ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಗಂಡ ಹೆಂಡತಿ ಜಗಳ ಬಿಡಿಸಲು ಹೋದ ಮಗನನ್ನೇ ಹೊಡೆದು ಕೊಂದ ಪಾಪಿ ಅಪ್ಪ!

ತಂದೆ ತಾಯಿಯ ಜಗಳವನ್ನು ಬಿಡಸಲು ಹೋದ ಮಗನನ್ನು ಅಪ್ಪನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಚೌಡನಾಯಕನಪಾಳ್ಯ ಗ್ರಾಮದಲ್ಲಿ ನಡೆದಿದೆ. ನಂಜೇಗೌಡ ಎಂಬಾತ ತನ್ನ ಪತ್ನಿ ರಂಜಿತಾಳನ್ನು ಮನೆಯಿಂದ ಹೊರಗೆ ತಳ್ಳಿ ಬಾಗಿಲು ಹಾಕಿಕೊಂಡ ನಂತರ, ತನ್ನ ಮಗ ಸುನಿಲ್‌ನ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದಾನೆ.

ಗಂಡ ಹೆಂಡತಿ ಜಗಳ ಬಿಡಿಸಲು ಹೋದ ಮಗನನ್ನೇ ಹೊಡೆದು ಕೊಂದ ಪಾಪಿ ಅಪ್ಪ!

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Nov 16, 2026 11:17 AM

ತುಮಕೂರು: ತಂದೆ ತಾಯಿಯ ಜಗಳವನ್ನು ಬಿಡಸಲು ಹೋದ ಮಗನನ್ನು ಅಪ್ಪನೇ ಬರ್ಬರವಾಗಿ (Murder Case) ಹತ್ಯೆ ಮಾಡಿರುವ ಘಟನೆ ತುಮಕೂರು (Tumakuru) ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಚೌಡನಾಯಕನಪಾಳ್ಯ ಗ್ರಾಮದಲ್ಲಿ ನಡೆದಿದೆ. ನಂಜೇಗೌಡ ಎಂಬಾತ ತನ್ನ ಪತ್ನಿ ರಂಜಿತಾಳನ್ನು ಮನೆಯಿಂದ ಹೊರಗೆ ತಳ್ಳಿ ಬಾಗಿಲು ಹಾಕಿಕೊಂಡ ನಂತರ, ತನ್ನ ಮಗ ಸುನಿಲ್‌ನ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದಾನೆ. ಆರೋಪಿ ಮದ್ಯವ್ಯಸನಿಯಾಗಿದ್ದು, ಇದೇ ಕಾರಣಕ್ಕೆ ಕುಟುಂಬದಲ್ಲಿ ಜಗಳ ನಡೆಯುತ್ತಿತ್ತು.

ಕೊಲೆಯಾದ ಬಾಲಕನನ್ನು 16 ವರ್ಷದ ಸುನೀಲ್‌ ಎಂದು ಗುರುತಿಸಲಾಗಿದೆ. ನಂಜೇಗೌಡ ಪತ್ನಿಯೊಂದಿಗೆ ಜಗಳವಾಡುತ್ತಿದ್ದಾಗ, ಜಗಳ ತಾರಕಕ್ಕೇರಿ ರಂಜಿತಾ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಆಗ ಸುನೀಲ್ ಮಧ್ಯ ಪ್ರವೇಶಿಸಿ ಅವರ ಜಗಳ ಬಿಡಿಸಲು ಮುಂದಾಗಿದ್ದಾನೆ. ಕೊಪಗೊಂಡ ನಂಜೆಗೌಡ ಪತ್ನಿಯನ್ನು ಮನೆಯಿಂದ ಆಚೆಗೆ ತಳ್ಳಿ ಬಾಗಿಲು ಹಾಕಿಕೊಂಡು ಮನೆಯಲ್ಲಿದ್ದ ಹಾರೆಕೋಲಿನಿಂದ ಮಗನ ಮೇಲೆ ಮನ ಬಂದಂತೆ ಹಲ್ಲೆ ನಡೆಸಿ ಕೊಲೆಗೈದಿದ್ದಾನೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ನಂಜೇಗೌಡನನ್ನು ವಶಕ್ಕೆ ಪಡೆದರು. ಆದರೆ, ಪೊಲೀಸರು ಆತನನ್ನು ವಾಹನದತ್ತ ಕರೆದೊಯ್ಯುತ್ತಿದ್ದಾಗ, ಆಕ್ರೋಶಗೊಂಡ ಗ್ರಾಮಸ್ಥರ ಗುಂಪೊಂದು ಆತನನ್ನು ಪೊಲೀಸ್ ಜೀಪಿನಿಂದ ಹೊರಗೆ ಎಳೆದು ಹಲ್ಲೆ ನಡೆಸಿದೆ. ಈ ಹಿಂದೆಯೂ ಪತ್ನಿ ಮೇಲೆ ಹಲ್ಲೆ ನಡೆಸಿ ನಂಜೇಗೌಡ ಜೈಲಿಗೆ ಹೋಗಿದ್ದ ಎನ್ನಲಾಗಿದೆ.

