ತೃತೀಯ ಲಿಂಗಿಯೊಡನೆ ಮಹಾರಾಷ್ಟ್ರ ಸಚಿವರ ಆಕ್ಷೇಪಾರ್ಹ ವಿಡಿಯೋ ವೈರಲ್; ರಾಜಕೀಯ ಸಂಚಲನ
Narhari Zirwal controversy: ಮಹಾರಾಷ್ಟ್ರ ಸರ್ಕಾರದ ಎನ್‌ಸಿಪಿ ಸಚಿವ ನರಹರಿ ಜಿರ್ವಾಲ್ ಹೊಸ ವಿವಾದದಲ್ಲಿ ಸಿಲುಕಿದ್ದಾರೆ. ಸರ್ಕಾರಿ ನಿವಾಸದಲ್ಲಿ ತೃತೀಯ ಲಿಂಗಿಯೊಂದಿಗಿದ್ದ ಅವರ ಆಕ್ಷೇಪಾರ್ಹ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದು ಭಾರಿ ವಿವಾದಕ್ಕೆ ಕಾರಣವಾಗಿದ್ದು, ಸಚಿವರ ತಲೆದಂಡಕ್ಕೆ ವಿಪಕ್ಷ ಆಗ್ರಹಿಸಿದೆ.
ಎನ್‌ಸಿಪಿ ಸಚಿವ ನರಹರಿ ಜಿರ್ವಾಲ್ (ಸಂಗ್ರಹ ಚಿತ್ರ) -
ಮುಂಬೈ, ಮಾ.27: ಮಹಾರಾಷ್ಟ್ರ ಸರ್ಕಾರದ (Maharashtra government) ಎನ್‌ಸಿಪಿ ಸಚಿವ ನರಹರಿ ಜಿರ್ವಾಲ್ (Narhari Zirwal) ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಜಿರ್ವಾಲ್ ಅವರ ಅಧಿಕೃತ ನಿವಾಸದಲ್ಲಿ ತೃತೀಯ ಲಿಂಗಿಯೊಂದಿಗಿದ್ದ ಆಕ್ಷೇಪಾರ್ಹ ವಿಡಿಯೊವೊಂದು (objectionable video) ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದು ಮಹಾರಾಷ್ಟ್ರ ರಾಜಕಾರಣದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದ್ದು, ಸಚಿವರ ತಲೆದಂಡಕ್ಕೆ ಒತ್ತಡ ಶುರುವಾಗಿದೆ.
ಕೆಲವು ತಿಂಗಳುಗಳ ಹಿಂದೆ ರೆಕಾರ್ಡ್ ಮಾಡಲಾದ ಈ ವಿಡಿಯೊದಲ್ಲಿ, ತೃತೀಯ ಲಿಂಗಿ ಮತ್ತು ಇನ್ನೊಬ್ಬ ವ್ಯಕ್ತಿ ಇದ್ದಾರೆ ಎಂದು ಚಿತ್ರಿಸಲಾಗಿದೆ. ತೃತೀಯ ಲಿಂಗಿಯನ್ನು ಪವನ್ ಯಾದವ್ ಎಂದು ಗುರುತಿಸಲಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಭಾರಿ ಆಕ್ರೋಶ ವ್ಯಕ್ತವಾಗಿದೆ. ಸಚಿವರ ರಾಜೀನಾಮೆಗೆ ವಿರೋಧಪಕ್ಷಗಳು ಆಗ್ರಹಿಸಿವೆ. ಆದರೆ, ಸಚಿವ ಜಿರ್ವಾಲ್ ಮತ್ತು ಅವರ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ), ಇದೊಂದು ಸಂಚು ಎಂದು ಆರೋಪಿಸಿದೆ.
ದಿಂಡೋರಿ ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿರುವ ಮತ್ತು ಬುಡಕಟ್ಟು ಸಮುದಾಯದ ನಾಯಕರಾಗಿರುವ ಜಿರ್ವಾಲ್ ಅವರ ಆಕ್ಷೇಪಾರ್ಹ ವಿಡಿಯೊ ಹೊರಬಂದಿದೆ. ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ಜೊತೆಗಿನ ಸಂಪರ್ಕದ ಬಗ್ಗೆ ಎನ್‌ಸಿಪಿ ತೀವ್ರ ವಿಚಾರಣೆ ಎದುರಿಸುತ್ತಿರುವ ಸಂದರ್ಭದಲ್ಲಿ ಈ ಬೆಳವಣಿಗೆ ನಡೆದಿದೆ.
Viral News: ಅಶ್ಲೀಲ ವಿಡಿಯೊ ವೀಕ್ಷಿಸುವ ಪತಿಯನ್ನು ಸರಿಪಡಿಸಲು ಹೋದ ಪತ್ನಿಈ ಚಟಕ್ಕೆ ಬಲಿಯಾಗಿದ್ದು ಹೇಗೆ?
