Viral Video: ಟರ್ಕಿಯಲ್ಲಿ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ; ಪೊಲೀಸರ ಹೊಡೆತಕ್ಕೆ ಹೆದರಿ ಓಡಿ ಹೋದ ಪಿಕಾಚು ವೇಶಧಾರಿ, ವಿಡಿಯೋ ವೈರಲ್
ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರ ಪರಮ ವಿರೋಧಿ ಎಂದು ಪರಿಗಣಿಸಲಾದ ಮೇಯರ್ ಎಕ್ರೆಮ್ ಇಮಾಮೊಗ್ಲು ಅವರ ಬಂಧನದಿಂದಾಗಿ ದೇಶದಲ್ಲಿ ದೊಡ್ಡ ಪ್ರಮಾಣದ ಪ್ರತಿಭಟನೆ ನಡೆಯುತ್ತಿದೆ. ಇಸ್ತಾನ್‌ಬುಲ್‌ನ ನ್ಯಾಯಾಲಯವು ಭಾನುವಾರ ಇಮಾಮೊಗ್ಲು ಮತ್ತು ಕನಿಷ್ಠ 20 ಜನರನ್ನು ಭ್ರಷ್ಟಾಚಾರ ತನಿಖೆಯ ಭಾಗವಾಗಿ ಜೈಲಿಗೆ ಹಾಕಲಾಗಿದೆ ಎಂದು ಹೇಳಿದೆ.


ಇಸ್ತಾನ್‌ಬುಲ್: ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರ ಪರಮ ವಿರೋಧಿ ಎಂದು ಪರಿಗಣಿಸಲಾದ ಮೇಯರ್ ಎಕ್ರೆಮ್ ಇಮಾಮೊಗ್ಲು ಅವರ ಬಂಧನದಿಂದಾಗಿ ದೇಶದಲ್ಲಿ ದೊಡ್ಡ ಪ್ರಮಾಣದ ಪ್ರತಿಭಟನೆ ನಡೆಯುತ್ತಿದೆ. ಇಸ್ತಾನ್‌ಬುಲ್‌ನ ನ್ಯಾಯಾಲಯವು ಭಾನುವಾರ ಇಮಾಮೊಗ್ಲು ಮತ್ತು ಕನಿಷ್ಠ 20 ಇತರರನ್ನು ಭ್ರಷ್ಟಾಚಾರ ತನಿಖೆಯ ಭಾಗವಾಗಿ ಜೈಲಿಗೆ ಹಾಕಲಾಗಿದೆ ಎಂದು ಹೇಳಿದೆ. ಸದ್ಯ ಈ ಕುರಿತು ನಡೆಯುತ್ತಿರುವ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಹಾಸ್ಯಾಸ್ಪದ ಘಟನೆಯೊಂದು ನಡೆದಿದೆ. ಪ್ರತಿಭಟನೆ ನಡೆಸುತ್ತಿದ್ದವರ ಜೊತೆ ಪಿಕಾಚು ವೇಶಧಾರಿ ಕೂಡ ಪೊಲೀಸರ ಭಯಕ್ಕೆ ಓಡೀ ಹೋಗಿರುವುದು ಕಂಡು ಬಂದಿದೆ. ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ (Viral Video) ವೈರಲ್ ಆಗಿದೆ .
ಬಂಧನದ ವಿರುದ್ಧ ನಡೆದ ಸಾಮೂಹಿಕ ಪ್ರತಿಭಟನೆಗಳು ನಡೆಯುತ್ತಿದ್ದವು. ಅವರನ್ನು ನಿಯಂತ್ರಿಸಲು ಪೊಲೀಸರು ಜಲ ಫಿರಂಗಿಗಳನ್ನು ಬಳಸಿದ್ದಾರೆ. ಮಾರ್ಚ್ 27 ರ ಮುಂಜಾನೆ ಬಂಧನದಿಂದ ತಪ್ಪಿಸಿಕೊಳ್ಳಲು ಕಾರ್ಯಕರ್ತ ತನ್ನ ಪೋಕ್ಮನ್- ಉಡುಪಿನಲ್ಲಿ ಓಡುತ್ತಿರುವುದು ಕಂಡು ಬಂದಿದೆ. ಕಳೆದ ವಾರ ಭ್ರಷ್ಟಾಚಾರ ತನಿಖೆಯ ಭಾಗವಾಗಿ ಅಧ್ಯಕ್ಷ ಎರ್ಡೊಗನ್ ಅವರ ಪ್ರಮುಖ ಪ್ರತಿಸ್ಪರ್ಧಿ ಮೇಯರ್ ಎಕ್ರೆಮ್ ಇಮಾಮೊಗ್ಲು ಅವರನ್ನು ಬಂಧಿಸಿದಾಗಿನಿಂದ ಸುಮಾರು 2,000 ಜನರನ್ನು ಬಂಧಿಸಲಾಗಿದೆ .
