ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Chitradurga News: ಮದುವೆ ಮಾಡಲಿಲ್ಲ ಎಂದು ರಾಡ್‌ನಿಂದ ಹೊಡೆದು ತಂದೆಯನ್ನೇ ಕೊಲೆಗೈದ ಪುತ್ರ!

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಅತ್ತಿಘಟ್ಟದಲ್ಲಿ ಘಟನೆ ನಡೆದಿದೆ. ಮದುವೆ ವಿಚಾರಕ್ಕೆ ತಂದೆಯೊಂದಿಗೆ ಪುತ್ರ ನಿತ್ಯ ಜಗಳ ಮಾಡುತ್ತಿದ್ದ. ಆದರೆ, ಮದುವೆ ಮಾಡಿಸಲು ಒಪ್ಪದ ಹಿನ್ನೆಲೆಯಲ್ಲಿ ಮಲಗಿದ್ದ ವೇಳೆ ತಂದೆ ತಲೆಗೆ ರಾಡ್‌ನಿಂದ ಹೊಡೆದು ಪುತ್ರ ಹತ್ಯೆ ಮಾಡಿದ್ದಾನೆ. ಈ ಬಗ್ಗೆ ಹೊಸದುರ್ಗ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ.

ಮದುವೆ ಮಾಡಲಿಲ್ಲ ಎಂದು ರಾಡ್‌ನಿಂದ ಹೊಡೆದು ತಂದೆಯನ್ನೇ ಕೊಲೆಗೈದ ಪುತ್ರ!

ತಂದೆಯನ್ನು ಕೊಲೆ ಮಾಡಿದ ಪುತ್ರ ನಿಂಗರಾಜ. -

Prabhakara R
Prabhakara R Jan 8, 2026 2:09 PM

ಚಿತ್ರದುರ್ಗ: ಮದುವೆ ಮಾಡಲಿಲ್ಲ ಎಂದು ರಾಡ್‌ನಿಂದ ತಲೆಗೆ ಹೊಡೆದು ತಂದೆಯನ್ನೇ ಪುತ್ರನೊಬ್ಬ ಕೊಲೆ ಮಾಡಿರುವ ಘಟನೆ ಜಿಲ್ಲೆಯ (Chitradurga News) ಹೊಸದುರ್ಗ ತಾಲೂಕಿನ ಅತ್ತಿಘಟ್ಟದಲ್ಲಿ ನಡೆದಿದೆ. ಮದುವೆ ವಿಚಾರಕ್ಕೆ ತಂದೆಯೊಂದಿಗೆ ನಿತ್ಯ ಪುತ್ರ ಜಗಳ ಮಾಡುತ್ತಿದ್ದ. ಈ ಬಗ್ಗೆ ಕುಟುಂಬಸ್ಥರು ಎಷ್ಟೇ ಬುದ್ದಿವಾದ ಹೇಳಿದರೂ ಜಗಳ ಮಾತ್ರ ನಿಲ್ಲಿಸಿರಲಿಲ್ಲ. ಇದೇ ವಿಚಾರಕ್ಕೆ ಸಿಟ್ಟಾಗಿದ್ದ ಪುತ್ರ, ಮಲಗಿದ್ದ ವೇಳೆ ತಂದೆಗೆ ರಾಡ್‌ನಿಂದ ಹೊಡೆದು ಕೊಲೆ ಮಾಡಿದ್ದಾನೆ.

ಹೊಸದುರ್ಗ ತಾಲೂಕಿನ ಅತ್ತಿಘಟ್ಟ ಗ್ರಾಮದ ಸಣ್ಣನಿಂಗಪ್ಪ ಎಂಬುವರು ಪುತ್ರ ನಿಂಗರಾಜನಿಂದ ಹತ್ಯೆಯಾಗಿದ್ದಾರೆ. ಮೃತ ಸಣ್ಣನಿಂಗಪ್ಪಗೆ ಮೂವರು ಮಕ್ಕಳು. ಆರೋಪಿ ನಿಂಗರಾಜ ಎರಡನೇ ಮಗನಾಗಿದ್ದಾನೆ. ಹಿರಿಯ ಮಗ ಮಾರುತಿ ಹಾಗೂ ಕಿರಿಯ ಮಗಳು ಜ್ಯೋತಿಗೆ ಮದುವೆಯಾಗಿತ್ತು. ಆದರೆ, ನಿಂಗರಾಜನಿಗೆ ಮದುವೆ ಆಗಿರಲಿಲ್ಲ. ಇದೇ ವಿಚಾರಕ್ಕೆ ತಂದೆ ಸಣ್ಣ ನಿಂಗಪ್ಪ ಜತೆ ಜಗಳ ಮಾಡಿದ್ದಾನೆ. ಈ ವೇಳೆ ಹೊಸದುರ್ಗದಲ್ಲಿ ಇದ್ದ ಹಿರಿಯ ಮಗ ಮಾರುತಿಯನ್ನು ಮನೆಗೆ ಕರೆಸಿ ಬುದ್ದಿ ಹೇಳಿಸಿದ್ದಾರೆ. ಆಗ ಸುಮ್ಮನೇ ಆಗಿದ್ದ ನಿಂಗರಾಜ, ಮನೆಯಲ್ಲಿ ಮಲಗಿದ್ದ ತಂದೆಗೆ ರಾಡ್‌ನಿಂದ ಹೊಡೆದು ಪರಾರಿ ಆಗಿದ್ದಾನೆ.

