ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಭೀಕರ ಕೊಲೆ: ಅಪ್ರಾಪ್ತರು ಸೇರಿ 8 ಮಂದಿಯ ಬಂಧನ

15 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಹರೆಯದ ಮೂವರು ಸೇರಿ ಒಟ್ಟು ಎಂಟು ಮಂದಿಯನ್ನು ಬಂಧಿಸಲಾಗಿದೆ. ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಆಕೆಯ ಖಾಸಗಿ ಭಾಗಗಳನ್ನು ವಿರೂಪಗೊಳಿಸಿ ಹತ್ಯೆ ಮಾಡಲಾಗಿದೆ. ಆಕೆಯ ದೇಹದ ವಿವಿಧ ಭಾಗಗಲ್ಲಿ ಚಿತ್ರಹಿಂಸೆ ನೀಡಿರುವ ಗುರುತುಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಅತ್ಯಾಚಾರ, ಕೊಲೆ ಪ್ರಕರಣ:  8 ಮಂದಿಯ ಬಂಧನ

ಸಂಗ್ರಹ ಚಿತ್ರ -

ಅಸ್ಸಾಂ: ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆ (15 Years Old Girl murder case) ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಹದಿಹರೆಯದ ಮೂವರು ಸೇರಿ ಒಟ್ಟು ಎಂಟು ಮಂದಿಯನ್ನು ಬಂಧಿಸಿರುವ ಘಟನೆ ಅಸ್ಸಾಂನಲ್ಲಿ (Assam murder) ನಡೆದಿದೆ. 15 ವರ್ಷದ ಬಾಲಕಿಯ ಮೇಲೆ 19 ವರ್ಷದೊಳಗಿನ ಮೂವರು ಬಾಲಕರು ಸೇರಿ ಅತ್ಯಾಚಾರ (physically abuse case) ನಡೆಸಿ ಭೀಕರವಾಗಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಆಕೆಯ ಖಾಸಗಿ ಭಾಗಗಳನ್ನು ವಿರೂಪಗೊಳಿಸಲಾಗಿದೆ. ವಿವಿಧ ವಸ್ತುಗಳಿಂದ ದೇಹದ ವಿವಿಧ ಭಾಗಗಳಿಗೆ ಚಿತ್ರಹಿಂಸೆ ನೀಡಿರುವ ಗಾಯದ ಗುರುತುಗಳಿವೆ. ಈ ಘಟನೆ ಅಸ್ಸಾಂನ ಹೈಲಕಂಡಿ ಜಿಲ್ಲೆಯಲ್ಲಿ ನಡೆದಿದೆ.

ಪ್ರಕರಣದ ಕುರಿತು ಮಾಹಿತಿ ನೀಡಿರುವ ಹೈಲಕಂಡಿ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಅಮಿತಾಭ್ ಸಿನ್ಹಾ , ಹೈಲಕಂಡಿ ಜಿಲ್ಲೆಯಲ್ಲಿ ನಡೆದಿರುವ 15 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ 17 ವರ್ಷದ ಬಾಲಕ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಮೂವರು ಬಾಲಕರು ಕೂಡ 19 ವರ್ಷದೊಳಗಿನವರಾಗಿದ್ದಾರೆ. ಸಂತ್ರಸ್ತೆಯ ಖಾಸಗಿ ಭಾಗಗಳನ್ನು ವಿರೂಪಗೊಳಿಸಿದ್ದು, ಚಿತ್ರಹಿಂಸೆ ನೀಡಿ ಆಕೆಯ ಕೊಲೆ ಮಾಡಲಾಗಿದೆ. ದೇಹದ ವಿವಿಧ ಭಾಗಗಳಲ್ಲಿ ಗಾಯದ ಗುರುತುಗಳಿವೆ ಎಂದು ತಿಳಿಸಿದ್ದಾರೆ.

