Physical Assault: 6 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ; ಪೊಲೀಸ್ ಕಾನ್ಸ್‌ಟೇಬಲ್ ವಿರುದ್ಧ ಪೋಕ್ಸೋ ಕೇಸ್ ದಾಖಲು
ರಕ್ಷಣೆ ನೀಡಬೇಕಾದ ಆರಕ್ಷಕನೇ ಭಕ್ಷಕನಾಗಿದ್ದಾನೆ. 6 ವರ್ಷದ ಪುಟ್ಟ ಬಾಲಕಿ ಮೇಲೆ ಕಾನ್ಸ್ ಟೆಬಲ್ ಓರ್ವ ಲೈಂಗಿಕ ದೌರ್ಜನ್ಯವೆಸಗಿರುವ ಘಟನೆ ನಡೆದಿದೆ. ಹುಬ್ಬಳ್ಳಿಯ ಹುಬ್ಬಳ್ಳಿಯ ಘಂಟಿಕೇರಿ ಪೊಲೀಸ್ ಠಾಣೆಯ ಕಾನ್ಸ್ ಟೇಬಲ್ ಹಜರತ್ ಮಿಟ್ಟೇಖಾನ್ ವಿರುದ್ಧ ಬಾಲಕಿಯ ತಂದೆ ಗಂಭೀರ ಆರೋಪ ಮಾಡಿದ್ದು, ಪೋಕ್ಸೋ ಕೇಸ್ ದಾಖಲಾಗಿದೆ.


ಹುಬ್ಬಳ್ಳಿ: ರಕ್ಷಣೆ ನೀಡಬೇಕಾದ ಆರಕ್ಷಕನೇ ಭಕ್ಷಕನಾಗಿದ್ದಾನೆ. 6 ವರ್ಷದ ಪುಟ್ಟ ಬಾಲಕಿ ಮೇಲೆ ಕಾನ್ಸ್ಟೆಬಲ್ ಓರ್ವ ಲೈಂಗಿಕ ದೌರ್ಜನ್ಯವೆಸಗಿರುವ (Physical Assault) ಘಟನೆ ನಡೆದಿದೆ. ಹುಬ್ಬಳ್ಳಿಯ ಹುಬ್ಬಳ್ಳಿಯ ಘಂಟಿಕೇರಿ ಪೊಲೀಸ್ ಠಾಣೆಯ ಕಾನ್ಸ್ ಟೇಬಲ್ ಹಜರತ್ ಮಿಟ್ಟೇಖಾನ್ ವಿರುದ್ಧ ಬಾಲಕಿಯ ತಂದೆ ಗಂಭೀರ ಆರೋಪ ಮಾಡಿದ್ದು, ಪೋಕ್ಸೋ ಕೇಸ್ ದಾಖಲಾಗಿದೆ. ದೂರು ಕೊಡಲು ಹೋಗಿದ್ದ ವ್ಯಕ್ತಿ ಪತ್ನಿ ಪರಿಚಯ ಮಾಡಿಕೊಂಡಿದ್ದ ಕಾನ್ಸ್ ಟೇಬಲ್ ಆ ಮಹಿಳೆ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ, ಆಕೆ ಮಗಳ ಜೊತೆಗೆ ಅಶ್ಲೀಲವಾಗಿ ವರ್ತಿಸಿದ್ದಾನೆ ಹೀಗಾಗಿ ಕಾನ್ಸ್ ಟೇಬಲ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಾಲಕಿ ತಂದೆ ಒತ್ತಾಯಿಸಿದ್ದಾರೆ.
ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸೆಗಿರುವ ಕಾನ್ಸ್ ಟೇಬಲ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಾಲಕಿಯ ತಂದೆ ಪೊಲೀಸರ ಮೊರೆ ಹೋಗಿದ್ದಾನೆ. ಈ ಹಿನ್ನೆಲೆಯಲ್ಲಿ ಕಾನ್ಸ್ಟೇಬಲ್ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ. ಸದ್ಯ ತನಿಖೆ ನಡೆಯುತ್ತಿದೆ.
ಉತ್ತರ ಪ್ರದೇಶದಲ್ಲಿಯೂ ಇದೇ ರೀತಿಯ ಘಟನೆ ನಡೆದಿದ್ದು, ಕಳೆದ ಬುಧವಾರ ಉತ್ತರ ಪ್ರದೇಶದ ಫಾರೂಖಾಬಾದ್‌ನಲ್ಲಿ 11 ನೇ ತರಗತಿಯ 15 ವರ್ಷದ ದಲಿತ ಬಾಲಕಿಯನ್ನು ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರು ಅಪಹರಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
35 ವರ್ಷದ ಕಾನ್‌ಸ್ಟೆಬಲ್ ಕಾರಿನಲ್ಲಿ ಬಂದು ತನ್ನ ಮಗಳನ್ನು ವಾಹನಕ್ಕೆ ಎಳೆದುಕೊಂಡು ಹೋಗಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎಂದು ಬಾಲಕಿಯ ತಂದೆ ತಮ್ಮ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ. ಮಧ್ಯಾಹ್ನವಾದರೂ ಆಕೆ ಮನೆಗೆ ಹಿಂತಿರುಗದಿದ್ದಾಗ, ಕುಟುಂಬವು ಆಕೆಗಾಗಿ ಹುಡುಕಾಟ ಆರಂಭಿಸಿತು.
ಈ ಸುದ್ದಿಯನ್ನೂ ಓದಿ: ಒಡಿಶಾವನ್ನು ಬೆಚ್ಚಿಬೀಳಿಸಿದ ಅತ್ಯಾಚಾರ ಪ್ರಕರಣ: ಹತ್ತು ದಿನಗಳಲ್ಲಿ ಐದು ಸಾಮೂಹಿಕ ಅತ್ಯಾಚಾರ ದೂರು ದಾಖಲು
ಸುಮಾರು ಐದು ಗಂಟೆಗಳ ನಂತರ, ಆರೋಪಿಯು ಮನೆಯ ಬಳಿ ಅದೇ ಕಾರಿನಿಂದ ಆಕೆಯನ್ನು ಹೊರಗೆ ತಳ್ಳಿದ್ದಾನೆ. ನೆರೆಹೊರೆಯವರು ಆರೋಪಿಯನ್ನು ನೋಡಿದಾಗ, ಅವರು ಕುಂಟುಂಬಕ್ಕೆ ತಿಳಿಸಿದ್ದಾರೆ. ಪೋಷಕರು ಬೂಕ್ ಮೂಲಕ ಕಾರನ್ನು ಸುಮಾರು 200 ಮೀಟರ್ ದೂರ ಬೆನ್ನಟ್ಟಿ ತಡೆದು ನಿಲ್ಲಿಸುವಲ್ಲಿ ಯಶಸ್ವಿಯಾದರು. “ಚಾಲಕ ಪರಾರಿಯಾಗಲು ಯತ್ನಿಸಿದ. ಆದರೆ, ನಾವು ಆರೋಪಿಯನ್ನು ಹಿಡಿದು ಸಂಜೆ ಪೊಲೀಸರಿಗೆ ಒಪ್ಪಿಸಿದೆವು” ಎಂದು ಬಾಲಕಿಯ ತಂದೆ ಹೇಳಿದರು. ಅತ್ಯಾಚಾರ, ಅಪಹರಣ ಮತ್ತು ಪೋಕ್ಸೋ ಕಾಯ್ದೆ ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.