ಮಹಿಳೆಯೊಬ್ಬರಿಗೆ ದುಷ್ಕರ್ಮಿಗಳು ಕಿರುಕುಳ ನೀಡುವುದನ್ನು ತಡೆದ ಯುವಕನ ಹತ್ಯೆ
Crime News: ಮಹಿಳೆಯೊಬ್ಬರಿಗೆ ಕಿರುಕುಳ ನೀಡುತ್ತಿದ್ದವರನ್ನು ತಡೆಯಲು ಮುಂದಾದ ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. ಸಾರ್ವಜನಿಕ ಸ್ಥಳದಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ.
ಸಾಂದರ್ಭಿಕ ಚಿತ್ರ -
ಭೋಪಾಲ್, ಜ. 4: 22 ವರ್ಷದ ಯುವಕನನ್ನು ಚೂರಿಯಿಂದ ಇರಿದು ಹತ್ಯೆ ಮಾಡಿರುವ ಘಟನೆ ಮಧ್ಯ ಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ನಡೆದಿದೆ. ಮಹಿಳೆಯೊಬ್ಬರಿಗೆ ದುಷ್ಕರ್ಮಿಗಳು ಕಿರುಕುಳಕ್ಕೆ ಕೊಟ್ಟಿದ್ದಕ್ಕೆ ಯುವಕ ವಿರೋಧ ವ್ಯಕ್ತಪಡಿಸಿದ್ದ ಕಾರಣಕ್ಕೆ ಪ್ರತೀಕಾರವಾಗಿ ಈ ಹತ್ಯೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ನಂದು ಅಲಿಯಾಸ್ ಶುಭಮ್ ಚೌಬೆ ಕೊಲೆಯಾದ ದುರ್ದೈವಿ.
ವಿದಿಶಾ ನಗರದ ಸಿವಿಲ್ ಲೈನ್ಸ್ ಪೊಲೀಸ್ ಠಾಣಾ ವ್ಯಾಪ್ತಿಯ ಇಂದ್ರಪ್ರಸ್ಥ ಕಾಲನಿಯಲ್ಲಿ ಈ ಘಟನೆ ನಡೆದಿದೆ. ಯುವಕನ ಮೇಲೆ ದುಷ್ಕರ್ಮಿಗಳು ದಾಳಿ ನಡೆಸುತ್ತಿರುವ ಸಂಪೂರ್ಣ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕರೈಯಾ ಖೇಡಾ ರಸ್ತೆಯ ನಿವಾಸಿಯಾಗಿರುವ ಚುನ್ನಿ ಎಂಬಾತ ಮತ್ತು ತನ್ನ ಸಹಚರರೊಂದಿಗೆ ಸೇರಿ ಮಹಿಳೆಯೊಬ್ಬರಿಗೆ ಕಿರುಕುಳ ನೀಡುತ್ತಿದ್ದ. ಇದನ್ನು ತಡೆಯಲು ಯತ್ನಿಸಿದ್ದೇ ಶುಭಮ್ ಚೌಬೆ ಜೀವಕ್ಕೆ ಎರವಾಯ್ತು.
ಪತಿಯ ಸರ್ಕಾರಿ ಉದ್ಯೋಗ ಪತ್ನಿಗೆ ಸಿಕ್ಕಿದ್ದಕ್ಕೆ ಕೋಪ; ಸೊಸೆಯನ್ನೇ ಹತ್ಯೆಗೈದ ಅತ್ತೆ!
ಮಹಿಳೆಗೆ ಕಿರುಕುಳ ನೀಡುತ್ತಿರುವುದನ್ನು ಗಮನಿಸಿದ ಶುಭಮ್ ಚೌಬೆ ಅವರನ್ನು ತಡೆದಿದ್ದಾನೆ. ಇದಕ್ಕೆ ಪ್ರತೀಕಾರವಾಗಿ, ಚುನ್ನಿ ಶನಿವಾರ (ಡಿಸೆಂಬರ್ 3) ರಾತ್ರಿ ತನ್ನ ಸ್ನೇಹಿತರೊಂದಿಗೆ ಬೈಕ್‌ನಲ್ಲಿ ಇಂದ್ರಪ್ರಸ್ಥ ಕಾಲೋನಿಗೆ ಬಂದಿದ್ದಾನೆ. ಶುಭಮ್ ಅವರನ್ನು ಮನೆಯ ಹೊರಗೆ ಕರೆದು ಹಲ್ಲೆ ನಡೆಸಿದ್ದಾನೆ ಎಂದು ವರದಿ ತಿಳಿಸಿದೆ.
ಆರೋಪಿಗಳು ಮೊದಲು ಶುಭಮ್ ಅವರನ್ನು ಹೊಡೆದು ನಂತರ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ದಾಳಿಯ ದೃಶಯದವನ್ನು ನೆರೆಹೊರೆಯವರು ನೋಡಿದರೂ ಸಹಾಯಕ್ಕೆ ಧಾವಿಸಲಿಲ್ಲ. ತಕ್ಷಣ ಶುಭಮ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು.
ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ, ಹೆಚ್ಚುವರಿ ಎಸ್‌ಪಿ ಪ್ರಶಾಂತ್ ಚೌಬೆ ಹೆಚ್ಚಿನ ಮಾಹಿತಿ ಪಡೆಯಲು ಸ್ಥಳಕ್ಕೆ ಧಾವಿಸಿದರು. ಪೊಲೀಸರು ತನಿಖೆ ಆರಂಭಿಸಿದ್ದು, ದಾಳಿಕೋರರನ್ನು ಗುರುತಿಸಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಚುನ್ನಿ ಸೇರಿದಂತೆ ದಾಳಿಕೋರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಘಟನೆಯ ಸಿಸಿಟಿವಿ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ವಿಡಿಯೊ ವೀಕ್ಷಿಸಿ:
Vidisha, Madya Pradesh: A 22-year-old youth, Nandu Chaubey, was stabbed to death in Indraprastha Colony under Vidisha’s Civil Lines police station on Saturday night. The attack was allegedly in retaliation for opposing the harassment of a woman. He was rushed to hospital but… pic.twitter.com/A3n0Qq8mRS
— IANS (@ians_india) January 4, 2026
ಮದುವೆ ನಿಶ್ಚಯವಾಗಿ ವಧು ಸ್ನೇಹಿತೆಯೊಂದಿಗೆ ಪರಾರಿ
ಪಂಜಾಬ್‍ನಲ್ಲಿ ಸಲಿಂಗಕಾಮದ ಪ್ರೇಮಕಥೆಯೊಂದು ಬೆಳಕಿಗೆ ಬಂದಿದೆ. ಮದುವೆ ನಿಶ್ಚಯವಾಗಿದ್ದ ವಧುವು ಬಾಲ್ಯದ ಗೆಳತಿಯೊಂದಿಗೆ ಓಡಿ ಹೋಗಿದ್ದಾಳೆ. ಅಲ್ಲದೆ ವಧುವಿನ ಸಹೋದರನಿಗೆ ಆಕೆಯ ಸ್ನೇಹಿತೆಯು ಬೆದರಿಕೆಯೊಡ್ಡಿದ್ದಾಳೆ. ಈ ವಿಚಿತ್ರ ಪ್ರೇಮಕಥೆಯು ತರಣ್ ಜಿಲ್ಲೆಯ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮೊಹಲ್ಲಾ ಮುರಾದ್‌ಪುರದಲ್ಲಿ ನಡೆದಿದೆ.
ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನಲ್ಲಿ, ತನ್ನ ಮಗಳಿಗೆ ಅದೇ ಗ್ರಾಮದ ಆಕೆಯ ಸ್ನೇಹಿತೆ ಆಮಿಷವೊಡ್ಡಿದ್ದಾಳೆ ಎಂದು ವಧುವಿನ ತಾಯಿ ಮಹಿಳೆ ಆರೋಪಿಸಿದ್ದಾರೆ. ಜನವರಿ 14ರಂದು ತನ್ನ ಮಗಳ ವಿವಾಹ ನಡೆಯಬೇಕಿತ್ತು. ಆದರೆ ಓಡಿಹೋದ ಸುದ್ದಿ ಹರಡಿದ ನಂತರ, ವರನು ಈಗ ಅವಳನ್ನು ಮದುವೆಯಾಗಲು ನಿರಾಕರಿಸಿದ್ದಾನೆ ಎಂದು ಮಹಿಳೆ ಹೇಳಿದ್ದಾರೆ.
ತನ್ನ ಮಗಳು ಮತ್ತು ಸ್ನೇಹಿತೆ 9ರಿಂದ 12ನೇ ತರಗತಿಯವರೆಗೆ ಒಟ್ಟಿಗೆ ಓದಿದ್ದರು. ಅವರ ಸ್ನೇಹವು ಶಾಲೆಯಿಂದಲೇ ಇತ್ತು ಎಂದು ಮಹಿಳೆ ವಿವರಿಸಿದ್ದಾರೆ. ʼʼಮಗಳ ಸ್ನೇಹಿತೆ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಾಳೆ ಮತ್ತು ಹುಡುಗನಂತೆ ಬದುಕುತ್ತಿದ್ದಳು. ಇದಕ್ಕೆ ನಮಗೆ ಯಾವುದೇ ಅಭ್ಯಂತರವಿರಲಿಲ್ಲ. ನನ್ನ ಮಗಳು ಆಗಾಗ ಅವಳ ಮನೆಗೆ ಭೇಟಿ ನೀಡುತ್ತಿದ್ದಳು. ಅವಳು ಸಹ ನಮ್ಮ ಮನೆಗೆ ಆಗಮಿಸುತ್ತಿದ್ದಳು. ಅವರು ಹೆಚ್ಚಿನ ಸಮಯವನ್ನು ಒಟ್ಟಿಗೆ ಕಳೆಯುತ್ತಿದ್ದರು. ನಮಗೆ ಯಾವುದೇ ಅನುಮಾನವಿರಲಿಲ್ಲʼʼ ಎಂದು ತಿಳಿಸಿದ್ದಾರೆ.