ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕ್ಯಾಬ್‌ನಲ್ಲಿ ಮಲಗಿದ್ದ ಮಗುವನ್ನು ಮರೆತ ಬೆಂಗಳೂರಿನ ದಂಪತಿ; ಮುಂದೇನಾಯ್ತು ಗೊತ್ತೆ?

ಕ್ಯಾಬ್‌ನಲ್ಲಿ ಪ್ರವಾಸ ಮುಗಿಸಿ ಬಂದ ದಂಪತಿ ಮಗುವನ್ನು ಕಾರಿನಲ್ಲೇ ಮರೆತಿದ್ದರು. ಬಳಿಕ ಪೊಲೀಸರಿಗೆ ದೂರು ನೀಡಲಾಗಿದ್ದು, ಅವರ ಸಹಾಯದಿಂದ ಮಗುವನ್ನು ಪತ್ತೆ ಮಾಡಿ ದಂಪತಿಯ ಕೈಗೆ ಒಪ್ಪಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಪೋಷಕರ ಬೇಜವಾಬ್ದಾರಿ ಬಗ್ಗೆ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.

ಮಗು ಮರೆತ ಬೆಂಗಳೂರಿನ ದಂಪತಿ

ಸಂಗ್ರಹ ಚಿತ್ರ -

ಬೆಂಗಳೂರು: ಕಾರಿನಲ್ಲಿ (Car) ಮಗುವನ್ನು ಮರೆತ ದಂಪತಿ (Bengaluru couple) ಬಳಿಕ ಅದನ್ನು ಹುಡುಕಲು ಪೊಲೀಸರು (Police) ಸಹಾಯ ಮಾಡಿರುವ ಘಟನೆ ಬೆಂಗಳೂರಿನಲ್ಲಿ (bengaluru) ನಡೆದಿದೆ. ಕ್ಯಾಬ್‌ನಲ್ಲಿ (cab) ಪ್ರವಾಸ ಮುಗಿಸಿ ಬಂದ ದಂಪತಿ ಮಗುವನ್ನು ಕಾರಿನಲ್ಲೇ ಮರೆತಿದ್ದರು. ಬಳಿಕ ಪೊಲೀಸರ ಮೊರೆ ಹೋದ ಅವರಿಗೆ ಪೋಲೀಸರ ಸಹಾಯದಿಂದ ಮಗು ಒಂದು ಗಂಟೆಯಲ್ಲಿ ಮರಳಿ ದೊರೆತಿದೆ. ಇದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಪೋಷಕರ ಬೇಜವಾಬ್ದಾರಿ ಬಗ್ಗೆ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.

ಫೆಬ್ರವರಿ 14 ರಂದು ಬೆಂಗಳೂರಿನ ದಂಪತಿ ಕ್ಯಾಬ್ ಬುಕ್ ಮಾಡಿ ಪ್ರವಾಸ ಮಾಡಿ ಮರಳಿ ಮನೆಗೆ ಬಂದಿದ್ದರು. ಈ ವೇಳೆ ಅವರು ಕಾರಿನಲ್ಲಿ ಮಲಗಿದ್ದ ಮಗುವನ್ನು ಮರೆತರು. ಅವರಿಗೆ ನೆನಪಾಗುವಷ್ಟರಲ್ಲಿ ಕಾರು ಹೊರಟು ಹೋಗಿತ್ತು. ನಾಲ್ಕು ವರ್ಷದ ಮಗು ಕಾರಿನಲ್ಲಿ ಮಲಗಿದ್ದರೂ ಚಾಲಕ ಅದನ್ನು ಗಮನಿಸಿರಲಿಲ್ಲ.

ಭಯಭೀತರಾದ ದಂಪತಿ ಶೀಘ್ರದಲ್ಲೇ ಪೊಲೀಸ್, ಅಗ್ನಿಶಾಮಕ ಮತ್ತು ವೈದ್ಯಕೀಯ ಸೇವೆಗಳಿಗೆ ಕರೆ ಮಾಡಿ ಸಹಾಯ ಕೇಳಿದರು. ಬಳಿಕ ಪ್ರಕರಣದ ಸಂಪೂರ್ಣ ಮಾಹಿತಿ ಪಡೆದುಕೊಂಡ ಪೊಲೀಸರು ತ್ವರಿತ ಕ್ರಮ ಕೈಗೊಂಡರು. ಇಬ್ಬರು ಅಧಿಕಾರಿಗಳು ಎರಡು ನಿಮಿಷಗಳಲ್ಲಿ ಸ್ಥಳಕ್ಕೆ ತಲುಪಿ ಶೀಘ್ರದಲ್ಲೇ ವಾಹನ ಸಂಖ್ಯೆ ಮತ್ತು ಲೈವ್ ಸ್ಥಳವನ್ನು ಟ್ರ್ಯಾಕ್ ಮಾಡಿದರು. ಕ್ಯಾಬ್ ಚಾಲಕನನ್ನು ಸಂಪರ್ಕಿಸಿ ಮಗುವಿನೊಂದಿಗೆ ದಂಪತಿಯ ಅಪಾರ್ಟ್ಮೆಂಟ್ ಬಳಿ ಬರಲು ಸೂಚಿಸಿದರು. ಚಾಲಕ ಮಗು ಕಾರಿನಲ್ಲಿರುವುದಾಗಿ ದೃಢಪಡಿಸಿದರು. ಒಂದು ಗಂಟೆಯೊಳಗೆ ಆತ ಮರಳಿ ಬಂದು ಮಗುವನ್ನು ದಂಪತಿಗೆ ಒಪ್ಪಿಸಿದನು.

ಪೊಲೀಸರು ದಂಪತಿಯೊಂದಿಗೆ ಸಮಾಲೋಚನೆ ನಡೆಸಿ ಮತ್ತೆ ಈ ರೀತಿ ಆಗದಂತೆ ಎಚ್ಚರ ವಹಿಸಲು ಸೂಚಿಸಿದರು. ಈ ಘಟನೆ ಕುರಿತು ಮಾಹಿತಿಯು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಮಂದಿ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಅನೇಕರು ಬೆಂಗಳೂರು ಪೊಲೀಸರ ಪ್ರಯತ್ನಗಳನ್ನು ಶ್ಲಾಘಿಸಿದರೆ, ಹಲವಾರು ಮಂದಿ ಪೋಷಕರ ಬೇಜವಾಬ್ದಾರಿಗೆ ಟೀಕಿಸಿದರು.