ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Crime News: ಕಾಫಿಯಲ್ಲಿ ವಿಷ ಬೆರೆಸಿ ಪತಿಯ ಕೊಲೆಗೆ ಪತ್ನಿ ಸಂಚು; ಜೀವನ್ಮರಣ ಹೋರಾಟದಲ್ಲಿ ಗಂಡ

Crime News: ಇತ್ತೀಚಿಗೆ ಮೀರತ್‌ನಲ್ಲಿ ಪತ್ನಿ ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಲೆಗೈದು 15 ತುಂಡುಗಳಾಗಿ ಕತ್ತರಿಸಿ ಸಿಮೆಂಟ್‌ ಇದ್ದ ಡ್ರಮ್‌ನೊಳಗೆ ತುಂಬಿಸಿಟ್ಟಿದ್ದಳು. ಈ ಕೊಲೆ ದೇಶದಾದ್ಯಂತ ಸುದ್ದಿಯಾಗಿತ್ತು.ಇಂತಹುದೇ ಮತ್ತೊಂದು ಘಟನೆಗೆ ಉತ್ತರ ಪ್ರದೇಶದ ಮುಜಫ್ಫರ್‌ನಗರ ಸಾಕ್ಷಿಯಾಗಿದೆ. ಈ ಕುರಿತು ಕಂಪ್ಲೀಟ್ ವರದಿ ಇಲ್ಲಿದೆ

ಪತಿಯ ಹತ್ಯೆಗೆ ಪತ್ನಿ ಮಾಡಿದ ಮಾಸ್ಟರ್‌ ಪ್ಲ್ಯಾನ್‌ ಏನ್‌ ಗೊತ್ತಾ?

ಶಾನೋ - ಅನುಜ್‌

Profile Sushmitha Jain Mar 28, 2025 12:03 PM

ಲಕ್ನೋ : ಇತ್ತೀಚಿಗೆ ಮೀರಠ್‌ನಲ್ಲಿ ಪತ್ನಿ ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಲೆಗೈದು 15 ತುಂಡುಗಳಾಗಿ ಕತ್ತರಿಸಿ ಸಿಮೆಂಟ್‌ ಇದ್ದ ಡ್ರಮ್‌ನೊಳಗೆ ತುಂಬಿಸಿಟ್ಟಿದ್ದಳು. ಈ ಕೊಲೆ ದೇಶದಾದ್ಯಂತ ಸುದ್ದಿಯಾಗಿತ್ತು. ಈ ಘಟನೆ ಸೇರಿದಂತೆ, ಇತ್ತೀಚಿಗೆ ಇನ್ನೂ ಹಲವು ಪ್ರಕರಣಗಳಲ್ಲಿ(Crime News) ಪತ್ನಿಯರು ತಮ್ಮ ಗಂಡನನ್ನು ಕೊಲ್ಲಲು ವಿಚಿತ್ರ ವಿಧಾನಗಳನ್ನು ಅನುಸರಿಸುತ್ತಿರುವುದು ಕಂಡುಬಂದಿದೆ. ಇಂತಹುದೆ ಮತ್ತೊಂದು ಘಟನೆಗೆ ಉತ್ತರ ಪ್ರದೇಶ(Uttar Pradesh)ದ ಮುಜಫ್ಫರ್‌ನಗರ(Muzaffarnagar) ಸಾಕ್ಷಿಯಾಗಿದೆ. ಇಲ್ಲಿನ ಭಂಗೇಲಾ(Bhangela village) ಎಂಬ ಗ್ರಾಮದಲ್ಲಿ ವಾಸಿಸುತ್ತಿದ್ದ ಶಾನೋ ಎಂಬ ಮಹಿಳೆ ತನ್ನ ಪತಿ ಅನುಜ್‌ಗೆ ಕಾಫಿಯಲ್ಲೇ ವಿಷ ಹಾಕಿ(Mixing Poison In Coffee) ನೀಡಿದ್ದು ಈಗ ಎಲ್ಲೆಡೆ ಸುದ್ದಿಯಾಗಿದೆ. ಈ ಬಗ್ಗೆ ಅನುಜ್‌ ಸಹೋದರಿ ಪೊಲೀಸರಿಗೆ ದೂರು ನೀಡಿದ್ದು, ತನ್ನ ಸ್ವಂತ ಅತ್ತಿಗೆಯ ವಿರುದ್ಧವೇ ಆಘಾತಕಾರಿ ಆರೋಪಗಳನ್ನು ಮಾಡಿದ್ದಾರೆ.

ಮೂರು ವರ್ಷದ ಹಿಂದೆ ನಡೆದಿದ್ದ ವಿವಾಹ:

ಮೂಲತಃ ಫಾರೂಕಾಬಾದ್‌ನ ನಿವಾಸಿಯಾಗಿದ್ದ ಶಾನೋ ಅವರನ್ನು ಅನುಜ್‌ ಅವರು ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದರು. ಮದುವೆಯ ನಂತರ ಶಾನೋ ಅನುಜ್‌ ಕುಟುಂಬದೊಂದಿಗೆ ಹೊಂದಿಕೊಂಡು ಹೋಗುವ ಪ್ರಯತ್ನವನ್ನೇ ಮಾಡಿಲ್ಲ. ಬದಲಾಗಿ, ಅನುಕ್‌ ಮಾತ್ರವಲ್ಲದೇ ಆತನ ಕುಟುಂಬಸ್ಥರಿಗೂ ಎಷ್ಟು ಸಾಧ್ಯವೋ ಅಷ್ಟು ತೊಂದರೆ ನೀಡುತ್ತಿದ್ದರು ಎಂದು ಅನುಜ್‌ ಸಹೋದರಿ ಮೀನಾಕ್ಷಿ ಹೇಳಿದ್ದಾರೆ.

