ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮಧ್ಯರಾತ್ರಿ ಸೊಸೆ ಕೋಣೆಯಲ್ಲಿ ಪತ್ತೆಯಾದ ಪ್ರಿಯಕರ; ಅತ್ತೆ ಶಾಕ್

ಮಧ್ಯರಾತ್ರಿ ಸೊಸೆಯ ಕೊನೆಯಲ್ಲಿ ಕೇಳಿ ಬರುತ್ತಿದ್ದ ಸದ್ದು ಕೇಳಿ ಏನಿರಬಹುದು ಎನ್ನುವ ಕುತೂಹಲದಿಂದ ನೋಡಿದ ಅತ್ತೆಗೆ ಮಂಚದ ಕೆಳಗೆ ಸೊಸೆಯ ಪ್ರಿಯಕರ ಪತ್ತೆಯಾಗಿದ್ದಾನೆ. ಇದನ್ನು ನೋಡಿ ಅತ್ತೆ ಫುಲ್ ದಂಗಾಗಿದ್ದಾರೆ. ಈ ಘಟನೆ ಅಯೋಧ್ಯಯಲ್ಲಿ ನಡೆದಿದೆ. ಇಬ್ಬರು ಮಕ್ಕಳ ತಾಯಿಯಾಗಿರುವ ಮಹಿಳೆಯ ಪತಿ ದುಬೈಯಲ್ಲಿದ್ದಾನೆ ಎನ್ನಲಾಗಿದೆ.

ಸೊಸೆ ಕೋಣೆಯಲ್ಲಿ ಶಬ್ದ ಕೇಳಿ ನೋಡಿದ ಅತ್ತೆಗೆ ಶಾಕ್

(ಸಂಗ್ರಹ ಚಿತ್ರ) -

ಅಯೋಧ್ಯೆ: ಮಧ್ಯರಾತ್ರಿ ಸೊಸೆಯ (daughter-in-law) ಕೋಣೆಯಿಂದ ಶಬ್ದ ಕೇಳಿ ಬರುತ್ತಿರುವುದನ್ನು ನೋಡಿ ಹುಡುಕಾಡಿದ ಅತ್ತೆ (mother-in-law) ಫುಲ್ ಶಾಕ್ ಆಗಿದ್ದಾರೆ. ಸೊಸೆಯ ಕೋಣೆಯಲ್ಲಿ ಮಂಚದ ಕೆಳಗೆ ಆಕೆಯ ಪ್ರಿಯಕರ ಪತ್ತೆಯಾಗಿದ್ದಾನೆ. ಇಬ್ಬರು ಮಕ್ಕಳ ತಾಯಿಯಾಗಿರುವ ಮಹಿಳೆಯ ಪತ್ನಿ ದುಬೈನಲ್ಲಿದ್ದು (Dubai), ಆಕೆಯ ಮಾವ ನಾಗ್ಪುರಕ್ಕೆ (Nagpura) ಹೋಗಿದ್ದರು. ಅಯೋಧ್ಯೆಯ (Ayodhya) ಪುರ ಕಲಂದರ್ ಪೊಲೀಸ್ ಠಾಣೆ (Pura Qalandar Police Station) ವ್ಯಾಪ್ತಿಯ ಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಮಹಿಳೆ ಪ್ರಿಯಕರನೊಂದಿಗೆ ಸಿಕ್ಕಿಬಿದ್ದಾಗ ಅತ್ತೆ ಗಲಾಟೆ ಮಾಡಿದ್ದರಿಂದ ನೆರೆಹೊರೆಯವರೆಲ್ಲ ಜಮಾಯಿಸಿದ್ದರು.

ಪುರ ಕಲಂದರ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಇಬ್ಬರು ಮಕ್ಕಳ ತಾಯಿ ಮಧ್ಯರಾತ್ರಿ ತನ್ನ ಪ್ರಿಯಕರನೊಂದಿಗೆ ಸಿಕ್ಕಿಬಿದ್ದಿದ್ದಾಳೆ. ಮಹಿಳೆಯ ಪತಿ ದುಬೈನಲ್ಲಿ ಕೆಲಸ ಮಾಡುತ್ತಿದ್ದು, ಆಕೆಯ ಮಾವ ನಾಗ್ಪುರಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ. ಅತ್ತೆ ಮೊಮ್ಮಕ್ಕಳೊಂದಿಗೆ ಮಲಗಿದ್ದು, ಸೊಸೆಯ ಕೋಣೆಯಿಂದ ಶಬ್ದ, ಪಿಸುಮಾತುಗಳು ಕೇಳಿ ಬರುತ್ತಿದ್ದು, ಇದರಿಂದ ಆಘಾತಕ್ಕೊಳಗಾದ ಅತ್ತೆ ಜನರನ್ನು ಒಗ್ಗೂಡಿಸಿದ್ದಾಳೆ. ಜನರು ಬಂದು ಸೊಸೆಯ ಕೋಣೆಯ ಬಾಗಿಲು ತೆರೆದಾಗ ಘಟನೆ ಬೆಳಕಿಗೆ ಬಂದಿದೆ.

