ಜಮುಯಿ ಲೈಂಗಿಕ ಕಿರುಕುಳ ಪ್ರಕರಣದ ಆರೋಪಿಗೆ ನ್ಯಾಯಾಲಯದ ಹೊರಗೆ ಕಪಾಳಮೋಕ್ಷ
ಅಪ್ರಾಪ್ತರಿಬ್ಬರಿಗೆ ಕಿರುಕುಳ ನೀಡಿದ ಆರೋಪದಲ್ಲಿ ಬಂಧಿತನಾಗಿರುವ ಪ್ರಮುಖ ಆರೋಪಿ ನಂದನ್ ಯಾದವ್ ಎಂಬಾತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸರು ಕರೆದುಕೊಂಡು ಹೋಗುತ್ತಿದ್ದಾಗ ಸಾರ್ವಜನಿಕರು ಅವನಿಗೆ ಕಪಾಳಮೋಕ್ಷ ನಡೆಸಿದ್ದಾರೆ. ನಂದನ್ ಯಾದವ್ ನನ್ನು ಪೊಲೀಸರು ಮಂಗಳವಾರ ಕಾಲಿಗೆ ಗುಂಡು ಹಾರಿಸಿ ಎನ್ಕೌಂಟರ್ ಮೂಲಕ ಬಂಧಿಸಿದ್ದರು.
ಸಂಗ್ರಹ ಚಿತ್ರ -
ಬಿಹಾರ: ಅಪ್ರಾಪ್ತರಿಬ್ಬರಿಗೆ ಕಿರುಕುಳ (Jamui physical abuse case) ನೀಡಿರುವ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿರುವ ಆರೋಪಿಗೆ ನ್ಯಾಯಾಲಯದ (court) ಆವರಣದಲ್ಲಿ ಸಾರ್ವಜನಿಕರು ಕಪಾಳಮೋಕ್ಷ ಮಾಡಿರುವ ಘಟನೆ ಬಿಹಾರದಲ್ಲಿ (bihar crime) ನಡೆದಿದೆ. ಜಮುಯಿಯಲ್ಲಿ ಸೆಪ್ಟೆಂಬರ್ 19ರಂದು 10ನೇ ತರಗತಿಯ ಬಾಲಕಿ ಮತ್ತು ಬಾಲಕನಿಗೆ ಗುಂಪೊಂದು ಕಿರುಕುಳ ನೀಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿರುವ ಪ್ರಮುಖ ಆರೋಪಿ ನಂದನ್ ಯಾದವ್ ಎಂಬಾತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೊರಗೆ ಕರೆತರುತ್ತಿದ್ದಾಗ ಸಾರ್ವಜನಿಕರು ಆತನಿಗೆ ಕಪಾಳಮೋಕ್ಷ ಮಾಡಿದರು.
ಪಾಟ್ನಾದಿಂದ ಸುಮಾರು 150 ಕಿ.ಮೀ. ದೂರದಲ್ಲಿರುವ ಬಿಹಾರದ ಜಮುಯಿಯಲ್ಲಿ ಸೆಪ್ಟೆಂಬರ್ 19 ರಂದು 10ನೇ ತರಗತಿಯ ಬಾಲಕಿ ಮತ್ತು ಬಾಲಕನಿಗೆ ಕೆಲವು ವ್ಯಕ್ತಿಗಳು ಸೇರಿ ಕಿರುಕುಳ ನೀಡಿದ್ದರು. ಬಾಲಕ, ಬಾಲಕಿ ದ್ವಿಚಕ್ರ ವಾಹನದಲ್ಲಿ ಪ್ರವಾಸಿ ತಾಣವೊಂದಕ್ಕೆ ತೆರಳಿ ಮರಳುತ್ತಿದ್ದಾಗ ಕೆಲವರು ನೈತಿಕ ಪೊಲೀಸ್ ಗಿರಿ ತೋರಿಸಿ ಕಿರುಕುಳ ನೀಡಿದ್ದರು.
