ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bengaluru Crime news: ಜನ್ಮದಿನವೇ ಕೇಕ್‌ ಆಸೆ ತೋರಿಸಿ ಬಾಲಕಿಯ ಮೇಲೆರಗಿದ ಪಾಪಿ; ಅತ್ಯಾಚಾರಿಯ ಬಂಧನ

15 ವರ್ಷದ ಬಾಲಕಿಯನ್ನು ಜನ್ಮದಿನದ ಕೇಕ್‌ ಕತ್ತರಿಸುವುದಾಗಿ ಪುಸಲಾಯಿಸಿ ರಾಶಿ ಲೇಔಟ್‌ಗೆ ಕರೆದೊಯ್ದು ಅತ್ಯಾಚಾರ (Physical Abuse) ಎಸಗಿದ್ದಾನೆ. ಅತ್ಯಾಚಾರ ಎಸಗಿದ ಬಳಿಕ ಕಾಮುಕ ಎಸ್ಕೇಪ್ ಆಗಿದ್ದಾನೆ. 9ನೇ ತರಗತಿ ವಿದ್ಯಾರ್ಥಿನಿ ಹೆತ್ತವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಈ ಸಂಬಂಧ ಪೊಲೀಸರಿಗೆ ಪೋಷಕರು ದೂರು ನೀಡಿದ್ದರು. ಆರೋಪಿಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಜನ್ಮದಿನವೇ ಕೇಕ್‌ ಆಸೆ ತೋರಿಸಿ ಬಾಲಕಿಯ ಮೇಲೆರಗಿದ ಪಾಪಿ; ಅತ್ಯಾಚಾರಿಯ ಬಂಧನ

ಅತ್ಯಾಚಾರ ಆರೋಪಿ ಯತೀಶ್ -

ಹರೀಶ್‌ ಕೇರ
ಹರೀಶ್‌ ಕೇರ Nov 17, 2025 3:07 PM

ಬೆಂಗಳೂರು : ಬೆಂಗಳೂರಿನಲ್ಲಿ (Bengaluru Crime news) ಹುಟ್ಟು ಹಬ್ಬದ ದಿನವೇ ಒಂಬತ್ತನೇ ತರಗತಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ (Physical Abuse) ಎಸಗಿದ್ದ ಪಾತಕಿಯನ್ನು ಆರೆಸ್ಟ್ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ಯತೀಶ್‌ (27) ಎಂದು ಗುರುತಿಸಲಾಗಿದೆ. ಈತ ಮಾದನಾಯಕನಹಳ್ಳಿಯ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ನಿರ್ಜನ ಪ್ರದೇಶಕ್ಕೆ ಬಾಲಕಿಯನ್ನು ಕರೆದುಕೊಂಡು ಹೋಗಿ ಈತ ಅಕೃತ್ಯ ಎಸಗಿದ್ದಾನೆ.

15 ವರ್ಷದ ಬಾಲಕಿಯನ್ನು ಜನ್ಮದಿನದ ಕೇಕ್‌ ಕತ್ತರಿಸುವುದಾಗಿ ಪುಸಲಾಯಿಸಿ ರಾಶಿ ಲೇಔಟ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಅತ್ಯಾಚಾರ ಎಸಗಿದ ಬಳಿಕ ಕಾಮುಕ ಎಸ್ಕೇಪ್ ಆಗಿದ್ದಾನೆ. 9ನೇ ತರಗತಿ ವಿದ್ಯಾರ್ಥಿನಿ ಹೆತ್ತವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಈ ಸಂಬಂಧ ಪೊಲೀಸರಿಗೆ ಪೋಷಕರು ದೂರು ನೀಡಿದ್ದರು. ಆರೋಪಿಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಹಣ ಮರಳಿ ಕೊಡುವ ನೆಪದಲ್ಲಿ ಸಾಮೂಹಿಕ ಅತ್ಯಾಚಾರ

ಕೊಪ್ಪಳ: ಹಣ ಮರಳಿ​ ಕೊಡುವ ನೆಪದಲ್ಲಿ ಕರೆಸಿಕೊಂಡು ನಾಲ್ವರು ಕಾಮುಕರು ಮಹಿಳೆ ಮೇಲೆ ಅತ್ಯಾಚಾರ (Physical Abuse) ಮಾಡಿರುವ ಆರೋಪ ಕೇಳಿಬಂದಿದೆ. ಕೊಪ್ಪಳ (Koppala news) ಜಿಲ್ಲೆಯ ಯಲಬುರ್ಗಾ ತಾಲೂಕಿನ ಮದ್ಲೂರ ಗ್ರಾಮದ ಬಳಿ ಈ ಭಯಾನಕ ಘಟನೆ ನಡೆದಿದೆ. 39 ವರ್ಷದ ಮಹಿಳೆಯೊಬ್ಬರ ಮೇಲೆ ನಾಲ್ವರು ಆರೋಪಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆ ಯಲಬುರ್ಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ತ್ವರಿತ ಕ್ರಮ ಕೈಗೊಂಡು ನಾಲ್ವರನ್ನು ಬಂಧಿಸಿದ್ದಾರೆ.

