ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪಂಜಾಬ್ ಆಯ್ತು ಈಗ ಕೇರಳಂ ವಿಶ್ವವಿದ್ಯಾನಿಲಯದಲ್ಲೂ ಘರ್ಷಣೆ: ಹಾಸ್ಟೆಲ್‌ನಲ್ಲಿ ಗುಂಪು ಹೊಡೆದಾಟ; ಕಲ್ಲು, ಬಿಯರ್ ಬಾಟಲಿಗಳ ಎಸೆತ

ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಅವರ ವಿರುದ್ದ ನಡೆದ ಯೂತ್ ಕಾಂಗ್ರೆಸ್ ಮೆರವಣಿಗೆ ವೇಳೆ ಕೇರಳಂ ವಿಶ್ವವಿದ್ಯಾಲಯದ ಹಾಸ್ಟೆಲ್‌ನಲ್ಲಿ ಗುಂಪು ಘರ್ಷಣೆ ನಡೆದಿದೆ. ಕಲ್ಲು, ಬಿಯರ್ ಬಾಟಲಿಗಳು ಮತ್ತು ಉರಿಯುವ ಪಂಜುಗಳನ್ನು ಬಳಸಿ ಪರಸ್ಪರ ದಾಳಿ ನಡೆಸಲಾಗಿದೆ.

ಕೇರಳಂ ವಿಶ್ವವಿದ್ಯಾಲಯದ ಹಾಸ್ಟೆಲ್‌ನಲ್ಲಿ ಘರ್ಷಣೆ

ಸಂಗ್ರಹ ಚಿತ್ರ -

ತಿರುವನಂತಪುರಂ: ಹಾಸ್ಟೆಲ್‌ನಲ್ಲಿ (Hostel) ಗುಂಪು ಘರ್ಷಣೆ ನಡೆದು ಕಲ್ಲು, ಬಿಯರ್ ಬಾಟಲಿಗಳ ತೂರಾಟ ನಡೆದಿರುವ ಘಟನೆ ಬುಧವಾರ ರಾತ್ರಿ ಕೇರಳದ (kerala) ತಿರುವನಂತಪುರಂನಲ್ಲಿ ವಿಶ್ವವಿದ್ಯಾಲಯದಲ್ಲಿ (Keralam University) ನಡೆದಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ (Chief Election Commissioner, Gyanesh Kumar) ಅವರ ವಿರುದ್ಧ ಯೂತ್ ಕಾಂಗ್ರೆಸ್ (Youth Congress) ನಡೆಸಿದ ಮೆರವಣಿಗೆಯ ವೇಳೆ ಈ ಘರ್ಷಣೆ ಉಂಟಾಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದರು. ಇದರಿಂದ ಹಲವಾರು ಮಂದಿ ಗಾಯಗೊಂಡಿದ್ದಾರೆ. ಈ ಬಳಿಕ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ ರಾಜ್ಯವ್ಯಾಪಿ ಪ್ರತಿಭಟನೆಗೆ ಕರೆ ನೀಡಿದೆ.

ಕೇರಳದ ತಿರುವನಂತಪುರಂನ ವಿಶ್ವವಿದ್ಯಾಲಯದ ಪುರುಷರ ಹಾಸ್ಟೆಲ್ ಹೊರಗೆ ಬುಧವಾರ ಸಂಜೆ 7.30ರ ಸುಮಾರಿಗೆ ಯೂತ್ ಕಾಂಗ್ರೆಸ್ ನಡೆಸಿದ ಮೆರವಣಿಗೆ ವೇಳೆ ಘರ್ಷಣೆ ಉಂಟಾಗಿ ಹಿಂಸಾತ್ಮಕ ರೂಪ ಪಡೆಯಿತು.

ನಕಲಿ ಶಿಕ್ಷಣ ಸಂಸ್ಥೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣದಲ್ಲಿ ತನಿಖೆ ವಿಳಂಬ: ಹೈಕೋರ್ಟ್ ಆಕ್ಷೇಪ

ಈ ಸಂದರ್ಭದಲ್ಲಿ ಎಸ್ ಎಫ್ ಐ ಮತ್ತು ಯೂತ್ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಕಲ್ಲು, ಬಿಯರ್ ಬಾಟಲಿ ಮತ್ತು ಉರಿಯುವ ಪಂಜುಗಳ ತೂರಾಟ ನಡೆದಿದೆ. ತಕ್ಷಣವೇ ಸ್ಥಳದಲ್ಲಿದ್ದ ಪೊಲೀಸರು ಹಾಸ್ಟೆಲ್ ಪ್ರವೇಶಿಸಿ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಇದರಿಂದ ಹಲವಾರು ಮಂದಿ ಗಾಯಗೊಂಡಿದ್ದಾರೆ.

ಘಟನೆಗೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ವಿರೋಧ ಪಕ್ಷದ ನಾಯಕ ಪಿಣರಾಯಿ ವಿಜಯನ್, ಪೊಲೀಸರು ನಿಷ್ಪಕ್ಷಪಾತವಾಗಿ ವರ್ತಿಸಬೇಕು ಮತ್ತು ಎಡಪಕ್ಷದ ವಿದ್ಯಾರ್ಥಿ ಸಂಘಟನೆಯ ಮೇಲೆ ದಾಳಿ ಮಾಡಬಾರದು ಎಂದು ಎಚ್ಚರಿಕೆ ನೀಡಿದರು.

