ಅಕ್ರಮ ಸಂಬಂಧ: ಯುವಕನಿಗೆ ಥಳಿಸಿ ಮೂತ್ರ ಕುಡಿಸಿದರು.. ಭೋಪಾಲ್ ನಲ್ಲೊಂದು ಅಮಾನವೀಯ ಘಟನೆ
ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ ಯುವಕನನ್ನು ಬಂಧಿಸಿದ ಮಹಿಳೆಯ ಕುಟುಂಬ ಬಲವಂತವಾಗಿ ಕೂಡಿ ಹಾಕಿ, ಥಳಿಸಿ, ಬಿಯರ್ ಬಾಟಲಿಯಲ್ಲಿ ಮೂತ್ರ ಕುಡಿಸಿರುವ ಘಟನೆ ಭೋಪಾಲ್ ನಲ್ಲಿ ನಡೆದಿದೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಗ್ರಹ ಚಿತ್ರ -
ಭೋಪಾಲ್: ಮಹಿಳೆಯೊಂದಿಗೆ ಅಕ್ರಮ ಸಂಬಂಧ (Illicit relation) ಹೊಂದಿದ್ದಕ್ಕಾಗಿ ಯುವಕನಿಗೆ ಥಳಿಸಿ ಬಲವಂತವಾಗಿ ಮೂತ್ರ ಕುಡಿಸಿರುವ ಘಟನೆ ರಾಜಸ್ಥಾನದಲ್ಲಿ (Rajasthan) ನಡೆದಿದೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದ್ದು, ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭೋಪಾಲ್‌ನ ಕೋಲಾರ ನಿವಾಸಿ ಸೋನು (18) ಎಂಬಾತನನ್ನು ರಾಜಸ್ಥಾನದ ಝಲಾವರ್ ಜಿಲ್ಲೆಯಲ್ಲಿ ಅಪಹರಿಸಿ ಮೂರು ದಿನಗಳ ಕಾಲ ಬಂಧಿಸಿಡಲಾಗಿತ್ತು. ಈ ಸಂದರ್ಭದಲ್ಲಿ ಆತನಿಗೆ ಚಿತ್ರಹಿಂಸೆ ನೀಡಲಾಗಿದೆ.
ಮಧ್ಯಪ್ರದೇಶದ ಭೋಪಾಲ್ ನ ಯುವಕ ಸೋನು ನನ್ನು ರಾಜಸ್ಥಾನದ ಝಲಾವರ್ ಜಿಲ್ಲೆಯಲ್ಲಿ ಅಪಹರಿಸಿ ಚಿತ್ರ ಹಿಂಸೆ ನೀಡಲಾಗಿದೆ. ಇದರ ಆಘಾತಕಾರಿ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಡಿಯೊದಲ್ಲಿ ಸೋನುಗೆ ಹಲವಾರು ಪುರುಷರು ನಿರ್ದಯವಾಗಿ ಥಳಿಸುತ್ತಿರುವುದು, ಬಿಯರ್ ಬಾಟಲಿಯಲ್ಲಿ ಮೂತ್ರ ಕುಡಿಯಲು ಒತ್ತಾಯಿಸಿರುವುದನ್ನು ತೋರಿಸಲಾಗಿದೆ.
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ 5 ವರ್ಷದ ಮಗನನ್ನೇ ಕೊಂದ ತಾಯಿಗೆ ಜೀವಾವಧಿ ಶಿಕ್ಷೆ
ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಝಲಾವರ್ ಜಿಲ್ಲೆಯ ಪುಲೋರೋ ಗ್ರಾಮದ ಮಹಿಳೆಯೊಂದಿಗೆ ಸೋನು ಅಕ್ರಮ ಸಂಬಂಧ ಹೊಂದಿದ್ದನು. 15 ದಿನಗಳ ಹಿಂದೆ ಮಹಿಳೆಯು ತನ್ನ ಮನೆ ಬಿಟ್ಟು ಭೋಪಾಲ್‌ಗೆ ಬಂದು ಸೋನು ಜೊತೆ ವಾಸಿಸುತ್ತಿದ್ದಳು. ಇದರಿಂದ ಆಕ್ರೋಶಗೊಂಡ ಕುಟುಂಬವು ಮಹಿಳೆಯನ್ನು ಕರೆಸಿದ್ದು, ಬಳಿಕ ಸೋನುವನ್ನು ಕರೆಸಿಕೊಂಡಿದ್ದರು ಎಂದರು.
