ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದೀಪಾವಳಿಗೆ ಪತ್ನಿಗೆ ಸೀರೆ ತರಲು ಹೋದವ ಹೆಣವಾಗಿ ಬಂದ: ಡ್ರೈವಿಂಗ್‌ ಕಲಿಯುತ್ತಿದ್ದ ಮಹಿಳೆಯ ಮಹೀಂದ್ರ ಥಾರ್ ಡಿಕ್ಕಿಯಾಗಿ ವ್ಯಕ್ತಿ ಸಾವು

ಉತ್ತರ ಪ್ರದೇಶದ ಕಾನ್ಪುರದಲ್ಲಿ ಚಾಲನೆ ಕಲಿಯುತ್ತಿದ್ದ ಮಹಿಳೆಯೊಬ್ಬರ ಅತಿವೇಗದ ಮಹೀಂದ್ರಾ ಥಾರ್ ಕಾರು ಡಿಕ್ಕಿ ಹೊಡೆದ ಪರಿಣಾಮ 55 ವರ್ಷದ ಸ್ಕೂಟರ್ ಸವಾರರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಮೃತರನ್ನು ಸಂತೋಷ್ ಸಿಂಗ್ ಚೌಹಾಣ್ ಎಂದು ಗುರುತಿಸಲಾಗಿದೆ.

ಡ್ರೈವಿಂಗ್‌ ಕಲಿಯುತ್ತಿದ್ದ ಮಹಿಳೆಯ ಥಾರ್ ಡಿಕ್ಕಿಯಾಗಿ ವ್ಯಕ್ತಿ ಸಾವು

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Nov 8, 2026 1:27 PM

ಲಖನೌ: ಉತ್ತರ ಪ್ರದೇಶದ (Uttara Pradesh) ಕಾನ್ಪುರದಲ್ಲಿ ಚಾಲನೆ ಕಲಿಯುತ್ತಿದ್ದ ಮಹಿಳೆಯೊಬ್ಬರ ಅತಿವೇಗದ ಮಹೀಂದ್ರಾ ಥಾರ್ ಕಾರು ಡಿಕ್ಕಿ ಹೊಡೆದ ಪರಿಣಾಮ 55 ವರ್ಷದ ಸ್ಕೂಟರ್ ಸವಾರರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಮೃತರನ್ನು (Road Accident) ಸಂತೋಷ್ ಸಿಂಗ್ ಚೌಹಾಣ್ ಎಂದು ಗುರುತಿಸಲಾಗಿದೆ. ಇವರು ತಮ್ಮ ಪತ್ನಿಗಾಗಿ ಸೀರೆ ಖರೀದಿಸಿ, ತಮ್ಮ ಸ್ಕೂಟರ್‌ನಲ್ಲಿ ಮನೆಗೆ ಮರಳುತ್ತಿದ್ದರು. ಅವರ ಮನೆಗೆ ಕೇವಲ 500 ಮೀಟರ್ ಬಾಕಿ ಇರುವಾಗ ಈ ದುರ್ಘಟನೆ ಸಂಭವಿಸಿದೆ.

ರಾತ್ರಿ 7:30ರ ಸುಮಾರಿಗೆ ಮನೆಯಿಂದ ಹೊರಟಿದ್ದ ಸಂತೋಷ್, "ಈಗಲೇ ಬರುತ್ತೇನೆ" ಎಂದು ಕುಟುಂಬಸ್ಥರಿಗೆ ಹೇಳಿ ಹೋಗಿದ್ದರು, ಆದರೆ ಕೆಲವೇ ನಿಮಿಷಗಳಲ್ಲಿ ಅವರ ಸಾವಿನ ಸುದ್ದಿ ಬಂದಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಅಪಘಾತದ ಸಮಯದಲ್ಲಿ ಮಹೀಂದ್ರಾ ಥಾರ್ ಕಾರಿನಲ್ಲಿ ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷನಿದ್ದರು. ಅವರಲ್ಲಿ ಚಾಲನೆ ಕಲಿಯುತ್ತಿದ್ದ ಮಹಿಳೆಯೊಬ್ಬರು ಕಾರನ್ನು ಚಲಾಯಿಸುತ್ತಿದ್ದರು ಎನ್ನಲಾಗಿದೆ.

ವೇಗವಾಗಿ ಬಂದ ಕಾರು ಸಂತೋಷ್ ಅವರ ಸ್ಕೂಟರ್‌ಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣವಾಗಿ ನಿಯಂತ್ರಣ ತಪ್ಪಿ, ಹತ್ತಿರದಲ್ಲಿದ್ದ ಪ್ರೊಫೆಸರ್ ಕೈಲಾಶ್ ಚೌಹಾಣ್ ಎಂಬುವವರ ಮನೆಯ ಕಾಂಪೌಂಡ್ ಗೋಡೆಯನ್ನು ಪುಡಿಮಾಡಿಕೊಂಡು, ಪಕ್ಕದ ಮತ್ತೊಂದು ಆಸ್ತಿಯ ಗೋಡೆಗೂ ಡಿಕ್ಕಿ ಹೊಡೆದು ತೋಟದಲ್ಲಿ ಹೋಗಿ ನಿಂತಿದೆ. ಅಪಘಾತದ ಸದ್ದು ಕೇಳಿ ಪ್ರೊಫೆಸರ್ ಕೈಲಾಶ್ ಅವರು ತಕ್ಷಣ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಅಪಘಾತ ನಡೆದ ತಕ್ಷಣ, ಕಾರಿನಲ್ಲಿದ್ದ ಮೂವರು ಆರೋಪಿಗಳು ಹಾನಿಗೊಳಗಾದ ಥಾರ್ ಕಾರನ್ನು ಅಲ್ಲಿಯೇ ಬಿಟ್ಟು, ಸ್ಥಳಕ್ಕೆ ಬಂದ ಮತ್ತೊಂದು ಕಾರಿನಲ್ಲಿ ಹತ್ತಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಮಧುಗಿರಿಯ ಎನ್‌ಎಚ್‌-69ರ ಅಪಘಾತ ವಲಯಕ್ಕೆ ಮುಕ್ತಿ; 29.94 ಕೋಟಿ ರೂ. ವೆಚ್ಚದಲ್ಲಿ ಚತುಷ್ಪಥ ರಸ್ತೆ ಅಭಿವೃದ್ಧಿಗೆ ಕೇಂದ್ರದ ಅನುಮೋದನೆ

ಕಾರಿನ ನಂಬರ್ ಪ್ಲೇಟ್ ಆಧರಿಸಿ ಪೊಲೀಸರು ತನಿಖೆ ನಡೆಸಿದ್ದು, ಈ ವಾಹನವು ಪಂಕ ಬಹದ್ದೂರ್ ನಗರದ ಕೃಷ್ಣ ಕುಮಾರ್ ಎಂಬುವವರ ಹೆಸರಿನಲ್ಲಿ ನೋಂದಣಿಯಾಗಿದೆ ಎಂದು ತಿಳಿದುಬಂದಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳು ತಪ್ಪಿಸಿಕೊಳ್ಳಲು ಬಳಸಿದ ಕಾರಿನ ಮಾರ್ಗ ಮತ್ತು ಅವರ ಗುರುತನ್ನು ಪತ್ತೆಹಚ್ಚಲು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.