ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಚೆನ್ನೈ ಜೈಲಿನ ಬಳಿಕ ಮತ್ತೊಂದು ತಮಿಳುನಾಡಿನ ಕಾರಾಗೃಹದಿಂದ ತಪ್ಪಿಸಿಕೊಂಡ ಕೈದಿಗಳು; 16 ಮಂದಿ ನಾಪತ್ತೆ

ತಮಿಳುನಾಡಿನ ಥೇನಿ ಉಪ ಜೈಲಿನಿಂದ ಪರಾರಿಯಾಗಿದ್ದ 17 ಕೈದಿಗಳಲ್ಲಿ ಒಬ್ಬನನ್ನು ಬಂಧಿಸಲಾಗಿದೆ. ಉಳಿದವರನ್ನು ಪತ್ತೆ ಹಚ್ಚಿ ಸೆರೆ ಹಿಡಿಯಲು 17 ವಿಶೇಷ ತಂಡಗಳನ್ನು ರಚಿಸಲಾಗಿದೆ. ಕೈದಿಗಳು ಜೈಲಿನಿಂದ ತಪ್ಪಿಸಿಕೊಂಡ ಬಳಿಕ ಭದ್ರತಾ ತಂಡಗಳು ವಾಹನಗಳ ತೀವ್ರ ತಪಾಸಣೆ ನಡೆಸುತ್ತಿವೆ. ಮುನ್ನೆಚ್ಚರಿಕಾ ಕ್ರಮವಾಗಿ ನೆರೆಯ ದಿಂಡಿಗುಲ್ ಜಿಲ್ಲೆಯ 16 ಕಡೆಗಳಲ್ಲಿ ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ.

ಜೈಲಿನಿಂದ ಪರಾರಿದ ಕೈದಿಗಳು: 17 ಮಂದಿಯಲ್ಲಿ ಒಬ್ಬನ ಬಂಧನ

ಸಂಗ್ರಹ ಚಿತ್ರ -

ತಮಿಳುನಾಡು: ಕಳೆದ ವಾರ ಚೆನ್ನೈ ಕಾರಾಗೃಹದಿಂದ (Chennai jail) ಇಬ್ಬರು ಕೈದಿಗಳು ತಪ್ಪಿಕೊಂಡ ಬೆನ್ನಲ್ಲೇ ಇದೀಗ ತಮಿಳುನಾಡಿನ ಮತ್ತೊಂದು ಜೈಲಿನಿಂದ (Tamil Nadu Jail) 17 ಕೈದಿಗಳು (Prisoners Escape) ಪರಾರಿಯಾಗಿದ್ದಾರೆ. ಇವರಲ್ಲಿ ಒಬ್ಬನನ್ನು ತಕ್ಷಣವೇ ಬಂಧಿಸಲಾಗಿದೆ. ಉಳಿದವರನ್ನು ಪತ್ತೆ ಹಚ್ಚಿ ಸೆರೆ ಹಿಡಿಯಲು 17 ವಿಶೇಷ ತಂಡಗಳನ್ನು ರಚಿಸಲಾಗಿದೆ. ಥೇನಿ ಉಪ ಜೈಲಿನಿಂದ ಸೋಮವಾರ ತಡರಾತ್ರಿ 17 ಕೈದಿಗಳು ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ದಾಳಿ ನಡೆಸಿ ಪರಾರಿಯಾಗಿದ್ದರು ಎಂದು ದಕ್ಷಿಣ ವಲಯದ ಪೊಲೀಸ್ ಮಹಾನಿರೀಕ್ಷಕ ವಿಜಯೇಂದ್ರ ಬಿದರಿ (IGP Vijayendra Bidari) ತಿಳಿಸಿದ್ದಾರೆ.

ತಮಿಳುನಾಡಿನ ಜೈಲಿಂದ 17 ಕೈದಿಗಳ ಪರಾರಿ ಸೋಮವಾರ ತಡರಾತ್ರಿ ಪರಾರಿಯಾಗಿದ್ದು, ಈ ಕುರಿತು ತಕ್ಷಣವೇ ಕಾರ್ಯಾಚರಣೆಯನ್ನು ಪ್ರಾರಂಭಿಸಿ ಒಬ್ಬನನ್ನು ಬಂಧಿಸಲಾಗಿದೆ. ಉಳಿದವರನ್ನು ಸೆರೆ ಹಿಡಿಯಲು 17 ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಅವರು ಹೇಳಿದರು.

