ಮಾದಕ ದ್ರವ್ಯ ನೀಡಿ ಕೋರ್ಟ್ ಆವರಣದಲ್ಲೇ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ; ಥಾಣೆಯಲ್ಲಿ ದೇಶವನ್ನೇ ಬೆಚ್ಚಿ ಬೀಳಿಸಿದ ಘಟನೆ
ಥಾಣೆಯಲ್ಲಿ ಯೂಟ್ಯೂಬರ್ ಗಳಿಬ್ಬರು ಮಹಿಳೆಯೊಬ್ಬರಿಗೆ ಮಾದಕ ದ್ರವ್ಯ ನೀಡಿ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ನಡೆದಿದೆ. ಈ ಘಟನೆ ಕಳೆದ ವರ್ಷ ಆಗಸ್ಟ್ 25ರಂದು ನಡೆದಿದ್ದು, ಆರೋಪಿಗಳಿಬ್ಬರು ಮಹಿಳೆಗೆ ಬ್ಲಾಕ್ ಮೇಲ್ ಮಾಡುತ್ತಿದ್ದುದರಿಂದ ತಡವಾಗಿ ದೂರು ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ -
ಥಾಣೆ: ಯೂಟ್ಯೂಬರ್ (YouTubers) ಗಳಿಬ್ಬರು ಮಾದಕ ದ್ರವ್ಯ ನೀಡಿ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ (Physical Abuse) ನಡೆಸಿರುವ ಘಟನೆ ಥಾಣೆಯಲ್ಲಿ (Thane) ತಡವಾಗಿ ಬೆಳಕಿಗೆ ಬಂದಿದೆ. ಕಳೆದ ವರ್ಷ ಆಗಸ್ಟ್ 25ರಂದು ಮಹಿಳೆ ಮೇಲೆ ಅತ್ಯಾಚಾರ ನಡೆಸಿರುವ ಯೂಟ್ಯೂಬರ್ ಗಳು ಬಳಿಕ ಆಕೆಗೆ ಪದೇ ಪದೇ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು. ಇದರಿಂದ ತೀವ್ರವಾಗಿ ನೊಂದ ಮಹಿಳೆ ಅಂತಿಮವಾಗಿ ಡಿಸೆಂಬರ್ 5ರಂದು ಥಾಣೆ ನಗರ ಪೊಲೀಸ್ ಠಾಣೆಯಲ್ಲಿ (Thane Nagar Police Station) ದೂರು ದಾಖಲಿಸಿದ್ದಾರೆ.
ಥಾಣೆಯ ಕೌಟುಂಬಿಕ ನ್ಯಾಯಾಲಯದ ಆವರಣದಲ್ಲಿ ಕಳೆದ ವರ್ಷ ಆಗಸ್ಟ್ 25ರಂದು ಇಬ್ಬರು ವ್ಯಕ್ತಿಗಳು ಮಹಿಳೆಯನ್ನು ಕಾರಿನೊಳಗೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಹಿರಾಲಾಲ್ ಕೇದಾರ್ ಮತ್ತು ರವಿ ಪವಾರ್ ಎಂದು ಗುರುತಿಸಲಾಗಿದೆ.
ಹಿರಾಲಾಲ್ ಕೇದಾರ್ ಮತ್ತು ರವಿ ಪವಾರ್ ಎಂಬುವವರು ಮಹಿಳೆಗೆ ಕೇಕ್‌ನಲ್ಲಿ ಮಾದಕ ದ್ರವ್ಯ ಬೆರೆಸಿ ತಿನ್ನಿಸಿ ಬಳಿಕ ಆಕೆಯ ಮೇಲೆ ಕಾರಿನಲ್ಲೇ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಕೇದಾರ್ ಎಂಬಾತನನ್ನು ಬಂಧಿಸಲಾಗಿದ್ದು, ಪವಾರ್ ಪರಾರಿಯಾಗಿದ್ದಾನೆ. ಈ ಕುರಿತು ಥಾಣೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಘಟನೆಯ ಬಳಿಕ ಆರೋಪಿಗಳಿಬ್ಬರು ಆಕೆಗೆ ಪದೇ ಪದೇ ಬ್ಲ್ಯಾಕ್‌ಮೇಲ್ ಮಾಡಲು ಪ್ರಯತ್ನಿಸಿದ್ದರಿಂದ ನೊಂದ ಮಹಿಳೆ ಅಂತಿಮವಾಗಿ ಡಿಸೆಂಬರ್ 5 ರಂದು ಥಾಣೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣದ ಆರೋಪಿಗಳಿಬ್ಬರು ಯೂಟ್ಯೂಬ್ ಪತ್ರಕರ್ತರು ಎನ್ನಲಾಗಿದೆ. ಅವರ ವಿರುದ್ಧ ಈಗಾಗಲೇ ಸುಲಿಗೆಗೆ ಸಂಬಂಧಿಸಿ ಪ್ರಕರಣ ದಾಖಲಾಗಿದೆ.
ಸಂತ್ರಸ್ತ ಮಹಿಳೆ ಮಸಾಜ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಆಕೆಯ ಮೇಲೆ ಸುಮಾರು ಒಂದೂವರೆ ವರ್ಷಗಳ ಹಿಂದೆ ಅತ್ಯಾಚಾರ ನಡೆದಿದ್ದು, ತಾನು ಭಯಭೀತರಾಗಿದ್ದರಿಂದ ಯಾರಿಗೂ ಈ ವಿಷಯ ಹೇಳಿಲ್ಲ. ಕುಟುಂಬಕ್ಕೂ ಸಹ ಹೇಳಲಿಲ್ಲ. ಆದರೆ ಕಳೆದ ತಿಂಗಳಿನಿಂದ ಆರೋಪಿಗಳಲ್ಲಿ ಒಬ್ಬರು ತಮ್ಮಲ್ಲಿ ಲೈಂಗಿಕವಾಗಿ ಸಹಕರಿಸಲು ಬೇಡಿಕೆ ಇಟ್ಟಿದ್ದು, ಬಳಿಕ ಪದೇ ಪದೇ ಕಿರುಕುಳ ನೀಡಲು ಪ್ರಾರಂಭಿಸಿದ್ದಾರೆ ಎಂದು ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಬುದ್ದಿ ಹೇಳಿದ್ದಕ್ಕೆ ಆತ್ಮಹತ್ಯೆ
ಬುದ್ದಿ ಹೇಳಿದ್ದಕ್ಕೆ ವಿದ್ಯಾರ್ಥಿನಿಯೊಬ್ಬಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗದಗದಲ್ಲಿ ನಡೆದಿದೆ. ಚಂದ್ರಿಕಾ ನಡುವಿನಮನಿ (21) ಮೃತ ವಿದ್ಯಾರ್ಥಿನಿ. ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಚಂದ್ರಿಕಾ ಬಾಗಲಕೋಟೆಯ ಶಿರೂರು ಮೂಲದವಳಾಗಿದ್ದಳು. ಗದಗದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಆಕೆ ಭೀಷ್ಮ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಓದುವುದರಲ್ಲಿ ಆಕೆ ಆಸಕ್ತಿ ಕಡಿಮೆ ಮಾಡಿದ್ದರಿಂದ ಅಣ್ಣ ಬುದ್ಧಿ ಹೇಳಿದ್ದನು. ಇದರಿಂದ ನೊಂದು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.