ಜನಾಂಗೀಯ ನಿಂದನೆ ಖಂಡಿಸಿದ್ದೇ ತಪ್ಪಾಯ್ತಾ? ಬಿಎಸ್‌ಎಫ್ ಸೈನಿಕನ ಮಗನನ್ನು ಕೊಂದ ಕುಡುಕರು!
ಖರೀದಿಗಾಗಿ ಸಹೋದರನೊಂದಿಗೆ ಮಾರುಕಟ್ಟೆಗೆ ಬಂದಿದ್ದ ಬಿಎಸ್‌ಎಫ್ ಸೈನಿಕನ ಮಗನನ್ನು ಕೆಲವು ಕುಡುಕರು ಚಾಕುವಿನಿಂದ ಇರಿದಿರುವ ಘಟನೆ ಡೆಹ್ರಾಡೂನ್ ನ ತ್ರಿಪುರಾದಲ್ಲಿ ನಡೆದಿದೆ. ಜನಾಂಗೀಯ ನಿಂದನೆಗೆ ಎಂಬಿಎ ವಿದ್ಯಾರ್ಥಿಯಾಗಿರುವ ಎಸ್‌ಎಫ್ ಸೈನಿಕನ ಮಗ ಆಕ್ಷೇಪ ವ್ಯಕ್ತಪಡಿಸಿದ್ದಕ್ಕಾಗಿ ಚಾಕುವಿನಿಂದ ಇರಿಯಲಾಗಿದೆ. ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿ ಹದಿನೈದು ದಿನಗಳ ಬಳಿಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಘಟನೆಗೆ ಸಂಬಂಧಿಸಿ ಐವರನ್ನು ಬಂಧಿಸಲಾಗಿದೆ.
(ಸಂಗ್ರಹ ಚಿತ್ರ) -
ಡೆಹ್ರಾಡೂನ್: ಜನಾಂಗೀಯ ನಿಂದನೆಗೆ (Racial Abuse) ಆಕ್ಷೇಪ ವ್ಯಕ್ತಪಡಿಸಿದ ಬಿಎಸ್‌ಎಫ್ (BSF) ಸೈನಿಕನ ಮಗನನ್ನು ಕುಡುಕರು ಚಾಕುವಿನಿಂದ ಇರಿದು ಕೊಂದಿರುವ ಘಟನೆ ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್‌ನಲ್ಲಿ (Dehradun) ನಡೆದಿದೆ. ಚಾಕು ಇರಿತಕ್ಕೆ ಒಳಗಾದ ತ್ರಿಪುರಾದ (tripura) 24 ವರ್ಷದ ಎಂಬಿಎ ವಿದ್ಯಾರ್ಥಿಯಾಗಿರುವ (MBA student) ಬಿಎಸ್‌ಎಫ್ ಸೈನಿಕನ ಮಗ ಸಾವು ಬದುಕಿನ ನಡುವೆ ಹೋರಾಡಿ 15 ದಿನಗಳ ಅನಂತರ ಗುರುವಾರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಮೃತ ಯುವಕನನ್ನು ಏಂಜಲ್ ಚಕ್ಮಾ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೋರ್ವ ಆರೋಪಿಯನ್ನು ನೇಪಾಳಿ ಪ್ರಜೆ ಎಂದು ಗುರುತಿಸಲಾಗಿದ್ದು, ಆತ ದೇಶದ ಗಡಿ ದಾಟಿ ತಪ್ಪಿಸಿಕೊಂಡಿದ್ದಾನೆ.
ಏಂಜಲ್ ಚಕ್ಮಾ ಅವರ ಸಹೋದರ ಮೈಕೆಲ್ ನೀಡಿರುವ ದೂರಿನ ಪ್ರಕಾರ, ಅವರಿಬ್ಬರು ಡಿಸೆಂಬರ್ 9ರಂದು ಸಂಜೆ ಮಾರುಕಟ್ಟೆಗೆ ಹೋಗಿದ್ದರು. ಈ ಸಂದರ್ಭದಲ್ಲಿ ಅವರು ಕೆಲವು ಗೃಹೋಪಯೋಗಿ ವಸ್ತುಗಳನ್ನು ಖರೀದಿಸುತ್ತಿದ್ದಾಗ ಕೆಲವು ಕುಡುಕರು ಇವರನ್ನು ಉದ್ದೇಶಿಸಿ ಜಾತಿ ಆಧಾರಿತವಾಗಿ ನಿಂದನೆ ಮಾಡಿದ್ದಾರೆ. ಇದಕ್ಕೆ ಚಕ್ಮಾ ಆಕ್ಷೇಪ ವ್ಯಕ್ತಪಡಿಸಿದಾಗ ಅವನ ಮೇಲೆ ಕುಡುಕರು ದಾಳಿ ನಡೆಸಿ ಚಾಕುವಿನಿಂದ ಇರಿದಿದ್ದಾರೆ. ರಾಡ್‌ನಿಂದ ಹಲ್ಲೆ ನಡೆಸಿದ್ದಾರೆ. ತಮ್ಮ ಮೇಲೂ ದಾಳಿ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ. ಈ ಕುರಿತು ಡಿಸೆಂಬರ್ 12 ರಂದು ಭಾರತೀಯ ನ್ಯಾಯ ಸಂಹಿತಾ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ.