ಸಂತ್ರಸ್ತ ಮಹಿಳೆ ಹೊಸಪೇಟೆ ಮೂಲದವರಾಗಿದ್ದು, ಹೋಮ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಸಂತ್ರಸ್ತ ಮಹಿಳೆಗೆ ಪರಿಚಯವಿರುವ ಗಜೇಂದ್ರಗಡ ಮೂಲದ ಲಕ್ಷ್ಮಣ ಎಂಬವನು 5000 ರೂಪಾಯಿ ಹಣ ಕೊಡಬೇಕಾಗಿತ್ತು. ಹಣ ಕೊಡುತ್ತೇನೆ ಎಂದು ಲಕ್ಷ್ಮಣ ಆಕೆಯನ್ನು ಕುಷ್ಟಗಿ ಪಟ್ಟಣಕ್ಕೆ ಕರೆಸಿಕೊಂಡಿದ್ದ. ಆದರೆ ಅಲ್ಲಿ ಹಣ ಕೊಡುವ ಬದಲು ಮೋಸ ಮಾಡಿದ್ದಾನೆ. ಸಂತ್ರಸ್ತೆ ಪೊಲೀಸರಿಗೆ ನೀಡಿದ ಮಾಹಿತಿ ಪ್ರಕಾರ, ಲಕ್ಷ್ಮಣ ಆಕೆಯನ್ನು ಬೈಕ್‌ನಲ್ಲಿ ಕರೆದೊಯ್ದು ಮದ್ಲೂರ ಗ್ರಾಮದ ಬಳಿ ಪಾಳು ಬಿದ್ದ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಇನ್ನು ಮೂವರು ಸೇರಿಕೊಂಡಿದ್ದಾರೆ. ಅವರು ಮಹಿಳೆಗೆ ಜ್ಯೂಸ್ ಎಂದು ಹೇಳಿ ಬಲವಂತವಾಗಿ ಮದ್ಯ ಕುಡಿಸಿದ್ದಾರೆ. ನಂತರ ನಾಲ್ವರು ಸೇರಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಈ ಘಟನೆ ಕುಷ್ಟಗಿ ಮತ್ತು ಮದ್ಲೂರ ಸೀಮೆಯಲ್ಲಿ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Physical abuse: ದೇಶವನ್ನೇ ಬೆಚ್ಚಿ ಬೀಳಿಸೋ ಘಟನೆ... ಬಾಲಕಿಗೆ ಡ್ರಗ್ಸ್‌ ನೀಡಿ ಕಾರಿನಲ್ಲೇ ಗ್ಯಾಂಗ್‌ರೇಪ್‌

ಅತ್ಯಾಚಾರದ ನಂತರ ಅಸ್ವಸ್ಥರಾದ ಮಹಿಳೆಯನ್ನು ತಕ್ಷಣ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸ್ಥಳಕ್ಕೆ ಕೊಪ್ಪಳ ಡಿವೈಎಸ್‌ಪಿ ಮುತ್ತಣ್ಣ ಸವರಗೋಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಹಿಳೆಯ ಪತಿ ಆಸ್ಪತ್ರೆಗೆ ಬಂದು ಭೇಟಿ ಮಾಡಿದ್ದಾರೆ. ಆದರೆ ಅವರು "ನನಗೇನೂ ಗೊತ್ತಿಲ್ಲ. ಅಪಘಾತ ಆಗಿದೆ ಎಂದು ಕರೆಸಿದ್ದಾರೆ" ಎಂದು ಹೇಳಿದ್ದಾರೆ.

ಸಂತ್ರಸ್ತೆ ಸ್ವತಃ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆ ದೂರಿನ ಆಧಾರದ ಮೇಲೆ ಯಲಬುರ್ಗಾ ಪೊಲೀಸರು ಲಕ್ಷ್ಮಣ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳು ಗಜೇಂದ್ರಗಡ ಮತ್ತು ಸುತ್ತಮುತ್ತಲಿನ ಪ್ರದೇಶದವರಾಗಿದ್ದು, ದೂರಿನಲ್ಲಿ ಲಕ್ಷ್ಮಣ ಮತ್ತು ಇನ್ನು ಮೂವರ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಪೊಲೀಸರು ಭಾರತೀಯ ನ್ಯಾಯ ಸಂಹಿತೆ 2023ರ ಕಲಂ 115(2), 70, 351(2) ಮತ್ತು 3(5) ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ. ತಡರಾತ್ರಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: Viral Video: ನ್ಯಾಯ ಕೊಡಿ ಎಂದ ಅತ್ಯಾಚಾರ ಸಂತ್ರಸ್ತೆ ಗೋಳಾಟ! ಪೊಲೀಸ್ ಉಪ ಮಹಾನಿರ್ದೇಶಕರ ಕಚೇರಿ ಬಳಿ ಹೈಡ್ರಾಮಾ, ಇಲ್ಲಿದೆ ವಿಡಿಯೊ