ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ದ್ವಿಚಕ್ರ ವಾಹನಕ್ಕೆ ಸಿಲುಕಿದ ಗಾಳಿಪಟದ ದಾರ; ಫ್ಲೈಓವರ್‌ನ 70 ಅಡಿ ಎತ್ತರದಿಂದ ಬಿದ್ದು ದಂಪತಿ, ಪುತ್ರಿ ಸಾವು

kite string accident: ಹಬ್ಬದ ಸಂಭ್ರಮದ ನಡುವೆ ಮತ್ತೊಂದು ಹೃದಯವಿದ್ರಾವಕ ದುರ್ಘಟನೆ ಸಂಭವಿಸಿದೆ. ದ್ವಿಚಕ್ರ ವಾಹನಕ್ಕೆ ಗಾಳಿಪಟದ ದಾರ ಸಿಲುಕಿಕೊಂಡ ಪರಿಣಾಮ, ಫ್ಲೈಓವರ್‌ನ ಸುಮಾರು 70 ಅಡಿ ಎತ್ತರದಿಂದ ದಂಪತಿ ಮತ್ತು ಅವರ ಪುತ್ರಿ ಕೆಳಗೆ ಬಿದ್ದು ಮೃತಪಟ್ಟಿರುವ ದುರಂತ ಘಟನೆ ಗುಜರಾತ್‍ನ ಸೂರತ್ ಜಿಲ್ಲೆಯಲ್ಲಿ ಸಂಭವಿಸಿದೆ. ಈ ಘಟನೆಯು ಸಾರ್ವಜನಿಕರಲ್ಲಿ ತೀವ್ರ ಆಘಾತ ಮೂಡಿಸಿದೆ.

ಗಾಳಿಪಟದ ದಾರಕ್ಕೆ ಸಿಲುಕಿ ದಂಪತಿ, ಪುತ್ರಿ ಸಾವು

ಆಟೋರಿಕ್ಷಾದ ಮೇಲೆ ಬಿದ್ದ ದ್ವಿಚಕ್ರ ವಾಹನ -

Priyanka P
Priyanka P Jan 16, 2026 4:00 PM

ಸೂರತ್, ಜ.16: ಗಾಳಿಪಟದ ಹಗ್ಗವೊಂದು ದ್ವಿಚಕ್ರ ವಾಹನಕ್ಕೆ ಸಿಕ್ಕಿಹಾಕಿಕೊಂಡ ಪರಿಣಾಮ ದಂಪತಿ ಹಾಗೂ ಅವರ ಪುತ್ರಿ ದುರ್ಮರಣಕ್ಕೀಡಾದ ಆಘಾತಕಾರಿ (kite string accident) ಘಟನೆ ಗುಜರಾತ್‌ನ ಸೂರತ್ (Surath) ಜಿಲ್ಲೆಯಲ್ಲಿ ನಡೆದಿದೆ. ಬುಧವಾರ (ಜನವರಿ 14) ಗಾಳಿಪಟದ ಹಗ್ಗವೊಂದು ದ್ವಿಚಕ್ರ ವಾಹನಕ್ಕೆ ಅಚಾನಕ್ ಆಗಿ ಸಿಕ್ಕಿಹಾಕಿಕೊಂಡ ಪರಿಣಾಮ ಮೂವರು ಸದಸ್ಯರ ಕುಟುಂಬವೊಂದು 70 ಅಡಿ ಎತ್ತರದ ಫ್ಲೈಓವರ್‌ನಿಂದ ಬಿದ್ದು ಮೃತಪಟ್ಟಿದ್ದಾರೆ.

ತಂದೆ ಹಾಗೂ ಅವರ 7 ವರ್ಷದ ಮಗಳು ಸ್ಥಳದಲ್ಲೇ ಸಾವಿಗೀಡಾದರು. ತಾಯಿಯು ಗಂಭೀರ ಗಾಯಗೊಂಡಿದ್ದು, ಅವರು ಆಟೋರಿಕ್ಷಾಕ್ಕೆ ಬಿದ್ದ ಪರಿಣಾಮ ಗಂಭೀಕ ಗಾಯಗೊಂಡರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಇಂದು (ಜ.16) ತೀವ್ರ ಗಾಯಗಳಿಂದಾಗಿ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

Drowned: ತಂದೆಯ ಎದುರೇ ಕೊಳದಲ್ಲಿ ಮುಳುಗಿ ಇಬ್ಬರು ಮಕ್ಕಳು ಜಲಸಮಾಧಿ

ಚಂದ್ರಶೇಖರ್ ಆಜಾದ್ ಫ್ಲೈಓವರ್‌ನಲ್ಲಿ ಈ ಘಟನೆ ಸಂಭವಿಸಿದೆ. 35 ವರ್ಷದ ರೆಹಾನ್ ಶೇಖ್, ಪತ್ನಿ ರೆಹಾನಾ ಹಾಗೂ ಪುತ್ರಿ ಆಯಿಷಾ ಮೃತ ದುರ್ದೈವಿಗಳು. ರೆಹಾನ್ ಶೇಖ್ ಮಕರ ಸಂಕ್ರಾಂತಿ ಹಬ್ಬದ ವೇಳೆ ತನ್ನ ಪತ್ನಿ ಮತ್ತು ಮಗಳು ಆಯಿಷಾ ಜೊತೆ ಸವಾರಿಗೆ ಹೋಗಿದ್ದರು. ಫ್ಲೈಓವರ್ ಮೇಲೆ ಸವಾರಿ ಮಾಡುತ್ತಿದ್ದಾಗ ಗಾಳಿಪಟದ ದಾರವು ಇದ್ದಕ್ಕಿದ್ದಂತೆ ರೆಹಾನ್ ಅವರನ್ನು ಸುತ್ತಿಕೊಂಡಿತು ಎಂದು ರೆಹಾನಾ ಸಾಯುವ ಮುನ್ನ ಹೇಳಿದ್ದರು. ಒಂದು ಕೈಯಿಂದ ದಾರವನ್ನು ತೆಗೆದುಹಾಕಲು ಪ್ರಯತ್ನಿಸುವಾಗ, ಅವರು ಬೈಕ್‍ನ ನಿಯಂತ್ರಣ ಕಳೆದುಕೊಂಡರು. ವಾಹನವು ಸೇತುವೆಯ ಡಿಕ್ಕಿ ಹೊಡೆದು, ಮೂವರೂ 70 ಅಡಿ ಆಳದಿಂದ ನೆಲಕ್ಕೆ ಬಿದ್ದರು.