ಮತದಾರರ ಪಟ್ಟಿ ಅಕ್ರಮ ಅಳಿಸುವಿಕೆ ಆರೋಪ: ಇಂದು ಸುಪ್ರೀಂ ಕೋರ್ಟ್‌ನಲ್ಲಿ SIR ಆದೇಶಗಳ ವಿರುದ್ಧದ ಅರ್ಜಿ ವಿಚಾರಣೆ

ಘಟನೆಯ ಬಳಿಕ ಭದ್ರತಾ ತಂಡಗಳು ವಾಹನಗಳ ತೀವ್ರ ತಪಾಸಣೆ ನಡೆಸುತ್ತಿವೆ. ಮುನ್ನೆಚ್ಚರಿಕಾ ಕ್ರಮವಾಗಿ ನೆರೆಯ ದಿಂಡಿಗುಲ್ ಜಿಲ್ಲೆಯ 16 ಕಡೆಗಳಲ್ಲಿ ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ ಎಂದರು.

ದಿಂಡಿಗುಲ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಯಕುಮಾರ್ ಅವರು ನೀಡಿರುವ ಮಾಹಿತಿ ಪ್ರಕಾರ, 17 ಆರೋಪಿಗಳು ಒಂದೇ ಕೋಣೆಯಲ್ಲಿ ಇದ್ದರು. ಕೈದಿಗಳಲ್ಲಿ ಒಬ್ಬನಿಗೆ ಹುಷಾರಿಲ್ಲ ಎಂಬ ಮಾಹಿತಿ ತಿಳಿದು ಜೈಲು ಸಿಬ್ಬಂದಿ ಕೋಣೆಯೊಳಗೆ ಪ್ರವೇಶಿಸಿದಾಗ, ಆರೋಪಿಗಳು ಅವರ ಮೇಲೆ ಹಲ್ಲೆ ನಡೆಸಿ ಜೈಲಿನಿಂದ ಪರಾರಿಯಾಗಿದ್ದಾರೆ ಎಂದು ಹೇಳಿದರು.

ಥೇನಿ ಜಿಲ್ಲಾ ಜೈಲಿಗೆ ನಿಯೋಜಿತರಾಗಿದ್ದ ದ್ವಿತೀಯ ದರ್ಜೆ ಪೊಲೀಸ್ ಸಿಬ್ಬಂದಿ ತಂಗಾಪಾಂಡಿ ಗಾಯಗೊಂಡವರು. ಕೈದಿಗಳ ದಾಳಿಯಿಂದ ಅವರ ತಲೆಗೆ ಗಂಭೀರ ಗಾಯವಾಗಿದ್ದು, ಅವರನ್ನು ಜಿ. ವಿಲಕ್ಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನಿಬ್ಬರು ಜೈಲಿನ ಸಿಬ್ಬಂದಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿಸಿದರು.

ಥೇನಿ ಜೈಲಿನಿಂದ ಕೈದಿಗಳು ಪರಾರಿಯಾದ ಹಿನ್ನೆಲೆಯಲ್ಲಿ ನೆರೆಯ ಜಿಲ್ಲೆಗಳ ಪೊಲೀಸರಿಗೆ ಎಚ್ಚರಿಕೆ ನೀಡಲಾಗಿದೆ. ಇಡುಕ್ಕಿ, ಮಧುರೈ ಮತ್ತು ದಿಂಡಿಗುಲ್ ಜಿಲ್ಲೆಗಳ ಪೊಲೀಸರಿಗೆ ಈ ಘಟನೆಯ ಕುರಿತು ಮಾಹಿತಿ ನೀಡಲಾಗಿದೆ. ಅಲ್ಲದೇ ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಪರಾರಿಯಾದ ಆರೋಪಿಗಳನ್ನು ಗುರುತಿಸಲು ಅನುಕೂಲವಾಗುವಂತೆ ಅವರ ಭಾವಚಿತ್ರಗಳನ್ನು ನೆರೆಹೊರೆಯ ಪೊಲೀಸ್ ಠಾಣೆ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲಾಗಿದೆ ಎಂದರು.

