T20 World Cup: ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಶೋಯೆಬ್ ಅಖ್ತರ್ ವಿಶೇಷ ಸಂದೇಶ!
ಭಾರತ ತಂಡ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ 2026ರ ಟಿ20 ವಿಶ್ವಕಪ್ ಗೆದ್ದುಕೊಂಡಿತು. ಇದರ ಬೆನ್ನಲ್ಲೇ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಭಾರತೀಯ ಆಟಗಾರರು, ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಭಾರತೀಯ ಕ್ರಿಕೆಟ್ ವ್ಯವಸ್ಥೆಯನ್ನು ಮುಕ್ತಕಂಠದಿಂದ ಗುಣಗಾನ ಮಾಡಿದರು.
ಭಾರತ ತಂಡವನ್ನು ಶ್ಲಾಘಿಸಿದ ಶೋಯೆಬ್ ಅಖ್ತರ್. -
ಅಹಮದಾಬಾದ್: 2026ರ ಟಿ20 ವಿಶ್ವಕಪ್ (ICC T20 World Cup 2026) ಗೆದ್ದ ಭಾರತ ತಂಡಕ್ಕೆ ವಿಶ್ವಾದ್ಯಂತ ಪ್ರಶಂಸೆ ವ್ಯಕ್ತವಾಗುತ್ತಿದೆ. ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವೇಗದ ಬೌಲರ್ ಶೋಯೆಬ್ ಅಖ್ತರ್ (Shoaib Akhtar) ಕೂಡ ಟೀಮ್ ಇಂಡಿಯಾವನ್ನು (India) ಶ್ಲಾಘಿಸಿದ್ದಾರೆ. ನ್ಯೂಜಿಲೆಂಡ್ ತಂಡವನ್ನು 96 ರನ್‌ಗಳಿಂದ ಸೋಲಿಸಿ, ಭಾರತ ತಂಡ ಮೂರನೇ ಬಾರಿ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡಿತು. ಈ ಪ್ರಶಸ್ತಿಯನ್ನು ಉಳಿಸಿಕೊಂಡ ಮೊದಲ ತಂಡ ಎಂಬ ದಾಖಲೆಯನ್ನು ಭಾರತ ಬರೆಯಿತು. ಮೊಟ್ಟ ಮೊದಲ ಬಾರಿ ಟಿ20 ವಿಶ್ವಕಪ್ ಗೆದ್ದ ಮೊದಲ ತಂಡ ಎಂಬ ದಾಖಲೆ ಕೂಡ ಟೀಮ್ ಇಂಡಿಯಾ ಹೆಸರಿನಲ್ಲಿದೆ.
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಗೆಲುವಿನ ನಂತರ ಪಾಕಿಸ್ತಾನಿ ಚಾನೆಲ್‌ನಲ್ಲಿ ಮಾತನಾಡಿದ ಶೋಯೆಬ್ ಅಖ್ತರ್, "ನಾನು ಖಂಡಿತವಾಗಿಯೂ ಭಾರತದ ಬಗ್ಗೆ ಎರಡು ಅಥವಾ ಮೂರು ವಿಷಯಗಳನ್ನು ಹೇಳುತ್ತೇನೆ. ಮೊದಲು, ಅವರ ನೀತಿ ಗೆದ್ದಿದೆ. ಅವರ ವ್ಯವಸ್ಥೆ ಗೆದ್ದಿದೆ. ಮುಖ್ಯವಾಗಿ, ಅವರ ಅರ್ಹತೆ ಗೆದ್ದಿದೆ. ಮಕ್ಕಳೊಂದಿಗೆ ಆಟವಾಡುವ ಮೂಲಕ ಇಬ್ಬರು ಜನರು ಟೂರ್ನಿಯನ್ನು ಗೆಲ್ಲಬಹುದು ಎಂದು ಗೌತಮ್ ಗಂಭೀರ್ ಇಂದು ಸಾಬೀತುಪಡಿಸಲಿಲ್ಲವೇ? ಒಬ್ಬ ಆಟಗಾರ ಕಾಣೆಯಾಗಿದ್ದ: ಸಂಜು ಸ್ಯಾಮ್ಸನ್. ನಾನು ಅವರನ್ನು ಕರೆತರುತ್ತೇನೆ. ಅವರು ದೊಡ್ಡ ಅಪಾಯವನ್ನು ತೆಗೆದುಕೊಂಡರು. ಸಂಜು ಸ್ಯಾಮ್ಸನ್ ಅವಕಾಶವನ್ನು ಬಳಸಿಕೊಂಡರು ಮತ್ತು ಎಲ್ಲಾ ತಂಡಗಳನ್ನು ಹಿಂದಿಕ್ಕಿದರು," ಎಂದರು.
