ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಇಂಗ್ಲೆಂಡ್‌ನಲ್ಲಿ ಭಾರತೀಯ ಮೂಲದ ಸಿಖ್ ಚಾಲಕನನ್ನು ನಿಂದಿಸಿ, ಗಡ್ಡ ಹಿಡಿದೆಳೆದು ಹಲ್ಲೆ: ಬಸ್ ಚಲಾಯಿಸಿ ವಾಹನಗಳಿಗೆ ಡಿಕ್ಕಿ ಹೊಡಿಸಿದ ದುಷ್ಕರ್ಮಿ

Sikh Bus Driver Abused and Assaulted: ಇಂಗ್ಲೆಂಡ್‌ನಲ್ಲಿ ದುಷ್ಕರ್ಮಿಯೊಬ್ಬ ಬಸ್‌ನ ಟಿಕೆಟ್ ಪರಿಶೀಲಿಸುವ ಯಂತ್ರದಿಂದ ಭಾರತೀಯ ಮೂಲಕ ಸಿಖ್‌ ಚಾಲಕನ ಮೇಲೆ ಹಲ್ಲೆ ಮಾಡಿದ್ದಾನೆ. ಬಳಿಕ ಚಾಲಕನ ಗಡ್ಡವನ್ನು ಎಳೆದು, ತಲೆಗೆ ಗುದ್ದಿದ್ದಾನೆ. ಚಾಲಕನ ಮೇಲೆ ಹಲ್ಲೆ ಮಾಡಿದ ನಂತರ ಬಸ್‌ನ ನಿಯಂತ್ರಣವನ್ನು ತನ್ನ ಕೈಗೆ ತೆಗೆದುಕೊಂಡಿದ್ದಾನೆ. ಸದ್ಯ ಈ ಘಟನೆ ಅಲ್ಲಿನ ಭಾರತೀಯರಲ್ಲಿ ಭಯ ಮೂಡಿಸಿದೆ.

ಇಂಗ್ಲೆಂಡ್‌ನಲ್ಲಿ ಜನಾಂಗೀಯ ನಿಂದನೆ; ಸಿಖ್ ಚಾಲಕನ ಮೇಲೆ ಹಲ್ಲೆ

ಇಂಗ್ಲೆಂಡ್‌ನಲ್ಲಿ ಸಿಖ್ ಬಸ್ ಚಾಲಕನ ಮೇಲೆ ಹಲ್ಲೆ -

Priyanka P
Priyanka P Sep 20, 2026 5:32 PM

ಲಂಡನ್, ಸೆ. 20: ಇಂಗ್ಲೆಂಡ್‌ (England)ನ ಟೆಲ್‌ಫೋರ್ಡ್‌ನಲ್ಲಿ ಶುಕ್ರವಾರ (ಸೆಪ್ಟೆಂಬರ್‌ 18) ಸಂಜೆ ದುಷ್ಕರ್ಮಿಯೊಬ್ಬ ಭಾರತೀಯ ಮೂಲದ ಸಿಖ್ ಬಸ್ ಚಾಲಕನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಲ್ಲದೆ, ಆತನ ಮೇಲೆ ಹಲ್ಲೆ ನಡೆಸಿ ಸಿಂಗಲ್-ಡೆಕ್ಕರ್ ಬಸ್ ಅಪಹರಿಸಿದ್ದಾನೆ (Sikh Bus Driver Abused and Assaulted). ಬಸ್ ಚಲಾಯಿಸಿದ ಆರೋಪಿಯು ಸಾಲು ಸಾಲು ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಈ ದೃಶ್ಯವನ್ನು ಪ್ರಯಾಣಿಕರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ ವೈರಲ್ ಆಗಿದ್ದು, ಟ್ರಾವೆಲ್ ಟೆಲ್ಫೋರ್ಡ್ ಬಸ್ಸಿನೊಳಗೆ ಚಾಲಕನ ಮೇಲೆ ದುಷ್ಕರ್ಮಿ ಹಲ್ಲೆ ನಡೆಸಿದ್ದಾನೆ. ಸಿಖ್ ಚಾಲಕನ ಗಡ್ಡ ಎಳೆದು ನಿಂದಿಸಿದ್ದಾನೆ. ಈ ವೇಳೆ ಪ್ರಯಾಣಿಕರು ಭೀತಿಯಿಂದ ಕಿರುಚಿದ್ದಾರೆ. ಚಾಲಕನ ಮೇಲೆ ಹಲ್ಲೆ ನಡೆಸದಂತೆ ಪ್ರಯಾಣಿಕರು ಕೇಳಿಕೊಂಡಿದ್ದಾರೆ.

