LSG vs RR: ಲೋ ಸ್ಕೋರಿಂಗ್ ಪಂದ್ಯದಲ್ಲಿ ಲಖನೌಗೆ ಸೋಲುಣಿಸಿದ ರಾಜಸ್ಥಾನ್ ರಾಯಲ್ಸ್!
LSG vs RR Match Highlights: ರವೀಂದ್ರ ಜಡೇಜಾ ಆಲ್‌ರೌಂಡರ್ ಆಟದ ಬಲದಿಂದ ರಾಜಸ್ಥಾನ್ ರಾಯಲ್ಸ್ ತಂಡ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯದಲ್ಲಿ ಲಖನೌ ಸೂಪರ್ ಜಯಂಟ್ಸ್ ಎದುರು 40 ರನ್‌ಗಳ ಗೆಲುವು ಸಾಧಿಸಿತು. ಆ ಮೂಲಕ ರಿಯಾನ್ ಪರಾಗ್ ನಾಯಕತ್ವದ ಆರ್‌ಆರ್ ಪಾಯಿಂಟ್ಸ್ ಟೇಬಲ್‌ನಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿತು.
ರಾಜಸ್ಥಾನ್ ರಾಯಲ್ಸ್‌ಗೆ ಜಯ. -
ಲಖನೌ: ರವೀಂದ್ರ ಜಡೇಜಾ (Ravindra Jadeja) ಉಪಯುಕ್ತ ಬ್ಯಾಟಿಂಗ್ ಹಾಗೂ ವೇಗಿಗಳ ಪರಿಣಾಮಕಾರಿ ಬೌಲಿಂಗ್ ಪ್ರದರ್ಶನದ ಸಹಾಯದಿಂದ ರಾಜಸ್ಥಾನ್ ರಾಯಲ್ಸ್ (RR) ತಂಡ, 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಪಂದ್ಯದಲ್ಲಿ ಲಖನೌ ಸೂಪರ್ ಜಯಂಟ್ಸ್ ಎದುರು 40 ರನ್‌ಗಳ ಗೆಲುವು ಪಡೆಯಿತು. ಐದನೇ ಜಯದ ಮೂಲಕ ರಿಯಾನ್ ಪರಾಗ್ ನಾಯಕತ್ವದ ಆರ್‌ಆರ್ ಪಾಯಿಂಟ್ಸ್ ಟೇಬಲ್‌ನಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿತು. ಆದರೆ, ಸತತ ನಾಲ್ಕನೇ ಸೋಲು ಅನುಭವಿಸಿದ ರಿಷಭ್ ಪಂತ್ ಸಾರಥ್ಯದ ಲಖನೌ ಪಾಯಿಂಟ್ಸ್ ಟೇಬಲ್‌ನಲ್ಲಿ 9ನೇ ಸ್ಥಾನದಲ್ಲಿಯೇ ಉಳಿಯಿತು.
ಬುಧವಾರ ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ನೀಡಿದ್ದ 160 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಲಖನೌ ಸೂಪರ್ ಜಯಂಟ್ಸ್ ತಂಡ ಗೆಲುವು ಪಡೆಯಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಇದಕ್ಕೆ ಆರ್‌ಆರ್ ಬೌಲರ್‌ಗಳು ಅವಕಾಶ ನೀಡಲಿಲ್ಲ. ಪಿಚ್‌ನ ಕಂಡೀಷನ್ಸ್ ಅನ್ನು ಸಮರ್ಥವಾಗಿ ಬಳಸಿಕೊಂಡು ರಾಜಸ್ಥಾನ್ ಬೌಲರ್‌ಗಳು ಎದುರಾಳಿ ಎಲ್‌ಎಸ್‌ಜಿ ತಂಡವನ್ನು 18 ಓವರ್‌ಗಳಿಗೆ 119 ರನ್‌ಗಳಿಗೆ ಆಲ್‌ಔಟ್ ಮಾಡಿದರು. ಮಿಚೆಲ್ ಮಾರ್ಷ್ ಅರ್ಧಶತಕ ಗಳಿಸಿದ್ದು ಬಿಟ್ಟರೆ ಇನ್ನುಳಿದ ಯಾವುದೇ ಬ್ಯಾಟ್ಸ್‌ಮನ್ ದೊಡ್ಡ ಮೊತ್ತವನ್ನು ಕಲೆ ಹಾಕಲಿಲ್ಲ.
LSG vs RR: 353 ದಿನಗಳ ಬಳಿಕ ಐಪಿಎಲ್ ಟೂರ್ನಿಗೆ ಮರಳಿದ ಮಯಾಂಕ್ ಯಾದವ್!
