ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಣ್ಣನ ತರ ಎನ್ನುತ್ತಿದ್ದವಳು ಅವನ ಜತೆಯೇ ಓಡಿ ಹೋದಳು; ಬೆಂಗಳೂರಿನಲ್ಲಿ ಜಿಮ್ ಟ್ರೈನರ್‌ ಕಣ್ಣೀರು

ಬೆಂಗಳೂರಿನ ​ಜಿಮ್ ಟ್ರೈನರ್ ನಿತೇಶ್ ಯುವತಿಯೊಬ್ಬಳನ್ನು ಪ್ರೀತಿಸಿ, ಮನೆಯವರನ್ನು ಒಪ್ಪಿಸಿ ಅದ್ಧೂರಿಯಾಗಿ ಮದುವೆಯಾಗಿದ್ದರು. ದಾಂಪತ್ಯ ಜೀವನ ಚೆನ್ನಾಗಿಯೇ ಇತ್ತು. ಆದರೆ, ಈಗ ಇವರ ಜೀವನಕ್ಕೆ ಬೆಸ್ಟ್ ಫ್ರೆಂಡ್ ವಿಲನ್‌ ಆಗಿದ್ದಾನೆ. ಗಂಡನ ಸ್ನೇಹಿತನ ಜತೆಯೇ ಮಹಿಳೆ ಪರಾರಿಯಾಗಿದ್ದು, ನ್ಯಾಯಕ್ಕಾಗಿ ಪತಿ ಕಣ್ಣೀರಿಟ್ಟಿದ್ದಾರೆ.

ಅಣ್ಣನ ತರ ಎನ್ನುತ್ತಿದ್ದವಳು ಅವನ ಜತೆಯೇ ಓಡಿ ಹೋದಳು!; ಗಂಡ ಕಣ್ಣೀರು

ಗಂಡನ ಸ್ನೇಹಿತನ ಜತೆ ಪರಾರಿಯಾದ ಮಹಿಳೆ. -

Prabhakara R
Prabhakara R Apr 22, 2026 10:25 PM

​ಬೆಂಗಳೂರು: ಪ್ರೀತಿಸಿ ಮದುವೆಯಾದ ಗಂಡನ ಬಿಟ್ಟು, ಆತನ ಸ್ನೇಹಿತನ ಜತೆಯೇ ಮಹಿಳೆ ಓಡಿ ಹೋಗಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. 'ಅಣ್ಣ' ಎಂದು ಕರೆಯುತ್ತಿದ್ದವಳು ಈಗ ಅವನ ಜತೆಯೇ ಪರಾರಿಯಾಗಿದ್ದಾಳೆ ಎಂದು ಗಂಡ ಕಣ್ಣೀರು ಹಾಕಿದ್ದು, ನ್ಯಾಯಕ್ಕಾಗಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ.

​ಜಿಮ್ ಟ್ರೈನರ್ ಆಗಿದ್ದ ನಿತೇಶ್ ಎಂಬುವವರು ಯುವತಿಯೊಬ್ಬಳನ್ನು ಪ್ರೀತಿಸಿ, ಮನೆಯವರನ್ನು ಒಪ್ಪಿಸಿ ಅದ್ಧೂರಿಯಾಗಿ ಮದುವೆಯಾಗಿದ್ದರು. ದಾಂಪತ್ಯ ಜೀವನ ಚೆನ್ನಾಗಿಯೇ ಇತ್ತು. ಆದರೆ, ನಿತೇಶ್‌ ಜೀವನಕ್ಕೆ ಬೆಸ್ಟ್ ಫ್ರೆಂಡ್ ನವೀನ್ ವಿಲನ್‌ ಆಗಿದ್ದಾನೆ.

