ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Stabbing at spot: ಭಟ್ಕಳದಲ್ಲಿ ಸಣ್ಣ ವಿಚಾರಕ್ಕೆ ಜಗಳ : ಚಾಕು ಇರಿತ

ನಂತರ ಅವಾಚ್ಯ ಪದಗಳಿಂದ ನಿಂದಿಸಿ, ದೂರುದಾರನ ಜೊತೆಗಿದ್ದ ತೌಸಿಫ್ ಖತೀಬ್ ಅವರ ಹೊಟ್ಟೆ ಭಾಗಕ್ಕೆ ಹಾಗೂ ಮಹಮ್ಮದ್ ಜುಪಾಪ್ ಅರ್ಮರ್ ಅವರ ಕುತ್ತಿಗೆ ಭಾಗಕ್ಕೆ ಚಾಕುವಿನಿಂದ ಇರಿದು ಗಾಯಪಡಿಸಿದ್ದಾರೆ. ಈ ವೇಳೆ ಗಾಯಾಳು ತೌಸಿಫ್ ಖತೀಬ್ ಅವರ ಬಳಿ ಇದ್ದ ಬೆಲೆ ಬಾಳುವ ವಾಚ್ ಹಾಗೂ ನಗದು ಹಣ ಕಳೆದುಹೋಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ

ಭಟ್ಕಳದಲ್ಲಿ ಸಣ್ಣ ವಿಚಾರಕ್ಕೆ ಜಗಳ : ಚಾಕು ಇರಿತ

-

Ashok Nayak
Ashok Nayak Mar 27, 2026 12:53 PM

ಭಟ್ಕಳ: ಸಣ್ಣ ವಿಚಾರಕ್ಕೆ ಆರಂಭವಾದ ಜಗಳ ಚಾಕು ಇರಿತದವರೆಗೂ ತಿರುಗಿದ ಘಟನೆ ಘಟನೆ ಭಟ್ಕಳದ ಜಾಲಿ ದೇವಿ ನಗರ ಕ್ರಾಸ್ ಬಳಿ ಗುರುವಾರ ಸಂಜೆ ನಡೆದಿದೆ.

ಸಯ್ಯದ ಮಹ್ಮಮದ್ ಫಾಹೀಸ್ ಅವರು ಶಹರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಜಾಲಿ ಬೀಚ್ ಕಡೆಯಿಂದ ಮನೆಗೆ ಬರುತ್ತಿರುವಾಗ ಹಿಂದಿನಿಂದ ಬಂದ ಬೊಲೇರೋ ವಾಹನ ಹಾರ್ನ್ ಮಾಡಿದೆ. ಇದಕ್ಕೆ ದೂರುದಾರರು ರಸ್ತೆ ಅಗಲವಾಗಿರುವುದರಿಂದ ವಾಹನ ಸುಲಭವಾಗಿ ಸಾಗಬಹುದು ಎಂದು ತಿಳಿಸಿದ್ದರು. ಇದರಿಂದ ಕುಪಿತರಾದ ಆರೋಪಿಗಳು ಬೊಲೇರೋ, ಸ್ವಿಫ್ಟ್ ಕಾರು ಹಾಗೂ ಜಾವಾ ಬೈಕ್‌ನಲ್ಲಿ ಬಂದು ದೂರುದಾರನ ಸ್ಕೂಟರ್ ಅಡ್ಡಗಟ್ಟಿದ್ದಾರೆ.

ಇದನ್ನೂ ಓದಿ: Bengaluru Crime: ಬೆಂಗಳೂರಿನಲ್ಲಿ ಭೀಕರ ಅತ್ಯಾಚಾರ ದಂಧೆ, ಡ್ರಗ್ಸ್‌ ನೀಡಿ 19 ಕಾಲೇಜು ಯುವತಿಯರ ಮೇಲೆ ದೌರ್ಜನ್ಯ

ನಂತರ ಅವಾಚ್ಯ ಪದಗಳಿಂದ ನಿಂದಿಸಿ, ದೂರುದಾರನ ಜೊತೆಗಿದ್ದ ತೌಸಿಫ್ ಖತೀಬ್ ಅವರ ಹೊಟ್ಟೆ ಭಾಗಕ್ಕೆ ಹಾಗೂ ಮಹಮ್ಮದ್ ಜುಪಾಪ್ ಅರ್ಮರ್ ಅವರ ಕುತ್ತಿಗೆ ಭಾಗಕ್ಕೆ ಚಾಕುವಿನಿಂದ ಇರಿದು ಗಾಯಪಡಿಸಿದ್ದಾರೆ. ಈ ವೇಳೆ ಗಾಯಾಳು ತೌಸಿಫ್ ಖತೀಬ್ ಅವರ ಬಳಿ ಇದ್ದ ಬೆಲೆ ಬಾಳುವ ವಾಚ್ ಹಾಗೂ ನಗದು ಹಣ ಕಳೆದುಹೋಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಈ ಪ್ರಕರಣದಲ್ಲಿ ಮಹಮ್ಮದ್ ತಾಹೀರ್ ಕುಟ್ಟಿ, ಕೈಫ್ ಕುಟ್ಟಿ, ಯಾಸಿನ್ ಪಾಷಾ, ಮಹಮ್ಮದ್ ಮೌಲಾ ಹಾಗೂ ಮಹಮ್ಮದ್ ಖಾಸಿಂ ಅಬ್ದುಲ್ ಖಾದಿರ್ ಕುಟ್ಟಿ ಆರೋಪಿಗಳಾಗಿದ್ದಾರೆ.

ಈ ಕುರಿತು ಶಹರಾ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.