ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಪತ್ನಿಗೆ ಬೇರೆಯವರೊಂದಿಗೆ ಅಕ್ರಮ ಸಂಬಂಧದಿಂದ ಕುಪಿತಗೊಂಡ ಪತಿ; ಪ್ರಿಯಕರನನ್ನು ಕೊಲೆ ಮಾಡಿ ದೇಹ ಛಿದ್ರಗೊಳಿಸಿ ಕಾಲುವೆಗೆ ಎಸೆದ ಬಿಎಲ್ಒ

Crime News: ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬನನ್ನು ಆಕೆಯ ಗಂಡ ಹತ್ಯೆ ಮಾಡಿದ್ದಾನೆ. ಅಲ್ಲದೆ, ಆತನ ದೇಹಗಳನ್ನು ಕತ್ತರಿಸಿ, ಛಿದ್ರ ಮಾಡಿ ಕಾಲುವೆಗೆ ಎಸೆದಿರುವ ಭಯಾನಕ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪತ್ನಿಯ ಪ್ರಿಯಕರನನ್ನು ಬರ್ಬರವಾಗಿ ಹತ್ಯೆಗೈದ ಪತಿ

ಹೆಂಡತಿಯ ಪ್ರಿಯಕರನನ್ನು ಕೊಲೆ ಮಾಡಿ ದೇಹವನ್ನು ಛಿದ್ರಗೊಳಿಸಿ ಕಾಲುವೆಗೆ ಎಸೆದ ಬಿಎಲ್ಒ -

Priyanka P
Priyanka P Feb 14, 2026 8:20 PM

ಕೋಲ್ಕತ್ತಾ, ಫೆ. 14: ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ವಿವಾಹೇತರ ಸಂಬಂಧದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ. ಆರೋಪಿಗಳಲ್ಲಿ ಒಬ್ಬ ಬಿಎಲ್ಒ ಎಂದು ಪೊಲೀಸರು ಹೇಳಿದ್ದಾರೆ (Crime News). ಬದುರಿಯಾದ ಕಾಲುವೆಯಲ್ಲಿ 30 ವರ್ಷದ ನಾಸಿರ್ ಅಲಿ ಎಂಬಾತನ ಛಿದ್ರಗೊಂಡ ದೇಹದ ಭಾಗಗಳು ಪತ್ತೆಯಾದ ನಂತರ ಫೆಬ್ರವರಿ 13ರಂದು ಬಿಎಲ್‌ಒ ರಿಜ್ವಾನ್ ಹಸನ್ ಮೊಂಡಲ್ ಮತ್ತು ಅವರ ಸಹಚರ ಸಾಗರ್ ಗೈನ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಮೊಂಡಲ್ ಪತ್ನಿಯೊಂದಿಗೆ ಅಲಿ ವಿವಾಹೇತರ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಅಲ್ಲದೆ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ ಸಂಬಂಧಿಸಿದ ಕೆಲವು ವಿಷಯಗಳನ್ನು ಚರ್ಚಿಸುವ ನೆಪದಲ್ಲಿ ಸೋಮವಾರ (ಫೆಬ್ರವರಿ 9) ಸಂಜೆ ತಡರಾತ್ರಿ ನಿರ್ಜನ ಸ್ಥಳದಲ್ಲಿ ತನ್ನನ್ನು ಭೇಟಿಯಾಗುವಂತೆ ಅಲಿಗೆ ತಿಳಿಸಿದ್ದ ಎಂದು ಹೇಳಲಾಗಿದೆ.

ಮೈದುನನೊಂದಿಗೆ ಅಕ್ರಮ ಸಂಬಂಧ; ವಿಷಯ ತಿಳಿದ ಪತಿಯನ್ನೇ ಕೊಂದು ಆತ್ಮಹತ್ಯೆ ಎಂದು ಬಿಂಬಿಸಿದ ಪತ್ನಿ