Having been quick on his tiny little feet last night, Pikachu managed to evade arrest and is back on streets tonight to lead the anti-Erdogan protests.
— Visegrád 24 (@visegrad24) March 27, 2025
The crowd will go wherever Pikachu tells them to go.
🇹🇷🇯🇵 pic.twitter.com/ZikdIlAbLr
ಇಮಾಮೊಗ್ಲು ಮತ್ತು ಅವರ ಸಲಹೆಗಾರ ಸೇರಿದಂತೆ ಇತರ 20 ಜನರ ಬಂಧನವನ್ನು ಖಂಡಿಸಿ ಟರ್ಕಿಯಾದ್ಯಂತ ನಡೆದ ಪ್ರತಿಭಟನೆಗಳು ಜಾಗತಿಕ ಗಮನ ಸೆಳೆದಿದ್ದರೂ, ಸರ್ಕಾರ ಇದನ್ನು ಪೂರ್ವಾಗ್ರಹ ಪೀಡಿತ ಎಂದು ಹೇಳಿದೆ.ಕಳೆದ 25 ವರ್ಷಗಳಿಂದ ಎರ್ಡೋಗನ್ ಪಕ್ಷದ ಭದ್ರಕೋಟೆಯಾಗಿದ್ದ ಇಸ್ತಾನ್‌ಬುಲ್ ಅನ್ನು ಇಮಾಮೊಗ್ಲು ಪಕ್ಷವು 2019 ರಲ್ಲಿ ವಶಪಡಿಸಿಕೊಂಡಾಗ ಟರ್ಕಿಯ ಆಡಳಿತ ವ್ಯವಸ್ಥೆಗೆ ಇಮಾಮೊಗ್ಲು ಮೊದಲ ಬಾರಿಗೆ ದೊಡ್ಡ ಹೊಡೆತ ನೀಡಿದರು. ಪುರಸಭೆ ಚುನಾವಣೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ, ಎರ್ಡೋಗನ್ ಸರ್ಕಾರ ಟರ್ಕಿಯ ಅತಿದೊಡ್ಡ ನಗರದಲ್ಲಿ ಮರುಚುನಾವಣೆಗೆ ಕರೆ ನೀಡಿತ್ತು. ವರ್ಷಗಳ ನಂತರ, ಇಮಾಮೊಗ್ಲು ಭ್ರಷ್ಟಾಚಾರದ ಆರೋಪಗಳನ್ನು ಮತ್ತು "ಭಯೋತ್ಪಾದಕ ಸಂಘಟನೆಯನ್ನು ಬೆಂಬಲಿಸುವ" ಆರೋಪಗಳನ್ನು ಎದುರಿಸುತ್ತಿದ್ದಾರೆ. ಅವರ ಜೈಲು ಶಿಕ್ಷೆಯನ್ನು 2028 ಕ್ಕೆ ನಿಗದಿಯಾಗಿರುವ ಮುಂದಿನ ಅಧ್ಯಕ್ಷೀಯ ಸ್ಪರ್ಧೆಯಿಂದ ಪ್ರಮುಖ ಅಭ್ಯರ್ಥಿಯನ್ನು ತೆಗೆದುಹಾಕುವ ರಾಜಕೀಯ ನಡೆ ಎಂದು ಪರಿಗಣಿಸಲಾಗುತ್ತಿದೆ.
ಈ ಸುದ್ದಿಯನ್ನೂ ಓದಿ: Syria Conflict : ಸಿರಿಯಾದಲ್ಲಿ ಭೀಕರ ಸಂಘರ್ಷ : 2 ದಿನದಲ್ಲಿ 1,000 ಕ್ಕೂ ಅಧಿಕ ಮಂದಿ ಸಾವು
ಶನಿವಾರ ರಾತ್ರಿ ಇಸ್ತಾನ್‌ಬುಲ್‌ನಲ್ಲಿ ಕನಿಷ್ಠ 300,000 ಜನರು ಪ್ರತಿಭಟನೆ ನಡೆಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ ಎಂದು ವರದಿಗಳು ಸೂಚಿಸುತ್ತವೆ. ಆದರೆ, ವಿರೋಧ ಪಕ್ಷವು ಈ ಸಂಖ್ಯೆ ಸುಮಾರು ಒಂದು ಮಿಲಿಯನ್ ಎಂದು ಹೇಳಿಕೊಂಡಿದೆ.