ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhopal Model Death: ಭೋಪಾಲ್ ರೂಪದರ್ಶಿ ನಿಗೂಢ ಸಾವು- ಮರಣೋತ್ತರ ವರದಿಯಲ್ಲಿ ಬಯಲಾಯ್ತು ಶಾಕಿಂಗ್‌ ಸಂಗತಿ

Post-Mortem Report: ಭೋಪಾಲ್‌ನ ಖುಷ್ಬೂ ಅಹಿರ್ವಾರ್(27) ಮಾಡೆಲ್ ಸಾವನ್ನಪ್ಪಿದ್ದಾರೆ. ಪ್ರಕರಣವನ್ನು ಕೈಗೆತ್ತಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದು, ಆಕೆಯ ಕುಟುಂಬವು ಲವ್ ಜಿಹಾದ್ ಮತ್ತು ಕೊಲೆಯ ಆರೋಪ ಮಾಡಿದೆ. ಆದರೆ ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ. ಖುಷ್ಬೂವಿನ ಮರಣೋತ್ತರ ವರದಿ ಬಂದಿದ್ದು, ಆಕೆ ಗರ್ಭಿಣಿಯಾಗಿದ್ದಳು ಎಂಬುದು ತಿಳಿದು ಬಂದಿದೆ.

ಭೋಪಾಲ್ ಮಾಡೆಲ್ ಸಾವು; ಇಲ್ಲಿದೆ ಕಾರಣ

ಮಾಡೆಲ್ ಖುಷ್ಬೂ ಅಹಿರ್ವಾರ್ -

Profile
Sushmitha Jain Nov 12, 2025 12:25 PM

ಭೋಪಾಲ್: ಭೋಪಾಲ್‌ನಲ್ಲಿ(Bhopal) ನಿಗೂಢವಾಗಿ ಸಾವನ್ನಪ್ಪಿದ್ದ 27 ವರ್ಷದ ಮಾಡೆಲ್ ಖುಷ್ಬೂ ಅಹಿರ್ವಾರ್(Model Khushboo Ahirwar) ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಮತ್ತೊಂದು ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಖುಷ್ಬೂ ಅವರ ಮರಣೋತ್ತರ ವರದಿ (Postmortem Report) ಬಂದಿದ್ದು, ಆಕೆ ಗರ್ಭೀಣಿಯಾಗಿದ್ದಳು(Pregnant) ಎನ್ನಲಾಗಿದೆ. ಅಲ್ಲದೇ ಆಕೆಯ ಫಾಲೋಪಿಯನ್ ಟ್ಯೂಬ್ ಅಲ್ಲಿ ಸೋಂಕು ಉಂಟಾಗಿದ್ದು, ತೀವ್ರವಾದ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ವೈದ್ಯರು ಈ ಸಾವಿನ ಕಾರಣ ಗರ್ಭಧಾರಣೆ ಸಂಬಂಧಿತ ಗಂಭೀರ ತೊಂದರೆಗಳೆಂದು ಹೇಳಿದ್ದಾರೆ. ಆದರೆ, ಖುಷ್ಬೂ ಕುಟುಂಬದವರು ಆಕೆಯ ಬಾಯ್‌ಫ್ರೆಂಡ್ ಕಾಸಿಮ್ ನತ್ತ ಬೊಟ್ಟು ಮಾಡಿ ತೋರಿಸುತ್ತಿದ್ದು, ಅವರಿಬ್ಬರು ಕಳೆದ ಒಂದು ವರ್ಷದಿಂದ ಲಿವ್‌-ಇನ್ ಸಂಬಂಧದಲ್ಲಿದ್ದರು, ಕಾಸಿಮ್ ನೇ ಆಕೆಯನ್ನು ಕೊಂದಿದ್ದಾನೆಂದು ಆರೋಪಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಈ ಘಟನೆ ಇಂದೋರ್ ರಸ್ತೆಯ ಭೈಂಸಖೇಡಿ ಬಳಿ ಸಂಭವಿಸಿದೆ. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಖುಷ್ಬೂ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ತಕ್ಷಣ ಕಾಸಿಂ ಬಸ್‌ ನಿಲ್ಲಿಸಿ, ಖುಷ್ಬೂಳನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಆಟೋ ರಿಕ್ಷಾದಲ್ಲಿ ಕರೆದೊಯ್ದನು. ಆದರೆ ಅಲ್ಲಿ ವೈದ್ಯರು ಖುಷ್ಬೂ ಮೃತಪಟ್ಟಿದ್ದಾಳೆ ಎಂದು ಘೋಷಿಸಿದ ನಂತರ ಆತ ನಾಪತ್ತೆಯಾಗಿದ್ದ. ಕುಟುಂಬದ ಆರೋಪದ ಮೇರೆಗೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಭೋಪಾಲ್‌ನ ಗಾಂಧಿ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿತ್ತು, ಆದರೀಗ ಪೋಸ್ಟ್‌ಮಾರ್ಟಮ್ ವರದಿ ಬಂದಿದ್ದು, ಅದರಲ್ಲಿ ಖುಷ್ಬೂವಿನ ಸಾವಿಗೆ ನೈಜ ಕಾರಣ ಏನು ಎಂಬುದು ಬಯಲಾಗಿದೆ.