ಮದ್ಯ ಸೇವಿಸಲು ಹಣ ಕೊಡಲು ನಿರಾಕರಿಸಿದ ಹೆತ್ತ ತಾಯಿಯನ್ನೇ ಪಾಪಿ ಮಗನೊಬ್ಬ ದೊಣ್ಣೆಯಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿದ ಘಟನೆ ಕಳೆದ ವಾರ ದಾವಣಗೆರೆಯ ಚನ್ನಗಿರಿಯಲ್ಲಿ ನಡೆದಿತ್ತು. ಬುಳ್ಳಮ್ಮ(70) ಮಗನಿಂದಲೇ ಕೊಲೆಯಾದ ದುರ್ದೈವಿ. ಹನುಮಂತಪ್ಪ (35) ಕೊಲೆ ಮಾಡಿದ ಆರೋಪಿಯಾಗಿದ್ದಾನೆ.

ಈ ಹಿಂದೆ ಹಣದ ವಿಚಾರವಾಗಿ ಸ್ನೇಹಿತನನ್ನೇ ಹನುಮಂತ ಕೊಲೆ ಮಾಡಿ, 7 ವರ್ಷ ಜೈಲುವಾಸ ಅನುಭವಿಸಿದ್ದ. ಮಗ ಜೈಲಿಗೆ ಹೋಗಿದ್ದರಿಂದ ನೊಂದ ಬುಳ್ಳಮ್ಮ ಹಾಸಿಗೆ ಹಿಡಿದಿದ್ದಳು. ಉಳಿದ 9 ಜನ ಹೆಣ್ಣು ಮಕ್ಕಳು ಹತ್ತು ಲಕ್ಷ ರೂ. ಖರ್ಚು ಮಾಡಿ ಜಾಮೀನಿನ ಮೇಲೆ ಅರೋಪಿಯನ್ನು ಜೈಲಿನಿಂದ ಕಳೆದ ಮೂರು ತಿಂಗಳ ಹಿಂದೆ ಹೊರಗೆ ತಂದಿದ್ದರು. ಕೊಲೆಯಾದ ಬುಳ್ಳಮ್ಮ ಮಗಳ ಮನೆಯಲ್ಲಿ ವಾಸವಾಗಿದ್ದಳು. ಹನುಮಂತ ದಾವಣಗೆರೆಯ ಹೋಟೆಲ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದ, ಕಳೆದ ಎರಡು ದಿನಗಳ ಹಿಂದೆ ಮಗನನ್ನು ನೋಡಬೇಕು ಎಂದು ತಾಯಿಯೇ ಹನುಮಂತನನ್ನು ಮನೆಗೆ ಕರೆಸಿಕೊಂಡಿದ್ದಳು. ಅದೇ ದಿನ ಆಕೆಯ ಕೊಲೆಯಾಗಿದೆ.