ಮಿಚೆಲ್ ಮಾರ್ಷ್ ಹೋರಾಟ ವ್ಯರ್ಥ
ಗುರಿಯನ್ನು ಹಿಂಬಾಲಿಸಿದ ಲಖನೌ ತಂಡದ ಪರ ಆರಂಭಿಕ ಬ್ಯಾಟ್ಸ್‌ಮನ್ ಮಿಚೆಲ್ ಮಾರ್ಷ್ 16ನೇ ಓವರ್‌ಗಳವರೆಗೂ ಏಕಾಂಗಿಯಾಗಿ ಹೋರಾಟ ನಡೆಸಿದರೆ, ಮತ್ತೊಂದು ತುದಿಯಲ್ಲಿ ನಿಕೋಲಸ್ ಪೂರನ್ ಹಾಗೂ ಹಿಮಾಂತ್ ಸಿಂಗ್ ಕೊಂಚ ಕಾಲ ಸಾಥ್ ನೀಡಿದ್ದು ಬಿಟ್ಟರೆ ಇನ್ನುಳಿದವರು ವಿಫಲರಾದರು. ಏಕಾಂಗಿ ಹೋರಾಟ ನಡೆಸಿದ ಮಿಚೆಲ್ ಮಾರ್ಷ್ 41 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 6 ಬೌಂಡರಿಗಳೊಂದಿಗೆ 55 ರನ್ ಕಲೆ ಹಾಕಿದರು. ಆ ಮೂಲಕ ಲಖನೌ ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿದ್ದರು. ಆದರೆ, ಅವರನ್ನು 16ನೇ ಓವರ್‌ನಲ್ಲಿ ನಾಂಡ್ರೆ ಬರ್ಗರ್ ಔಟ್ ಮಾಡಿದರು. ಮಾರ್ಷ್ ಔಟ್ ಆದ ಬಳಿಕ ಎಲ್‌ಎಸ್‌ಜಿ ಗೆಲುವಿನ ಕನಸು ಭಗ್ನವಾಯಿತು.
𝙁𝙡𝙮𝙞𝙣𝙜 𝙅𝙪𝙧𝙚𝙡 ✈️
— IndianPremierLeague (@IPL) April 22, 2026
Sharp reflexes on display from the acrobatic #RR wicket-keeper 🤸♂️
Scorecard ▶️ https://t.co/5SaPY8wfsc#TATAIPL | #KhelBindaas | #LSGvRR | @rajasthanroyals pic.twitter.com/TVsBD4VL8r
ಮೂವರು ಬ್ಯಾಟ್ಸ್‌ಮನ್‌ಗಳು ಡಕ್‌ಔಟ್
ಅಗ್ರ ಕ್ರಮಾಂಕದಲ್ಲಿ ಆಯುಷ್ ಬದೋನಿ, ರಿಷಭ್ ಪಂತ್ ಹಾಗೂ ಏಡೆನ್ ಮಾರ್ಕ್ರಮ್ ಅವರು ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಇದು ತಂಡಕ್ಕೆ ಭಾರಿ ಹಿನ್ನಡೆಯನ್ನು ತಂದುಕೊಟ್ಟಿತು. ನಿಕೋಲಸ್ ಪೂರನ್ (22) ಹಾಗೂ ಹಿಮಾಂತ್ ಸಿಂಗ್ (15) ಭರವಸೆ ಮೂಡಿಸಿದರಾದರೂ ವಿಫಲರಾದರು. ಆರ್‌ಆರ್ ಪರ ಜೋಫ್ರಾ ಆರ್ಚರ್ 3 ವಿಕೆಟ್ ಪಡೆದರೆ, ನಾಂಡ್ರೆ ಬರ್ಗರ್ ಮತ್ತು ಬ್ರಿಜೇಶ್ ಶರ್ಮಾ ತಲಾ ಎರಡೆರಡು ವಿಕೆಟ್‌ಗಳನ್ನು ಪಡೆದರು.
2⃣ good catches by the #RR captain 🫡
— IndianPremierLeague (@IPL) April 22, 2026
Nandre Burger 🤝 Brijesh Sharma with the wickets ✌️
Updates ▶️ https://t.co/5SaPY8wfsc#TATAIPL | #KhelBindaas | #LSGvRR | @rajasthanroyals pic.twitter.com/bS8yT5QFYh
159 ರನ್ ಕಲೆ ಹಾಕಿದ ರಾಜಸ್ಥಾನ್
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ರಾಜಸ್ಥಾನ್ ರಾಯಲ್ಸ್ ತಂಡ, ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ಹೊರತಾಗಿಯೂ ರವೀಂದ್ರ ಜಡೇಜಾ (43) ಸೇರಿದಂತೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಯೋಗ್ಯ ಪ್ರದರ್ಶನದ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 6 ವಿಕೆಟ್‌ಗಳ ನಷ್ಟಕ್ಕೆ 159 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಲಖನೌ ಸೂಪರ್ ಜಯಂಟ್ಸ್ ತಂಡಕ್ಕೆ 160 ರನ್‌ಗಳ ಸ್ಪರ್ಧಾತ್ಮಕ ಗುರಿಯನ್ನು ನೀಡುವಲ್ಲಿ ಯಶಸ್ವಿಯಾಯಿತು.
