ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪಶ್ಚಿಮ ಏಷ್ಯಾ ಯುದ್ಧ ಮತ್ತೆ ಆರಂಭ? ಶಾಂತಿ ಒಪ್ಪಂದದ ಬಿಕ್ಕಟ್ಟಿನ ನಡುವೆ ಅಮೆರಿಕಗೆ ಇರಾನ್ ಎಚ್ಚರಿಕೆ

US-Iran Crisis: ಅಮೆರಿಕವು ತನ್ನ ಮೇಲೆ ದಾಳಿ ನಡೆಸಿದರೆ, ಮಧ್ಯಪ್ರಾಚ್ಯ ವಲಯದಾದ್ಯಂತ ಇರುವ ಅಮೆರಿಕದ ಮಿಲಿಟರಿ ನೆಲೆಗಳು ಮತ್ತು ಅವರ ಹಿತಾಸಕ್ತಿಗಳ ಮೇಲೆ ನಿರಂತರ ಹಾಗೂ ಭೀಕರ ಪ್ರತಿ-ದಾಳಿಗಳನ್ನು ನಡೆಸಲಾಗುವುದು ಎಂದು ಇರಾನ್ ಸೇನೆ ಎಚ್ಚರಿಕೆ ನೀಡಿದೆ. ಆ ಮೂಲಕ ಮತ್ತೊಂದು ಸುತ್ತಿನ ಸಂಘರ್ಷ ಆರಂಭವಾಗುವ ಸೂಚನೆ ಸಿಕ್ಕಿದೆ.

ಪಶ್ಚಿಮ ಏಷ್ಯಾ ಯುದ್ಧ ಮತ್ತೆ ಆರಂಭವಾಗುತ್ತಾ?

ಡೊನಾಲ್ಡ್‌ ಟ್ರಂಪ್‌ ಮತ್ತು ಮೊಜ್ತಬಾ ಖಮೇನಿ (ಸಂಗ್ರಹ ಚಿತ್ರ) -

Priyanka P
Priyanka P Sep 20, 2026 8:33 PM

ಟೆಹರಾನ್, ಸೆ. 20: ಕೆಲವು ಪ್ರಾದೇಶಿಕ ರಾಷ್ಟ್ರಗಳ ಬೆಂಬಲದೊಂದಿಗೆ ಅಮೆರಿಕ ತನ್ನ ವಿರುದ್ಧ ಹೊಸ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಸಿದ್ಧತೆ ನಡೆಸುತ್ತಿದೆ ಎಂಬ ವರದಿ ತಮಗೆ ಲಭ್ಯವಾಗಿದೆ ಎಂದು ಇರಾನ್‌ನ ಕೇಂದ್ರ ಮಿಲಿಟರಿ ಕಮಾಂಡ್ ತಿಳಿಸಿದೆ (US-Iran Crisis). ಅತ್ಯಂತ ಪ್ರಮುಖವಾದ ಹೊರ್ಮುಜ್ ಜಲಸಂಧಿಯನ್ನು (Strait of Hormuz) ಮತ್ತೆ ತೆರೆಯಲು ಇರಾನ್ ಕೆಲವು ಕಟ್ಟುನಿಟ್ಟಾದ ಷರತ್ತುಗಳನ್ನು ವಿಧಿಸಿದೆ. ಇರಾನ್‌ನ ಮುಖ್ಯ ಸಮಾಲೋಚಕ ಮೊಹಮ್ಮದ್ ಬಾಗೇರ್ ಗಲಿಬಾಫ್ ಬೇರೆ ದೇಶಗಳ (ಮಧ್ಯಸ್ಥಗಾರರ) ಮೂಲಕ ಆ ಷರತ್ತುಗಳ ಪಟ್ಟಿಯನ್ನು ಅಮೆರಿಕಕ್ಕೆ ತಲುಪಿಸಿದ್ದಾರೆ. ಈ ಬೆನ್ನಲ್ಲೇ, ಅಮೆರಿಕವು ಇರಾನ್ ಮೇಲೆ ಮತ್ತೊಂದು ಹೊಸ ದಾಳಿ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ ಎನ್ನಲಾಗಿದೆ.

ಫೆಬ್ರವರಿ ಅಂತ್ಯದಲ್ಲಿ ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸಿದ ವೈಮಾನಿಕ ದಾಳಿಯೊಂದಿಗೆ ಆರಂಭವಾದ ಈ ಭೀಕರ ಸಂಘರ್ಷವು ಹಲವು ತಿಂಗಳು ಕಳೆದರೂ, ಉಭಯ ದೇಶಗಳ ನಡುವೆ ಯಾವುದೇ ಒಪ್ಪಂದವಾಗದೆ ಇಂದಿಗೂ ಬಿಕ್ಕಟ್ಟು ಹಾಗೆಯೇ ಮುಂದುವರಿದಿದೆ.

