೆ. ನಟ ಜಯಸೂರ್ಯ ಜೊತೆಗೆ ಕಥನಾರ್ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ.

ಪ್ಯಾನ್‌ ಇಂಡಿಯಾ ಸಿನಿಮಾದಲ್ಲಿ ಅನುಷ್ಕಾ

ಅನುಷ್ಕಾ ಶೆಟ್ಟಿ ನಟಿಸಿರುವ ಕಥನಾರ್‌ ಸಿನಿಮಾವು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಮೂಡಿಬರಲಿದೆ. ಮಲಯಾಳಂನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಶ್ರೀ ಗೋಕುಲಂ ಮೂವೀಸ್ ಬ್ಯಾನರ್ ಅಡಿಯಲ್ಲಿ ಗೋಕುಲಂ ಗೋಪಾಲನ್ ಅವರು ನಿರ್ಮಿಸಿರುವ ಈ ಬಹುನಿರೀಕ್ಷಿತ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ಮೂಡಿಬರುತ್ತಿದ್ದು, ಹೀಗಾಗಿ ಕನ್ನಡದಲ್ಲಿಯೂ ಟ್ರೇಲರ್ ರಿಲೀಸ್‌ ಆಗಿದೆ. ಬಹಳ ವಿಭಿನ್ನವಾಗಿ ಮೂಡಿಬಂದಿರುವ ಈ ಟ್ರೇಲರ್‌ ಕುತೂಹಲ ಮೂಡಿಸಿದೆ. ಅನುಷ್ಕಾ ಫ್ಯಾನ್ಸ್‌ಗೂ ಒಂದು ರೀತಿಯಲ್ಲಿ ಅಚ್ಚರಿ ಮೂಡಿಸಿದೆ.

ಅನುಷ್ಕಾ ಶೆಟ್ಟಿ ಮದುವೆ ವದಂತಿಗೆ ಬ್ರೇಕ್: ಸುಳ್ಳು ಸುದ್ದಿ ಹರಡುವವರ ವಿರುದ್ಧ 'ಸ್ವೀಟಿ' ತಂಡ ಗರಂ!

15 ಭಾಷೆಗಳಲ್ಲಿ ತೆರೆಗೆ ಬರಲಿರುವ ಕಥನಾರ್

ಜಯಸೂರ್ಯ, ಅನುಷ್ಕಾ ಶೆಟ್ಟಿ ಜೊತೆಗೆ ಪ್ರಭುದೇವ, ಸನೂಪ್ ಸಾನ್, ಸ್ಯಾಂಡಿ, ದೇವಿಕಾ, ನಿತೀಶ್ ಭಾರದ್ವಾಜ್, ವಿನೀತ್, ಹರೀಶ್ ಉತ್ತಮನ್, ಶ್ರೀಕಾಂತ್ ಮುರಳಿ ಮತ್ತು ಕುಲ್‌ಪ್ರೀತ್ ಯಾದವ್ ಮುಂತಾದವರು ನಟಿಸಿದ್ದಾರೆ. "ಹಾಲಿವುಡ್ ಮಟ್ಟದ ವಿಎಫ್ಎಕ್ಸ್ ಮತ್ತು ಹಿನ್ನೆಲೆ ಸಂಗೀತ, ವಿಷ್ಯುವಲ್ ಎಫೆಕ್ಟ್ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿವೆ. ಜಯಸೂರ್ಯ ತಮ್ಮ ವೃತ್ತಿಜೀವನದ ಸುಮಾರು ನಾಲ್ಕು ವರ್ಷಗಳನ್ನು ಈ ಚಿತ್ರಕ್ಕಾಗಿ ಮೀಸಲಿಟ್ಟಿದ್ದಾರೆ. ಕಥನಾರ್ ಚಿತ್ರ 15 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ" ಎಂದು ಚಿತ್ರತಂಡ ಹೇಳಿಕೊಂಡಿದೆ.

Anushka Shetty: ಕೊನೆಗೂ ಅನುಷ್ಕಾ ಶೆಟ್ಟಿಗೆ ಕೂಡಿಬಂತು ಕಂಕಣ ಭಾಗ್ಯ: ಉದ್ಯಮಿ ಜೊತೆ ಮದುವೆ?

ಕಥನಾರ್ ಸಿನಿಮಾಗೆ ರೋಜಿನ್ ಥಾಮಸ್ ಆಕ್ಷನ್ ಕಟ್ ಹೇಳಿದ್ದಾರೆ. ಇನ್ನು ಚಿತ್ರಕ್ಕೆ ಆರ್. ರಾಮಾನಂದ್ ಮತ್ತು ರೋಜಿನ್ ಥಾಮಸ್ ಚಿತ್ರಕಥೆ ಬರೆದಿದ್ದು, ನೀಲ್ ಡಿ ಕುನ್ಹಾ ಛಾಯಾಗ್ರಹಣ ಮಾಡಿದ್ದಾರೆ. ರಾಹುಲ್ ಸುಬ್ರಮಣ್ಯನ್ ಸಂಗೀತ ಸಂಯೋಜಿಸಿದ್ದು, ಅವರೇ ಸಾಹಿತ್ಯವನ್ನೂ ಬರೆದಿರೋದು ವಿಶೇಷ. ರೋಜಿನ್ ಥಾಮಸ್ ಎಡಿಟಿಂಗ್ ಜೊತೆ ವಿಎಫ್‌ಎಕ್ಸ್ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ಅತೀ ಶೀಘ್ರದಲ್ಲೇ ಈ ಸಿನಿಮಾ ತೆರೆಗೆ ಬರಲಿದೆ.

ಸಾಲು ಸಾಲು ಸೋಲುಗಳನ್ನು ಕಂಡಿರುವ ನಟಿ ಅನುಷ್ಕಾ ಶೆಟ್ಟಿಗೆ ಕಥನಾರ್‌ ಚಿತ್ರದಿಂದಾದರೂ ದೊಡ್ಡ ಮಟ್ಟದ ಗೆಲುವು ಸಿಗಲಿ ಎಂಬುದು ಫ್ಯಾನ್ಸ್‌ ನಿರೀಕ್ಷೆ ಆಗಿದೆ.