Leading the way in the chase 🏃
— IndianPremierLeague (@IPL) April 22, 2026
🔟th #TATAIPL FIFTY for Mitchell Marsh 👏👏#LSG need 55 runs from 27 deliveries
Updates ▶️ https://t.co/5SaPY8wfsc#KhelBindaas | #LSGvRR pic.twitter.com/TK39G6qZlu
ರಾಯಲ್ಸ್‌ಗೆ ಆರಂಭಿಕ ಆಘಾತ
ರಾಜಸ್ಥಾನ್ ರಾಯಲ್ಸ್ ಪರ ಇನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್ (22) ಹಾಗೂ ವೈಭವ್ ಸೂರ್ಯವಂಶಿ ವಿಫಲರಾದರು. ಮೊಹಮ್ಮದ್ ಶಮಿ ತಮ್ಮ ನಿಖರವಾದ ಲೈನ್ ಅಂಡ್ ಲೆನ್ತ್ ಮೂಲಕ ಮೂರನೇ ಓವರ್‌ನಲ್ಲಿ ಯಶಸ್ವಿ ಜೈಸ್ವಾಲ್ ಹಾಗೂ ಧ್ರುವ್ ಜುರೆಲ್ ಅವರನ್ನು ಔಟ್ ಮಾಡಿದರು. ನಂತರ ನಾಲ್ಕನೇ ಓವರ್‌ನಲ್ಲಿ ಮೊಹ್ಸಿನ್ ಖಾನ್, ಅಪಾಯಕಾರಿ ವೈಭವ್ ಸೂರ್ಯವಂಶಿ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಆ ಮೂಲಕ 32 ರನ್ ಇರುವಾಗಲೇ ರಾಜಸ್ಥಾನ್ ಪ್ರಮುಖ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು.
Innings Break!
— IndianPremierLeague (@IPL) April 22, 2026
Ravindra Jadeja finishes with a 20-run over to take #RR to 159/6 👌
Will #LSG chase it down? 🤔
Scorecard ▶️ https://t.co/5SaPY8wfsc#TATAIPL | #KhelBindaas | #LSGvRR pic.twitter.com/hWd3pLkPKo
ಆರ್‌ಆರ್‌ಗೆ ಆಸರೆಯಾದ ಜಡೇಜಾ
ಮಧ್ಯಮ ಕ್ರಮಾಂಕದಲ್ಲಿ ಧ್ರುವ್ ಜುರೆಲ್ (20) ಹಾಗೂ ಶಿಮ್ರಾನ್ ಹೆಟ್ಮಾಯೆರ್ (22) ಅವರು ಭರವಸೆ ಮೂಡಿಸಿದ್ದರು. ಉತ್ತಮ ಆರಂಭ ಪಡೆದಿದ್ದ ಈ ಇಬ್ಬರನ್ನು ಕ್ರಮವಾಗಿ ಪ್ರಿನ್ಸ್ ಯಾದವ್ ಮತ್ತು ಮೊಹ್ಸಿನ್ ಖಾನ್ ಔಟ್ ಮಾಡಿದರು. ಪ್ರಮುಖ ಬ್ಯಾಟ್ಸ್‌ಮನ್‌ಗಳು ವಿಫಲರಾದ ಬಳಿಕ ರವೀಂದ್ರ ಜಡೇಜಾ ಸನ್ನಿವೇಶಕ್ಕೆ ತಕ್ಕಂತೆ ನಿರ್ಣಾಯಕ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಜಡೇಜಾ ಆಡಿದ 29 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ ಎರಡು ಬೌಂಡರಿಗಳೊಂದಿಗೆ ಅಜೇಯ 43 ರನ್ ಗಳಿಸಿದರು.
IPL 2026: ಲಖನೌ ಸೂಪರ್ ಜಯಂಟ್ಸ್ ವೈಫಲ್ಯಕ್ಕೆ ಬಲವಾದ ಕಾರಣ ತಿಳಿಸಿದ ಸೈಮನ್ ದುಲ್!
ಎರಡು ನಿರ್ಣಾಯಕ ಜೊತೆಯಾಟವನ್ನು ಆಡಿದ್ದ ಜಡ್ಡು
ಅಲ್ಲದೆ, ಡೊನೊವಾನ್ ಫೆರೆರಾ (20) ಅವರ ಜೊತೆಗೆ 33 ರನ್ ಹಾಗೂ ಶುಭಂ ದುಬೇ (19*) ಅವರ ಜೊತೆಗೆ 25 ಎಸೆತಗಳಲ್ಲಿ 49 ರನ್‌ಗಳ ನಿರ್ಣಾಯಕ ಜೊತೆಯಾಟವನ್ನು ಆಡಿ ಆರ್‌ಆರ್ ಮೊತ್ತವನ್ನು 150ರ ಗಡಿ ದಾಟಿಸುವಲ್ಲಿ ಜಡೇಜಾ ಪ್ರಮುಖ ಪಾತ್ರವನ್ನು ವಹಿಸಿದರು. ಲಖನೌ ಪರ ಮೊಹಮ್ಮದ್ ಶಮಿ, ಪ್ರಿನ್ಸ್ ಯಾದವ್ ಹಾಗೂ ಮೊಹ್ಸಿನ್ ಖಾನ್ ತಲಾ ಎರಡೆರಡು ವಿಕೆಟ್ ಕಬಳಿಸಿದರು.