ಇತ್ತೀಚೆಗೆ ಅತ್ಯಾಚಾರ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಖರತ್ ಅವರೊಂದಿಗಿನ ಆತ್ಮೀಯತೆಯಿಂದಾಗಿ ಪಕ್ಷದ ನಾಯಕಿ ರೂಪಾಲಿ ಚಕಂಕರ್ ಅವರು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಸ್ಥಾನದಿಂದ ಕೆಳಗಿಳಿಯುವ ಮೂಲಕ ಪಕ್ಷವು ಮುಜುಗರಕ್ಕೊಳಗಾಗಿತ್ತು. ಇದರ ಬೆನ್ನಲ್ಲೇ ಇದೀಗ ಈ ಬೆಳವಣಿಗೆ ನಡೆದಿದೆ.
ದೇವೇಂದ್ರ ಫಡ್ನವೀಸ್ ನೇತೃತ್ವದ ಮಹಾಯುತಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ಈ ವಿಡಿಯೊ ವಿರೋಧ ಪಕ್ಷಗಳಿಗೆ ಹೊಸ ಅವಕಾಶವಾಗಿದೆ. ಸರ್ಕಾರದಲ್ಲಿ ಎನ್‌ಸಿಪಿ ಸಹ ಒಂದು ಭಾಗವಾಗಿದೆ. ಸಾಮಾಜಿಕ ಕಾರ್ಯಕರ್ತೆ ಅಂಜಲಿ ದಮಾನಿ ಜಿರ್ವಾಲ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಅವರಿಬ್ಬರೂ ವಯಸ್ಕರು, ಅವರು ಏನು ಮಾಡುತ್ತಿದ್ದರು ಎಂಬುದು ಸಹಮತದಿಂದ ಕೂಡಿತ್ತು ಎಂದು ಕೆಲವರು ವಾದಿಸಬಹುದು. ಆದರೆ ಮುಖ್ಯ ವಿಷಯವೆಂದರೆ, ಇದು ಅಧಿಕೃತ ನಿವಾಸದಲ್ಲಿ ನಡೆದಿದೆ. ವಿಡಿಯೊದಲ್ಲಿ ನಾವು ಮದ್ಯದ ಬಾಟಲಿಗಳನ್ನು ಸಹ ನೋಡಬಹುದು ಎಂದು ಅವರು ಹೇಳಿದರು. ಈ ಅಸಭ್ಯ ವರ್ತನೆಗೆ ಪೂರ್ಣ ವಿರಾಮ ಹಾಕುವಂತೆ ಅಂಜಲಿ ಅವರು ಫಡ್ನವೀಸ್‌ಗೆ ಮನವಿ ಮಾಡಿದ್ದಾರೆ.
Bengaluru News: ಮಹಿಳೆಯ ಫೋಟೊ ಮಾರ್ಫಿಂಗ್ ಮಾಡಿ ಅಶ್ಲೀಲ ವಿಡಿಯೊ ಹರಿಬಿಡುತ್ತಿದ್ದ ಆರೋಪಿ ಅರೆಸ್ಟ್
ಪವಾರ್ ಈ ವಿಡಿಯೊ ಬಗ್ಗೆ ಏಕೆ ಪ್ರತಿಕ್ರಿಯಿಸಲಿಲ್ಲ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಹರ್ಷವರ್ಧನ್ ಸಪ್ಕಲ್ ಪ್ರಶ್ನಿಸಿದರು. ಜವಾಬ್ದಾರಿಯುತ ಸಾರ್ವಜನಿಕ ಪ್ರತಿನಿಧಿ ಮತ್ತು ಸಚಿವರಿಂದ ಇಂತಹ ಅಶ್ಲೀಲ ಮತ್ತು ಅನೈತಿಕ ವರ್ತನೆ ಆಘಾತಕಾರಿ ಮತ್ತು ಖಂಡನೀಯ ಎಂದು ಸಪ್ಕಲ್ ಹೇಳಿದರು. ಇದು ಕೇವಲ ವೈಯಕ್ತಿಕ ವಿಚಾರದ ಉಲ್ಲಂಘನೆಯಲ್ಲ, ಬದಲಾಗಿ ಸಾರ್ವಜನಿಕ ನೈತಿಕತೆಯ ಮೇಲಿನ ಕಳಂಕವಾಗಿದೆ. ಜನರಿಂದ ಆಯ್ಕೆಯಾಗಿರುವ ಸಚಿವರು ಕನಿಷ್ಠ ಮೂಲಭೂತ ನೈತಿಕ ಮಾನದಂಡಗಳನ್ನು ಪಾಲಿಸಬೇಕು ಎಂದು ನಿರೀಕ್ಷಿಸಲಾಗುತ್ತದೆ. ಈ ವಿಡಿಯೊ ಸ್ಪಷ್ಟವಾಗಿ ಆ ನಿರೀಕ್ಷೆಗಳ ಸಂಪೂರ್ಣ ಭಂಗವನ್ನು ತೋರಿಸುತ್ತದೆ ಎಂದು ಅವರು ಹೇಳಿದರು.
ಮಹಾರಾಷ್ಟ್ರ ಎನ್‌ಸಿಪಿ ಅಧ್ಯಕ್ಷ ಸುನಿಲ್ ತತ್ಕರೆ ವಿವಾದಾತ್ಮಕ ವಿಡಿಯೊದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ಆದರೆ, ಇದು ಜಿರ್ವಾಲ್ ಅವರ ವಿರುದ್ಧ ನಡೆದಿರುವ ಸಂಚು ಎಂದು ಅವರು ಆರೋಪಿಸಿದರು.