IND vs NZ 2nd T20I: ತಂಡಗಳ ಸಂಭಾವ್ಯ ಪ್ಲೇಯಿಂಗ್ XI, ಪಿಚ್ ರಿಪೋರ್ಟ್ ವಿವರ!
India vs New Zealand 2nd T20I: ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಣ ಎರಡನೇ ಟಿ20ಐ ಪಂದ್ಯ ಅಕ್ಟೋಬರ್ 24 ರಂದು ಕ್ರೈಸ್ಟ್ ಚರ್ಚ್ನೆ ಹ್ಯಾಗ್ಲಿ ಓವಲ್ನಲ್ಲಿ ನಡೆಯಲಿದೆ. ಮೊದಲನೇ ಪಂದ್ಯ ಕೂಡ ಇದೇ ಅಂಗಣದಲ್ಲಿ ನಡೆದಿತ್ತು ಹಾಗೂ ಭಾರತ ತಂಡ 4 ವಿಕೆಟ್ಗಳ ರೋಚಕ ಗೆಲುವು ಸಾಧಿಸಿತ್ತು.
ಭಾರತ ತಂಡದ ಸಂಭಾವ್ಯ ಪ್ಲೇಯಿಂಗ್ XI ವಿವರ. -
ಕ್ರೈಸ್ಟ್ಚರ್ಚ್: ನ್ಯೂಜಿಲೆಂಡ್ ಎದುರು ಮೊದಲನೇ ಟಿ20ಐ ಪಂದ್ಯದಲ್ಲಿ (IND vs NZ) 4 ವಿಕೆಟ್ಗಳ ರೋಚಕ ಗೆಲುವು ಸಾಧಿಸಿದ ವಿಶ್ವಾಸದಲ್ಲಿ ತೇಲುತ್ತಿರುವ ಭಾರತ ತಂಡ, ಇದೀಗ ಅಕ್ಟೋಬರ್ 24 ರಂದು ಶನಿವಾರ ನ್ಯೂಜಿಲೆಂಡ್ ಎದುರು ಎರಡನೇ ಟಿ20ಐ ಪಂದ್ಯಕ್ಕೆ ಸಜ್ಜಾಗುತ್ತಿದೆ. ಈ ಪಂದ್ಯ ಕೂಡ ಮೊದಲನೇ ಪಂದ್ಯ ನಡೆದಿದ್ದ ಹ್ಯಾಗ್ಲಿ ಓವಲ್ನಲ್ಲಿಯೇ ನಡೆಯಲಿದೆ. ಹಾಗಾಗಿ ಎರಡನೇ ಪಂದ್ಯದಲ್ಲಿಯೂ ನಾವು ಹೈಸ್ಕೋರಿಂಗ್ ನಿರೀಕ್ಷಿಸಬಹುದು. ಇದೀಗ ಭಾರತ ತಂಡ ಸರಣಿಯಲ್ಲಿ1-0 ಮುನ್ನಡೆಯಲಿದ್ದು, ಎರಡನೇ ಪಂದ್ಯದಲ್ಲಿಯೂ ಗೆಲುವಿನ ನಿರೀಕ್ಷೆಯಲ್ಲಿದೆ.
ಮೊದಲ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ನ್ಯೂಜಿಲೆಂಡ್ ತಂಡ 20 ಓವರ್ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 225 ರನ್ ಗಳಿಸಿತ್ತು. ಬೃಹತ್ ಗುರಿ ಬೆನ್ನಟ್ಟಿದ ಭಾರತ, 19.4 ಓವರ್ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 230 ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತ್ತು. ಈ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ಸಾಮರ್ಥ್ಯ ಹಾಗೂ ಒತ್ತಡದ ಸಂದರ್ಭದಲ್ಲೂ ಗುರಿ ಬೆನ್ನಟ್ಟುವ ಸಾಮರ್ಥ್ಯ ಅನಾವರಣಗೊಂಡಿತ್ತು.