ಸೋಮವಾರ ರಾತ್ರಿಯಿಂದ ಅಲಿ ನಾಪತ್ತೆಯಾಗಿದ್ದ. ಆತನ ಕುಟುಂಬವು ಮರುದಿನ ಪೊಲೀಸ್ ದೂರು ದಾಖಲಿಸಿತ್ತು. ಪೊಲೀಸರು ಮೊಂಡಲ್‌ನ ಫೋನ್ ಕರೆಗಳು ಮತ್ತು ಚಲನವಲನಗಳನ್ನು ಪತ್ತೆಹಚ್ಚಿದರು. ಫೆಬ್ರವರಿ 13ರ ಬೆಳಗ್ಗೆ ಕಾಲುವೆಯಲ್ಲಿ ದೇಹದ ಭಾಗಗಳು ಕಂಡುಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಲಿಯನ್ನು ಕೊಂದು ಆತನ ದೇಹದ ಭಾಗಗಳನ್ನು ಕಾಲುವೆಯ ಮೂರು ವಿಭಿನ್ನ ಸ್ಥಳಗಳಲ್ಲಿ ಎಸೆದ ಆರೋಪದ ಮೇಲೆ ಮೊಂಡಲ್‌ನನ್ನು ವಿಚಾರಣೆಗೆ ಒಳಪಡಿಸಲಾಯಿತು. ನಂತರ ಬಂಧಿಸಲಾಯಿತು. ಕೊಲೆಯಲ್ಲಿ ಮೊಂಡಲ್‌ಗೆ ಸಹಾಯ ಮಾಡಿದ, ದೇಹವನ್ನು ಛಿದ್ರಗೊಳಿಸಿದ ಮತ್ತು ಭಾಗಗಳನ್ನು ಎಸೆಯಲು ಸಹಾಯ ಮಾಡಿದ ಆರೋಪದ ಮೇಲೆ ಗೈನ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಇನ್ನು ಆಕ್ರೋಶಗೊಂಡ ಸ್ಥಳೀಯರು ನ್ಯಾಯಕ್ಕಾಗಿ ಒತ್ತಾಯಿಸಿ, ಸುಮಾರು ಅರ್ಧ ಗಂಟೆಗಳ ಕಾಲ ರಸ್ತೆ ತಡೆ ನಡೆಸಿದರು. ನಂತರ ಪೊಲೀಸರು ಅವರ ಮನವೊಲಿಸಿ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವಂತೆ ಮಾಡಿದರು.

ಎಂಬಿಎ ವಿದ್ಯಾರ್ಥಿನಿ ಸಾವಿನ ಸುತ್ತ ಅನುಮಾನದ ಹುತ್ತ

ಮುಜಫರ್ ನಗರದಲ್ಲಿ ಮೊಬೈಲ್ ಫೋನಿಗಾಗಿ ಮಹಿಳೆ ಆತ್ಮಹತ್ಯೆ

ಉತ್ತರ ಪ್ರದೇಶದ ಮುಜಫರ್‌ನಗರ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ತಮ್ಮ ಪತಿ ಹೊಸ ಮೊಬೈಲ್ ಫೋನ್‌ಗೆ ಹಣ ನೀಡದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೀರಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಖೇಡಿ ಸರಾಯ್ ಗ್ರಾಮದಲ್ಲಿ, 27 ವರ್ಷದ ರಾಧಿಕಾ ಶುಕ್ರವಾರ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ.

ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ, ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ವರದಿಗಳ ಪ್ರಕಾರ, ಮೃತ ರಾಧಿಕಾ ಅವರ ಪತಿ ಆಶಿಶ್ ಶರ್ಮಾ ಕೆಲಸದ ನಿಮಿತ್ತ ಒಡಿಶಾದಲ್ಲಿ ವಾಸಿಸುತ್ತಿದ್ದಾರೆ. ರಾಧಿಕಾ ಕೆಲವು ಸಮಯದಿಂದ ತನ್ನ ಪತಿಯಿಂದ ಹೊಸ ಮೊಬೈಲ್ ಫೋನ್‌ಗೆ ಬೇಡಿಕೆ ಇಡುತ್ತಿದ್ದರು. ಹೊಸ ಮೊಬೈಲ್ ಫೋನ್ ಖರೀದಿಸಲು ಅವರು 10,000 ರುಪಾಯಿ ಕೇಳಿದ್ದರು.

ಆದರೆ ಆಕೆಗೆ ಕೇವಲ 2,000 ರುಪಾಯಿ ಮಾತ್ರ ಸಿಕ್ಕಿತು. ಪತಿ ಕಡಿಮೆ ಹಣ ಕಳುಹಿಸಿದಾಗ, ಅವಳು ಕೋಪಗೊಂಡಳು. ಶುಕ್ರವಾರ ಅವಳು ತಮ್ಮ ಮನೆಯೊಳಗೆ ನೇಣು ಹಾಕಿಕೊಂಡು ಮೃತಪಟ್ಟಳು. ರಾಧಿಕಾಗೆ ಮೂರು ವರ್ಷದ ಮಗನನ್ನು ತಬ್ಬಲಿ ಮಾಡಿ ಇಹಲೋಕ ತ್ಯಜಿಸಿದ್ದಾಳೆ.