ಎಸ್ ಎಫ್ ಐ ನಾಯಕರು ಪ್ರತಿಕ್ರಿಯಿಸಿ, ಮೆರವಣಿಗೆಯಲ್ಲಿ ಪಾಲ್ಗೊಂಡವರು ಆವರಣದೊಳಗೆ ಉರಿಯುವ ಪಂಜುಗಳನ್ನು ಎಸೆದಿದ್ದಾರೆ. ಹಾಸ್ಟೆಲ್ ಆವರಣಕ್ಕೆ ಎಸೆಯಲಾದ ಪಂಜುಗಳು ಅಲ್ಲಿ ನಿಲ್ಲಿಸಿದ್ದ ಕಾರು ಮತ್ತು ಕಿಟಕಿಗಳ ಮೇಲೆ ಬಿದ್ದವು. ಪೊಲೀಸರು ಹಾಸ್ಟೆಲ್ ಪ್ರವೇಶಿಸುವ ಮುನ್ನವೇ ಎರಡೂ ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಿದೆ. ಯಾವುದೇ ಆದೇಶವಿಲ್ಲದೆ ಪೊಲೀಸರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದೆ.

ಘರ್ಷಣೆ ಹಿನ್ನೆಲೆಯಲ್ಲಿ ಕೇರಳ ಪೊಲೀಸ್‌ನ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಮುಖ್ಯಸ್ಥ ಪಿ. ವಿಜಯನ್ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯ ಅವಲೋಕನ ನಡೆಸಿ, ಹಿಂಸಾಚಾರಕ್ಕೆ ಯಾವುದೇ ಸೂಕ್ತ ಕಾರಣವಿರಲಿಲ್ಲ. ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೆ ನಾನು ಇಲ್ಲೇ ಇರುತ್ತೇನೆ. ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಿಪಿಐಎಂ ನಾಯಕ ಪಿಣರಾಯಿ ವಿಜಯನ್ ಅವರು ಇದೊಂದು ಏಕಪಕ್ಷೀಯ ದಾಳಿ. ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿಗಳನ್ನು ಯೂತ್ ಕಾಂಗ್ರೆಸ್ ಕಾರ್ಯಕರ್ತರು ಗುರಿಯಾಗಿಸಿಕೊಂಡಿದ್ದಾರೆ. ಎಸ್ ಎಫ್ ಐ ಕಡೆಯಿಂದ ಯಾವುದೇ ಪ್ರಚೋದನೆ ಇರಲಿಲ್ಲ. ಯೂತ್ ಕಾಂಗ್ರೆಸ್ ಕಾರ್ಯಕರ್ತರು ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದರು. ಈ ದಾಳಿಯು ಪೂರ್ವಯೋಜಿತವಾಗಿತ್ತು ಎಂದು ಆರೋಪಿಸಿದರು.

ಕಾಂಗ್ರೆಸ್, ಯೂತ್ ಕಾಂಗ್ರೆಸ್ ಮತ್ತು ಕೇರಳ ಸ್ಟೂಡೆಂಟ್ಸ್ ಯೂನಿಯನ್ ಪದೇ ಪದೇ ಹಾಸ್ಟೆಲ್ ಅನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿವೆ. ಇದು ಪೊಲೀಸರಿಗೆ ಗೊತ್ತಿದೆ. ಗಾಯಗೊಂಡ ವಿದ್ಯಾರ್ಥಿಗಳು ಚಿಕಿತ್ಸೆ ಪಡೆಯಲು ಹೋದಾಗಲೂ ಅವರ ಮೇಲೆ ದಾಳಿಗಳಾಗಿವೆ. ಗಾಯಗೊಂಡವರು ಆಸ್ಪತ್ರೆಗೆ ಹೋಗುವುದನ್ನು ತಡೆಯುವ ಪ್ರಯತ್ನಗಳು ನಡೆದವು. ದಾಖಲಾತಿಗಾಗಿ ಜಿಲ್ಲಾ ಆಸ್ಪತ್ರೆಗೆ ತಲುಪಿದವರನ್ನೂ ತಡೆಯಲಾಯಿತು. ವೈದ್ಯಕೀಯ ಕಾಲೇಜಿಗೆ ಹೋದ ವಿದ್ಯಾರ್ಥಿಗಳ ಮೇಲೆ ಮತ್ತೆ ದಾಳಿ ನಡೆಸಲಾಯಿತು ಎಂದು ಹೇಳಿದರು.

ವಿದ್ಯಾರ್ಥಿನಿಗೆ ಅಸಮರ್ಪಕ ಸ್ಪರ್ಶ ಆರೋಪ: ಪ್ರಭಾರ ಪ್ರಾಂಶುಪಾಲ ಅಮಾನತು

ಈ ದಾಳಿಯು ಹಾಸ್ಟೆಲ್‌ನ ಒಳಗಿನಿಂದಲೇ ಪ್ರಾರಂಭವಾಗಿದೆ ಎಂದು ಯೂತ್ ಕಾಂಗ್ರೆಸ್ ಕಾರ್ಯಕರ್ತರು ಹೇಳಿದರೆ ವಿದ್ಯುತ್ ಕಡಿತದ ಸಮಯದಲ್ಲಿ ಮಾಡಿರುವ ವ್ಯಂಗ್ಯ ಮಾತುಗಳಿಂದ ಈ ಘರ್ಷಣೆ ನಡೆಯಿತು ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.