ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಲೀವ್ ಇನ್ ಸಂಗಾತಿ ಮೇಲೆ ಆ್ಯಸಿಡ್ ಎರಚಿದ ಗೆಳೆಯ

ವ್ಯಕ್ತಿಯೊಬ್ಬ ಆಸ್ಪತ್ರೆಯಲ್ಲಿ ತನ್ನ ಗೆಳತಿ ಮೇಲೆ ಆ್ಯಸಿಡ್ ಎರಚಿದ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಲೀವ್ ಇನ್ ಸಂಗಾತಿಯ ಮೇಲೆ ಹಲ್ಲೆ ನಡೆಸಿದ ಬಳಿಕ ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಆ್ಯಸಿಡ್ ಎರಚಿ ಪರಾರಿಯಾಗಿದ್ದಾನೆ. ತಕ್ಷಣವೇ ಮಹಿಳೆಗೆ ಚಿಕಿತ್ಸೆ ನೀಡಲಾಗಿದ್ದು, ಆಕೆ ಅಪಾಯದಿಂದ ಪಾರಾಗಿದ್ದಾಳೆ ಎನ್ನಲಾಗಿದೆ.

ಆಸ್ಪತ್ರೆಯಲ್ಲೇ ಗೆಳತಿ ಮೇಲೆ ಆ್ಯಸಿಡ್ ಎರಚಿದ ವ್ಯಕ್ತಿ

ಸಂಗ್ರಹ ಚಿತ್ರ -

ಗುರುಗ್ರಾಮ: ಲೀವ್ ಇನ್ ಸಂಗಾತಿಯ (live-in partner) ಮೇಲೆ ಹಲ್ಲೆ ನಡೆಸಿ, ಆ್ಯಸಿಡ್ (acid attack) ಎರಚಿರುವ ಘಟನೆ ಗುರುಗ್ರಾಮದಲ್ಲಿ (gurugram) ಭಾನುವಾರ ನಡೆದಿದೆ. ಮಹಿಳೆಯ ಮೇಲೆ ಹಲ್ಲೆ (assault) ನಡೆಸಿದ್ದ ವ್ಯಕ್ತಿ ಬಳಿಕ ಆಸ್ಪತ್ರೆಗೆ (gurugram hospital) ಹೋಗಿ ಆಕೆಯ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದಾನೆ. ನುಹ್ ಜಿಲ್ಲೆಯ ನಿವಾಸಿಯಾಗಿರುವ 30 ವರ್ಷದ ಮಹಿಳೆ ಮೇಲೆ ಆಕೆಯ ಲೀವ್ ಇನ್ ಸಂಗಾತಿ ಪವನ್ ಭಾನುವಾರ ತಡ ರಾತ್ರಿ ಗುರುಗ್ರಾಮ್ ಸಿವಿಲ್ ಆಸ್ಪತ್ರೆಯಲ್ಲಿ ಆ್ಯಸಿಡ್ ದಾಳಿ ನಡೆಸಿದ್ದಾನೆ.

ಗುರುಗ್ರಾಮ್‌ನ ಸಿವಿಲ್ ಆಸ್ಪತ್ರೆಯಲ್ಲಿ ಭಾನುವಾರ ತಡರಾತ್ರಿ ಮಹಿಳೆ ಮೇಲೆ ಲಿವ್ ಇನ್ ಸಂಗಾತಿ ಪವನ್ ದಾಳಿ ನಡೆಸಿದ್ದು, ದಾಳಿ ಮೊದಲು ಆತ ತನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.

ದೆಹಲಿಯಲ್ಲಿ ಮತ್ತೊಂದು ಜನಾಂಗೀಯ ನಿಂದನೆ ಪ್ರಕರಣ; ಮಣಿಪುರದ ಯುವತಿ ಮೇಲೆ ಹಲ್ಲೆ

ಆ್ಯಸಿಡ್ ದಾಳಿಯ ಬಳಿಕ ಆರೋಪಿ ಪರಾರಿಯಾಗಿದ್ದಾನೆ. ತಕ್ಷಣವೇ ಮಹಿಳೆಯನ್ನು ಪಿಜಿಐ ರೋಹ್ಟಕ್‌ಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಲಾಗಿದ್ದು, ಆಕೆ ಯಾವುದೇ ಗಂಭೀರ ಗಾಯಗಳಾಗಿಲ್ಲದ ಕಾರಣ ತಕ್ಷಣವೇ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನುಹ್ ಜಿಲ್ಲೆಯ ನಿವಾಸಿಯಾಗಿರುವ ಮಹಿಳೆ ಭಾನುವಾರ ಗುರುಗ್ರಾಮ್‌ನ ಸುಭಾಷ್ ನಗರದಲ್ಲಿರುವ ತನ್ನ ಚಿಕ್ಕಮ್ಮನ ಮನೆಗೆ ಬಂದಿದ್ದರು. ಈ ವೇಳೆ ನುಹ್‌ನ ಆಕೆಯ ಲೀವ್ ಗೆಳೆಯ ಪವನ್ ಆಕೆಯನ್ನು ಹಿಂಬಾಲಿಸಿಕೊಂಡು ಬಂದಿದ್ದು, ತನ್ನನ್ನು ಭೇಟಿಯಾಗುವಂತೆ ಒತ್ತಾಯಿಸಿದ್ದಾನೆ.

