ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ದೆಹಲಿ ಸ್ಫೋಟ: ಸಂಚುಗಾರರ ಮೊಬೈಲ್‌ನಲ್ಲಿ ಪತ್ತೆಯಾಯಿತು ಸ್ಪೋಟಕ ಮಾಹಿತಿ

ದೆಹಲಿಯ ಕೆಂಪು ಕೋಟೆಯ ಬಳಿ ಕಳೆದ ತಿಂಗಳು ನಡೆದ ಕಾರು ಬಾಂಬ್ ಸ್ಪೋಟದ ಸಂಚಿನ ಹಿಂದೆ ಹಮಾಸ್ ಕೈವಾಡವಿತ್ತೇ? ಎನ್ನುವ ಶಂಕೆ ವ್ಯಕ್ತವಾಗಿದೆ. ಯಾಕೆಂದರೆ ಸಹ ಸಂಚುಗಾರನ ಮೊಬೈಲ್‌ನಲ್ಲಿ ಅನೇಕ ಸ್ಪೋಟಕ ಮಾಹಿತಿಗಳು ಲಭ್ಯವಾಗಿದೆ. ಹಮಾಸ್ ಮಾದರಿಯ ಡ್ರೋನ್ ಚಿತ್ರಗಳು ಸೇರಿದಂತೆ ಹಲವಾರು ವಿಡಿಯೊಗಳು ತನಿಖಾಧಿಕಾರಿಗಳಿಗೆ ಲಭ್ಯವಾಗಿದೆ.

ದೆಹಲಿ ಸ್ಪೋಟದ ಸಂಚಿನ ಹಿಂದಿತ್ತೇ ಹಮಾಸ್ ಕೈವಾಡ?

(ಸಂಗ್ರಹ ಚಿತ್ರ) -

ನವದೆಹಲಿ: ಕೆಂಪುಕೋಟೆಯ (Redfort) ಬಳಿ ಕಳೆದ ನವೆಂಬರ್ ತಿಂಗಳ ಆರಂಭದಲ್ಲಿ ನಡೆದ ಕಾರು ಬಾಂಬ್ ಸ್ಫೋಟ (bomb blast) ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿರುವ ಸಹ ಸಂಚುಕೋರನ ಮೊಬೈಲ್‌ನಲ್ಲಿ ಅನೇಕ ಸ್ಪೋಟಕ ಮಾಹಿತಿಗಳು ಲಭ್ಯವಾಗಿವೆ. ಹಮಾಸ್ (Hamas) ಮಾದರಿಯ ಡ್ರೋನ್ ಚಿತ್ರಗಳೊಂದಿಗೆ ರಾಕೆಟ್ ಲಾಂಚರ್ (Rocket launchers) ಗಳ ಚಿತ್ರ, ವಿಡಿಯೊಗಳು ತನಿಖಾಧಿಕಾರಿಗಳಿಗೆ ಲಭ್ಯವಾಗಿದೆ. ದೆಹಲಿ ಸ್ಫೋಟದ ಸಹ-ಸಂಚುಗಾರ ಜಾಸಿರ್ ಬಿಲಾಲ್ ವಾನಿ ಅಲಿಯಾಸ್ ಡ್ಯಾನಿಶ್ ನ ಮೊಬೈಲ್‌ನಲ್ಲಿ ಅಳಿಸಿ ಹಾಕಿರುವ ಫೋಲ್ಡರ್ ನಲ್ಲಿ ಈ ಎಲ್ಲಾ ಮಾಹಿತಿಗಳು ಲಭ್ಯವಾಗಿರುವುದಾಗಿ ತಿಳಿದು ಬಂದಿದೆ.

ಜಾಸಿರ್ ಬಿಲಾಲ್ ವಾನಿ ಅಲಿಯಾಸ್ ಡ್ಯಾನಿಶ್ ನ ಮೊಬೈಲ್ ಅನ್ನು ಪರಿಶೀಲಿಸಿರುವ ತನಿಖಾಧಿಕಾರಿಗಳಿಗೆ ಡ್ರೋನ್ ಚಿತ್ರಗಳು ಲಭ್ಯವಾಗಿದ್ದು, ಇದು ಹಮಾಸ್ ಮಾದರಿಯಲ್ಲಿದೆ. ಡ್ಯಾನಿಶ್ ತನ್ನ ಮೊಬೈಲ್ ನಲ್ಲಿದ್ದ ಹಮಾಸ್ ಶೈಲಿಯ ಶಸ್ತ್ರಾಸ್ತ್ರ ಹೊಂದಿರುವ ಡ್ರೋನ್‌ಗಳ ಬಳಕೆಗೆ ಸಂಬಂಧಿಸಿದ ಪುರಾವೆಗಳನ್ನು ತೆಗೆದುಹಾಕಿದ್ದೇನೆ ಎಂದು ಭಾವಿಸಿದ್ದನು. ಆದರೆ ಇದನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ ತನಿಖಾಧಿಕಾರಿಗಳು ಪತ್ತೆ ಮಾಡಿದ್ದಾರೆ.

ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯ್‌ನ ಮಾಜಿ ಸಹಾಯಕನ ಗುಂಡಿಕ್ಕಿ ಹತ್ಯೆ

ಫೋನ್‌ನಲ್ಲಿ ಅಳಿಸಿ ಹಾಕಿರುವ ಫೋಲ್ಡರ್‌ನಲ್ಲಿ ಡ್ರೋನ್‌ ಮತ್ತು ರಾಕೆಟ್ ಲಾಂಚರ್‌ಗಳ ಡಜನ್ ಗಟ್ಟಲೆ ಚಿತ್ರಗಳು ಮತ್ತು ವಿಡಿಯೊಗಳು ಸಿಕ್ಕಿವೆ. ಇದರಲ್ಲಿ ಡ್ರೋನ್‌ಗಳಲ್ಲಿ ಸ್ಫೋಟಕಗಳನ್ನು ಹೇಗೆ ಇಡುವುದು ಎಂಬುದರ ಕುರಿತಾದ ವಿಡಿಯೊಗಳು ಕೂಡ ಇವೆ. ಇದನ್ನು ಸಹ-ಸಂಚುಗಾರನಿಗೆ ಕಳುಹಿರುವ ದಾಖಲೆಗಳು ಕೂಡ ಲಭ್ಯವಾಗಿದೆ.

ಆತನ ಫೋನ್ ನಲ್ಲಿ ಕೆಲವು ವಿದೇಶಿ ನಂಬರ್ ಗಳು ಕೂಡ ಲಭ್ಯವಾಗಿವೆ. ಭಯೋತ್ಪಾದಕರು ಸುಮಾರು 25 ಕಿಲೋ ಮೀಟರ್‌ ದೂರದವರೆಗೆ ಸಾಗಬಹುದಾದ ಡ್ರೋನ್‌ಗಳನ್ನು ತಯಾರಿಸಲು ನೋಡುತ್ತಿದ್ದರು. ಹಮಾಸ್ ಬಳಸುವಂತೆ ಗ್ಲೈಡಿಂಗ್ ರಾಕೆಟ್‌ಗಳನ್ನು ಮಾಡ್ಯೂಲ್ ಕುರಿತು ಇವರು ಅಧ್ಯಯನ ಮಾಡಿದ್ದಾರೆ ಎಂಬುದನ್ನು ತನಿಖಾಧಿಕಾರಿಗಳು ದೃಢಪಡಿಸಿದ್ದಾರೆ.

ಡ್ಯಾನಿಶ್ ಮೊಬೈಲ್ ನಲ್ಲಿ ಲಭ್ಯವಾಗಿರುವ ಡ್ರೋನ್ ಮಾದರಿಗಳು ಕಡಿಮೆ ವೆಚ್ಚದ ನೆಲ ಅಥವಾ ಕೈಯಿಂದ ಹಾರಿಸಬಹುದಾಗಿದೆ ಎಂದು

ಡ್ರೋನ್ ಮತ್ತು ಡ್ರೋನ್ ವಿರೋಧಿ ಉತ್ಪಾದನಾ ಕಂಪೆನಿಯಾದ ಇಂಡೋವಿಂಗ್ಸ್‌ನ ಸಿಇಒ ಮತ್ತು ಸಂಸ್ಥಾಪಕ ಪರಾಸ್ ಜೈನ್ ತಿಳಿಸಿದ್ದಾರೆ.

ಇದರಲ್ಲಿದ್ದ ಒಂದು ರಾಕೆಟ್ ಅನ್ನು 20 ಸೆಕೆಂಡುಗಳಲ್ಲಿ ಉಡಾಯಿಸಬಹುದು ಮತ್ತು ಮೂರನ್ನು ಒಂದು ನಿಮಿಷದೊಳಗೆ ಹಾರಿಸಬಹುದು. ಹಮಾಸ್ ಇಂತಹ ರಾಕೆಟ್‌ಗಳನ್ನು ಬೃಹತ್ ಪ್ರಮಾಣದಲ್ಲಿ ಬಳಸುತ್ತದೆ. ಯಾಕೆಂದರೆ ಅವು ಹೆಚ್ಚು ವೇಗವಾಗಿ ವಿಶಾಲವಾದ ಪ್ರದೇಶಕ್ಕೆ ಹಾನಿಯನ್ನು ಉಂಟು ಮಾಡುತ್ತದೆ ಎಂದು ಅವರು ತಿಳಿಸಿದ್ದಾರೆ.

Bengaluru Fraud Case: ಲೈಂಗಿಕ ಸಮಸ್ಯೆ ಪರಿಹರಿಸುವೆ ಎಂದು ಟೆಕ್ಕಿಗೆ 48 ಲಕ್ಷ ವಂಚಿಸಿದ್ದ ವಿಜಯ್ ಗುರೂಜಿ ಅರೆಸ್ಟ್‌

ಡ್ಯಾನಿಶ್ ಯಾರು?

ಭಯೋತ್ಪಾದಕ ದಾಳಿ ನಡೆಸಲು ತಾಂತ್ರಿಕ ಬೆಂಬಲ ನೀಡಿರುವ ಡ್ಯಾನಿಶ್ ಕೆಮರಾಗಳ ಜೊತೆಗೆ ಭಾರವಾದ ಬಾಂಬ್‌ಗಳನ್ನು ಹೊತ್ತೊಯ್ಯಬಲ್ಲ ದೊಡ್ಡ ಬ್ಯಾಟರಿಗಳನ್ನು ಅಳವಡಿಸಲಾದ ಶಕ್ತಿಯುತ ಡ್ರೋನ್‌ಗಳನ್ನು ತಯಾರಿಸಲು ಪ್ರಯತ್ನಿಸಿದ್ದಾನೆ. ಸಣ್ಣ, ಶಸ್ತ್ರಸಜ್ಜಿತ ಡ್ರೋನ್‌ಗಳನ್ನು ತಯಾರಿಸುವಲ್ಲಿ ಆತನಿಗೆ ಅನುಭವವಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.