ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Ranya Rao case: ಚಿನ್ನ ಕಳ್ಳಸಾಗಣೆ ಪ್ರಕರಣ; ಪರಪ್ಪನ ಅಗ್ರಹಾರ ಜೈಲಿನಿಂದ ನಟಿ ರನ್ಯಾ ರಾವ್‌ ರಿಲೀಸ್‌

ದುಬೈನಿಂದ 14.2 ಕೆ.ಜಿ ಚಿನ್ನವನ್ನು ಕಳ್ಳ ಸಾಗಣೆ ಮಾಡಿದ್ದ ಆರೋಪದಡಿ ಕಳೆದ ವರ್ಷ ಮಾರ್ಚ್ 3ರಂದು ಡಿಆರ್‌ಐ ಅಧಿಕಾರಿಗಳು ದೇವನಹಳ್ಳಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ಯಾ ರಾವ್ ಅವರನ್ನು ಬಂಧಿಸಿದ್ದರು. ಕಾಫಿಫೋಸಾ 3(1) ಸೆಕ್ಷನ್ ಅಡಿಯಲ್ಲಿ ಬಂಧನವಾಗಿದ್ದರಿಂದ ಜಾಮೀನು ಲಭಿಸಿದ್ದರೂ ಕಳೆದ ಒಂದು ವರ್ಷದಿಂದ ನಟಿ ಜೈಲಿನಲ್ಲೇ ಇರಬೇಕಾಗಿತ್ತು. ಇದೀಗ ನಟಿ ರನ್ಯಾ ರಾವ್, ಬೆಂಗಳೂರು ಸೆಂಟ್ರಲ್‌ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಿಂದ ನಟಿ ರನ್ಯಾ ರಾವ್‌ ರಿಲೀಸ್‌

ನಟಿ ರನ್ಯಾ ರಾವ್.‌ -

Prabhakara R
Prabhakara R Apr 22, 2026 9:29 PM

ಬೆಂಗಳೂರು: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ (gold smuggling case) ಜಾಮೀನು ಸಿಕ್ಕಿರುವ ಹಿನ್ನೆಲೆಯಲ್ಲಿ ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್‌ (Ranya Rao), ಒಂದು ವರ್ಷದ ಬಳಿಕ ಪರಪ್ಪನ ಅಗ್ರಹಾರ ಜೈಲಿನಿಂದ ಬುಧವಾರ ಸಂಜೆ ಬಿಡುಗಡೆಯಾದರು. ಜೈಲಿನಿಂದ ಬಿಡುಗಡೆಯಾದ ನಟಿ, ವಕೀಲರ ಕಾರಿನಲ್ಲಿ ಜೈಲು ಆವರಣದಿಂದ ಹೊರಟರು.

ದುಬೈನಿಂದ 14.2 ಕೆ.ಜಿ ಚಿನ್ನವನ್ನು ಕಳ್ಳ ಸಾಗಣೆ ಮಾಡಿದ್ದ ಆರೋಪದಡಿ ಕಳೆದ ವರ್ಷ ಮಾರ್ಚ್ 3ರಂದು ಡಿಆರ್‌ಐ ಅಧಿಕಾರಿಗಳು ದೇವನಹಳ್ಳಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ಯಾ ರಾವ್ ಅವರನ್ನು ಬಂಧಿಸಿದ್ದರು. ಚಿನ್ನ ಸಾಗಣೆ, ಮಾರಾಟಕ್ಕೆ ನೆರವು ನೀಡಿದ್ದ ಆರೋಪದ ಮೇರೆಗೆ ರನ್ಯಾ ಸಹಚರರಾದ ತರುಣ್ ರಾಜ್ ಕುಂಡೂರು ಹಾಗೂ ಸಾಹಿಲ್ ಜೈನ್‌ ಅವರನ್ನು ಬಂಧಿಸಲಾಗಿತ್ತು.

ರನ್ಯಾ ರಾವ್‌, ತರುಣ್ ಕೊಂಡೂರು ರಾಜ್‌ಗೆ ನಗರದ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯವು 2025ರ ಮೇ 20ರಂದು ಜಾಮೀನು ಮಂಜೂರು ಮಾಡಿತ್ತು. ಇದಕ್ಕೂ ಮುನ್ನ ಅಂದರೆ ಏಪ್ರಿಲ್ 22ರಂದು ವಿದೇಶಿ ವಿನಿಮಯ ನಿಯಂತ್ರಣ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆ ಕಾಯ್ದೆಯ(ಕಾಫಿಫೋಸಾ) 3(1) ಸೆಕ್ಷನ್ ಅಡಿಯಲ್ಲಿ ರನ್ಯಾ ವಿರುದ್ಧ ಬಂಧನದ ಆದೇಶ ಹೊರಡಿಸಲಾಗಿತ್ತು. ಕಾಫಿಫೋಸಾ ಪ್ರಕರಣದಲ್ಲಿ ಬಂಧನವಾದರೆ, ಒಂದು ವರ್ಷ ಜೈಲಿನಿಂದ ಬಿಡುಗಡೆ ಆಗುವಂತೆ ಇಲ್ಲ. ಹೀಗಾಗಿ, ಜಾಮೀನು ಲಭಿಸಿದ್ದರೂ ರನ್ಯಾ ಕಾರಾಗೃಹದಲ್ಲೇ ಇದ್ದರು.

'ಕಾಫಿಫೋಸಾದಡಿ ಆದೇಶ ಹೊರಡಿಸಿ ಬುಧವಾರಕ್ಕೆ ಒಂದು ವರ್ಷವಾಗಿದ್ದು, ಈ ಹಿಂದೆಯೇ ಲಭಿಸಿದ ಜಾಮೀನಿನ ಮೇಲೆ ಇದೀಗ ರನ್ಯಾ ಬಿಡುಗಡೆ ಆಗಿದ್ದಾರೆ.

Physical Abuse: ಕೊಡಗಿನ ಹೋಮ್‌ಸ್ಟೇಯಲ್ಲಿ ವಿದೇಶಿ ಮಹಿಳೆ ಮೇಲೆ ಅತ್ಯಾಚಾರ, ಇಬ್ಬರ ಬಂಧನ

ಒಂದು ವರ್ಷದಲ್ಲಿ 102.55 ಕೋಟಿ ಮೌಲ್ಯದ ಚಿನ್ನ ಕಳ್ಳಸಾಗಣೆ

'ಅಕ್ರಮ ಹಣ ವರ್ಗಾವಣೆ (ತಡೆ) ಕಾಯ್ದೆಯ (ಪಿಎಂಎಲ್‌ಎ) ಪ್ರಕರಣಗಳ ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯಕ್ಕೆ ಕಳೆದ ಫೆಬ್ರವರಿಯಲ್ಲಿ ಇ.ಡಿ.ಯಿಂದ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ರನ್ಯಾ ರಾವ್, ಸಹಚರರು ಒಂದು ವರ್ಷದಲ್ಲಿ 102.55 ಕೋಟಿ ಮೌಲ್ಯದ 127 ಕೆ.ಜಿ ಚಿನ್ನವನ್ನು ಕಳ್ಳ ಸಾಗಣೆ ಮಾಡಿದ್ದಾರೆಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿತ್ತು.