ಕೆಲವು ದಿನಗಳ ಹಿಂದೆ ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಕೈದಿಗಳು ಬಿಗಿ ಭದ್ರತೆಗೆ ಹೆಸರುವಾಸಿಯಾಗಿದ್ದ ಚೆನ್ನೈನ ಪುಝಲ್ ಕೇಂದ್ರ ಕಾರಾಗೃಹದಿಂದ ತಪ್ಪಿಸಿಕೊಂಡಿದ್ದರು. ತಪ್ಪಿಸಿಕೊಂಡ ಇಬ್ಬರು ಕೈದಿಗಳಲ್ಲಿ ಒಬ್ಬ ನೇಪಾಳಿ ಪ್ರಜೆ ಸುದೀಪ್ ಬೋಗತಿ (21) ಎಂದು ಗುರುತಿಸಲಾಗಿದೆ. ಚೆನ್ನೈನ ಪಾಡಿ ಪ್ರದೇಶದಲ್ಲಿ ವಾಸಿಸುತ್ತಿದ್ದ ಆತನನ್ನು ಕಳ್ಳತನ ಪ್ರಕರಣವೊಂದರಲ್ಲಿ ಆಗಸ್ಟ್ 16ರಂದು ಬಂಧಿಸಲಾಗಿತ್ತು. ಇನ್ನೋರ್ವ 2021ರಲ್ಲಿ ಬಂಧಿಸಲಾಗಿದ್ಧ ತಿರುಮಂಗಲಂ ನಿವಾಸಿ ಸುರೇಶ್ (41) ಪೋಕ್ಸೋ ಕಾಯ್ದೆಯಡಿ ಶಿಕ್ಷೆಗೊಳಗಾಗಿದ್ದ ಅಪರಾಧಿಯಾಗಿದ್ದನು.

ಗುವಾಹಟಿ ಖಾಸಗಿ ಹೊಟೇಲ್‌ನಲ್ಲಿ ರಕ್ತದೋಕುಳಿ; ಭೀಕರ ಗುಂಡಿನ ದಾಳಿಗೆ 6 ಮಂದಿ ಬಲಿ

ಸುದೀಪ್ ಬೋಗತಿ ಅಕ್ಟೋಬರ್ 20ರಂದು ಸಂಜೆ ವೇಳೆಗೆ ಜೈಲಿನಿಂದ ನಾಪತ್ತೆಯಾಗಿದ್ದು, ಸುರೇಶ್ ಮರುದಿನ ಅಂದರೆ ಅಕ್ಟೋಬರ್ 21ರಂದು ಜೈಲು ಸಿಬ್ಬಂದಿಯ ಕಣ್ತಪ್ಪಿಸಿ ಪರಾರಿಯಾಗಿದ್ದನು. ಜೈಲಿನಲ್ಲಿ ಆತನ ನಡವಳಿಕೆ ಉತ್ತಮವಾಗಿದ್ದ ಕಾರಣ ಮುಖ್ಯ ಜೈಲು ಆವರಣದ ಹೊರಗಿರುವ 'ಜೈಲು ಬಜಾರ್'ನಲ್ಲಿ ಆತನಿಗೆ ದೈನಂದಿನ ಕೆಲಸಗಳನ್ನು ವಹಿಸಲಾಗಿತ್ತು. ಅಲ್ಲಿಂದ ಆತ ತಪ್ಪಿಸಿಕೊಂಡಿದ್ದನು. ಇವರಿಬ್ಬರನ್ನು ಬಂಧಿಸಲು ಕೂಡ ಪೊಲೀಸ್ ಅಧಿಕಾರಿಗಳು ವಿಶೇಷ ಪೊಲೀಸ್ ತಂಡಗಳನ್ನು ರಚಿಸಿದ್ದಾರೆ.