ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮಧುಗಿರಿ ರೈಲ್ವೆ ನಿಲ್ದಾಣ, ಸರಕು ಸಾಗಾಣಿಕೆ ವಿಭಾಗದ ಕಾಮಗಾರಿಗೆ ಸಚಿವ ವಿ. ಸೋಮಣ್ಣ, ಶಾಸಕ ಕೆ.ಎನ್. ರಾಜಣ್ಣ ಶಂಕುಸ್ಥಾಪನೆ

Madhugiri News: ಮಧುಗಿರಿ ತಾಲೂಕಿನ ಜನತೆಯ ಬಹುಬೇಡಿಕೆಯಾಗಿದ್ದ ಮಹತ್ವಾಕಾಂಕ್ಷೆ ಯೋಜನೆ ತುಮಕೂರು-ರಾಯದುರ್ಗ ರೈಲ್ವೆ ಹೊಸ ಮಾರ್ಗದ ಮಧುಗಿರಿ ರೈಲ್ವೆ ನಿಲ್ದಾಣ ಹಾಗೂ ಸರಕು ಸಾಗಾಣಿಕೆ ವಿಭಾಗದ ಕಾಮಗಾರಿಗೆ ಕೇಂದ್ರ ರೈಲ್ವೆ ಖಾತೆ ಸಹಾಯಕ ಸಚಿವ ವಿ. ಸೋಮಣ್ಣ ಹಾಗೂ ಮಾಜಿ ಸಚಿವ ಹಾಗೂ ಶಾಸಕ ಕೆ.ಎನ್. ರಾಜಣ್ಣ ಶಂಕುಸ್ಥಾಪನೆ ನೆರವೇರಿಸಿದರು.

ಮಧುಗಿರಿ ರೈಲ್ವೆ ನಿಲ್ದಾಣ ಕಾಮಗಾರಿಗೆ ಸಚಿವ ವಿ. ಸೋಮಣ್ಣ ಶಂಕುಸ್ಥಾಪನೆ

ಮಧುಗಿರಿ ರೈಲ್ವೆ ನಿಲ್ದಾಣ ಕಾಮಗಾರಿಗೆ ಸಚಿವ ವಿ.ಸೋಮಣ್ಣ, ಶಾಸಕ ಕೆ.ಎನ್.ರಾಜಣ್ಣ ಶಂಕುಸ್ಥಾಪನೆ. -

Profile
Siddalinga Swamy Jul 11, 2026 6:04 PM

ಮಧುಗಿರಿ, ಜು.11: ಮಧುಗಿರಿ ತಾಲೂಕಿನ (Madhugiri News) ಜನತೆಯ ಬಹುಬೇಡಿಕೆಯಾಗಿದ್ದ ಮಹತ್ವಾಕಾಂಕ್ಷೆ ಯೋಜನೆ ತುಮಕೂರು-ರಾಯದುರ್ಗ ರೈಲ್ವೆ ಹೊಸ ಮಾರ್ಗದ ಮಧುಗಿರಿ ರೈಲ್ವೆ ನಿಲ್ದಾಣ ಹಾಗೂ ಸರಕು ಸಾಗಾಣಿಕೆ ವಿಭಾಗದ ಕಾಮಗಾರಿಗೆ ಕೇಂದ್ರ ರೈಲ್ವೆ ಖಾತೆ ಸಹಾಯಕ ಸಚಿವ ವಿ. ಸೋಮಣ್ಣ ಹಾಗೂ ಮಾಜಿ ಸಚಿವ ಹಾಗೂ ಶಾಸಕ ಕೆ.ಎನ್. ರಾಜಣ್ಣ ಶಂಕುಸ್ಥಾಪನೆ ನೆರವೇರಿಸಿದರು.

ಪಟ್ಟಣದ ಹೊರವಲಯದ ಕೊಡಿಗೇನಹಳ್ಳಿ ರಸ್ತೆ ಹೊಸ ಆರ್.ಟಿ.ಒ ಕಚೇರಿ ಹಿಂಭಾಗ ರಾಜ್ಯದ ಪ್ರಮುಖ ಯೋಜನೆಗಳಲ್ಲಿ ಒಂದಾದ ಮಧುಗಿರಿ ತಾಲೂಕಿನ ಜನತೆಯ ಬಹು ಬೇಡಿಕೆಯಾಗಿದ್ದ ಮಹತ್ವಾಕಾಂಕ್ಷೆ ಯೋಜನೆ ತುಮಕೂರು-ರಾಯದುರ್ಗ ರೈಲ್ವೆ ಹೊಸ ಮಾರ್ಗದ ಮಧುಗಿರಿ ರೈಲ್ವೆ ನಿಲ್ದಾಣ ಹಾಗೂ ಸರಕು ಸಾಗಾಣಿಕೆ ವಿಭಾಗದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ.

