ಮದ್ಯಪ್ರಿಯರಿಗೆ ಸ್ವರ್ಗಕ್ಕೆ ಮೂರೇ ಗೇಣು; ಹ್ಯಾಂಡ್ಪಂಪ್ನಲ್ಲಿ ನೀರಿನ ಬದಲು ಬಂತು ಮದ್ಯ!
Illicit liquor: ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಉತ್ತರ ಪ್ರದೇಶದ ಝಾನ್ಸಿಯಲ್ಲಿ ಭೂಗತವಾಗಿದ್ದ ಬೃಹತ್ ಡ್ರಮ್ಗಳಲ್ಲಿನ ಸಾರಾಯಿ ಪತ್ತೆ ಹಚ್ಚಿದ್ದಾರೆ. ಇದಕ್ಕೆ ಹ್ಯಾಂಡ್ಪಂಪ್ ಸಂಪರ್ಕ ಕಲ್ಪಿಸಲಾಗಿತ್ತು. ಹ್ಯಾಂಡ್ಪಂಪ್ ಮೂಲಕ ನೀರಿನಂತೆ ಸಾರಾಯಿಯನ್ನು ಹರಿಸಲಾಗುತ್ತಿತ್ತು.
ಚಾಟ್ಜಿಪಿಟಿ ರಚಿತ ಚಿತ್ರ -
ಲಖನೌ, ನ. 23: ಹ್ಯಾಂಡ್ಪಂಪ್ನಲ್ಲಿ ನೀರು ಬರುವುದು ಸಾಮಾನ್ಯ. ಆದರೆ ಇಲ್ಲೊಂದು ಮನೆಯಲ್ಲಿನ ಹ್ಯಾಂಡ್ಪಂಪ್ ಮೂಲಕ ಮದ್ಯದ ಹೊಳೆಯೇ ಹರಿದು ಬಂದಿದೆ! ಅಚ್ಚರಿಯಾದರೂ ಸತ್ಯ. ಮೇಲ್ನೋಟಕ್ಕೆ ಸಾಮಾನ್ಯ ಹ್ಯಾಂಡ್ಪಂಪ್ನಂತೆ ಕಂಡರೂ ಅದಕ್ಕೆ ಭೂಮಿ ಒಳಗೆ ಹುದುಗಿಸಿಟ್ಟಿದ್ದ ಕಳ್ಳಭಟ್ಟಿ ಸಾರಾಯಿಯೊಂದಿಗೆ (Illicit liquor) ಸಂಪರ್ಕ ಕಲ್ಪಿಸಲಾಗಿತ್ತು. ಅನುಮಾನಗೊಂಡು ದಾಳಿ ನಡೆಸಿದ ಪೊಲೀಸರ ಮುಂದೆ ಈ ರಹಸ್ಯ ಬೆಳಕಿಗೆ ಬಂದಿದ್ದು, ಮಹಿಳೆಯನ್ನು ಬಂಧಿಸಲಾಗಿದೆ. ಉತ್ತರ ಪ್ರದೇಶದ ಝಾನ್ಸಿಯ ಸಕ್ರಾರ್ನಲ್ಲಿ ಈ ಘಟನೆ ನಡೆದಿದೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಭೂಗತವಾಗಿದ್ದ ಬೃಹತ್ ಡ್ರಮ್ಗಳಲ್ಲಿನ ಸಾರಾಯಿ ಪತ್ತೆ ಹಚ್ಚಿದ್ದಾರೆ. ಗ್ರಾಹಕರು ಬಂದಾಗ ಹ್ಯಾಂಡ್ಪಂಪ್ ಸಹಾಯದಿಂದ ಈ ಕಳ್ಳಭಟ್ಟಿ ಸಾರಾಯಿ ನೀಡಲಾಗುತ್ತಿತ್ತು ಎಂದು ಮೂಲಗಳು ತಿಳಿಸಿವೆ. ಅನುಮಾನ ಬರದಿರಲು ಈ ವ್ಯವಸ್ಥೆ ಮಾಡಲಾಗಿತ್ತು ಎನ್ನುವುದು ತನಿಖೆ ವೇಳೆ ಗೊತ್ತಾಗಿದೆ.
ಹ್ಯಾಂಡ್ಪಂಪ್ ಮೂಲಕ ಬಂತು ಸಾರಾಯಿ:
In UP's Jhansi, police and excise officials found illicit country liquor concealed beneath a cemented surface flowing through a hand pump. https://t.co/JuFbqwmvu3
— Piyush Rai (@Benarasiyaa) November 23, 2026
ಅಕ್ರಮ ಮದ್ಯ ತಯಾರಿಕೆಯ ವಿರುದ್ಧದ ಕಾರ್ಯಾಚರಣೆಯ ಭಾಗವಾಗಿ ಅಬಕಾರಿ ಇಲಾಖೆ ಮತ್ತು ಸಕ್ರಾರ್ ಪೊಲೀಸರು ಜಂಟಿಯಾಗಿ ನಡೆಸಿದ ದಾಳಿಯ ವೇಳೆ ಈ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಈ ಅಕ್ರಮ ವ್ಯವಹಾರದಲ್ಲಿ ತೊಡಗಿದ್ದವರು ಮದ್ಯವನ್ನು ನೆಲದಡಿಯಲ್ಲಿ ಬಚ್ಚಿಟ್ಟು, ಅದನ್ನು ಹ್ಯಾಂಡ್ಪಂಪ್ಗೆ (ಕೈಪಂಪ್) ಸಂಪರ್ಕ ಕಲ್ಪಿಸಿದ್ದರು. ಹೀಗಾಗಿ ಪಂಪ್ ಅನ್ನು ಚಾಲನೆ ಮಾಡುವ ಮೂಲಕ ಮದ್ಯವನ್ನು ಹೊರತೆಗೆಯಲು ಸಾಧ್ಯವಾಗುತ್ತಿತ್ತು.