ಬಿಹಾರದಲ್ಲಿ ಮತ್ತೊಂದು ಆಘಾತಕಾರಿ ಘಟನೆ: ದಾರಿಯಲ್ಲಿ ಸಾಗುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ
ಆರೋಪಿಗಳು ಅಪ್ರಾಪ್ತ ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದು, ಬಾಲಕನಿಗೆ ಥಳಿಸಿದ್ದರು. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಈ ವಿಡಿಯೊವನ್ನು ಚಿತ್ರೀಕರಿಸಿದ್ದ ರಾಮಾಶಿಶ್ ಚೌಧರಿ ತಲೆಮರೆಸಿಕೊಂಡಿದ್ದಾನೆ. ಆರೋಪಿಗಳ ಬೆದರಿಕೆ ಕಾರಣದಿಂದ ಸಂತ್ರಸ್ತರು ಯಾವುದೇ ಪೊಲೀಸ್ ದೂರು ದಾಖಲಿಸಿರಲಿಲ್ಲ. ವಿಡಿಯೊ ವೈರಲ್ ಆದ ಮೇಲೆ ಪೊಲೀಸರು ತಕ್ಷಣ ಕ್ರಮಕ್ಕೆ ಮುಂದಾದರು.
Bihar police shot Nandan Yadav leg in yesterday.
— VIKAS (@Vikas662005) September 23, 2026
Today he easily walk. How ? Encounter is a drama 😞
People slapped Nandan Yadav outside the court. pic.twitter.com/2lflxAl86x
ಪ್ರಕರಣಕ್ಕೆ ಸೇರಿದ ಪ್ರಮುಖ ಆರೋಪಿ ನಂದನ್ ಯಾದವ್ ನನ್ನು ಮಂಗಳವಾರ ಪೊಲೀಸರು ಕಾಲಿಗೆ ಗುಂಡು ಹಾರಿಸಿ ಎನ್ಕೌಂಟರ್ ಮೂಲಕ ಬಂಧಿಸಿದ್ದರು. ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು ಐವರನ್ನು ಬಂಧಿಸಲಾಗಿದೆ.
ಆರೋಪಿ ನಂದನ್ ಯಾದವ್ ನನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯದಿಂದ ಹೊರಬರುತ್ತಿದ್ದಾಗ ಆತನ ಮೇಲೆ ಸಾರ್ವಜನಿಕರು ದಾಳಿ ಮಾಡಿ ಕಪಾಳಮೋಕ್ಷ ಮಾಡಿದ್ದರು.
ಆರೋಪಿಗಳ ವಿರುದ್ಧ ಪೋಕ್ಸೊ, ಬಿಎನ್ಎಸ್ ಕಾಯ್ದೆಯಡಿ ಎಫ್ಐಆರ್ ದಾಖಲಿಸಲಾಗಿದೆ. ಸಂತ್ರಸ್ತರು ಆರೋಪಿಗಳ ಹೆಸರನ್ನು ಹೇಳದಿದ್ದರೂ ಉಪ-ವಿಭಾಗೀಯ ಪೊಲೀಸ್ ಅಧಿಕಾರಿ ದೀಪ್ತಿ ಮೊನಾಲಿ ನೇತೃತ್ವದ ವಿಶೇಷ ತನಿಖಾ ತಂಡ ವೈರಲ್ ಕ್ಲಿಪ್ ಆಧರಿಸಿ ಒಟ್ಟು ಐವರನ್ನು ಬಂಧಿಸಿದರು.
ಸೌಜನ್ಯ ಹತ್ಯೆಯ ನೈಜ ಹಂತಕ ಸಿಗಲು ಸಾಧ್ಯವೇ..?
ನಂದನ್ ಯಾದವ್ ತಂದೆ ಗನೌರಿ ಯಾದವ್ ಕೂಡ ಪೊಲೀಸರ ಬಂಧನಕ್ಕೆ ಒಳಗಾಗಿದ್ದಾನೆ. ಪ್ರತಾಪ್ಪುರ ಗ್ರಾಮದಲ್ಲಿ 2003ರಲ್ಲಿ ನಡೆದ ಇಬ್ಬರು ಸಹೋದರರ ಹತ್ಯೆ ಪ್ರಕರಣದಲ್ಲಿ ಆತನನ್ನು ಗನೌರಿ ಯಾದವ್ ಆರೋಪಿಯಾಗಿದ್ದು, ಅಂದಿನಿಂದಲೂ ತಲೆಮರೆಸಿಕೊಂಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.