Anjel Chakma
— ︎ ︎venom (@venom1s) December 26, 2025
> 24 year old MBA student from Tripura
> He was studying at Jigyasa University, Dehradun, Uttarakhand
> His father is a BSF constable
> On December 9, he went to buy vegetables with his brother, Michael Chakma
> A group of people called him racial slurs, and when he… pic.twitter.com/6HeKnaUMqH
ಭಯೋತ್ಪಾದಕ ಬೆದರಿಕೆ; ಭಾರತೀಯ ಮೂಲದ ವಿದ್ಯಾರ್ಥಿ ಬಂಧನ
ಗಂಭೀರ ಸ್ಥಿತಿಯಲ್ಲಿದ್ದ ಏಂಜಲ್ ಚಕ್ಮಾನನ್ನು ಗ್ರಾಫಿಕ್ ಎರಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡೆಹ್ರಾಡೂನ್ ನ ಖಾಸಗಿ ವಿಶ್ವವಿದ್ಯಾಲಯವೊಂದರಲ್ಲಿ ಎಂಬಿಎ ವಿದ್ಯಾರ್ಥಿಯಾಗಿರುವ ಏಂಜಲ್ ತಲೆ ಮತ್ತು ಕುತ್ತಿಗೆಯಲ್ಲಿ ಆಳವಾದ ಗಾಯಗಳಾಗಿದ್ದು, ಆತ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಆರೋಪಿಗಳು ತಮ್ಮ ಮೇಲೆ ಮತ್ತೊಮ್ಮೆ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಮೈಕೆಲ್ ದೂರಿನಲ್ಲಿ ತಿಳಿಸಿದ್ದಾರೆ.
ಸೆಲಾಕಿಯಲ್ಲಿರುವ ಮದ್ಯದ ಅಂಗಡಿಯಿಂದ ಮದ್ಯ ಖರೀದಿಸುವಾಗ ದೂರುದಾರ ಮತ್ತು ಆತನ ಸಹೋದರನ ನಡುವೆ ವಾಗ್ವಾದ ನಡೆದಿತ್ತು ಎಂದು ಆರೋಪಿಗಳು ವಿಚಾರಣೆ ವೇಳೆ ತಿಳಿಸಿದ್ದಾರೆ. ಬಂಧಿತ ಆರೋಪಿಗಳನ್ನು ಅವಿನಾಶ್ ನೇಗಿ, ಶೌರ್ಯ ರಜಪೂತ್, ಸೂರಜ್ ಖ್ವಾಸ್, ಸುಮಿತ್ ಮತ್ತು ಆಯುಷ್ ಬಡೋನಿ ಎಂದು ಗುರುತಿಸಲಾಗಿದ್ದು, ಇವರನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ ಎಂದು ಹಿರಿಯ ಸಬ್-ಇನ್ಸ್‌ಪೆಕ್ಟರ್ ಜಿತೇಂದರ್ ಕುಮಾರ್ ತಿಳಿಸಿದ್ದಾರೆ.
Harassment: ಬೆಂಗಳೂರಿನ ರಸ್ತೆಯಲ್ಲಿ ಬೈಕ್ ಚಲಾಯಿಸುತ್ತಿದ್ದ ಯುವತಿಗೆ ಪುಂಡರಿಂದ ಕಿರುಕುಳ
ಈಶಾನ್ಯದಲ್ಲಿ ನಿಯೋಜನೆಗೊಂಡಿರುವ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸೈನಿಕರಾಗಿರುವ ಏಂಜಲ್ ಅವರ ತಂದೆ, ಯುವಕನ ಮೃತ ದೇಹವನ್ನು ಅಂತಿಮ ಸಂಸ್ಕಾರಕ್ಕಾಗಿ ತಮ್ಮ ಊರಿಗೆ ತೆಗೆದುಕೊಂಡು ಹೋಗಿದ್ದಾರೆ.