ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಂಬಂಧಗಳ ನಡುವೆ ದೂರ ಹೆಚ್ಚಿಸುತ್ತಿದೆಯೇ ಬ್ಯುಸಿ ಜೀವನ?

ಆಧುನಿಕ ಜೀವನ ಶೈಲಿಯನ್ನು ಸುಧಾರಿಸಿಕೊಳ್ಳಲು ಅನೇಕ ಸೌಲಭ್ಯಗಳನ್ನು ನಾವು ಹೊಂದಿ ದ್ದೇವೆ. ತಂತ್ರಜ್ಞಾನ ಬೆಳವಣಿಗೆ, ವೇಗವಾದ ಸಂವಹನ ಮತ್ತು ಉದ್ಯೋಗಾವಕಾಶಗಳು ಬದುಕನ್ನು ಸುಲಭಗೊಳಿಸಿವೆ. ಆದರೆ ಇದೇ ಅಂಶಗಳು ಸಂಬಂಧಗಳಿಗೆ ನೀಡುವ ಸಮಯವನ್ನು ಕಡಿಮೆ ಮಾಡಿವೆ. ಬೆಳಗ್ಗೆ ಕೆಲಸದ ಒತ್ತಡ, ಸಂಜೆ ಟ್ರಾಫಿಕ್, ರಾತ್ರಿ ಮೊಬೈಲ್ ಅಥವಾ ಸಾಮಾಜಿಕ ಜಾಲತಾಣಗಳು

ಸಂಬಂಧಗಳ ನಡುವೆ ದೂರ ಹೆಚ್ಚಿಸುತ್ತಿದೆಯೇ ಬ್ಯುಸಿ ಜೀವನ?

-

Profile
Ashok Nayak Oct 27, 2026 11:16 AM

ಮಧುರಾ ಎಲ್ ಭಟ್ಟ, ಬೆಂಗಳೂರು

ನಾವು ಜೀವನದಲ್ಲಿ ಮುಂದೆ ಸಾಗುತ್ತಿದ್ದೇವೆಯೇ? ಅಥವಾ ಮುಂದೆ ಸಾಗುವ ಭರದಲ್ಲಿ ನಮ್ಮವ ರಿಂದಲೇ ದೂರವಾಗುತ್ತಿದ್ದೇವೆಯೇ? ಈ ಬ್ಯುಸಿ ಜೀವನದಲ್ಲಿ ನಮ್ಮಿಂದ ದೂರವಾಗುತ್ತಿರುವುದು ಹಣವಲ್ಲ, ಸಮಯವಲ್ಲ, ಸಂಬಂಧಗಳು. ಮೊದಲೆಲ್ಲ ಕುಟುಂಬದವರು ದಿನದ ಕೊನೆಯಲ್ಲಿ ಒಟ್ಟಿಗೆ ಕುಳಿತು ಮಾತನಾಡುತ್ತಿದ್ದರು. ಮನೆಯ ಹಿರಿಯರ ಅನುಭವಗಳು, ಮಕ್ಕಳ ಆಟ-ಪಾಠ, ನೆರೆಹೊರೆಯವರ ಜೊತೆಗಿನ ಆತ್ಮೀಯತೆ ಬದುಕಿನ ಭಾಗವಾಗಿತ್ತು. ಇಂದು ಪರಿಸ್ಥಿತಿ ಬದಲಾಗಿದೆ. ಮನೆಯ ಸದಸ್ಯರೆಲ್ಲ ಒಂದೇ ಸೂರಿನಡಿ ಇದ್ದರೂ, ಮನಸ್ಸಿನ ಅಂತರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವಂತೆ ಕಾಣುತ್ತಿದೆ.