ಇತ್ತ ಖುಷ್ಬೂ ಸಾವಿನ ನಂತರ ಕಾಣೆಯಾಗಿದ್ದ ಕಾಸಿಮ್ ನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ ಆತ ಒಂದು ಕಾರ್ಯಕ್ರಮ ಮೂಲಕ ಭೇಟಿಯಾಗಿದ್ದವು. ಆಮೇಲೆ ಸೋಷಿಯಲ್ ಮೀಡಿಯಾದ ಮೂಲಕ ಸಂಪರ್ಕ ಸಿಕ್ಕಿತು. ಖುಷ್ಬೂ, ನಾನು ಕಳೆದ ಎರಡು ವರ್ಷಗಳಿಂದ ಸಂಪರ್ಕದಲ್ಲಿದ್ದೆವು. ನನ್ನ ಮಗುವಿಗೆ ಆಕೆ ಗರ್ಭಿಣಿಯಾಗಿದ್ದಳು. ನಾವಿಬ್ಬರು ಲಿವಿಂಗ್ ಇನ್ ರಿಲೇಶಷ್ ಶಿಪ್ ಅಲ್ಲಿ ಇದ್ದೇವು. ಮುಂದಿನ ದಿನಗಳಲ್ಲಿ ಮನೆಯವರನ್ನು ಮದುವೆಯಾಗುವ ಯೋಜನೆ ಇತ್ತು. ನಾನು ಖುಷ್ಬೂಗೆ ಹಿಂಸೆ ನೀಡಿಲ್ಲ , ಹೊಡೆದಿಲ್ಲ ಎಂದು ಆತ ಹೇಳಿದ್ದಾನೆ.

ಈ ಸುದ್ದಿಯನ್ನು ಓದಿ: Viral Video: RJD ಬಿಟ್ಟು ಬಿಜೆಪಿಗೆ ಮತ ಹಾಕಿದ್ದಕ್ಕೆ ಪತ್ನಿ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ ಪತಿರಾಯ; ವಿಡಿಯೋ ವೈರಲ್‌

ಲವ್ ಜಿಹಾದ್ ಆರೋಪ

ಖುಷ್ಬೂ ಕುಟುಂಬಸ್ಥರು ಲವ್ ಜಿಹಾದ್ ಆರೋಪವನ್ನೂ ಮಾಡಿದ್ದು, ಖಾಸಿಮ್ ಮತ್ತು ಅವರ ಕೆಲವು ಸ್ನೇಹಿತರು ಆಕೆಯನ್ನು ಹೊಡೆದಿದ್ದಾರೆ, ಆಕೆಯ ಕುತ್ತಿಗೆಯ ಮೇಲೆ ಗಾಯಗಳಾಗಿವೆ. ಆಕೆಯ ದೇಹದ ಮೇಲೆ ಹಲ್ಲೆಯ ಗುರುತುಗಳಿವೆ ಎಂದು ಖುಷ್ಬೂ ಅವರ ಕುಟುಂಬ ಆರೋಪಿಸಿದೆ. ಆರೋಪಿಯು ಖುಷ್ಬೂ ಅವರನ್ನು ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿ ತನ್ನನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದನು ಎಂದು ಆರೋಪಿಸಿದ್ದಾರೆ. ಈ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇನ್ನು ಈ ಘಟನೆ ನಡೆಯುವ ಮೂರು ದಿನಗಳ ಮುನ್ನ, ಖಾಸಿಮ್, ಖುಷ್ಬೂ ಅವರ ತಾಯಿಗೆ ಕರೆ ಮಾಡಿದ್ದ ಎನ್ನಲಾಗಿದ್ದು, ನಾನು ಮುಸ್ಲಿಂ, ಆದರೆ ನಿಮ್ಮ ಮಗಳು ನನ್ನೊಂದಿಗಿದ್ದಾಳೆ. ಚಿಂತಿಸಬೇಡಿ, ನಾನು ಅವಳನ್ನು ಉಜ್ಜಯಿನಿಗೆ ಕರೆದುಕೊಂಡು ಹೋಗುತ್ತಿದ್ದೇನೆ ಎಂದು ಹೇಳಿದ್ದ ಎಂದು ಲಕ್ಷ್ಮಿ ತಿಳಿಸಿದ್ದಾರೆ. ನಂತರ, ಖುಷ್ಬೂ ಸ್ವತಃ ಕರೆ ಮಾಡಿ, "ಚಿಂತಿಸಬೇಡಿ, ಖಾಸಿಮ್ ಒಳ್ಳೆಯ ವ್ಯಕ್ತಿ. ನಾನು ಅವನೊಂದಿಗಿದ್ದೇನೆ" ಎಂದು ತನ್ನ ತಾಯಿಯ ಬಳಿ ಹೇಳಿದ್ದಳು ಎನ್ನಲಾಗಿದೆ.