KN Rajanna (11)

ಈ ವೇಳೆ ಮಾತನಾಡಿದ ಮಾಜಿ ಸಚಿವ ಹಾಗೂ ಶಾಸಕ ಕೆ.ಎನ್. ರಾಜಣ್ಣ ಅವರು, ಈ ರೈಲ್ವೆ ಮಾರ್ಗದಿಂದ ತುಮಕೂರು ಹಾಗೂ ಆಂಧ್ರಪ್ರದೇಶ ರಾಯದುರ್ಗ ಸಂಪರ್ಕ ಮತ್ತಷ್ಟು ಬಲಗೊಳ್ಳುವುದರ ಜತೆಗೆ ಕೈಗಾರಿಕೆ, ಕೃಷಿ ಉತ್ಪನ್ನಗಳ ಸಾಗಾಟ ಮತ್ತು ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಮಹತ್ವ ನೀಡುತ್ತದೆ ಎಂದು ತಿಳಿಸಿದರು.

Mysuru Dasara 2026: ಈ ಬಾರಿ 11 ದಿನಗಳ ವಿಜೃಂಭಣೆಯ ಮೈಸೂರು ದಸರಾ; ಅ.11ಕ್ಕೆ ಉದ್ಘಾಟನೆ, ಅ.21ಕ್ಕೆ ಜಂಬೂ ಸವಾರಿ

ಈ ಸಂದರ್ಭದಲ್ಲಿ ರೈಲ್ವೆ ಮುಖ್ಯ ಇಂಜನಿಯರ್ ಪ್ರಸಾದ್, ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಹಸೀಲ್ದಾರ್ ನಂದಿನಿ, ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ. ರಾಜಣ್ಣ, ಗುತ್ತಿಗೆದಾರ ರಾಜ್ ಗೋಪಾಲ್, ಸೇರಿದಂತೆ ರೈಲ್ವೆ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಮುಖಂಡರುಗಳು ಹಾಗೂ ಇತರರು ಉಪಸ್ಥಿತರಿದ್ದರು.

ಮಹಿಳಾ ದಿನಾಚರಣೆಯಲ್ಲಿ ಶಾಸಕ ಕೆ.ಎನ್.ರಾಜಣ್ಣ ಭಾಗಿ; ವಿವಿಧ ಸವಲತ್ತು ವಿತರಣೆ

KN Rajanna (9)

ಮಧುಗಿರಿ: ಪಟ್ಟಣದ ಎಂ.ಎನ್.ಕೆ ಸಮುದಾಯ ಭವನದಲ್ಲಿ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ "ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ-2026" ಹಾಗೂ ವಿಶೇಷಚೇತನರಿಗೆ ವಿವಿಧ ಯೋಜನೆಯಡಿ ಸವಲತ್ತು ವಿತರಣೆ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹಾಗೂ ಶಾಸಕರಾದ ಕೆ.ಎನ್.ರಾಜಣ್ಣ ಭಾಗವಹಿಸಿ, ಮಾತನಾಡಿದರು.

KN Rajanna (10)

ಈ ವೇಳೆ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಹಸೀಲ್ದಾರ್ ನಂದಿನಿ, ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಸೋನಿಯ ವಾರ್ಣೇಕರ್, ತಾಲೂಕು ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿ ಬಿ.ಕೆ.ಉತ್ತಮ್ , ಎ.ಡಿ.ಧನಂಜಯ್. ಎಚ್, ಡಿ.ಸಿ.ಸಿ. ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ.ರಾಜಣ್ಣ, ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಎಂ.ಎಸ್.ಮಲ್ಲಿಕಾರ್ಜುನಯ್ಯ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ವೆಂಕಟೇಶ್ , ಪುರಸಭೆ ಮಾಜಿ ಅಧ್ಯಕ್ಷರಾದ ಎಂ.ಕೆ.ನಂಜುಂಡರಾಜು, ಲಾಲಪೇಟೆ ಮಂಜುನಾಥ್ , ತಾಲೂಕು ಒಕ್ಕೂಟ ಅಧ್ಯಕ್ಷರಾದ ರಾಧ, ಮುಖಂಡರುಗಳು, ವಿವಿಧ ಸಂಘ ಸಂಸ್ಥೆಗಳ ಮಹಿಳೆಯರು, ಸಾರ್ವಜನಿಕರು ಉಪಸ್ಥಿತರಿದ್ದರು.