ಆಧುನಿಕ ಜೀವನ ಶೈಲಿಯನ್ನು ಸುಧಾರಿಸಿಕೊಳ್ಳಲು ಅನೇಕ ಸೌಲಭ್ಯಗಳನ್ನು ನಾವು ಹೊಂದಿ ದ್ದೇವೆ. ತಂತ್ರಜ್ಞಾನ ಬೆಳವಣಿಗೆ, ವೇಗವಾದ ಸಂವಹನ ಮತ್ತು ಉದ್ಯೋಗಾವಕಾಶಗಳು ಬದುಕನ್ನು ಸುಲಭಗೊಳಿಸಿವೆ. ಆದರೆ ಇದೇ ಅಂಶಗಳು ಸಂಬಂಧಗಳಿಗೆ ನೀಡುವ ಸಮಯವನ್ನು ಕಡಿಮೆ ಮಾಡಿವೆ. ಬೆಳಗ್ಗೆ ಕೆಲಸದ ಒತ್ತಡ, ಸಂಜೆ ಟ್ರಾಫಿಕ್, ರಾತ್ರಿ ಮೊಬೈಲ್ ಅಥವಾ ಸಾಮಾಜಿಕ ಜಾಲತಾಣಗಳು. ಈ ಎಲ್ಲದರ ನಡುವೆ ಪರಸ್ಪರ ಮಾತನಾಡಲು, ಒಬ್ಬರ ಭಾವನೆಗಳನ್ನು ಇನ್ನೊಬ್ಬರು ಅರ್ಥಮಾಡಿಕೊಳ್ಳಲು ಸಮಯವೇ ಸಿಗದಂತಾಗಿದೆ.

ಇದನ್ನೂ ಓದಿ: Prakash Hegde Column: ಸ್ಟಾರ್‌ಲಿಂಕ್‌: ಭಾರತಕ್ಕೆ ತಾರೆಯೋ ಧೂಮಕೇತುವೋ ?

ಇಂದು ಅನೇಕ ಕುಟುಂಬಗಳು ಈ ವಿಚಿತ್ರ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಎಲ್ಲರೂ ಜೊತೆಯಲ್ಲೇ ಕುಳಿತಿರುತ್ತಾರೆ, ಆದರೆ ಪ್ರತಿಯೊಬ್ಬರ ಗಮನ ಮೊಬೈಲ್ ಪರದೆ ಮೇಲೆ ಇರುತ್ತದೆ. ಅಲ್ಲಿ ಮಾತುಕತೆ ಗಿಂತ ಸಂದೇಶಗಳು ಹೆಚ್ಚು, ಮುಖಾಮುಖಿ ಭೇಟಿಗಿಂತ ಆನ್‌ಲೈನ್ ಸಂಪರ್ಕ ಹೆಚ್ಚು. ಪರಿಣಾಮ ವಾಗಿ ಸಂಬಂಧಗಳಲ್ಲಿನ ಬೆಸೆಯುವಿಕೆ ನಿಧಾನವಾಗಿ ಕಡಿಮೆಯಾಗುತ್ತಿದೆ.

ಸಂಬಂಧಗಳ ಬಲವು ಹಣದಿಂದಲೂ ಅಲ್ಲ, ಉಡುಗೊರೆಗಳಿಂದಲೂ ಅಲ್ಲ ಸಮಯ ಮತ್ತು ಕಾಳಜಿಯಿಂದ ರೂಪುಗೊಳ್ಳುತ್ತದೆ. ಮಕ್ಕಳು ಪೋಷಕರಿಂದ ದುಬಾರಿ ವಸ್ತುಗಳನ್ನು ಮಾತ್ರ ನಿರೀಕ್ಷಿಸುವುದಿಲ್ಲ. ಅವರೊಂದಿಗೆ ಮಾತನಾಡುವ, ಕೇಳುವ ಮತ್ತು ಸಮಯ ಕಳೆಯುವ ಮನಸ್ಸನ್ನು ಬಯಸುತ್ತಾರೆ. ಇದೇ ರೀತಿ ವಯೋವೃದ್ಧ ಪೋಷಕರಿಗೆ ನಮ್ಮ ಸನಿಹ, ಒಂದು ಆತ್ಮೀಯ ಮಾತು ಮತ್ತು ನಾವು ಅವರಿಗಾಗಿಯೇ ನೀಡುವ ಸಮಯ ದೊಡ್ಡ ತೃಪ್ತಿಯನ್ನು ನೀಡುತ್ತದೆ. ತಮ್ಮ ಕೊನೆಯ ದಿನದವರೆಗೂ ಇವರು ನಮ್ಮ ಜೊತೆ ನಿಲ್ಲಬಲ್ಲರು ಎಂಬ ಆತ್ಮಬಲ ವನ್ನು ಹೆಚ್ಚಿಸುತ್ತದೆ.

