ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Terrorist Arrested: 58 ಜನರನ್ನು ಸಾಯಿಸಿದ ಕೊಯಮತ್ತೂರು ಬಾಂಬ್‌ ಸ್ಫೋಟ ಆರೋಪಿ 27 ವರ್ಷಗಳ ಬಳಿಕ ಕರ್ನಾಟಕದಲ್ಲಿ ಸೆರೆ!

Terrorist Arrested: ಕರ್ನಾಟಕದಲ್ಲಿ ಶಂಕಿತ ಉಗ್ರ ಸಾದಿಕ್ ರಾಜಾ ಚಲನವಲನಗಳ ಬಗ್ಗೆ ಕೊಯಮತ್ತೂರು ಪೊಲೀಸರು ಹಾಗೂ ಭಯೋತ್ಪಾದಕ ನಿಗ್ರಹ ದಳದ (ಎಟಿಎಸ್‌) ಪೊಲೀಸರು ಖಚಿತ ಮಾಹಿತಿ ಪಡೆದಿದ್ದರು. ಈತ ಕೊಯಮತ್ತೂರು ಬಾಂಬ್ ಬ್ಲಾಸ್ಟ್‌ನ ಮತ್ತೋರ್ವ ಪ್ರಮುಖ ಆರೋಪಿ ಎಸ್‌ಎ ಬಾಷಾ ಸ್ಥಾಪಿಸಿದ ನಿಷೇಧಿತ ಸಂಘಟನೆ ಅಲ್-ಉಮ್ಮಾದ ಕಾರ್ಯಕರ್ತನಾಗಿದ್ದ.

ಕೊಯಮತ್ತೂರು ಬಾಂಬ್‌ ಸ್ಫೋಟ ಆರೋಪಿ 27 ವರ್ಷಗಳ ಬಳಿಕ ಕರ್ನಾಟಕದಲ್ಲಿ ಸೆರೆ!

ಉಗ್ರ ಸಿದ್ದೀಕ್‌ ರಾಜಾ

ಹರೀಶ್‌ ಕೇರ ಹರೀಶ್‌ ಕೇರ Jul 11, 2025 7:37 AM

ವಿಜಯಪುರ: ತಮಿಳುನಾಡಿನ (Tamil Nadu) ಕೊಯಮತ್ತೂರಿನಲ್ಲಿ ನಡೆದಿದ್ದ ಬಾಂಬ್ ಬ್ಲಾಸ್ಟ್ ಪ್ರಕರಣದ (Coimbatore Bomb Blast) ಪ್ರಮುಖ ಆರೋಪಿಯೊಬ್ಬನನ್ನು 27 ವರ್ಷಗಳ ಬಳಿಕ ಕರ್ನಾಟಕದ ವಿಜಯಪುರದಲ್ಲಿ (Vijayapura) ಆರೆಸ್ಟ್ (Terrorist Arrested) ಮಾಡಲಾಗಿದೆ. 1998ರಲ್ಲಿ ಕೊಯಮತ್ತೂರಿನಲ್ಲಿ ನಡೆದಿದ್ದ ಸರಣಿ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ಸಾದಿಕ್ ರಾಜಾನನ್ನು (Sadiq Raja) ವಿಜಯಪುರ ನಗರದಲ್ಲಿ ಬಂಧಿಸಲಾಗಿದೆ. ಸರಣಿ ಸ್ಫೋಟದ ಬಳಿಕ ಬೇರೆ ಬೇರೆ ಕಡೆ ಆರೋಪಿ ಸಾದಿಕ್ ರಾಜಾ ತಲೆ ಮರೆಸಿಕೊಂಡಿದ್ದ. ಈತನನ್ನು ಕೊಯಮತ್ತೂರು ಪೊಲೀಸರು ಈಗ ಆರೆಸ್ಟ್ ಮಾಡಿದ್ದಾರೆ.

