ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rukmini Vasanth: ಕಾಂತಾರ ನಟಿ ರುಕ್ಮಿಣಿ ವಸಂತ್ ಹೆಸರಿನಲ್ಲಿ ಚೀಟಿಂಗ್‌! ಸೈಬರ್‌ ವಂಚನೆ ಬಗ್ಗೆ ಕನಕವತಿ ಎಚ್ಚರಿಕೆ

Kantara Actress Rukmini Vasanth: ನಟಿ ರುಕ್ಮಿಣಿ ವಸಂತ್ ಅವರು, ಇತ್ತೀಚೆಗೆ ತಮ್ಮ ಹೆಸರಿನಲ್ಲಿ ನಡೆಯುತ್ತಿರುವ ವಂಚನೆ ಬಗ್ಗೆ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಯಾರೋ ಅಜ್ಞಾತ ವ್ಯಕ್ತಿ ಅವರ ಹೆಸರಿನಲ್ಲಿ ನಕಲಿ ಮೊಬೈಲ್ ನಂಬರನ್ನು ಬಳಸಿಕೊಂಡು ಜನರನ್ನು ಸಂಪರ್ಕಿಸುತ್ತಿದ್ದಾನೆ ಎಂದು ರುಕ್ಮಿಣಿ ತಿಳಿಸಿದ್ದಾರೆ. ಆ ನಂಬರಿಗೆ ಹಾಗೂ ತಮಗೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕಾಂತಾರ ನಟಿ ರುಕ್ಮಿಣಿ ವಸಂತ್ ಹೆಸರಿನಲ್ಲಿ ಸೈಬರ್‌ ವಂಚನೆ

ಕಾಂತಾರ ನಟಿ ರುಕ್ಮಿಣಿ ವಸಂತ್ ಹೆಸರಿನಲ್ಲಿ ಸೈಬರ್‌ ವಂಚನೆ(ಸಂಗ್ರಹ ಚಿತ್ರ) -

Priyanka P
Priyanka P Nov 8, 2025 12:08 PM

ಬೆಂಗಳೂರು: ಇತ್ತೀಚೆಗೆ ಸೈಬರ್ ಕ್ರೈಮ್ ಪ್ರಕರಣ (Cyber Crime Case) ದಿನೇ ದಿನೇ ಹೆಚ್ಚುತ್ತಿದೆ. ಅದರಲ್ಲೂ ಸೆಲೆಬ್ರಿಟಿಗಳ ಹೆಸರಲ್ಲಿ ವಂಚನೆ ನಡೆಯುವ ಪ್ರಕರಣಗಳು ಹೆಚ್ಚುತ್ತಿವೆ. ಉಪೇಂದ್ರ ಕುಟುಂಬದ ಮೊಬೈಲ್ ಹ್ಯಾಕ್ ಮಾಡಿದ್ದ ವಂಚಕರು ಅನೇಕರಿಂದ ಹಣ ಕೇಳಿದ್ದರು. ಇದೀಗ ಕಾಂತಾರ-1ರ ನಟಿ ರುಕ್ಮಿಣಿ ವಸಂತ್ (Rukmini Vasanth) ಅವರಿಗೂ ಇದೇ ಸಮಸ್ಯೆ ಎದುರಾಗಿದೆ. ‘ಕಾಂತಾರ: ಚಾಪ್ಟರ್ 1’ (Kantara: Chapter 1) ಸಿನಿಮಾದಲ್ಲಿ ಕನಕವತಿ ಹೆಸರಿನ ಪಾತ್ರದಲ್ಲಿ ಮಿಂಚಿದ್ದ ರುಕ್ಮಿಣಿಗೆ ಇದೀಗ ಸೈಬರ್ ಕಳ್ಳರ ಕಾಟ ಶುರುವಾಗಿದೆ. ಆ ಬಗ್ಗೆ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ತಮ್ಮ ಹೆಸರಿನಲ್ಲಿ ಯಾವ ಮೊಬೈಲ್ ನಂಬರ್‌ನಿಂದ ವಂಚನೆಯಾಗುತ್ತಿದೆ ಎಂಬುದನ್ನು ಅವರು ಹಂಚಿಕೊಂಡಿದ್ದಾರೆ. 9445893273 ಮೊಬೈಲ್ ನಂಬರ್‌ನಿಂದ ವ್ಯಕ್ತಿಯೊಬ್ಬ ಕೆಲವರಿಗೆ ಕರೆ ಮಾಡುತ್ತಿದ್ದಾನೆ. ಇದು ನಟಿಯ ಗಮನಕ್ಕೆ ಬರುತ್ತಲೇ, ಇದು ತನ್ನ ಸಂಖ್ಯೆಯಲ್ಲ ಯಾರೂ ಮೋಸ ಹೋಗಬೇಡಿ ಎಂದು ಸ್ಪಷ್ಟಪಡಿಸಿದ್ದಾರೆ. ‘ಈ ಮೊಬೈಲ್ ಸಂಖ್ಯೆ ನನಗೆ ಸೇರಿದ್ದಲ್ಲ. ಇದರಿಂದ ಬರುವ ಯಾವುದೇ ಮೆಸೇಜ್ ಅಥವಾ ಕರೆ ಬಂದರೆ ಅದು ನಕಲಿ. ಅದು ನಾನಲ್ಲ ಎಂದು ಸ್ಪಷ್ಟಪಡಿಸುತ್ತೇನೆ. ದಯವಿಟ್ಟು ಅಂತಹ ಸಂದೇಶಗಳಿಗೆ ಪ್ರತಿಕ್ರಿಯಿಸಬೇಡಿ ಅಥವಾ ಅವರೊಂದಿಗೆ ತೊಡಗಿಸಿಕೊಳ್ಳಬೇಡಿ’ ಎಂದು ನಟಿ ರುಕ್ಮಿಣಿ ವಸಂತ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: Star Saree Fashion 2025: ನಟಿ ರುಕ್ಮಿಣಿ ವಸಂತ್‌ ರೆಟ್ರೋ ಲುಕ್‌ಗೆ ಅಭಿಮಾನಿಗಳು ಫಿದಾ