ಈ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ಇಬ್ಬರ ನಡುವೆ ಜಗಳವಾಗಿದೆ. ಬಳಿಕ ಆತ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಇದರಿಂದ ಗಾಯಗೊಂಡ ಮಹಿಳೆಯನ್ನು ಆಕೆಯ ಕುಟುಂಬಸ್ಥರು ಸೆಕ್ಟರ್ 10 ರಲ್ಲಿರುವ ಸಿವಿಲ್ ಲೈನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ. ರಾತ್ರಿ 8.30 ರ ಸುಮಾರಿಗೆ ಆಸ್ಪತ್ರೆಗೆ ಬಂಡ ಪವನ್ ಆಕೆಯ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದಾನೆ.

Murder Case: ಕಿಡ್ನ್ಯಾಪ್‌ ಆಗಿದ್ದ ರಿಯಲ್‌ ಎಸ್ಟೇಟ್‌ ಏಜೆಂಟ್‌ ಶವ ತಮಿಳುನಾಡಿನಲ್ಲಿ ಪತ್ತೆ

ಬಳಿಕ ತನಿಖೆ ನಡೆಸಿರುವ ಪೊಲೀಸರು ಆರೋಪಿ ಪವನ್ ನನ್ನು ಬಂಧಿಸಿದ್ದು, ಹೆಚ್ಚಿನ ವಿಚಾರಣೆಗಾಗಿ ಮಹಿಳೆಯೊಬ್ಬರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಪ್ರವಾಸಿ ಮಹಿಳೆ ಮೇಲೆ ಟ್ಯಾಕ್ಸಿ ಚಾಲಕನಿಂದ ಅತ್ಯಾಚಾರ ಯತ್ನ

ಟ್ಯಾಕ್ಸಿ ಚಾಲಕನೊಬ್ಬ ಪ್ರವಾಸ ಬಂದಿದ್ದ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಉತ್ತರಾಖಂಡದ ನೈನಿತಾಲ್ ನಲ್ಲಿ ನಡೆದಿದೆ. ಆತನಿಂದ ತಪ್ಪಿಸಿಕೊಂಡ ಯುವತಿ ಕಾಡಿನಲ್ಲಿ ರಾತ್ರಿಯಿಡೀ ಕಳೆದಿದ್ದಾಳೆ. ದೆಹಲಿಯ ಯುವತಿ ಏಕಾಂಗಿಯಾಗಿ ನೈನಿತಾಲ್ ಗೆ ಪ್ರವಾಸ ಹೋಗಿದ್ದಳು.31 ವರ್ಷದ ಯುವತಿ ದೆಹಲಿಯಿಂದ ಡೆಹ್ರಾಡೂನ್ ಮೂಲಕ ಕಥ್ಗೋಡಮ್‌ಗೆ ಆಗಮಿಸಿ ಗುರುವಾರ ನೈನಿತಾಲ್‌ಗೆ ಟ್ಯಾಕ್ಸಿ ಬಾಡಿಗೆಗೆ ಪಡೆದಿದ್ದಾಳೆ. ಬೆಳಗಿನ ಜಾವ 1.30ರ ಸುಮಾರಿಗೆ ಟ್ಯಾಕ್ಸಿ ಚಾಲಕ ಲೇಕ್ ಸಿಟಿ ಬಳಿಯ ಪಟ್ವಾ ದಂಗಾರ್‌ನಲ್ಲಿ ನಿರ್ಜನ ರಸ್ತೆಗೆ ವಾಹನವನ್ನು ತಿರುಗಿಸಿದ್ದಾನೆ. ಮಹಿಳೆ ಆಕ್ಷೇಪಿಸಿದಾಗ ವಾಹನವನ್ನು ನಿಲ್ಲಿಸಿ ಆಕೆಯನ್ನು ನಿಂದಿಸಿ, ಹಲ್ಲೆ ನಡೆಸಿದ್ದಾನೆ. ಆಕೆಯ ಮೊಬೈಲ್ ಫೋನ್ ಕಸಿದುಕೊಂಡು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆತನಿಂದ ತಪ್ಪಿಸಿಕೊಳ್ಳಲು ಮಹಿಳೆ ಹತ್ತಿರದ ಕಾಡಿನ ಕಡೆಗೆ ಓಡಿಹೋಗಿ ರಾತ್ರಿಯಿಡೀ ಅಲ್ಲಿ ಅಡಗಿ ಕುಳಿತಿದ್ದಳು. ಬಳಿಕ ಶುಕ್ರವಾರ ಬೆಳಗ್ಗೆ ಪಟ್ವಾ ದಂಗರ್ ಗ್ರಾಮವನ್ನು ತಲುಪಿ ಸ್ಥಳೀಯರ ಸಹಾಯದಿಂದ ಪೊಲೀಸರಿಗೆ ದೂರು ನೀಡಿದ್ದಾಳೆ.

ತಕ್ಷಣವೇ ಪೊಲೀಸರು ಆರೋಪಿಯನ್ನು ಗುರುತಿಸಿ ಬಂಧಿಸಿದ್ದಾರೆ. ಪೈನ್ಸ್ ಭವಾಲಿ ರಸ್ತೆಯ ದೀಪಕ್ ಸಿಂಗ್ ಬೋರಾ (39) ಬಂಧಿತ ಆರೋಪಿ. ಆತನಿಂದ ಮಹಿಳೆಯ ಮೊಬೈಲ್ ಅನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಸಂತ್ರಸ್ತೆಯ ದೂರಿನ ಆಧಾರದಲ್ಲಿ ಆತನ ವಿರುದ್ಧ ಅತ್ಯಾಚಾರ, ದರೋಡೆ ಮತ್ತು ಅಪಹರಣಕ್ಕೆ ಸಂಬಂಧಿಸಿದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.