3 ತಿಂಗಳ ಗರ್ಭಿಣಿ ಅಪ್ರಾಪ್ತೆಯನ್ನು ಕೊಂದು ತಲೆಯನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಸುತ್ತಿ ಎಸೆದ ಪತಿ; ತನಿಖೆ ವೇಳೆ ಬಯಲಾಯ್ತು ಬೆಚ್ಚಿ ಬೀಳಿಸುವ ಅಂಶ
Jharkhand Horror: ಜಾರ್ಖಂಡ್‌ನ ಧನ್‌ಬಾದ್ ಜಿಲ್ಲೆಯಲ್ಲಿ ಇತ್ತೀಚೆಗೆ ಪ್ಲಾಸ್ಟಿಕ್ ಕವರ್‌ನಲ್ಲಿ ಬಾಲಕಿಯ ತಲೆ ಕತ್ತರಿಸಿದ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ಮಾಹಿತಿ ಲಭ್ಯವಾಗಿದೆ. 3 ತಿಂಗಳ ಗರ್ಭಿಣಿಯಾಗಿದ್ದ ಈಕೆಯನ್ನು ಪತಿ ಮತ್ತು ಆಕೆಯ ಮಾವನೇ ಕೊಲೆ ಮಾಡೊದ್ದು ಗೊತ್ತಾಗಿದ್ದು, ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಚಾಟ್‌ಜಿಪಿಟಿ ರಚಿತ ಚಿತ್ರ -
ರಾಂಚಿ, ಸೆ. 14: ಆಕೆ 3 ತಿಂಗಳ ಗರ್ಭಿಣಿ. 17 ವರ್ಷದ ಆಕೆ ಅದಾಗಲೇ ಮದುವೆಯಾಗಿ 3 ತಿಂಗಳ ಗರ್ಭಿಣಿಯೂ ಆಗಿದ್ದಳು. ಕಂಗಳಲ್ಲಿ ನೂರಾರು ಕನಸು ಕಂಡಿದ್ದ ಆಕೆ ಇತ್ತೀಚೆಗೆ ಶವವಾಗಿ ಪತ್ತೆಯಾಗಿದ್ದಾಳೆ (Jharkhand Horror). ಅದೂ ವೀಭತ್ಸ ರೀತಿಯಲ್ಲಿ ಕೊಲೆಯಾಗಿದ್ದಾಳೆ. ಆಕೆಯನ್ನು ಕೊಂದು, ತಲೆಯನ್ನು ಕಡಿದು ಪ್ಲಾಸ್ಟಿಕ್ ಕವರ್‌ನಲ್ಲಿ ಸುತ್ತಿ ದೇಹದಿಂದ 100 ಮೀಟರ್ ದೂರ ಎಸೆಯಲಾಗಿತ್ತು. ಜಾರ್ಖಂಡ್‌ನ ಧನ್‌ಬಾದ್ ಜಿಲ್ಲೆಯಲ್ಲಿ ನಡೆದ ಈ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿದ್ದು, ಈ ಸಂಬಂಧ ಇದೀಗ ಪೊಲೀಸರು ಆಕೆಯ ಪತಿ, ಮಾವ ಸೇರಿ ನಾಲ್ವರನ್ನು ಬಂಧಿಸಿದ್ದಾರೆ.
ಧನ್‌ಬಾದ್ ಜಿಲ್ಲೆಯ ಬಲಿಯಾಪುರದ ಖೇರ್‌ಬಾಡಿಯಾದಲ್ಲಿ ಈ ಘಟನೆ ಸಂಭವಿಸಿದೆ. ಕೆರೆಯ ದಡದಲ್ಲಿ ರಕ್ತ ಹರಿದಿರುವುದನ್ನು ಗಮನಿಸಿದ ಸ್ಥಳೀಯರು ಕೂಲೇ ಪೊಲೀಸರಿಗೆ ತಿಳಿದ್ದರು. ಪೊಲೀಸರು ಪರಿಶೀಲನೆ ನಡೆಸಿದಾಗ ಪ್ಲಾಸ್ಟಿಕ್ ಕವರ್‌ನಲ್ಲಿದ್ದ ತಲೆ ಮತ್ತು ಅಲ್ಲಿಂದ ಸುಮಾರು 100 ಮೀಟರ್ ದೂರದಲ್ಲಿ ಶರೀರ ಪತ್ತೆಯಾಗಿತ್ತು. ಮೃತಳನ್ನು 17 ವರ್ಷದ ಪೂನಂ ಕುಮಾರಿ ಎಂದು ಗುರುತಿಸಲಾಗಿದೆ.
ಪತ್ನಿ, ಮೂವರು ಹೆಣ್ಣು ಮಕ್ಕಳನ್ನು ಇಟ್ಟಿಗೆಯಿಂದ ಜಜ್ಜಿ ಕೊಂದ ಪಾಪಿ
ವೈದ್ಯಕೀಯ ಪರಿಶೀಲನೆ ವೇಳೆ ಮೃತ ಪೂನಂ 3 ತಿಂಗಳ ಗರ್ಭಿಣಿಯಾಗಿದ್ದಳು ಎನ್ನುವ ವಿಚಾರವೂ ಬೆಳಕಿಗೆ ಬಂದಿದೆ. ಮೃತದೇಹ ಪತ್ತೆಯಾದ ಸ್ಥಳದಲ್ಲಿ ಅಗರಬತ್ತಿ ಸೇರಿ ತಾಂತ್ರಿಕ ವಿದ್ಯೆಗೆ ಸಂಬಂಧಿಸಿದ ವಸ್ತುಗಳು ಪತ್ತೆಯಾಗಿದ್ದರಿಂದ ಇದೊಂದು ನರ ಬಲಿಯಾಗಿದ್ದಿರಬಹುದು ಎನ್ನುವ ಶಂಕೆಯನ್ನೂ ಸ್ಥಳೀಯರು ವ್ಯಕ್ತಪಡಿಸಿದ್ದರು. ಅದಾಗ್ಯೂ ಪೊಲೀಸರು ಎಲ್ಲ ಕೋನಗಳಿಂದ ತನಿಖೆ ನಡೆಸಿದ್ದರು. ಈ ವೇಳೆ ಹಲವು ಬೆಚ್ಚಿ ಬೀಳಿಸುವ ಅಂಶಗಳು ಬೆಳಕಿಗೆ ಬಂದವು.