ಮಾದಕ ದ್ರವ್ಯ ನೀಡಿ ಕೋರ್ಟ್‌ ಆವರಣದಲ್ಲೇ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ; ಥಾಣೆಯಲ್ಲಿ ದೇಶವನ್ನೇ ಬೆಚ್ಚಿ ಬೀಳಿಸಿದ ಘಟನೆ

30 ವರ್ಷದ ಮಹಿಳೆಯ 25 ವರ್ಷದ ಪ್ರಿಯಕರ ಹಾಸಿಗೆಯ ಕೆಳಗೆ ಪತ್ತೆಯಾಗಿದ್ದಾನೆ. ಕೂಡಲೇ ಈ ವಿಷಯವನ್ನು ಆಕೆಯ ಪತಿಗೆ ತಿಳಿಸಿದ್ದು, ಕೂಡಲೇ ಆತ ದುಬೈನಿಂದಲೇ ಆಕೆಗೆ ವಿಚ್ಛೇದನ ನೀಡಿದ್ದಾನೆ. ಈ ಬಳಿಕ ಸೊಸೆಗೆ ಪ್ರಿಯಕರನೊಂದಿಗೆ ಮದುವೆ ಮಾಡಲು ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎನ್ನಲಾಗಿದೆ.

ಮದುವೆ ಬಳಿಕ ಸೊಸೆ ಯುವಕನೊಂದಿಗೆ ಸಂಬಂಧ ಹೊಂದಿದ್ದಳು. ಈ ಬಗ್ಗೆ ಕುಟುಂಬಕ್ಕೆ ಯಾವುದೇ ಮಾಹಿತಿ ತಿಳಿದಿರಲಿಲ್ಲ. ಆಗಾಗ್ಗೆ ಮಧ್ಯರಾತ್ರಿ ಮಹಿಳೆಯ ಮನೆಗೆ ಆಕೆಯ ಪ್ರಿಯಕರ ಭೇಟಿಯಾಗಲು ಬರುತ್ತಿದ್ದ. ಘಟನೆಯ ಬಳಿಕ ಗ್ರಾಮಸ್ಥರು ಸಭೆ ಕರೆದು ಮಹಿಳೆ ಮತ್ತು ಪ್ರಿಯಕರ ಒಟ್ಟಿಗೆ ವಾಸಿಸಲು ಬಯಸಿದರೆ ಅವರು ಮದುವೆಯಾಗಬೇಕು ಎಂದು ಸೂಚಿಸಿದರು. ಸೊಸೆ ತನ್ನ ಪ್ರಿಯಕರನೊಂದಿಗೆ ವಾಸಿಸಲು ಮತ್ತು ಅವನನ್ನು ಮದುವೆಯಾಗಲು ಒಪ್ಪಿಕೊಂಡಳು. ಈ ಘಟನೆಯಿಂದ ಯುವಕನ ಕುಟುಂಬಸ್ಥರು ಆಘಾತಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ.

25 ವರ್ಷದ ಯುವತಿಯೊಂದಿಗೆ ಮದುವೆಯಾಗಿದ್ದ ರಾಜಕಾರಣಿ ಸಾವು

ಈ ಕುರಿತು ಮಾಹಿತಿ ನೀಡಿರುವ ಪುರಾ ಕಲಂದರ್ ಪೊಲೀಸ್ ಠಾಣೆಯ ಉಸ್ತುವಾರಿ ಕಮಲೇಶ್ ಸಾಹ್ನಿ, ಈ ವಿಷಯ ತಮ್ಮ ಗಮನಕ್ಕೆ ಬಂದಿದೆ. ಎರಡೂ ಕಡೆಯವರು ಪರಸ್ಪರ ವಿವಾಹಕ್ಕೆ ಒಪ್ಪಿಕೊಂಡಿದ್ದಾರೆ. ಈ ಕುರಿತು ಯಾವುದೇ ದೂರು ಬಂದಿಲ್ಲ ಎಂದು ತಿಳಿಸಿದರು.

ವೈದ್ಯೆ, ಮಗ ಆತ್ಮಹತ್ಯೆ

ಖ್ಯಾತ ಸ್ತ್ರೀರೋಗ ತಜ್ಞೆ ಮತ್ತು ಅವರ ಮಗ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ನಗರದ ಖ್ಯಾತ ಸ್ತ್ರೀರೋಗ ತಜ್ಞೆ ಡಾ. ಜಯಶ್ರೀ ಹೊಮ್ಮರಡಿ ಹಾಗೂ ಅವರ ಪುತ್ರ ಆಕಾಶ್ ಹೊಮ್ಮರಡಿ ಆತ್ಮಹತ್ಯೆ ಮಾಡಿಕೊಂಡವರು. ಅಶ್ವತ್ಥ್ ಬಡಾವಣೆಯ ಮನೆಯಲ್ಲಿ ಅವರಿಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದೆ. ವಿನೋಬನಗರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.