ಸಾದಿಕ್ ರಾಜಾ ಹಲವು ಹೆಸರು ಇಟ್ಟುಕೊಂಡು ತಲೆಮರೆಸಿಕೊಂಡು ಬದುಕುತ್ತಿದ್ದ. 48 ವರ್ಷದ ಈತ ಸಾದಿಕ್, ಸಿದ್ದಿಕಿ, ರಾಜಾ, ಟೈಲರ್ ರಾಜಾ, ವಲರಂಥ ರಾಜಾ, ಷಹಜಹಾನ್, ಅಬ್ದುಲ್ ಮಜಿದ್, ಮಕಾಂದರ್, ಷಹಜಹಾನ್ ಶೇಕ್ ಎಂದೆಲ್ಲ ಬೇರೆ ಬೇರೆ ಹೆಸರು ಇಟ್ಟುಕೊಂಡು, ಬೇರೆ ಬೇರೆ ಕಡೆ ತಲೆ ಮರೆಸಿಕೊಂಡು ಓಡಾಡುತ್ತಿದ್ದ. ಮೂಲತಃ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ನಿವಾಸಿಯಾಗಿದ್ದ ಈತ ಕಳೆದ ಹಲವು ವರ್ಷಗಳಿಂದ ತರಕಾರಿ ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದ ಮಾಹಿತಿ ಲಭ್ಯವಾಗಿತ್ತು. ಈತ ಹುಬ್ಬಳ್ಳಿ ಮೂಲದ ಮಹಿಳೆಯೊಂದಿಗೆ ವಿವಾಹವಾಗಿದ್ದ.

ಕರ್ನಾಟಕದಲ್ಲಿ ಶಂಕಿತ ಉಗ್ರ ಸಾದಿಕ್ ರಾಜಾ ಚಲನವಲನಗಳ ಬಗ್ಗೆ ಕೊಯಮತ್ತೂರು ಪೊಲೀಸರು ಹಾಗೂ ಭಯೋತ್ಪಾದಕ ನಿಗ್ರಹದಳದ (ಎಟಿಎಸ್‌) ಪೊಲೀಸರು ಖಚಿತ ಮಾಹಿತಿ ಪಡೆದಿದ್ದರು. ಈತ ಕೊಯಮತ್ತೂರು ಬಾಂಬ್ ಬ್ಲಾಸ್ಟ್‌ನ ಮತ್ತೋರ್ವ ಪ್ರಮುಖ ಆರೋಪಿಯಾಗಿದ್ದ ಎಸ್‌ಎ ಬಾಷಾ ಸ್ಥಾಪಿಸಿದ ನಿಷೇಧಿತ ಸಂಘಟನೆಯಾದ ಅಲ್-ಉಮ್ಮಾದ ಮುಂಚೂಣಿಯ ಕಾರ್ಯಕರ್ತನಾಗಿದ್ದ.

ಸದ್ಯ ರಾಜಾನನ್ನು ವಿಜಯಪುರದಲ್ಲಿ ಅರೆಸ್ಟ್ ಮಾಡಿದ್ದು, ಕೊಯಮತ್ತೂರಿಗೆ ಕರೆತಂದು ಗುರುವಾರ (ಜುಲೈ 10) ಐದನೇ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಆತನನ್ನು ಜುಲೈ 24 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

1998 ರ ಸರಣಿ ಬಾಂಬ್ ಸ್ಫೋಟಗಳ ಜೊತೆಗೆ ಅವನು ಹಲವಾರು ಭಯೋತ್ಪಾದನಾ ಪ್ರಕರಣಗಳು ಮತ್ತು ಕೋಮು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಜೊತೆಗೆ 1996 ರಲ್ಲಿ ಕೊಯಮತ್ತೂರಿನಲ್ಲಿ ನಡೆದ ಮೊಲೊಟೊವ್ ಕಾಕ್ಟೈಲ್ ದಾಳಿ, ಇದರ ಪರಿಣಾಮವಾಗಿ ಜೈಲು ವಾರ್ಡರ್ ಭೂಪಾಲನ್ ಸಾವನ್ನಪ್ಪಿದ್ದರು. 1996 ರಲ್ಲಿ ನಾಗೋರ್‌ನಲ್ಲಿ ಸಯೀತಾ ಕೊಲೆ ಪ್ರಕರಣ ಮತ್ತು 1997 ರಲ್ಲಿ ಮಧುರೈನಲ್ಲಿ ಜೈಲರ್ ಜಯಪ್ರಕಾಶ್ ಕೊಲೆಗಳಲ್ಲಿ ಈತ ಭಾಗಿಯಾಗಿದ್ದ.