ರೆಹಾನ್ ಮತ್ತು ಆಯಿಷಾ ಸ್ಥಳದಲ್ಲೇ ಸಾವನ್ನಪ್ಪಿದರು. ಆದರೆ, ಕೆಳಗೆ ನಿಲ್ಲಿಸಿದ್ದ ಆಟೋರಿಕ್ಷಾದ ಮೇಲೆ ಬಿದ್ದ ಪರಿಣಾಮ ಅವರ ಪತ್ನಿ ರೆಹಾನಾ ಬದುಕುಳಿದರು. ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಅವರು ತೀವ್ರ ಗಾಯಗಳಿಂದಾಗಿ ಸಾವನ್ನಪ್ಪಿದರು. ಬೈಕ್ ಬಿದ್ದ ಪರಿಣಾಮ ಆಟೋರಿಕ್ಷಾ ಕೂಡ ನಜ್ಜುಗುಜ್ಜಾಗಿದೆ. ಆಟೋ ಚಾಲಕ ಸಣ್ಣ-ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಮಕರ ಸಂಕ್ರಾಂತಿ ಹಬ್ಬದ ಸಂಭ್ರಮದ ನಡುವೆ ಗುಜರಾತ್‍ನಲ್ಲಿ ಗಾಳಿಪಟದಿಂದ ಸರಣಿ ಅಪಘಾತ ಸಂಭವಿಸಿದೆ. ಸೈಕಲ್ ಸವಾರಿ ಮಾಡುತ್ತಿದ್ದಾಗ ಗಾಳಿಪಟದ ದಾರ ಕುತ್ತಿಗೆಗೆ ಸಿಲುಕಿ 8 ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದಾನೆ. ಸೂರತ್ ಜಿಲ್ಲೆಯ ಆನಂದ್ ವಿಲ್ಲಾದಲ್ಲಿ ಈ ದುರಂತ ಸಂಭವಿಸಿದೆ. ಸೈಕಲ್ ಸವಾರಿ ಮಾಡುತ್ತಿದ್ದಾಗ ಗಾಳಿಪಟದ ದಾರವು ಬಾಲಕನ ಗಂಟಲ ಬಳಿ ಸಿಲುಕಿ ಗಾಯವಾಗಿದೆ. ಇದರಿಂದಾಗಿ ಆತ ಸೈಕಲ್‌ನಿಂದ ಬಿದ್ದು, ಗಂಭೀರ ಗಾಯಗೊಂಡ ಪರಿಣಾಮ ಮೃತಪಟ್ಟಿದ್ದಾನೆ.

ವ್ಯಕ್ತಿಯೊಬ್ಬರು ಮೋಟಾರ್ ಸೈಕಲ್ ಸವಾರಿ ಮಾಡುತ್ತಿದ್ದಾಗ ಗಾಳಿಪಟದ ದಾರದಿಂದ ಗಂಟಲು ಸೀಳಿ ಮೃತಪಟ್ಟಿದ್ದಾರೆ. ಭರೂಚ್ ಜಿಲ್ಲೆಯ ಪಿಲುಂದ್ರ ಗ್ರಾಮದಲ್ಲಿ ರಾಹುಲ್ ಪರ್ಮಾರ್ (35) ಸ್ಥಳದಲ್ಲೇ ಮೃತಪಟ್ಟ ದುರ್ದೈವಿ. ಆನಂದ್ ಜಿಲ್ಲೆಯಲ್ಲಿ ಗಾಳಿಪಟದ ದಾರದಿಂದ ಕುತ್ತಿಗೆಗೆ ಗಂಭೀರ ಗಾಯಗಳಾಗಿ ಏಳು ವರ್ಷದ ಬಾಲಕ ಮೃತಪಟ್ಟಿದ್ದಾನೆ. ಆ ಸಮಯದಲ್ಲಿ ಮಗು ತನ್ನ ತಂದೆಯೊಂದಿಗೆ ಬಾದಲ್‌ಪುರದಿಂದ ರಾಲಜ್‌ಗೆ ಮೋಟಾರ್‌ಸೈಕಲ್‌ನಲ್ಲಿ ತೆರಳುತ್ತಿದ್ದ. ವಾಘೋಡಿಯಾ ಪ್ರದೇಶದಲ್ಲಿ ವಿದ್ಯುತ್ ಕಂಬದಿಂದ ಗಾಳಿಪಟವನ್ನು ಹೊರತೆಗೆಯಲು ಪ್ರಯತ್ನಿಸುತ್ತಿದ್ದಾಗ 33 ವರ್ಷದ ವ್ಯಕ್ತಿಯೊಬ್ಬರು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾರೆ.