ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನೋಯ್ಡಾ ಪ್ರತಿಭಟನೆ: ಹಿಂದಿನ ದಿನ ರಾತ್ರಿ ವಾಟ್ಸ್‌ಆ್ಯಪ್‌ ಗ್ರೂಪ್‌ ಮೂಲಕ ನಡೆದಿತ್ತು ಪ್ಲ್ಯಾನಿಂಗ್

labour wages: ಹರಿಯಾಣ, ಉತ್ತರ ಪ್ರದೇಶ ಸರ್ಕಾರದ ಕನಿಷ್ಠ ವೇತನ ಹೆಚ್ಚಳಕ್ಕೆ ಸಂಬಂಧಿಸಿ ಸೋಮವಾರ ನೋಯ್ಡಾದಲ್ಲಿ ಪ್ರಾರಂಭವಾದ ಹಿಂಸಾತ್ಮಕ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಈ ಪ್ರತಿಭಟನೆಗಾಗಿ ವಾಟ್ಸಾಪ್ ಗುಂಪುಗಳಲ್ಲಿ ರಾತ್ರೋರಾತ್ರಿ ಯೋಜನೆ ರೂಪಿಸಲಾಗಿತ್ತು. ಇದಕ್ಕಾಗಿ ವಾಟ್ಸಾಪ್ ಗುಂಪುಗಳಲ್ಲಿ ಪ್ರಚೋದನಕಾರಿ ವಿಷಯ ಮತ್ತು ಸಂದೇಶಗಳನ್ನು ಹಂಚಿಕೊಳ್ಳಲಾಗಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ನೋಯ್ಡಾ ಹಿಂಸಾತ್ಮಕ ಪ್ರತಿಭಟನೆಗೆ ಹಿಂದಿನ ದಿನ ರಾತ್ರಿ ನಡೆದಿತ್ತು ಯೋಜನೆ

ಸಂಗ್ರಹ ಚಿತ್ರ -

ನವದೆಹಲಿ: ವೇತನ ವಿಚಾರದಲ್ಲಿ (labour wages) ನೋಯ್ಡಾದಲ್ಲಿ (Noida) ಸೋಮವಾರ ಪ್ರಾರಂಭವಾದ ಹಿಂಸಾತ್ಮಕ ಪ್ರತಿಭಟನೆಗೆ (violent protest) ಸಾಮಾಜಿಕ ಮಾಧ್ಯಮಗಳನ್ನು (Social Media) ಬಳಸಿಕೊಂಡು ಭಾನುವಾರ ರಾತ್ರೋರಾತ್ರಿ ಯೋಜನೆ ರೂಪಿಸಲಾಗಿತ್ತು. ವಾಟ್ಸಾಪ್ ಗುಂಪುಗಳಲ್ಲಿ (Whats app group) ಪ್ರಚೋದನಕಾರಿ ವಿಷಯ ಮತ್ತು ಸಂದೇಶಗಳನ್ನು ಹಂಚಿಕೊಳ್ಳಲಾಗಿತ್ತು. ಕ್ಯೂಆರ್ ಕೋಡ್‌ಗಳು, ಗುಂಪುಗಳನ್ನು ಬಳಸಿಕೊಂಡು ವಿವಿಧ ಕಾರ್ಮಿಕ ಸಂಘಗಳ ಹೆಸರಿನಲ್ಲಿ ವಿಷಯಗಳನ್ನು ಹಂಚಿಕೊಳ್ಳಲಾಗಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಹರಿಯಾಣ, ಉತ್ತರ ಪ್ರದೇಶ ಸರ್ಕಾರದ ಕನಿಷ್ಠ ವೇತನ ಹೆಚ್ಚಳಕ್ಕೆ ಸಂಬಂಧಿಸಿ ಸೋಮವಾರ ನೋಯ್ಡಾದಲ್ಲಿ ಪ್ರಾರಂಭವಾದ ಪ್ರತಿಭಟನೆ ಬಳಿಕ ಹಿಂಸಾತ್ಮಕ ರೂಪ ತಾಳಿದ್ದು, ಇದು ಈಗ ಎರಡನೇ ದಿನಕ್ಕೆ ಕಾಲಿಟ್ಟಿದೆ.

ನೋಯ್ಡಾದಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಪ್ರಯತ್ನಿಸುತ್ತಿದ್ದ ವೇಳೆಯಲ್ಲೇ ಇನ್ ಸ್ಟಾಗ್ರಾಮ್ ನಲ್ಲಿ ಕೆಲವು ಗುಂಪುಗಳನ್ನು ರಚಿಸಲಾಗಿದೆ. ಇದರಲ್ಲಿ ಪ್ರತಿಭಟನಾಕಾರರೊಬ್ಬರು ಇತರರಿಗೆ ಮೆಣಸಿನ ಪುಡಿ ತರಲು ಹೇಳಿದ್ದಾರೆ. ಮತ್ತೊಬ್ಬರು ನಮ್ಮ ಬೇಡಿಕೆಗಳು ಈಡೇರುವವರೆಗೆ ನಮ್ಮ ಪ್ರತಿಭಟನೆಗಳು ಮುಂದುವರಿಯುತ್ತವೆ ಎಂದು ತಿಳಿಸಿದ್ದಾರೆ ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ.