ಅಮೆರಿಕವು ತನ್ನ ಮೇಲೆ ದಾಳಿ ನಡೆಸಿದರೆ, ಮಧ್ಯಪ್ರಾಚ್ಯ ವಲಯದಾದ್ಯಂತ ಇರುವ ಅಮೆರಿಕದ ಮಿಲಿಟರಿ ನೆಲೆಗಳು ಮತ್ತು ಅದರ ಹಿತಾಸಕ್ತಿಗಳ ಮೇಲೆ ನಿರಂತರ ಹಾಗೂ ಭೀಕರ ಪ್ರತಿ-ದಾಳಿಗಳನ್ನು ನಡೆಸಲಾಗುವುದು ಎಂದು ಇರಾನ್ ಸೇನೆ ಎಚ್ಚರಿಕೆ ನೀಡಿದೆ.

ಟೆಹರಾನ್‌ ರನ್ನಿಂಗ್ ಸ್ಪರ್ಧೆಯಲ್ಲಿ ಹಿಜಾಬ್ ಧರಿಸದೇ ಭಾಗವಹಿಸಿದ ಇರಾನ್ ಮಹಿಳೆಯರು: ವಿಡಿಯೊ ವೈರಲ್

ಮಧ್ಯಪ್ರಾಚ್ಯದ ವಿವಿಧ ದೇಶಗಳಾದ ಇರಾಕ್, ಸಿರಿಯಾ, ಕುವೈತ್, ಯುಎಇ ಮತ್ತು ಬಹ್ರೇನ್‌ಗಳಲ್ಲಿ ಅಮೆರಿಕದ ಸೇನಾ ನೆಲೆಗಳು ಇವೆ. ಒಂದು ವೇಳೆ ಅಮೆರಿಕ ತನ್ನ ಮೇಲೆ ದಾಳಿ ಆರಂಭಿಸಿದರೆ, ಈ ಎಲ್ಲ ನೆಲೆಗಳನ್ನು ಗುರಿಯಾಗಿಸಿಕೊಂಡು ದೀರ್ಘಕಾಲದವರೆಗೆ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸುವುದಾಗಿ ಇರಾನ್ ಎಚ್ಚರಿಸಿದೆ.

ಕದನ ವಿರಾಮ ಮಾತುಕತೆಗೆ 7 ಕಂಡೀಷನ್‌ ಹಾಕಿದ ಇರಾನ್‌

ಯುದ್ಧವನ್ನು ಅಂತ್ಯಗೊಳಿಸಲು ಯಾವುದೇ ಮಾತುಕತೆಗೆ ಪ್ರಾರಂಭಿಸುವ ಮೊದಲು ಅಮೆರಿಕ ನಮ್ಮ ಏಳು ಷರತ್ತುಗಳನ್ನು ಒಪ್ಪಿಕೊಳ್ಳಬೇಕು. ಅವರಿಗೆ ಬೇರೆ ದಾರಿ ಇಲ್ಲ ಎಂದು ಇರಾನ್‌ನ ಸುಪ್ರೀಂ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್‌ನ ಕಾರ್ಯದರ್ಶಿ ಮೊಹ್ಸೆನ್ ರೆಜಾಯಿ ತಿಳಿಸಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡ ಅವರು, ಅಮೆರಿಕಕ್ಕೆ ನಮ್ಮ ಷರತ್ತುಗಳನ್ನು ಒಪ್ಪಿಕೊಳ್ಳುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಟೆಹರಾನ್ ಮತ್ತು ವಾಷಿಂಗ್ಟನ್ ನಡುವಿನ ಮುಂದುವರಿದ ಉದ್ವಿಗ್ನತೆ ಹಾಗೂ ಸಂಘರ್ಷದ ಅವಧಿಯಲ್ಲಿನ ನಡವಳಿಕೆಗೆ ಸಂಬಂಧಿಸಿದ ವ್ಯಾಪಕ ವಿವಾದ ಎದ್ದಿರುವ ಹಿನ್ನೆಲೆಯ ನಡುವೆ ರೆಜಾಯಿ ಈ ಸಂದೇಶವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಆ ಏಳು ಷರತ್ತುಗಳ ಬಗ್ಗೆ ವಿವರವಾಗಿ ಏನೂ ತಿಳಿಸಿಲ್ಲ. ಈ ಷರತ್ತುಗಳನ್ನು ಒಪ್ಪಿಕೊಳ್ಳುವುದು ಅಮೆರಿಕಗೆ ಬಿಟ್ಟ ವಿಷಯ. ಟ್ರಂಪ್ ಅವರ ಯಾವ ಬೆದರಿಕೆಗೂ ಬಗ್ಗಲ್ಲ. ನಿರ್ಣಾಯಕ ಯುದ್ಧಕ್ಕೆ ನಾವು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.