ಸೋನುಗೆ ಕರೆ ಮಾಡಿದ ಮಹಿಳೆ, ತನ್ನನ್ನು ಭೇಟಿಯಾಗಲು ರಾಜಸ್ಥಾನಕ್ಕೆ ಬರುವಂತೆ ಹೇಳಿದಳು. ಇದನ್ನು ನಂಬಿದ ಆತ ಪುಲೋರೋ ಗ್ರಾಮಕ್ಕೆ ಹೋದಾಗ ಮಹಿಳೆಯ ಕುಟುಂಬದ ಸದಸ್ಯರು ಆತನನ್ನು ಬಂಧಿಸಿ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ಬಳಿಕ ಆತನಿಗೆ ಬಲವಂತವಾಗಿ ಮೂತ್ರ ಕುಡಿಯುವಂತೆ ಮಾಡಿದ್ದಾರೆ. ಇದರ ವಿಡಿಯೊವನ್ನು ಕೂಡ ಮಾಡಿದ್ದಾರೆ ಎಂದು ಹೇಳಿದರು.
ಇನ್ಸ್‌ಪೆಕ್ಟರ್ ಸಂಜಯ್ ಸೋನಿ ಅವರು ಮಾತನಾಡಿ, ಯುವಕನ ವಿಡಿಯೊವನ್ನು ಭೋಪಾಲ್‌ನಲ್ಲಿರುವ ಸೋನು ಕುಟುಂಬಕ್ಕೆ ಕಳುಹಿಸಲಾಗಿದ್ದು, ತಕ್ಷಣವೇ ಅವರು ಸಹಾಯಕ್ಕಾಗಿ ಕೋಲಾರ ಪೊಲೀಸ್ ಠಾಣೆಗೆ ಬಂದಿದ್ದಾರೆ. ಇದಕ್ಕೆ ಸ್ಪಂದಿಸಿ ವಿಶೇಷ ತಂಡವನ್ನು ರಚಿಸಿ ರಾಜಸ್ಥಾನಕ್ಕೆ ಕಳುಹಿಸಿಕೊಡಲಾಗಿದೆ. ರಾಜಸ್ಥಾನ ಪೊಲೀಸರೊಂದಿಗೆ ನಿರಂತರ ಸಂವಹನ ನಡೆಸಲಾಗುತ್ತಿದ್ದು, ಸಂತ್ರಸ್ತನ ಹೇಳಿಕೆಯನ್ನು ದಾಖಲಿಸಲಾಗುತ್ತಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಉನ್ನಾವೋ ಸಂತ್ರಸ್ತೆ ತಂದೆಯ ಕಸ್ಟಡಿ ಡೆತ್ ಕೇಸ್; ಸೆಂಗಾರ್ ಜಾಮೀನು ಅರ್ಜಿ ತಿರಸ್ಕರಿಸಿದ ನ್ಯಾಯಾಲಯ
ಹಲ್ಲೆಯಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳನ್ನು ಗುರುತಿಸಲಾಗಿದ್ದು, ಅಪಹರಣ, ಕಾನೂನುಬಾಹಿರ ಬಂಧನ, ಹಲ್ಲೆ, ಕ್ರಿಮಿನಲ್ ಬೆದರಿಕೆ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳ ಅಡಿಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ ಎಂದು ಅವರು ಹೇಳಿದರು.