ಕಾರ್ಮಿಕರಿಗೆ 3 ಸಾವಿರ ರೂ. ವೇತನ ಹೆಚ್ಚಳಕ್ಕೆ ಅನುಮೋದನೆ ನೀಡಿದ ಉತ್ತರ ಪ್ರದೇಶ ಸರ್ಕಾರ

ಹರಿಯಾಣ ಸರ್ಕಾರವು ಕನಿಷ್ಠ ವೇತನ ಹೆಚ್ಚಳ ಮಾಡಿದ ಬಳಿಕ ಪ್ರತಿಭಟನೆಗಳು ಪ್ರಾರಂಭವಾಗಿದ್ದು, ಇದು ಹಿಂಸಾತ್ಮಕ ರೂಪಕ್ಕೆ ತಿರುಗಿತ್ತು. 40,000ಕ್ಕೂ ಹೆಚ್ಚು ಕಾರ್ಖಾನೆ ಕಾರ್ಮಿಕರು ಪ್ರತಿಭಟನೆಗೆ ಇಳಿದಿದ್ದು, ರಸ್ತೆಗಳನ್ನು ನಿರ್ಬಂಧಿಸಿದರು. ನೋಯ್ಡಾದ ಹಂತ -2 ಮತ್ತು ಸೆಕ್ಟರ್ 63 ರಲ್ಲಿ ಪ್ರತಿಭಟನಾಕಾರರು ವಾಹನಗಳು, ಸಾರ್ವಜನಿಕ ಸೊತ್ತುಗಳಿಗೆ ಬೆಂಕಿ ಹಚ್ಚಿದ್ದು, ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಪ್ರತಿಭಟನೆ ಹಿಂಸಾತ್ಮಕ ರೂಪ ತಾಳಿದ್ದರಿಂದ 300ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಲಾಗಿದ್ದು, 100ಕ್ಕೂ ಹೆಚ್ಚು ಜನರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ.

ನೋಯ್ಡಾದ ಸೆಕ್ಟರ್ 80 ರಲ್ಲಿ ಕಾರ್ಖಾನೆ ಕಾರ್ಮಿಕರು ಪ್ರತಿಭಟನೆ ಮಂಗಳವಾರ ಕೂಡ ಮುಂದುವರಿದಿದ್ದು, ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಂದು ಗೌತಮ್ ಬುದ್ಧ ನಗರ ಪೊಲೀಸ್ ಆಯುಕ್ತ ಲಕ್ಷ್ಮಿ ಸಿಂಗ್, ಕಾರ್ಮಿಕರು ಶಾಂತಿಯುತವಾಗಿ ಪ್ರತಿಭಟನೆ ಪ್ರಾರಂಭಿಸಿದ್ದು, ಹೊರಗಿನವರು ಇದರಲ್ಲಿ ಭಾಗಿಯಾಗಿ ಹಿಂಸೆಯನ್ನು ಪ್ರಚೋದಿಸಿದ್ದಾರೆ. ಒಂದು ಗುಂಪು ನೆರೆಯ ಜಿಲ್ಲೆಗಳ ಗಡಿ ಪ್ರದೇಶಗಳಿಂದ ಆಗಮಿಸಿದೆ. ಇಲ್ಲಿ ಉದ್ವಿಗ್ನತೆಯನ್ನು ಉಂಟು ಮಾಡಿದೆ. ಕೆಲವರನ್ನು ವಶಕ್ಕೆ ಪಡೆಯಲಾಗಿದ್ದು, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು,

ಉತ್ತರ ಪ್ರದೇಶದ ಕಾರ್ಮಿಕ ಸಚಿವ ಅನಿಲ್ ರಾಜ್‌ಭರ್ ಅವರು ಪ್ರತಿಕ್ರಿಯಿಸಿ, ನೋಯ್ಡಾ ಅಶಾಂತಿಯಲ್ಲಿ ಪಾಕಿಸ್ತಾನದ ಸಂಪರ್ಕದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇದೊಂದು ಯೋಜಿತ ಪಿತೂರಿ. ರಾಜ್ಯದ ಅಭಿವೃದ್ಧಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಅಡ್ಡಿಪಡಿಸುವ ಉದ್ದೇಶದಿಂದ ನಡೆಸಿರುವಂತೆ ತೋರುತ್ತದೆ. ಮೀರತ್ ಮತ್ತು ನೋಯ್ಡಾದಿಂದ ಇತ್ತೀಚೆಗೆ ನಾಲ್ವರು ಶಂಕಿತ ಭಯೋತ್ಪಾದಕರನ್ನು ಬಂಧಿಸಲಾಗಿದೆ. ಅವರು ಪಾಕಿಸ್ತಾನ ಮೂಲದ ಹ್ಯಾಂಡ್ಲರ್‌ಗಳೊಂದಿಗೆ ಸಂಪರ್ಕ ಹೊಂದಿರುವುದು ತಿಳಿದು ಬಂದಿದೆ. ಈ ಘಟನೆಯು ಕೂಡ ಅದರಿಂದ ಪ್ರೇರಿತವಾಗಿರಬಹುದು ಎಂದು ಅವರು ತಿಳಿಸಿದರು.