IND vs NZ: ಡ್ಯಾರಿಲ್ ಮಿಚೆಲ್ ಬಳಿ ಕ್ಷಮೆ ಕೇಳಲು ನಿರಾಕರಿಸಿದ ಅರ್ಷದೀಪ್ ಸಿಂಗ್‌ಗೆ ವಾರ್ನಿಂಗ್! ವಿಡಿಯೊ
ಸಂಜು ಸ್ಯಾಮ್ಸನ್‌ಗೆ ಅಖ್ತರ್ ಮೆಚ್ಚುಗೆ
"ಅಭಿಷೇಕ್ ಶರ್ಮಾ ಇನ್ನೂ ಚಿಕ್ಕವನು, ಮಗು, ಕಲಿಯಲು ಬಹಳಷ್ಟು ಕ್ರಿಕೆಟ್ ಉಳಿದಿದೆ. ಆದರೆ ಸಂಜು ತುಂಬಾ ಪ್ರಬುದ್ಧ. ನಾವು ಸರಿಯಾದ ದಿಕ್ಕಿನಲ್ಲಿ ಯೋಚಿಸುತ್ತೇವೆ ಎಂದು ಭಾರತ ಪ್ರದರ್ಶಿಸಿತು. ನಾವು ಸರಿಯಾದ ರೀತಿಯಲ್ಲಿ ಯೋಚಿಸುತ್ತೇವೆ. ನಾವು ಯಾರಿಗಾದರೂ ಅವಕಾಶ ನೀಡುತ್ತೇವೆ ಮತ್ತು ಅವರು ಮುಂದೆ ಬಂದು ಆಡಬೇಕೆಂದು ಬಯಸುತ್ತೇವೆ. ಹದಿನೈದು ಆಟಗಾರರನ್ನು ಆಯ್ಕೆ ಮಾಡಲಾಗಿದೆ ಮತ್ತು ಅನೇಕರನ್ನು ಕೈಬಿಡಲಾಗಿದೆ. ದಂತಕಥೆಗಳು ಅವರಲ್ಲಿವೆ. ಅವರು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ವಿದಾಯ ಹೇಳಿದರು, ಆದರೂ ಅವರು ಇನ್ನೂ ವಿಶ್ವಕಪ್ ಗೆದ್ದರು. ಒಬ್ಬ ನಾಯಕ, ದಂತಕಥೆ ಇದ್ದರು; ಅವರು ವಿಶ್ವ ಚಾಂಪಿಯನ್ ತಂಡದ ಭಾಗವಾಗಿದ್ದರು," ಎಂದು ಶ್ಲಾಘಿಸಿದರು.
आज उनका मेरिट जीता, आज उनकी पॉलिसी जीती:- शोएब अख़्तर ने कोच गौतम गंभीर और भारतीय टीम की जमकर तारीफ की
— Shubham Shukla (@Shubhamshuklamp) March 9, 2026
वैसे कोई पाकिस्तानी भारतीय टीम की तारीफ करे, ऐसा बहुत कम होता है।
pic.twitter.com/Bx22S3Mhgt
ಭಾರತ ತಂಡವನ್ನು ವಿಶ್ವಕಪ್ ವಿಜಯಗಳಿಗೆ ಮುನ್ನಡೆಸಿದ ಮೂವರು ನಾಯಕರು - ಕಪಿಲ್ ದೇವ್, ಮಹೇಂದ್ರ ಸಿಂಗ್ ಧೋನಿ ಮತ್ತು ರೋಹಿತ್ ಶರ್ಮಾ - ಸಹ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್‌ಗಾಗಿ ಹಾಜರಿದ್ದರು. ಈ ಬಗ್ಗೆ ಮಾತನಾಡಿದ ಅಖ್ತರ್, "ಭಾರತ ಸಾಗುತ್ತಿರುವ ದಾರಿ, ಅವರು ತಮ್ಮ ವ್ಯವಸ್ಥೆಗಳಿಗೆ, ತಮ್ಮ ಯಂತ್ರಗಳಿಗೆ, ತಮ್ಮ ತರಬೇತಿ ಕೇಂದ್ರಗಳಿಗೆ ಖರ್ಚು ಮಾಡುತ್ತಿರುವ ಹಣ ಮತ್ತು ಅವರು ತಮ್ಮ ಹಿರಿಯರಿಗೆ ನೀಡುವ ಗೌರವ. ಮೂವರು ನಾಯಕರನ್ನು ಆಹ್ವಾನಿಸಲಾಯಿತು. ಇಂದು ಅವರು ಅಲ್ಲಿ ನಿಂತಿದ್ದರು. ಇಂದು ಅವರು ಆಚರಿಸುತ್ತಿದ್ದಾರೆ," ಎಂದು ಹೇಳಿದರು.
IND vs NZ: ಸಂಜು ಸ್ಯಾಮ್ಸನ್ ಅಬ್ಬರ, ನ್ಯೂಜಿಲೆಂಡ್‌ಗೆ ಆಘಾತ ನೀಡಿ ಮೂರನೇ ಟಿ20 ವಿಶ್ವಕಪ್ ಗೆದ್ದ ಭಾರತ!
ಭಾರತ ತಂಡಕ್ಕೆ ಮೂರನೇ 20 ವಿಶ್ವಕಪ್
ಭಾರತ ತಂಡ, ನ್ಯೂಜಿಲೆಂಡ್ ತಂಡವನ್ನು 96 ರನ್‌ಗಳಿಂದ ಮಣಿಸಿ ಮೂರನೇ ಬಾರಿ ಟಿ20 ವಿಶ್ವಕಪ್ ಅನ್ನು ಮುಡಿಗೇರಿಸಿಕೊಂಡಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಭಾರತ, ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ ಹಾಗೂ ಇಶಾನ್ ಕಿಶನ್ ಅವರ ಅರ್ಧಶತಕಗಳ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 255 ರನ್‌ಗಳನ್ನು ಕಲೆ ಹಾಕಿತು. ಬಳಿಕ ಗುರಿಯನ್ನು ಹಿಂಬಾಲಿಸಿದ ನ್ಯೂಜಿಲೆಂಡ್ ತಂಡ, ಜಸ್‌ಪ್ರೀತ್ ಬುಮ್ರಾ ಮಾರಕ ಬೌಲಿಂಗ್ ಹಾಗೂ ಅಕ್ಷರ್ ಪಟೇಲ್ ಸ್ಪಿನ್ ಮೋಡಿಗೆ ನಲುಗಿತು. ಆ ಮೂಲಕ ಕಿವೀಸ್ 159 ರನ್‌ಗಳಿಗೆ ಆಲ್‌ಔಟ್ ಆಯಿತು.