ಗಂಭೀರವಾಗಿ ಗಾಯಗೊಂಡಿದ್ದ ಸಣ್ಣ ನಿಂಗಪ್ಪನನ್ನು ಹೊಸದುರ್ಗ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಲಾದೆ. ಆದರೆ, ಆ ವೇಳೆಗೆ ವ್ಯಕ್ತಿ ಮೃತಪಟ್ಟಿರುವುದಾಗಿ ವೈದ್ಯರು ಖಚಿತ ಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹಿರಿಯ ಮಗ ಮಾರುತಿ, ಹೊಸದುರ್ಗ ಪೊಲೀಸ್ ಠಾಣೆಗೆ ತೆರಳಿ ತಮ್ಮ ನಿಂಗರಾಜ ವಿರುದ್ಧ ದೂರು ನೀಡಿದ್ದಾರೆ. ಈ ಕುರಿತು ಕೇಸ್‌ ದಾಖಲಿಸಿಕೊಂಡ ಪಿಎಸ್ಐ ಮಹೇಶ್ ಕುಮಾರ್. ಎಸ್, ಕ್ರೈಂ ಪಿಸಿ ರಮೇಶ್ ಅವರು ಕೊಲೆ ಆರೋಪಿ ನಿಂಗರಾಜನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ಕೊಲೆ ಅಪರಾಧಿಗಳನ್ನು ಗಲ್ಲಿಗೇರಿಸುವ ಕಾನೂನು ಬರಬೇಕು: ಬಸವರಾಜ ಹೊರಟ್ಟಿ

ಹೆಬ್ಬಾಳ್ಕರ್ ಪುತ್ರನ ಕಾರು ಚಾಲಕನಿಗೆ ಚಾಕು ಇರಿತ; ನಾಲ್ವರು ಆರೋಪಿಗಳ ಆರೆಸ್ಟ್

ಬೆಳಗಾವಿ: ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಪುತ್ರನ ಕಾರು ಚಾಲಕನ ಹತ್ಯೆಗೆ (murder attempt) ಯತ್ನಿಸಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಾಕು ಇರಿದು (Stabbing, murder attempt) ಪರಾರಿಯಾಗಿದ್ದ ನಾಲ್ವರು ಆರೋಪಿಗಳನ್ನು ಆರೆಸ್ಟ್ ಮಾಡಲಾಗಿದೆ ಎಂದು ಬೆಳಗಾವಿ ಪೊಲೀಸ್ ಕಮಿಷನರ್ ಭೂಷಣ್ ಬೋರಸೆ ಹೇಳಿಕೆ ನೀಡಿದ್ದಾರೆ. ಬಂಧಿತ ಆರೋಪಿಗಳನ್ನು ಶಿವಯ್ಯ ಪೂಜಾರಿ, ನಿತೇಶ್ ಬಡಿಗೇರ್, ಮೋನಪ್ಪ ಮತ್ತು ಸಂಪತ್ ಎಂದು ಗುರುತಿಸಲಾಗಿದೆ.

ಕಾರು ಚಾಲಕ ಬಸವಂತ ಕಡಲೇಕರ್ ಸ್ನೇಹಿತ ಮದನ್ ಈ ಕುರಿತು ದೂರು ನೀಡಿದ್ದರು. ಬೆಳಗಾವಿಯ ಕ್ಯಾಂಪ್ ಠಾಣೆಯಲ್ಲಿ ನಾಲ್ವರ ವಿರುದ್ಧ ದೂರು ದಾಖಲಿಸಿದ್ದರು. ಮದನ್ ನೀಡಿದ ದೂರಿನ ಮೇಲೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಭೂಷಣ್ ಬೋರಸೆ ತಿಳಿಸಿದರು. ಜನವರಿ 6ರಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಕಾರು ಚಾಲಕ ಬಸವಂತಗೆ ಚಾಕು ಇರಿದು ಎಸ್ಕೇಪ್ ಆಗಿದ್ದರು.

ವರದಿ ಮೂಲಗಳ ಪ್ರಕಾರ, ಬಸವಂತ ಅವರು ಕಾರನ್ನು ನಿಲ್ಲಿಸಿ ಕೆಳಗೆ ನಿಂತಿದ್ದ ಸಂದರ್ಭದಲ್ಲಿ, ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಏಕಾಏಕಿ ಚಾಕುವಿನಿಂದ ದಾಳಿ ನಡೆಸಿದ್ದಾರೆ. ಆರೋಪಿಗಳು ಎದೆ, ಭುಜ ಹಾಗೂ ತೊಡೆ ಸೇರಿ ನಾಲ್ಕು ಕಡೆ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡ ಬಸವಂತ ಅವರನ್ನು ತಕ್ಷಣವೇ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ವೈದ್ಯರು ಅವರ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿಸಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ.

ಹಲ್ಲೆಗೊಳಗಾದ ಬಸವಂತ ಆರೋಪಿಗಳ ಸುಳಿವು ನೀಡಿದ್ದರು. ಮೈನಿಂಗ್ ವಿಚಾರದಲ್ಲಿ ದ್ವೇಷ ಹೊಂದಿರುವವರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಇವರು ಮೈನಿಂಗ್ ವಿಚಾರಕ್ಕೆ ಪದೇಪದೆ ಜಗಳ ತೆಗೆಯುತ್ತಿದ್ದರು. ಗೋಜಗಾ ಗ್ರಾಮದ ಶಿವಯ್ಯ ಪೂಜಾರಿ, ಪರಶುರಾಮ ಮತ್ತು ಮೋನಪ್ಪ ಪಾಟೀಲ್​ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಿದ್ದರು.