15 ಬಾಲ್ಗಳಲ್ಲಿ 42 ರನ್ ಸಿಡಿಸಿ ಇರ್ಫಾನ್ ಪಠಾಣ್ ದಾಖಲೆಯನ್ನು ಮುರಿದ ನಮನ್ ಧೀರ್!
ಇತ್ತ ತವರಿನಲ್ಲಿ ಮೊದಲ ಪಂದ್ಯ ಸೋತಿರುವ ನ್ಯೂಜಿಲೆಂಡ್ ತಂಡ ಎರಡನೇ ಪಂದ್ಯದಲ್ಲಿ ಪುಟಿದೇಳುವ ನಿರೀಕ್ಷೆಯಲ್ಲಿದೆ. ಸರಣಿಯನ್ನು 1-1ರ ಅಂತರದಲ್ಲಿ ಸಮಬಲಗೊಳಿಸಲು ಆತಿಥೇಯರಿಗೆ ಈ ಪಂದ್ಯ ಮಹತ್ವದ್ದಾಗಿದೆ. ವಿಶೇಷವಾಗಿ ಭಾರತದ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ನಿಯಂತ್ರಿಸಲು ನ್ಯೂಜಿಲೆಂಡ್ ಬೌಲರ್ಗಳು ಉತ್ತಮ ಪ್ರದರ್ಶನ ನೀಡಬೇಕಿದೆ.
ಮೊದಲ ಪಂದ್ಯದಲ್ಲಿ ಎರಡೂ ತಂಡಗಳು ಹ್ಯಾಗ್ಲಿ ಓವಲ್ ಮೈದಾನದ ಪರಿಸ್ಥಿತಿಗಳನ್ನು ಅರಿತುಕೊಂಡಿರುವುದರಿಂದ ಎರಡನೇ ಪಂದ್ಯದಲ್ಲೂ ರೋಚಕ ಪೈಪೋಟಿ ನಿರೀಕ್ಷಿಸಲಾಗಿದೆ. ಮೊದಲ ಪಂದ್ಯದ ಗೆಲುವಿನ ಆತ್ಮವಿಶ್ವಾಸದಲ್ಲಿರುವ ಭಾರತ ಅದೇ ಲಯ ಮುಂದುವರಿಸಲು ಬಯಸಿದರೆ, ನ್ಯೂಜಿಲೆಂಡ್ ತವರಿನ ಪರಿಸ್ಥಿತಿಯ ಲಾಭ ಪಡೆದು ಸರಣಿಯನ್ನು ಸಮಬಲಗೊಳಿಸಲು ಎದುರು ನೋಡುತ್ತಿದೆ.
IND vs NZ: 100ನೇ ಟಿ20ಐ ಪಂದ್ಯವನ್ನಾಡಿದ ಅರ್ಷದೀಪ್ ಸಿಂಗ್ಗೆ ವಿಶೇಷ ಜೆರ್ಸಿ ನೀಡಿದ ಶ್ರೇಯಸ್ ಅಯ್ಯರ್!
