ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಜತೆಗಿದ್ದ ಗೆಳೆಯನನ್ನು ಥಳಿಸಿ 13 ವರ್ಷದ ಬಾಲಕಿಯನ್ನು ಪಾಳುಬಿದ್ದ ಕಟ್ಟಡಕ್ಕೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ; ತಿಂಗಳ ಬಳಿಕ ಘಟನೆ ಬೆಳಕಿಗೆ ಬಂದಿದ್ದು ಹೇಗೆ?

Crime News: ಫರಿದಾಬಾದ್‌ನ ಪಾಳುಬಿದ್ದ ಕಟ್ಟಡದಲ್ಲಿ 13 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದೆ. ಬಾಲಕಿಯನ್ನು ಒತ್ತೆಯಾಳಾಗಿ ಇರಿಸಿ 10,000 ರೂಪಾಯಿಗೆ ಬೇಡಿಕೆ ಇರಿಸಲಾಗಿತ್ತು.ಓರ್ವ ಆರೋಪಿ ತಲೆ ಮರೆಸಿಕೊಂಡಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಾಳುಬಿದ್ದ ಕಟ್ಟಡದಲ್ಲಿ ಬಾಲಕಿ ಮೇಲೆ ಅತ್ಯಾಚಾರ

ಸಂಗ್ರಹ ಚಿತ್ರ -

ಚಂಡೀಗಢ, ಅ. 3: ಸ್ನೇಹಿತನನ್ನು ಭೇಟಿಯಾಗಲು ಹೋಗಿದ್ದ ಬಾಲಕಿಯನ್ನು ಒತ್ತೆಯಾಳಾಗಿರಿಸಿಕೊಂಡು ಸಾಮೂಹಿಕ ಅತ್ಯಾಚಾರ (Faridabad crime) ಎಸಗಿರುವ ಘಟನೆ ಹರಿಯಾಣದ ಫರಿದಾಬಾದ್‌ನಲ್ಲಿ (Physically abuse case) ನಡೆದಿದೆ. ಪಾಳುಬಿದ್ದ ಕಟ್ಟಡವೊಂದರಲ್ಲಿ ಯುವಕರ ಗುಂಪೊಂದು 13 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದ್ದು, ಇನ್ನೋರ್ವ ತಲೆಮರೆಸಿಕೊಂಡಿದ್ದಾನೆ. ಆರೋಪಿಗಳನ್ನು ಕುನಾಲ್, ಯಶ್ ಮತ್ತು ದೀಪಕ್ ಹಾಗೂ ತಲೆ ಮರೆಸಿಕೊಂಡಿರುವವನನ್ನು ಪ್ರಿನ್ಸ್‌ ಎಂದು ಗುರುತಿಸಲಾಗಿದೆ. ಬಂಧಿತ ಮೂವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೇವಸ್ಥಾನಕ್ಕೆ ನುಗ್ಗಿ ಅರ್ಚಕನ ಮೇಲೆ ಹಲ್ಲೆ; ದೇವಿಯ ವಿಗ್ರಹಕ್ಕೂ ಹಾನಿ ಮಾಡಿದ ಕಿರಾತಕ: ವಿಡಿಯೊ ವೈರಲ್‌

ಈ ಘಟನೆ ಕಳೆದ ಆಗಸ್ಟ್ 24 ರಂದು ಗ್ರೇಟರ್ ಫರಿದಾಬಾದ್ ಪ್ರದೇಶದಲ್ಲಿ ನಡೆದಿದೆ. ಟ್ಯೂಷನ್ ತರಗತಿಯ ಬಳಿಕ ಬಾಲಕಿ ತನ್ನ ಸ್ನೇಹಿತನನ್ನು ಭೇಟಿಯಾಗಲು ಹೋಗಿದ್ದಳು. ಈ ಸಂದರ್ಭದಲ್ಲಿ ಯುವಕರ ಗುಂಪೊಂದು ಇವರ ಬಳಿಗೆ ಬಂದು ಬೆದರಿಸಿ ಪಾಳುಬಿದ್ದ ಕಟ್ಟಡವೊಂದಕ್ಕೆ ಕರೆದುಕೊಂಡು ಹೋಗಿದೆ. ಬಳಿಕ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ.

ಈ ಕುರಿತು ಸೆಪ್ಟೆಂಬರ್ 28 ರಂದು ಪೊಲೀಸ್ ದೂರು ದಾಖಲಿಸಲಾಗಿದೆ. ಬಳಿಕ ತನಿಖೆ ಆರಂಭಿಸಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ ಎಂದು ಎಸಿಪಿ ಸರಾಯ್ ಸಂದೀಪ್ ಮೋರ್ ತಿಳಿಸಿದ್ದಾರೆ.

ಬಾಲಕಿಯ ಪೋಷಕರು ನೀಡಿರುವ ದೂರಿನ ಪ್ರಕಾರ, ಆರು ಮಂದಿ ಯುವಕರು ಅಪ್ರಾಪ್ತರಿಬ್ಬರನ್ನು ಕಟ್ಟಡದವರೆಗೆ ಹಿಂಬಾಲಿಸಿ, ಅವರನ್ನು ಬೆದರಿಸಿದ್ದು, ಬಳಿಕ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಇಬ್ಬರೂ ಅಪ್ರಾಪ್ತರು ಸುಮಾರು ಒಂದು ತಿಂಗಳ ಕಾಲ ಈ ಘಟನೆಯ ಬಗ್ಗೆ ಹೇಳಿರಲಿಲ್ಲ.

ಬಾಲಕಿಯು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿರುವುದನ್ನು ಗಮನಿಸಿದ ತಾಯಿ ಆಕೆಯ ಬಳಿ ಮಾತನಾಡಿದ ಅನಂತರ ವಿಷಯ ಬೆಳಕಿಗೆ ಬಂದಿದೆ. ಇದರ ಬಳಿಕ ಬಾಲಕಿಯ ಕುಟುಂಬವು ಈ ಕುರಿತು ಪೊಲೀಸರಿಗೆ ದೂರು ನೀಡಿದೆ.

Sagara Bus Accident: ಸಾಗರ ಬಳಿ ಬ್ರೇಕ್‌ ಫೇಲ್‌ ಆಗಿ ಮನೆ ಮೇಲೆ ಬಿದ್ದ ಪ್ರವಾಸಿ ಬಸ್; 8 ಮಹಿಳೆಯರಿಗೆ ಗಾಯ

ಬಾಲಕನ ಮೇಲೂ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಲಾಗಿದೆ. ಆದರೆ ಈ ಆರೋಪ ಇನ್ನೂ ದೃಢಪಟ್ಟಿಲ್ಲ. ಈ ಕುರಿತು ತನಿಖೆ ನಡೆಸಲಾಗುತ್ತಿದೆ. ಅಪ್ರಾಪ್ತರನ್ನು ಒತ್ತೆಯಾಳಾಗಿ ಇರಿಸಲಾಗಿತ್ತು. ಆರೋಪಿಗಳ ಪೈಕಿ ಒಬ್ಬ 10,000 ರೂಪಾಯಿಗಳನ್ನು ನೀಡುವಂತೆ ಅಪ್ರಾಪ್ತರನ್ನು ಒತ್ತಾಯಿಸಿದ್ದನು ಎಂದು ದೂರಿನಲ್ಲಿ ತಿಳಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.