MLC Election 2026: ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ: ಪಾವಗಡದಲ್ಲಿ ಶೇ.73.06 ಮತದಾನ
Pavagada News: ಆಗ್ನೇಯ ಪದವೀಧರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಯಲ್ಲಿ ಪಾವಗಡ ತಾಲೂಕಿನಲ್ಲಿ ಶೇ.73.06ರಷ್ಟು ಮತದಾನವಾಗಿದೆ. ತಾಲೂಕಿನ ಒಟ್ಟು 4,733 ಮತದಾರರ ಪೈಕಿ 3,458 ಮಂದಿ ತಮ್ಮ ಹಕ್ಕು ಚಲಾಯಿಸಿದ್ದು, 1,275 ಮಂದಿ ಮತದಾನ ಮಾಡಿಲ್ಲ.
-
ಪಾವಗಡ, ಅ.23: ಆಗ್ನೇಯ ಪದವೀಧರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಯಲ್ಲಿ ಪಾವಗಡ ತಾಲೂಕಿನಲ್ಲಿ ಶೇ.73.06ರಷ್ಟು ಮತದಾನವಾಗಿದೆ. ತಾಲೂಕಿನ (Pavagada News) ಒಟ್ಟು 4,733 ಮತದಾರರ ಪೈಕಿ 3,458 ಮಂದಿ ತಮ್ಮ ಹಕ್ಕು ಚಲಾಯಿಸಿದ್ದು, 1,275 ಮಂದಿ ಮತದಾನ ಮಾಡಿಲ್ಲ.
ಪಾವಗಡ ತಾಲೂಕಿನ ವಿವಿಧ ಹೋಬಳಿಗಳಲ್ಲಿ ನಡೆದ ಮತದಾನದ ವಿವರ
- ಕಸಬಾ ಹೋಬಳಿ: 1,320 ಮತಗಳು (ಶೇ.27.89)
- ವೈ.ಎನ್.ಹೊಸಕೋಟೆ ಹೋಬಳಿ: 1,005 ಮತಗಳು (ಶೇ.21.23)
- ಮಂಗಳವಾಡ ಹೋಬಳಿ: 627 ಮತಗಳು (ಶೇ.13.25)
- ನಾಗಲಮಡಿಕೆ ಹೋಬಳಿ: 506 ಮತಗಳು (ಶೇ.10.69)
ಬೆಳಗ್ಗೆಯಿಂದ ಚುರುಕು ಮತದಾನ ನಡೆದು ನಂತರ ಮತ್ತೆ ಮಧ್ಯಾಹ್ನ 2ರ ನಂತರ ಮಂದಗತಿಯಲ್ಲಿ ಮತದಾನ ನಡೆಯಿತು. ಶಿಕ್ಷಕರು, ನೌಕರರು ಹಾಗೂ ಖಾಸಗಿ ವಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪದವೀದರರು ಮತದಾನ ಮಾಡಿದ್ದು ವಿಶೇಷವಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಮತಗಟ್ಟೆಗೆ ಭೇಟಿ ನೀಡಿದ ಶಾಸಕ ಎಚ್.ವಿ. ವೆಂಕಟೇಶ್
ಆಗ್ನೇಯ ಪದವೀಧರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಯ ಮತದಾನದ ಹಿನ್ನೆಲೆಯಲ್ಲಿ ಪಾವಗಡ ಶಾಸಕ ಎಚ್.ವಿ. ವೆಂಕಟೇಶ್ ಅವರು ಪಟ್ಟಣದ ಕಸಬಾ ಹೋಬಳಿಯ ಮತಗಟ್ಟೆಗೆ ಭೇಟಿ ನೀಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಎಚ್.ವಿ. ವೆಂಕಟೇಶ್, ಈ ಬಾರಿ ಕ್ಷೇತ್ರದಲ್ಲಿ ಉತ್ತಮ ಮತದಾನವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆ ಮಠ್ ಅವರು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೇಶ್ ಬಾಬು, ರಾಮಾಂಜಿನಪ್ಪ, ಪುರಸಭೆ ಮಾಜಿ ಅಧ್ಯಕ್ಷ ಪಿ.ಎಚ್. ರಾಜೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಎನ್. ರವಿ, ಗುತ್ತಿಗೆದಾರರಾದ ಶಂಕರ್ ರೆಡ್ಡಿ, ಆರ್.ಎ. ಹನುಮಂತರಾಯಪ್ಪ, ಆದಿ ನಾರಾಯಣಪ್ಪ ಸೇರಿದಂತೆ ಕಸಬಾ ಹೋಬಳಿ ವ್ಯಾಪ್ತಿಯ ಹಲವು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.