ಪಂದ್ಯದ ವಿವರ
ಎರಡನೇ ಟಿ20ಐ ಪಂದ್ಯ
ಭಾರತ vs ನ್ಯೂಜಿಲೆಂಡ್
ದಿನಾಂಕ: ಅಕ್ಟೋಬರ್ 24, 2026
ಸಮಯ: ಮಧ್ಯಾಹ್ನ 12:30ಕ್ಕೆ (ಭಾರತೀಯ ಕಾಲಮಾನ)
ಸ್ಥಳ: ಹ್ಯಾಗ್ಲಿ ಓವಲ್, ಕ್ರೈಸ್ಟ್ ಚರ್ಚ್
ನೇರ ಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಸೋನಿಲಿವ್
ಹ್ಯಾಗ್ಲಿ ಓವಲ್ ಪಿಚ್ ರಿಪೋರ್ಟ್
ಹ್ಯಾಗ್ಲಿ ಓವಲ್ ಮೈದಾನದ ಪಿಚ್ ಮೊದಲ ಟಿ20ಐ ಪಂದ್ಯದಲ್ಲಿ ರನ್ಗಳ ಸುರಿಮಳೆ ಹರಿದಿತ್ತು. ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 225/4 ರನ್ ಗಳಿಸಿತ್ತು. ಆದರೆ ಭಾರತ ಕೇವಲ ಎರಡು ಎಸೆತಗಳು ಬಾಕಿ ಇರುವಂತೆಯೇ ಗುರಿ ಬೆನ್ನಟ್ಟಿ ಗೆಲುವು ಸಾಧಿಸಿತ್ತು. ಹೀಗಾಗಿ ಎರಡನೇ ಪಂದ್ಯದಲ್ಲೂ ಆರಂಭದಲ್ಲಿ ಕ್ರೀಸ್ನಲ್ಲಿ ನೆಲೆಕಂಡುಕೊಳ್ಳುವ ಬ್ಯಾಟರ್ಗಳು ದೊಡ್ಡ ಮೊತ್ತ ಗಳಿಸುವ ನಿರೀಕ್ಷೆಯಿದೆ.
ಈ ಮೈದಾನದಲ್ಲಿ ಬೃಹತ್ ಮೊತ್ತ ಗಳಿಸಿದರೂ ಅದನ್ನು ಡಿಫೆಂಡ್ ಮಾಡಿಕೊಳ್ಳುವುದು ಸುಲಭವಲ್ಲ ಎಂಬುದು ಮೊದಲ ಪಂದ್ಯದಿಂದ ಸಾಬೀತಾಗಿದೆ. ಹೀಗಾಗಿ ಬೌಲರ್ಗಳು ತಮ್ಮ ವೇಗದಲ್ಲಿ ವೈವಿಧ್ಯತೆ ತೋರಿಸುವುದರ ಜೊತೆಗೆ, ಡೆತ್ ಓವರ್ಗಳಲ್ಲಿ ನಿಖರವಾಗಿ ಬೌಲ್ ಮಾಡಬೇಕಿದೆ. ಎದುರಾಳಿ ಬ್ಯಾಟರ್ಗಳಿಗೆ ಸುಲಭವಾಗಿ ರನ್ ಗಳಿಸುವ ಅವಕಾಶ ನೀಡದಿರುವುದು ಎರಡೂ ತಂಡಗಳ ಬೌಲರ್ಗಳಿಗೆ ಪ್ರಮುಖ ಸವಾಲಾಗಲಿದೆ.
2ನೇ ಟಿ20ಯಿಂದ ಹೊರಗುಳಿದ ಇಶಾನ್ ಕಿಶನ್; ವೈಭವ್ ಸೂರ್ಯವಂಶಿಗೆ ಅವಕಾಶ
ಮುಖಾಮುಖಿ ದಾಖಲೆ
ಆಡಿರುವ ಪಂದ್ಯಗಳು: 32
ಭಾರತದ ಗೆಲುವು: 12
ನ್ಯೂಜಿಲೆಂಡ್ ಗೆಲುವು: 17
ಫಲಿತಾಂಶವಿಲ್ಲ: 03
ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ XI
ನ್ಯೂಜಿಲೆಂಡ್: ಫಿನ್ ಆಲೆನ್, ಟಿಮ್ ಸೈಫರ್ಟ್ (ವಿಕೆಟ್ ಕೀಪರ್), ಡೆವೋನ್ ಕಾನ್ವೇ, ಡ್ಯಾರಿಲ್ ಮಿಚೆಲ್, ಮೈಕಲ್ ಬ್ರೇಸ್ವೇಲ್, ಮಿಚೆಲ್ ಸ್ಯಾಂಟ್ನರ್ (ನಾಯಕ), ನೇಥನ್ ಸ್ಮಿತ್, ಕೈಲ್ ಜೇಮಿಸನ್, ಮ್ಯಾಟ್ ಹೆನ್ರಿ, ಲಾಕಿ ಫರ್ಗ್ಯೂಸನ್
ಭಾರತ: ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೇ, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್