ಅಬಕಾರಿ ಇಲಾಖೆಯ ಅಧಿಕಾರಿಗಳ ದಾಳಿ ವೇಳೆ ಕಳ್ಳಬಟ್ಟಿ ಸಾರಾಯಿ ವಶ
ತಂಡವು ಹಲವು ಕಡೆಗಳಲ್ಲಿ ಅಕ್ರಮ ಮದ್ಯ ತಯಾರಿಕಾ ಘಟಕಗಳನ್ನು ಪತ್ತೆಹಚ್ಚಿದೆ. ಅಬಕಾರಿ ಇಲಾಖೆಯ ಅಧಿಕಾರಿಗಳು ತಿಳಿಸಿದ ಪ್ರಕಾರ, ಮದ್ಯ ತಯಾರಿಕೆಗೆ ಬಳಸಿದ ಒಲೆ, ಉಪಕರಣಗಳನ್ನು ನಾಶಪಡಿಸಲಾಗಿದೆ ಮತ್ತು ಸಾವಿರಾರು ಕಿಲೋ ಗ್ರಾಂಗಳಷ್ಟು ಲಹಾನ್ (ದೇಶಿ ಮದ್ಯ ತಯಾರಿಸಲು ಬಳಸುವ ಹುದುಗಿಸಿದ ವಸ್ತು) ವಶ ಪಡಿಸಲಾಗಿದೆ.
ಅಬಕಾರಿ ನಿರೀಕ್ಷಕರಾದ ಮನೋಜ್ ಕುಮಾರ್ ಶ್ರೀವಾಸ್ತವ, ಅಜಯ್ ಕುಮಾರ್ ಮತ್ತು ಶಿಶಿರ್ ದ್ವಿವೇದಿ ಸಕ್ರಾರ್ ಪೊಲೀಸರೊಂದಿಗೆ ಸೇರಿ ಈ ಕಾರ್ಯಾಚರಣೆಯನ್ನು ನಡೆಸಿದರು. ಬದೌರಾ ಚೌರಾಹಾ, ಸಿಮ್ರಾವರಿ ಪಹರಿಯಾ, ಬೈದೌರಾ ಗ್ರಾಮ, ದಕ್ಷನೇಶ್ವರ್, ಡೇರಾ ಪೃಥ್ವಿಪುರ್ ನಾಯಕೇಡಾ, ಬುಧಪುರ, ಬಮ್ಹೌರ್ಲಿ, ಸಕ್ರಾರ್ ಮತ್ತು ಅಡ್ಜಾರ್ ಸೇರಿದಂತೆ ವಿವಿಧ ಸ್ಥಳಗಳಲ್ಲಿ ದಾಳಿಗಳನ್ನು ನಡೆಸಲಾಯಿತು.
ಈ ಕಾರ್ಯಾಚರಣೆಯ ವೇಳೆ 340 ಲೀಟರ್ ಅಕ್ರಮ ದೇಶಿ ಮದ್ಯವನ್ನು ವಶಪಡಿಸಿಕೊಳ್ಳಲಾಗಿದ್ದು, ಒಟ್ಟು 4,300 ಕೆಜಿ ಲಹನ್ ನಾಶಪಡಿಸಲಾಗಿದೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಅಬಕಾರಿ ಕಾಯ್ದೆಯಡಿ ನಾಲ್ಕು ಪ್ರಕರಣಗಳನ್ನು ದಾಖಲಿಸಲಾಗಿದ್ದು, ಆರೋಪಿ ಮಹಿಳೆಯನ್ನು ಬಂಧಿಸಲಾಗಿದೆ. ತೇಜ್ಪುರ ಘುರಾಟ್ ಗ್ರಾಮದ 30 ವರ್ಷದ ಮಹಿಳೆ ಸೆರೆ ಸಿಕ್ಕಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಪೊಲೀಸರು ಸದ್ಯ ಆಕೆಯ ವಿರುದ್ಧ ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮದ್ಯ ಶೇಖರಣೆ ಮಾಡಿದ್ದ ಮನೆಯಲ್ಲಿ ರೈಡ್: ಮದ್ಯದ ಕೇಸುಗಳು ವಶ
ಅಕ್ರಮ ಮದ್ಯ ತಯಾರಕರು ತಮ್ಮ ಚಟುವಟಿಕೆಗಳನ್ನು ಮುಚ್ಚಿಡಲು ಮತ್ತು ಕಾನೂನು ಜಾರಿ ಸಂಸ್ಥೆಗಳ ಕಣ್ಣು ತಪ್ಪಿಸಲು ಅನುಸರಿಸುತ್ತಿರುವ ಅಸಾಂಪ್ರದಾಯಿಕ ವಿಧಾನ ಈ ಮೂಲಕ ಬೆಳಕಿಗೆ ಬಂದಿದೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.