ಮನೆಯವರ ವಿರೋಧದ ನಡುವೆಯೂ ಮದುವೆ
ಪೂನಂ ಶಿಕ್ಷಣಕ್ಕಾಗಿ ಗಿರಿದ್ಹಿ ಜಿಲ್ಲೆಯಿಂದ ಧನ್‌ಬಾದ್‌ಗೆ ಆಗಮಿಸಿದ್ದಳು. ಈ ವೇಳೆ ಆಕೆಗೆ ಕ್ರಿಶ್ ರವಾನಿಯ ಪರಿಚಯವಾಯಿತು. ಬಳಿಕ ಇಬ್ಬರು ಪರಸ್ಪರ ಪ್ರೀತಿಸಿದ್ದು, ಪೂನಂ ತನ್ನ ಮನೆಯವರ ವಿರೋಧವನ್ನು ಲೆಕ್ಕಿಸದೆ ಮದುವೆಯಾಗಿದ್ಧಳು. ಬಳಿಕ ಕ್ರಿಶ್ ಮತ್ತು ಪೂನಂ ಬಲಿಯಾಪುರದಲ್ಲಿರುವ ಬಾಡಿಗೆ ಮನೆಗೆ ವಾಸ್ತವ್ಯ ಬದಲಾಯಿಸಿದ್ದರು ಎಂದು ಮೂಲಗಳು ತಿಳಿಸಿವೆ.
3 ತಿಂಗಳ ಗರ್ಣಿಣಿಯಾಗಿದ್ದ ಪೂನಂ ಸೆಪ್ಟೆಂಬರ್ 9ರಿಂದ ನಾಪತ್ತೆಯಾಗಿದ್ದಳು. ಸೆಪ್ಟೆಂಬರ್ 10ರಂದು ಆಕೆಯ ತಂದೆ ಬಲಿಯಾಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಹುಡುಕಾಟದ ವೇಳೆ ಸೆಪ್ಟೆಂಬರ್ 11ರಂದು ಶಿರ ಕತ್ತರಿಸಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಸ್ಥಳಕ್ಕೆ ಧಾವಿಸಿದ ಶ್ವಾನ ಪತ್ತೆ ದಳಗಳು ಮೃತದೇಹ ಪತ್ತೆಯಾದ ಸ್ತಳದಿಂದ ಸುಮಾರು 4 ಕಿ.ಮೀ. ದೂರದಲ್ಲಿರುವ ಕ್ರಿಶ್‌ನ ಮನೆಗೆ ತೆರಳಿದಾಗ ಪೊಲೀಸರು ಮುಖ್ಯ ಸಾಕ್ಷ್ಯ ಲಭಿಸಿದಂತಾಗಿತ್ತು.
2ನೇ ಪತ್ನಿಯನ್ನು ಕೊಂದು ಮೃತದೇಹದೊಂದಿಗೆ 2 ದಿನ ಕಳೆದ ಪಾಪಿ ಪತಿ
ಜೈಲು ಪಾಲಾಗಿದ್ದ ಕ್ರಿಶ್
ಇದೇ ವೇಳೆ ಪೋನಂ ಮನೆಯವರು ಬಹುಮುಖ್ಯ ವಿಚಾರವೊಂದನ್ನು ತೆರೆದಿಟ್ಟಿದ್ದರು. ಪೂನಂ ವಿಚಾರಕ್ಕಾಗಿ ಈ ಹಿಂದೆ ಕ್ರಿಶ್ ಜೈಲು ಪಾಲಾಗಿದ್ದ. ಹೊರ ಬಂದ ಬಳಿಕ ಪೂನಂ ಜತೆ ಕ್ರಿಶ್ ಪ್ರತ್ಯೇಕವಾಗಿ ವಾಸಿಸುತ್ತಿದ್ದ. ಇವರಿಬ್ಬರು ಜತೆಯಾಗಿ ವಾಸಿಸುತ್ತಿರುವುದು ಕ್ರಿಶ್ ತಂದೆಗೆ ಇಷ್ಟವಿರಲಿಲ್ಲ ಎಂದು ಪೂನಂ ಮನೆಯವರು ತಿಳಿಸಿದ್ದರು. ಪೂನಂ ಕಾರಣದಿಂದ ಕ್ರಿಶ್ ಜೈಲು ಸೇರಿದ್ದರಿಂದ ಅವಮಾನಿತರಾದ ಆತನ ಕುಟುಂಬಸ್ಥರು ಆಕೆಯನ್ನು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಪೊಲೀಸರು ಕ್ರಿಶ್, ಆತನ ತಂದೆ ಜಯರಾಮ್ ರವಾನಿ ಮತ್ತು ಅತ್ತೆ ಅಲೊಮಣಿ ದೇವಿಯನ್ನು ಬಂಧಿಸಿದ್ದಾರೆ. ಪ್ರಕರಣದ ವಿಚಾರಣೆ ಮುಂದುವರಿದಿದೆ.
ಕ್ರೈಂ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.