ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Misuse of Position: ಪೌರಾಯುಕ್ತರು ಅಧಿಕಾರ ದುರ್ಬಳಿಕೆ ಮಾಡಿಕೊಂಡು ಕಾನೂನಿನ ವಿರುದ್ಧವಾಗಿ ಕೆಲಸ ಕಾರ್ಯಗಳು ಮಾಡುತ್ತಿದ್ದಾರೆ

ಚಿಂತಾಮಣಿ ನಗರಸಭಾ ವ್ಯಾಪ್ತಿಯ ವಾರ್ಡುಗಳ ಚರಂಡಿಗಳು ಸ್ವಚ್ಛತೆ ಮಾಡುವವರು ಇಲ್ಲ!ಎಲ್ಲಿ ನೋಡಿದರೂ ಚರಂಡಿಗಳಲ್ಲಿ ಗೊಬ್ಬು ವಾಸನೆ ಬರುತ್ತಿದೆ! ಬೀದಿ ದೀಪಗಳ ನಿರ್ವಹಣೆ ಸೂಕ್ತ ರೀತಿಯಲ್ಲಿ ನಗರ ಭಾಗದಲ್ಲಿ ಆಗುತ್ತಿಲ್ಲ! ಇದರ ಬಗ್ಗೆ ಅಧಿಕಾರಿಗಳಿಗೆ ಕೇಳಿದರೆ ಉಡಾಫೆ ಉತ್ತರ ನೀಡುತ್ತಾರೆ

ಪತ್ರಿಕಾಗೋಷ್ಠಿಯಲ್ಲಿ ಮಾಜಿನಗರ ಸಭಾ ಸದಸ್ಯ ಮಹಮ್ಮದ್ ಶಫೀಕ್ ಗಂಭೀರ ಆರೋಪ

-

Ashok Nayak
Ashok Nayak Jan 26, 2026 11:51 PM

ಚಿಂತಾಮಣಿ: ಕೈವಾರ ಪಟ್ಟಣ ಪಂಚಾಯತಿಯ ಆಡಳಿತ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ಚಿಂತಾಮಣಿ ನಗರಸಭೆಯ ಪೌರಾಯುಕ್ತರಾದ ಜಿ ಎನ್ ಚಲಪತಿ ರವರು ತಮ್ಮ ಅಧಿಕಾರವನ್ನು ದುರ್ಬಳಕೆ(Misuse of Position) ಮಾಡಿಕೊಂಡು ನಗರಸಭೆ ವ್ಯಾಪ್ತಿಯ ಪೌರ ಕಾರ್ಮಿಕರನ್ನು ಕೈವಾರ ಗ್ರಾಮಕ್ಕೆ ಕರೆದುಕೊಂಡು ಹೋಗಿ ಸ್ವಚ್ಛತೆ ಮಾಡಿಸುತ್ತಿರುವುದು ಎಷ್ಟರಮಟ್ಟಿಗೆ ಸರಿ!

ನಗರದ ವಿವಿಧ ವಾರ್ಡುಗಳಲ್ಲಿ ಕಸದ ರಾಶಿ ತುಂಬಿ ತುಳುಕುತ್ತಿದ್ದರೂ ಸ್ವಚ್ಛತೆ ಮಾಡುವವರು ಇಲ್ಲ ಎಂದು ಮಾಜಿ ನಗರಸಭಾ ಸದಸ್ಯ ಮೊಹಮ್ಮದ್ ಶಫೀಕ್ ಗಂಭೀರ ಆರೋಪ ಮಾಡಿದ್ದಾರೆ.

ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದವರು ನಗರ ವ್ಯಾಪ್ತಿಯಲ್ಲಿ ನಗರ ಸಭೆಗೆ ಟ್ಯಾಕ್ಸ್ ಕಟ್ಟುವವರು ನಾವು ಆದರೆ ಇಲ್ಲಿನ ಪೌರಕಾರ್ಮಿಕರನ್ನು ಕೈವಾರ ಪಟ್ಟಣ ಪಂಚಾಯತಿಗೆ ಕರೆದುಕೊಂಡು ಹೋಗಿ  ಸ್ವಚ್ಛತೆ ಮಾಡಿಸುವ ಅಧಿಕಾರ ಕೊಟ್ಟವರು ಪೌರಾಯುಕ್ತರಿಗೆ ಯಾರು ಎಂದು ಪ್ರಶ್ನೆ ಹಾಕಿದರು.

ಇದನ್ನೂ ಓದಿ: Chikkaballapur News: ಆರ್.ಬಿ.ತಿಮ್ಮಾಪುರ ಸೇರಿ ದಲಿತ ಸಚಿವರ ಮೇಲಿನ ಅಪಪ್ರಚಾರ ನಿಲ್ಲಿಸಿ: ಇಲ್ಲವೇ ಹೋರಾಟ ಎದುರಿಸಿ

ಚಿಂತಾಮಣಿ ನಗರಸಭಾ ವ್ಯಾಪ್ತಿಯ ವಾರ್ಡುಗಳ ಚರಂಡಿಗಳು ಸ್ವಚ್ಛತೆ ಮಾಡುವವರು ಇಲ್ಲ!ಎಲ್ಲಿ ನೋಡಿದರೂ ಚರಂಡಿಗಳಲ್ಲಿ ಗೊಬ್ಬು ವಾಸನೆ ಬರುತ್ತಿದೆ! ಬೀದಿ ದೀಪಗಳ ನಿರ್ವಹಣೆ ಸೂಕ್ತ ರೀತಿಯಲ್ಲಿ ನಗರ ಭಾಗದಲ್ಲಿ ಆಗುತ್ತಿಲ್ಲ! ಇದರ ಬಗ್ಗೆ ಅಧಿಕಾರಿಗಳಿಗೆ ಕೇಳಿದರೆ ಉಡಾಫೆ ಉತ್ತರ ನೀಡುತ್ತಾರೆ ಎಂದು ಹೇಳಿದರು.

ರಾಜುವೇ ಗೌಡ ರವರು ಶಿಡ್ಲಘಟ್ಟ ಪೌರಾಯುಕ್ತೆಗೆ ದೂರವಾಣಿ ಮುಖಾಂತರ ಧಮ್ಕಿ ಹಾಕಿರುವುದು ನಾನು ಖಂಡಿಸುತ್ತೇನೆ ಆದರೆ ಚಿಂತಾಮಣಿ ನಗರಸಭೆ ಪೌರಾಯುಕ್ತರು ರಾಜುವೇ ಗೌಡ ವಿರುದ್ದ ಚಿಂತಾಮಣಿ ತಹಸಿಲ್ದಾರ್ ಗೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ರಾಜುವೇ ಗೌಡಗೆ ಅವಾಚ್ಯ ಪದಗಳು ಬಳಕೆ ಮಾಡಿ ಮಾತನಾಡಿದ್ದಾರಲ್ಲ ಈ ಅಧಿಕಾರ ಒಬ್ಬ ಅಧಿಕಾರಿಗೆ ಕೊಟ್ಟಿದ್ದು ಯಾರು!ಇದರ ಬಗ್ಗೆ ಇವರಿಗೆ ಮೇಲಧಿಕಾರಿಗಳು ಯಾಕೆ ಪ್ರಶ್ನೆ ಮಾಡಲಿಲ್ಲ ಎಂದು ಪೌರಾಯುಕ್ತರ ವಿರುದ್ಧ ದೂರಿದರು.