ಮುಜಫರ್ ನಗರದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದನ್ನು ಅಡ್ಡಿಪಡಿಸುವ ಸಲುವಾಗಿ ಕೂಡ ಈ ರೀತಿ ನಡೆಸಿರುವ ಸಾಧ್ಯತೆ ಇದೆ. ಜನರು ಯಾವುದೇ ಪ್ರಚೋದನೆಗೆ ಬಲಿಯಾಗಬಾರದು ಮತ್ತು ಶಾಂತಿಯನ್ನು ಕಾಪಾಡಿಕೊಳ್ಳಬೇಕು. ಕಾರ್ಮಿಕರ ಪ್ರತಿಯೊಂದು ಕಳವಳವನ್ನು ಆಲಿಸಲು ಸರ್ಕಾರ ಸಿದ್ಧವಾಗಿದೆ ಎಂದು ತಿಳಿಸಿದರು.

ವೇತನ ಹೆಚ್ಚಳ

ಕಾರ್ಮಿಕರ ಪ್ರತಿಭಟನೆ ಆರಂಭವಾದ ಬಳಿಕ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರವು ಕೌಶಲ ರಹಿತ, ಅರೆ ಕೌಶಲ ಪೂರ್ಣ ಮತ್ತು ಕೌಶಲ ಪೂರ್ಣ ಕೆಲಸಗಾರರಿಗೆ ಕನಿಷ್ಠ ವೇತನದಲ್ಲಿ ಮಧ್ಯಂತರ ಹೆಚ್ಚಳವನ್ನು ಘೋಷಿಸಿತು. ಕನಿಷ್ಠ ವೇತನವನ್ನು ತಿಂಗಳಿಗೆ 20,000 ರೂ. ಹೆಚ್ಚಿಸಲಾಗಿದ್ದು, ಉದ್ಯೋಗದಾತರು ಈ ನಿರ್ದೇಶನವನ್ನು ಅನುಸರಿಸುತ್ತಿಲ್ಲ ಎನ್ನಲಾಗಿದೆ.

ʼʼಫಸ್ಟ್‌ ನೈಟ್‌ ಆಗಬೇಕಂದ್ರೆ 90 ಲಕ್ಷ ರುಪಾಯಿ ಕೊಡಿʼʼ; ಮದುವೆ ಮುಗಿಯುತ್ತಿದ್ದಂತೆಯೇ ಪತಿ ಬಳಿ ಭರ್ಜರಿ ಡಿಮ್ಯಾಂಡ್‌ ಇಟ್ಟ ಪತ್ನಿ

ಕಾರ್ಮಿಕ ಸಂಹಿತೆಗಳ ಅಡಿಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಕನಿಷ್ಠ ವೇತನವನ್ನು ಪರಿಷ್ಕರಿಸುವ ಪ್ರಕ್ರಿಯೆಯು ಕೂಡ ನಡೆಸಲಾಗುತ್ತಿದೆ. ಸದ್ಯ ಮಧ್ಯಂತರ ವೇತನ ಹೆಚ್ಚಳದ ಭಾಗವಾಗಿ ಗೌತಮ್ ಬುದ್ಧ ನಗರ ಮತ್ತು ಗಾಜಿಯಾಬಾದ್‌ನಲ್ಲಿ ಸರ್ಕಾರ ನಿಗದಿಪಡಿಸಿದ ದರಗಳು ಕೌಶಲ ರಹಿತ ಕಾರ್ಮಿಕರಿಗೆ 13,690 ರೂ., ಅರೆ ಕೌಶಲ ಪೂರ್ಣ ಕಾರ್ಮಿಕರಿಗೆ 15,059 ರೂ. ಮತ್ತು ಕೌಶಲ ಪೂರ್ಣ ಕಾರ್ಮಿಕರಿಗೆ 16,868 ರೂ.ಗಳಿಗೆ ಏರಿಕೆಯಾಗಿದೆ. ಇದು ಏಪ್ರಿಲ್ 1 ರಿಂದ ಜಾರಿಯಾಗಲಿದೆ.