ವಿಡಿಯೊದಲ್ಲಿ, ಚಾಲಕ ಪದೇ ಪದೆ ಫೋನ್ ನೀಡುವಂತೆ ಕೇಳಿಕೊಳ್ಳುತ್ತಿರುವುದು ಮತ್ತು ಪೊಲೀಸರಿಗೆ ಕರೆ ಮಾಡುವಂತೆ ಪ್ರಯಾಣಿಕರಲ್ಲಿ ಮನವಿ ಮಾಡುತ್ತಿರುವುದು ಕಾಣಿಸುತ್ತದೆ. ಒಬ್ಬ ಮಹಿಳೆ ಚಾಲಕನನ್ನು ಬಿಟ್ಟುಬಿಡುವಂತೆ ದಾಳಿಕೋರನಿಗೆ ಹೇಳುವುದು ಕೇಳಿಸುತ್ತದೆ. ಮತ್ತೊಬ್ಬ ಪ್ರಯಾಣಿಕ ಕೂಡ ಆತನನ್ನು ಹಲ್ಲೆ ಮಾಡದಂತೆ ಒತ್ತಾಯಿಸಿದ್ದಾರೆ.

ಇಲ್ಲಿದೆ ವಿಡಿಯೊ:



ದಾಳಿಕೋರನು ಬಸ್‌ನ ಟಿಕೆಟ್ ಪರಿಶೀಲಿಸುವ ಯಂತ್ರದಿಂದ ಚಾಲಕನ ಮೇಲೆ ಹಲ್ಲೆ ಮಾಡಿದ್ದಾನೆ. ಬಳಿಕ ಚಾಲಕನ ಗಡ್ಡವನ್ನು ಎಳೆದು, ತಲೆಗೆ ಗುದ್ದಿದ್ದಾನೆ. ಚಾಲಕನ ಮೇಲೆ ಹಲ್ಲೆ ಮಾಡಿದ ನಂತರ ಬಸ್‌ನ ನಿಯಂತ್ರಣವನ್ನು ತನ್ನ ಕೈಗೆ ತೆಗೆದುಕೊಂಡಿದ್ದಾನೆ. ಮ್ಯಾಡೆಲಿಯ ಕೋರ್ಟ್ ಸ್ಟ್ರೀಟ್‌ನಲ್ಲಿನ ಈ ಆತಂಕಕಾರಿ ಘಟನೆಯ ಬಗ್ಗೆ ತಮಗೆ ಕರೆ ಬಂದಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕೊಹ್ಲಿಯ ನೋ ಹ್ಯಾಂಡ್‌ಶೇಕ್‌ ವಿವಾದ; ಆನ್‌ಲೈನ್‌ನಲ್ಲಿ ಟ್ರಾವಿಸ್ ಹೆಡ್ ಪತ್ನಿಗೆ ಕ್ರೂರ ನಿಂದನೆ

ಬಸ್‌ನ ನಿಯಂತ್ರಣವನ್ನು ತೆಗೆದುಕೊಂಡ ಆರೋಪಿಯು ವಿರುದ್ಧ ದಿಕ್ಕಿನಲ್ಲಿ ಚಲಾಯಿಸಿ, ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಬಸ್‌ ಮುಂದಕ್ಕೆ ಚಲಿಸುತ್ತಿದ್ದಂತೆ, ರಸ್ತೆಯಲ್ಲಿದ್ದ ಜನರು ಚಾಲಕನಿಗೆ ಬಸ್ ನಿಲ್ಲಿಸುವಂತೆ ಕೂಗಿದ್ದಾರೆ. ಘಟನಾ ಸ್ಥಳಕ್ಕೆ ಮಾಲಿನ್ಸ್‌ಗೇಟ್ ಠಾಣೆಯ ಶಸ್ತ್ರಸಜ್ಜಿತ ಪೊಲೀಸರು 10 ನಿಮಿಷಗಳೊಳಗೆ ಧಾವಿಸಿ ಬಸ್‌ ನಿಲ್ಲಿಸಿ, 33 ವರ್ಷದ ದುಷ್ಕರ್ಮಿಯನ್ನು ಬಂಧಿಸಿದರು.

ದರೋಡೆ ಮತ್ತು ಅಪಾಯಕಾರಿ ಚಾಲನೆ ಪ್ರಕರಣ ಸಂಬಂಧ ದುಷ್ಕರ್ಮಿಯನ್ನು ಬಂಧಿಸಲಾಗಿದೆ. ಬಂಧಿತ ವ್ಯಕ್ತಿ ಯೆಮೆನ್ ಪ್ರಜೆ ಎಂದು ಕೆಲವು ಸಾಮಾಜಿಕ ಮಾಧ್ಯಮ ಖಾತೆಗಳು ಹೇಳಿವೆ. ಆದರೆ, ಪೊಲೀಸರು ಈ ಹೇಳಿಕೆಯನ್ನು ದೃಢಪಡಿಸಿಲ್ಲ.

ಬಸ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಬೇರೆ ಯಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಹಲ್ಲೆಯ ನಂತರ ಚಾಲಕನ ಸಹಾಯಕ್ಕೆ ಬಂದ ಸಾರ್ವಜನಿಕರಿಗೆ ಪೊಲೀಸರು ಧನ್ಯವಾದ ತಿಳಿಸಿದ್ದಾರೆ.