Afzalpur News: ಶಾಸಕ ಎಂ.ವೈ.ಪಾಟೀಲರಿಗೆ ಸಾಮಾಜಿಕ ಜಾಲತಾಣದಲ್ಲಿ ಅವಮಾನ: ಇಬ್ಬರ ವಿರುದ್ಧ ಎಫ್‌ಐಆರ್

ಆರೋಪಿಗಳಲ್ಲಿ ಒಬ್ಬನೊಂದಿಗೆ ಸಂಬಂಧ ಹೊಂದಿದ್ದ ಬಾಲಕಿ ಶನಿವಾರ ರಾತ್ರಿ ಅಸ್ಸಾಂನ ಹೈಲಕಂಡಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ -6 ರ ಬಳಿ ಇರುವ ತನ್ನದೇ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿ ಭಾನುವಾರ ಐವರು ಯುವಕರನ್ನು ಬಂಧಿಸಲಾಗಿದೆ ಮತ್ತೆ ಸೋಮವಾರ 19 ವರ್ಷದೊಳಗಿನ ಮೂವರು ಬಾಲಕರನ್ನು ಬಂಧಿಸಲಾಗಿದೆ ಎಂದರು.



ಈ ಘಟನೆ ಶನಿವಾರ ರಾತ್ರಿ 11 ಗಂಟೆಗೆ ಕಟ್ಲಿಚೆರಾ ಪೊಲೀಸ್ ಠಾಣೆ ವ್ಯಾಪ್ತಿಯ ಅಲೋಯಿಚೋರಾ ಪ್ರದೇಶದಲ್ಲಿ ನಡೆದಿದೆ. ಪ್ರಕರಣದ ಕ್ರೌರ್ಯವನ್ನು ಪರಿಗಣಿಸಿ ಆರೋಪಿಗಳನ್ನು ವಯಸ್ಕರೆಂದು ಪರಿಗಣಿಸಿ ವಿಚಾರಣೆಗೆ ಒಳಪಡಿಸಲು ನ್ಯಾಯಾಲಯಕ್ಕೆ ಮನವಿ ಮಾಡಲಾಗಿದೆ.

ಬಾಲಕಿಯು ಹತ್ತಿರದ ಸಂಬಂಧಿಕರ ಮನೆಯಲ್ಲಿ ನಡೆದ ಔತಣಕೂಟಕ್ಕೆ ಕುಟುಂಬದವರೊಂದಿಗೆ ತೆರಳಿದ್ದಳು. ಅಲ್ಲಿ ಆಕೆ ಸೋದರ ಸಂಬಂಧಿಯೊಂದಿಗೆ ಜಗಳವಾಡಿ ರಾತ್ರಿ 10.30ಕ್ಕೆ ಊಟ ಕೂಡ ಮಾಡದೆ ಒಬ್ಬಂಟಿಯಾಗಿ ಮನೆಗೆ ಹೊರಟಿದ್ದಾಳೆ. ಅವಳಿಗಾಗಿ ಊಟ ತೆಗೆದುಕೊಂಡು ಮನೆಯವರು ಸುಮಾರು ಒಂದು ಗಂಟೆಯ ಬಳಿಕ ಮರಳಿದಾಗ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ಆಕೆಯ ಶವ ನೆಲದ ಮೇಲೆ ಬಿದ್ದಿದ್ದು, ಬಹುತೇಕ ಗುರುತಿಸಲಾಗದ ಸ್ಥಿತಿಯಲ್ಲಿತ್ತು ಎಂದು ಆಕೆಯ ತಾಯಿ ತಿಳಿಸಿದ್ದಾರೆ ಎಂದರು.

ಭಯಾನಕವಾಗಿತ್ತು. ಒಬ್ಬ ಮನುಷ್ಯ ಪುಟ್ಟ ಹುಡುಗಿಯನ್ನು ಇಷ್ಟೊಂದು ಕ್ರೂರವಾಗಿ ಹೇಗೆ ನಡೆಸಿಕೊಳ್ಳಲು ಸಾಧ್ಯ ಎಂದು ಆಕೆಯ ತಾಯಿ ಪೊಲೀಸರನ್ನು ಪ್ರಶ್ನಿಸಿದ್ದು, ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ ಎಂದು ತಿಳಿಸಿದರು.

ಹೈಲಕಂಡಿಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಮೀರ್ ದರ್ಪಣ್ ಬರುವಾ ಮಾತನಾಡಿ ಮೂವರು ಆರೋಪಿಗಳ ವಿರುದ್ಧ 16 ವರ್ಷದೊಳಗಿನ ಬಾಲಕಿಯ ಮೇಲೆ ಅತ್ಯಾಚಾರ, ಕೊಲೆ, ಪೋಕ್ಸೊ ಪ್ರಕರಣ, ಲೈಂಗಿಕ ದೌರ್ಜನ್ಯ ಪ್ರಕರಣಗಳ ಅಡಿಯಲ್ಲಿ ಕೇಸು ದಾಖಲಿಸಲಾಗಿದೆ. ತನಿಖೆಯ ಪ್ರಾಥಮಿಕ ಹಂತ ನಡೆದಿದೆ. ವಿಚಾರಣೆಯಿಂದ ಇನ್ನು ಹೆಚ್ಚಿನ ಮಾಹಿತಿಗಳು ಹೊರಬೀಳುವ ಸಾಧ್ಯತೆ ಇದೆ ಮತ್ತು ಹೆಚ್ಚಿನ ಬಂಧನಗಳು ಕೂಡ ನಡೆಯಬಹುದು ಎಂದು ಹೇಳಿದರು.

ಬಂಧಿತರಿಂದ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸೂಕ್ಷ್ಮ ಮಾಹಿತಿಯನ್ನು ಬಹಿರಂಗಪಡಿಸದಂತೆ ಸ್ಥಳೀಯರು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರಿಗೆ ಮನವಿ ಮಾಡಿದ್ದೇವೆ ಎಂದರು.

ಕೊಲೆಯ ಹಿಂದಿನ ಉದ್ದೇಶ ಇನ್ನೂ ತಿಳಿದುಬಂದಿಲ್ಲ. ಆರೋಪಿಗಳು ಸಂತ್ರಸ್ತೆಗೆ ಪರಿಚಿತರು ಮತ್ತು ಆಕೆಯ ಮನೆಯ ಬಗ್ಗೆ ಎಲ್ಲವನ್ನೂ ತಿಳಿದಿದ್ದರು. ವಿಚಾರಣೆ ಪೂರ್ಣಗೊಳ್ಳದೆ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಸಂಪೂರ್ಣ ತನಿಖೆ ನಡೆಸಲಾಗುವುದು ಎಂದು ಹೇಳಿದರು.

ಶಾಲೆಯಲ್ಲೇ ಹರಿಯಿತು ನೆತ್ತರು; ಶಿಕ್ಷಕಿಯನ್ನು ಕ್ಲಾಸ್‌ನಿಂದ ಹೊರಗೆಳೆದು 20 ಬಾರಿ ಇರಿದು ಕೊಂದ ಪಾಪಿ

ಘಟನೆಯ ಬಳಿಕ ಹೈಲಕಂಡಿ ಮತ್ತು ಅಸ್ಸಾಂನ ಬರಾಕ್ ಕಣಿವೆಯ ಇತರ ಭಾಗಗಳಲ್ಲಿ ಸ್ಥಳೀಯರು ಪ್ರತಿ ಪ್ರತಿಭಟನೆ ನಡೆಸಿ ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ನೀಡುವಂತೆ ಆಗ್ರಹಿಸಿದರು. ಅಸ್ಸಾಂ ಮತ್ತು ಮಿಜೋರಾಂ ಅನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ -6 ಅನ್ನು ಭಾನುವಾರ ತಡೆದು ತೀವ್ರ ಪ್ರತಿಭಟನೆ ನಡೆಸಿದರು.