ಇನ್ನು ದಂಪತಿ ನಡುವೆಯೂ ಪದೇ ಪದೇ ಜಗಳ ನಡೆಯುತ್ತಿದ್ದದ್ದು ಅವರ ವೈವಾಹಿಕ ಜೀವನ ಸುಖಕರವಾಗಿಲ್ಲ ಎಂಬುದನ್ನು ಎತ್ತಿ ತೋರಿಸಿತ್ತು. ಈ ಜಗಳಗಳು ತಾರಕಕ್ಕೇರಿ, ಕೊನೆಗೆ ಅನುಜ್‌ ಜೀವವನ್ನೇ ತೆಗೆಯಲು ನಿರ್ಧರಿಸಿದ ಶಾನೊ, ಮಾರ್ಚ್‌ 25ರಂದು ಕಾಫಿಯಲ್ಲಿ ವಿಷ ಹಾಕಿ ಅನುಜ್‌ಗೆ ಕುಡಿಯಲು ಕೊಟ್ಟಿದ್ದಾಳೆ.



ವಿಷ ಬೆರೆಸಿದ ಕಾಫಿ ಕುಡಿದ ತಕ್ಷಣ ಅನುಜ್‌ ಆರೋಗ್ಯ ತೀವ್ರವಾಗಿ ಹದೆಗೆಟ್ಟಿದ್ದು, ಅವರನ್ನು ಮೀರತ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಯಲ್ಲಿ ಪರಿಶೀಲನೆ ನಡೆಸಿದ ವೈದ್ಯರು, ಅನುಜ್‌ ಹೊಟ್ಟೆಗೆ ವಿಷ ಸೇರಿರುವುದನ್ನು ದೃಢಪಡಿಸಿದರು. ಆಸ್ಪತ್ರೆಗೆ ದಾಖಲಾಗಿ ಇಂದಿಗೆ ಮೂರು ದಿನಗಳಾಗಿದ್ದರೂ, ಅನುಜ್‌ ಸ್ಥಿತಿ ಗಂಭೀರವಾಗಿಯೇ ಇದೆ. ಅವರ ಚಿಕಿತ್ಸೆ ಮುಂದುವರಿಯುತ್ತಲಿದೆ.

ಈ ಸುದ್ದಿಯನ್ನು ಓದಿ: Viral Video: ಟರ್ಕಿಯಲ್ಲಿ ಸರ್ಕಾರದ ವಿರುದ್ಧ ಬೃಹತ್‌ ಪ್ರತಿಭಟನೆ; ಪೊಲೀಸರ ಹೊಡೆತಕ್ಕೆ ಹೆದರಿ ಓಡಿ ಹೋದ ಪಿಕಾಚು ವೇಶಧಾರಿ, ವಿಡಿಯೋ ವೈರಲ್‌

ನ್ಯಾಯಕ್ಕಾಗಿ ಸಹೋದರಿಯ ಅಳಲು:

ಅನುಜ್‌ ಸಹೋದರಿ ಮೀನಾಕ್ಷಿ, ತನ್ನ ಅಣ್ಣನ ಜೀವನದಲ್ಲಿ ನಡೆದ ಅನ್ಯಾಯವನ್ನು ಪ್ರಶ್ನಿಸಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. ತನ್ನ ಅತ್ತಿಗೆಯನ್ನು ಬಂಧಿಸಿ ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ವಿನಂತಿಸಿದ್ದಾರೆ. ಘಟನೆ ಸಂಬಂಧ ದೂರು ದಾಖಲಾದ ಬೆನ್ನಲ್ಲೇ ಪೊಲೀಸರು ತನಿಖೆ ಆರಂಭಿಸಿದ್ದು, ಸಾಕ್ಷ್ಯಗಳನ್ನು ಸಂಗ್ರಹಿಸಲು ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್‌ ಅಧಿಕಾರಿಗಳು ಹೇಳಿದ್ದು, ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ. ಇನ್ನು, ತನಿಖೆ ನಡೆಸಿದ ನಂತರವೇ ಅನುಜ್‌ ಪತ್ನಿ ಶಾನೋ ಅವರು ಹೀಗೆ ಮಾಡಲು ಕಾರಣವೇನು ಎಂಬುದನ್ನು ಬಹಿರಂಗಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.



ಮೀರತ್‌ ಘಟನೆ ನಡೆದ ಕೆಲವೇ ದಿನಗಳ ಬಳಿಕ ಶಾನೋ ಪ್ರಕರವಣವೂ ಬೆಳಕಿಗೆ ಬಂದಿದ್ದು, ಸಂಪೂರ್ಣ ಉತ್ತರ ಪ್ರದೇಶವನ್ನು ಬೆಚ್ಚಿಬೀಳಿಸಿದೆ. ಈ ಪ್ರಕರಣದಲ್ಲಿ ಶಾನೋ ಯತ್ನ ಸಂಪೂರ್ಣವಾಗಿ ಸಫಲವಾಗಿಲ್ಲವಾದರೂ, ಅನುಜ್‌ ಇನ್ನೂ ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾರೆ.

◆ Words: 188 ◆ Characters: 1589