ಈ ರೀತಿಯ ಕೃತ್ಯವು ಸೈಬರ್ ಅಪರಾಧದ ವ್ಯಾಪ್ತಿಗೆ ಬರುತ್ತದೆ. ಅಂತಹ ವಂಚನೆ ಮತ್ತು ದಾರಿತಪ್ಪಿಸುವ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ಏನಾದರೂ ಪರಿಶೀಲನೆ ಅಥವಾ ಸ್ಪಷ್ಟನೆ ಬೇಕಿದ್ದರೆ, ನೀವು ನೇರವಾಗಿ ನನ್ನನ್ನು ಅಥವಾ ನನ್ನ ತಂಡವನ್ನು ಸಂಪರ್ಕಿಸಬಹುದು. ನಿಮ್ಮ ತಿಳುವಳಿಕೆ ಮತ್ತು ಸಹಕಾರಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ಆನ್‌ಲೈನ್‌ನಲ್ಲಿ ಜಾಗರೂಕರಾಗಿರಿ ಮತ್ತು ಸುರಕ್ಷಿತವಾಗಿರಿ ಎಂದು ನಟಿ ರುಕ್ಮಿಣಿ ವಸಂತ್ ಬರೆದಿದ್ದಾರೆ.

ಇಲ್ಲಿದೆ ಪೋಸ್ಟ್:



ಇತ್ತೀಚಿನ ದಿನಗಳಲ್ಲಿ ಸಿನಿತಾರೆಯರ ಹೆಸರಿನಲ್ಲಿ ನಡೆಯುತ್ತಿರುವ ಸೈಬರ್‌ ಅಪರಾಧಗಳು ಆತಂಕಕಾರಿ ಮಟ್ಟಕ್ಕೆ ಏರಿವೆ. ನಟರು, ಗಾಯಕರು ಹಾಗೂ ಪ್ರಭಾವಿಗಳ ಹೆಸರಿನಲ್ಲಿ ಕಳ್ಳರು ನಕಲಿ ಖಾತೆಗಳು ತೆರೆಯುತ್ತಾರೆ ಅಥವಾ ಅವರಂತೆ ನಟಿಸಿ ಕರೆಗಳು, ಸಂದೇಶಗಳು ಕಳುಹಿಸುತ್ತಾರೆ. ಇವುಗಳ ಮೂಲಕ ಅಭಿಮಾನಿಗಳಿಂದ ಹಣ ವಸೂಲಿ ಮಾಡಲು, ವೈಯಕ್ತಿಕ ಮಾಹಿತಿಯನ್ನು ಕದಿಯಲು ಅಥವಾ ಮೋಸ ಮಾಡಲು ಪ್ರಯತ್ನಿಸಲಾಗುತ್ತದೆ.

ಇದೀಗೆ ನಟಿ ರುಕ್ಮಿಣಿ ವಸಂತ ಅವರ ಹೆಸರಿನಲ್ಲಿ ನಡೆದ ನಕಲಿ ಕರೆ ಪ್ರಕರಣ ಇದಕ್ಕೆ ಉದಾಹರಣೆಯಾಗಿದೆ. ಇಂತಹ ಘಟನೆಗಳು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವನ್ನು ಎತ್ತಿ ತೋರಿಸುತ್ತವೆ. ಯಾವುದೇ ಅನುಮಾನಾಸ್ಪದ ಕರೆ ಅಥವಾ ಸಂದೇಶ ಬಂದರೆ ಅದಕ್ಕೆ ಪ್ರತಿಕ್ರಿಯಿಸದೆ, ಅಧಿಕೃತ ಖಾತೆಗಳಿಂದ ಪರಿಶೀಲನೆ ಮಾಡಬೇಕು ಹಾಗೂ ತಕ್ಷಣವೇ ಸೈಬರ್‌ ಕ್ರೈಂ ಪೊಲೀಸರಿಗೆ ದೂರು ನೀಡಬೇಕು.