ವೃತ್ತಿಯಲ್ಲಿ ಟೈಲರ್ ಆಗಿದ್ದು ಉಕ್ಕಡಂನ ವಲ್ಲಲ್ ನಗರದಲ್ಲಿ ಒಂದು ಮನೆಯನ್ನು ಬಾಡಿಗೆಗೆ ಪಡೆದಿದ್ದ. ಅಲ್ಲಿ ಉಗ್ರಗಾಮಿಗಳು ಸರಣಿ ಸ್ಫೋಟಗಳಲ್ಲಿ ಬಳಸಿದ ಬಾಂಬ್‌ಗಳನ್ನು ತಯಾರಿಸಿ ಸಂಗ್ರಹಿಸಿದ್ದ. ರಾಜಾ ವಿರುದ್ಧ ನಾಗೂರ್ ಪೊಲೀಸ್ ಠಾಣೆ, ಕೊಯಮತ್ತೂರಿನ ರೇಸ್ ಕೋರ್ಸ್ ಪೊಲೀಸ್ ಠಾಣೆ ಮತ್ತು ಮಧುರೈನ ಕರಿಮೇಡು ಪೊಲೀಸ್ ಠಾಣೆಗಳಲ್ಲಿ ಕೊಲೆ ಪ್ರಕರಣಗಳು ದಾಖಲಾಗಿವೆ.

ಸರಣಿ ಬಾಂಬ್ ಬ್ಲಾಸ್ಟ್‌ಗೆ 58 ಮಂದಿ ಬಲಿ

ತಮಿಳುನಾಡಿನ ಕೊಯಮತ್ತೂರಿನಲ್ಲಿ ಫೆಬ್ರವರಿ 14, 1998ರಂದು ಸರಣಿ ಬಾಂಬ್ ಬ್ಲಾಸ್ಟ್ ನಡೆದಿತ್ತು. ಇದು 58 ಜನರ ಸಾವಿಗೆ ಮತ್ತು 200ಕ್ಕೂ ಹೆಚ್ಚು ಜನ ಗಾಯಗೊಳ್ಳಲು ಕಾರಣವಾಗತ್ತು. ಮಧ್ಯಾಹ್ನ 4 ಗಂಟೆ ವೇಳೆಗೆ ಕೊಯಮತ್ತೂರು ಜಂಕ್ಷನ್ ರೈಲ್ವೆ ನಿಲ್ದಾಣದ ಸೈಕಲ್ ಸ್ಟ್ಯಾಂಡ್‌ ಸೇರಿದಂತೆ 19 ಸ್ಫೋಟಗಳು ನಗರದ 11 ವಿವಿಧ ಸ್ಥಳಗಳಲ್ಲಿ ನಡೆದಿದ್ದವು.

ಈ ಸ್ಫೋಟಗಳು ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಆಡ್ವಾಣಿಯವರನ್ನು ಗುರಿಯಾಗಿಸಿಕೊಂಡಿದ್ದವು. ಅವರು ಆ ದಿನ ಆರ್.ಎಸ್. ಪುರಂನಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲು ಆಗಮಿಸಿದ್ದರು. ಒಂದು ಬಾಂಬ್ ಅವರ ರ‍್ಯಾಲಿಗೆ ಕೆಲವೇ ನಿಮಿಷಗಳ ಮೊದಲು ಸ್ಫೋಟಿಸಿತ್ತು.

ಇದನ್ನೂ ಓದಿ: ಗಾಂಜಾ ನಶೆಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಹತ್ಯೆ ನಡೆಸಿದ ಆರೋಪಿಯ ಬಂಧನ