ಬ್ಯೂಸಿಯಾಗಿರುವುದು ತಪ್ಪಲ್ಲ. ಪ್ರತಿಯೊಬ್ಬರೂ ತಮ್ಮ ಬದುಕನ್ನು ಉತ್ತಮಗೊಳಿಸಲು ಶ್ರಮ ಪಡುತ್ತಿರುತ್ತಾರೆ. ಆದರೆ ಆ ಶ್ರಮ ಸಂಬಂಧಗಳನ್ನು ದೂರಿಡುವಂತೆ ಮಾಡಬಾರದು. ಜೀವನದಲ್ಲಿ ಯಶಸ್ಸು ಸಾಧಿಸಿ, ಎಲ್ಲ ಸೌಲಭ್ಯಗಳನ್ನು ಪಡೆದುಕೊಂಡರೂ, ಹಂಚಿಕೊಳ್ಳಲು ಆತ್ಮೀಯ ಸಂಬAಧಗಳೇ ಇಲ್ಲದಿದ್ದರೆ ಆ ಯಶಸ್ಸು ಅಪೂರ್ಣವಾಗುತ್ತದೆ.

ಕೆಲವು ನಾವು ಅನುಸರಿಸುವ ಸಣ್ಣ ಅಭ್ಯಾಸಗಳು ಸಂಬಂಧಗಳನ್ನು ಗಟ್ಟಿಗೊಳಿಸಬಹುದು. ಕುಟುಂಬದೊAದಿಗೆ ದಿನಕ್ಕೆ ಒಂದು ಹೊತ್ತು ಊಟ ಮಾಡುವುದು, ವಾರಕ್ಕೊಮ್ಮೆ ಎಲ್ಲರೂ ಸೇರಿ ಸಮಯ ಕಳೆಯುವುದು, ಮೊಬೈಲ್ ಇಲ್ಲದ ಸಂಭಾಷಣೆಗೆ ಕೆಲವು ನಿಮಿಷಗಳನ್ನು ಮೀಸಲಿಡು ವುದು, ದೂರದಲ್ಲಿರುವ ಸಂಬಂಧಿಕರಿಗೆ ಕರೆ ಮಾಡುವುದು ಇವುಗಳೆಲ್ಲ ಸಂಬಂಧಗಳಲ್ಲಿನ ಆತ್ಮೀಯತೆಯನ್ನು ಹೆಚ್ಚಿಸುತ್ತವೆ.

ಮಾನವನು ಸಾಮಾಜಿಕ ಜೀವಿ. ಸಂಬಂಧಗಳಿಲ್ಲದೆ ಬದುಕು ಸಂಪೂರ್ಣವಾಗುವುದಿಲ್ಲ. ತಂತ್ರಜ್ಞಾನ, ಉದ್ಯೋಗ ಮತ್ತು ಯಶಸ್ಸು ನಮ್ಮ ಜೀವನದ ಭಾಗವಾಗಿರಲಿ, ಆದರೆ ಅವು ಸಂಬಂಧಗಳ ಸ್ಥಾನವನ್ನು ಆಕ್ರಮಿಸಬಾರದು. ಏಕೆಂದರೆ ಜೀವನದ ಕೊನೆಯ ಹಂತದಲ್ಲಿ ನೆನಪಾಗುವುದು ನಮ್ಮ ಹುದ್ದೆಗಳಲ್ಲ, ನಮ್ಮ ಸಂಪತ್ತಲ್ಲ, ನಮ್ಮ ಜೊತೆ ನಡೆದವರು, ನಮ್ಮನ್ನು ಪ್ರೀತಿಸಿದವರು ಮತ್ತು ನಾವು ಬೆಳೆಸಿಕೊಂಡ ಸಂಬಂಧಗಳೇ.