​ನಿತೇಶ್ ಮತ್ತು ನವೀನ್ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಗೆಳೆಯರು. ಮದುವೆಯಾದ ಮೇಲೆ ನಿತೇಶ್ ದಂಪತಿ ನವೀನ್ ಮನೆಯಲ್ಲೇ ಬಾಡಿಗೆಗೆ ವಾಸವಿದ್ದರು. ಈ ವೇಳೆ ಪತ್ನಿ ಹಾಗೂ ನವೀನ್ ನಡುವೆ ಆತ್ಮೀಯತೆ ಬೆಳೆದಿತ್ತು. ​ಪತಿ ಇಲ್ಲದ ವೇಳೆ ನವೀನ್ ಜತೆ ಗುಟ್ಟಾಗಿ ಮಾತುಕತೆ ನಡೆಸುತ್ತಿದ್ದಳು. ​ನವೀನ್ ನಂಬರ್ ಅನ್ನು ಹುಡುಗಿಯರ ಹೆಸರಿನಲ್ಲಿ ಸೇವ್ ಮಾಡಿಕೊಂಡು ಚಾಟಿಂಗ್ ಮಾಡುತ್ತಿದ್ದಳು.

​ಅವನು ನನ್ನ ಅಣ್ಣನ ಸಮಾನ ಅಂದಿದ್ದಳು!

​ಪತ್ನಿಯ ವರ್ತನೆಯಿಂದ ಅನುಮಾನಗೊಂಡ ನಿತೇಶ್, ಹಲವು ಬಾರಿ ಬುದ್ಧಿಮಾತು ಹೇಳಿ ಬನಶಂಕರಿಯ ಬೇರೆ ಮನೆಗೆ ಶಿಫ್ಟ್ ಆಗಿದ್ದರು. ಆಗ ಪತ್ನಿ, "ಅವನು ನನಗೆ ಅಣ್ಣನ ತರಹ, ನನ್ನನ್ನು ಅನುಮಾನಿಸಬೇಡ" ಎಂದು ಕಣ್ಣೀರು ಹಾಕಿದ್ದಳು. ಆದರೆ ಈಗ ಆತನ ಜತೆಯೇ ಪರಾರಿಯಾಗಿದ್ದಾಳೆ. ಮೂರು ದಿನಗಳ ಹಿಂದೆ ಕೆಲಸಕ್ಕೆ ಹೋದವಳು, ಕಂಪನಿಯಲ್ಲಿ "ಹೊಟ್ಟೆ ನೋವು" ಎಂದು ಸುಳ್ಳು ಹೇಳಿ ಅರ್ಧ ದಿನ ರಜೆ ಹಾಕಿ ನವೀನ್ ಜೊತೆ ಎಸ್ಕೇಪ್ ಆಗಿದ್ದಾಳೆ. ಕಂಗಾಲಾದ ಪತಿ ಜಯನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಗಂಡ, ಮಕ್ಕಳಿಗೆ ನಿದ್ರೆ ಮಾತ್ರೆ ಹಾಕಿ ಕಟಿಂಗ್‌ ಶಾಪ್‌ನವನ ಜತೆ ಮಹಿಳೆ ಪರಾರಿ; ಕಸ ಹಾಕಿ ಬರ್ತೀನಿ ಎಂದು ಹೇಳಿ ಎಸ್ಕೇಪ್‌!

​ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ಪತ್ತೆ ಹಚ್ಚಿದ್ದಾರೆ. ಆದರೆ ಪತ್ನಿ ಮಾತ್ರ, "ನಾನು ಗಂಡನ ಜೊತೆ ಹೋಗಲ್ಲ, ಪಿಜಿಯಲ್ಲೇ ಇರುತ್ತೇನೆ" ಎಂದು ಹಠ ಹಿಡಿದಿದ್ದಾಳೆ. ಪತಿ ನಿತೇಶ್ ಮಾತ್ರ "ಅಣ್ಣ ಅಂದವನ ಜತೆಯೇ ಹೋಗಿಬಿಟ್ಲಲ್ಲ" ಎಂದು ಕಣ್ಣೀರಿಡುತ್ತಿದ್ದಾರೆ.