ಕಾರು-ದ್ವಿಚಕ್ರ ವಾಹನ ನಡುವೆ ಡಿಕ್ಕಿ:ಬೈಕ್ ಸವಾರನಿಗೆ ಗಾಯ
ಆಂಧ್ರ ಕಡೆಯಿಂದ ಹೊಸಕೋಟೆ ಕಡೆಗೆ ಹೋಗುತ್ತಿದ್ದ ಕಾರು ಹಾಗೂ ಚಿನ್ನಸಂದ್ರ ಕಡೆಯಿಂದ ಹಾದಿಗೆರೆ ಕಡೆ ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಚಿಂತಾಮಣಿ ತಾಲೂಕಿನ ಹಾದಿಗೆರೆ ಗ್ರಾಮದ ಶಿವಪ್ಪ(49)ಎಂಬುವರಿಗೆ ಗಾಯಗಳಾಗಿದ್ದು ಕಾರಿನಲ್ಲಿದ್ದ ಕೆಲ ವ್ಯಕ್ತಿಗಳಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
-
Ashok Nayak
Nov 3, 2026 12:22 AM
ಚಿಂತಾಮಣಿ: ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಬೈಕ್ ಸವಾರರಿಗೆ ಹಾಗೂ ಕಾರಿನಲ್ಲಿದ್ದ ವ್ಯಕ್ತಿಗಳಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಡಪ ಹೈವೇ ರಸ್ತೆಯಲ್ಲಿ ನಡೆದಿದೆ.
ಇದನ್ನೂ ಓದಿ: Chikkaballapura Accident: ಕಾರು, ಎಲೆಕ್ಟ್ರಿಕ್ ಬೈಕ್ ಮುಖಾಮುಖಿ ಡಿಕ್ಕಿಯಾಗಿ ನವದಂಪತಿ ಸಾವು
ಆಂಧ್ರ ಕಡೆಯಿಂದ ಹೊಸಕೋಟೆ ಕಡೆಗೆ ಹೋಗುತ್ತಿದ್ದ ಕಾರು ಹಾಗೂ ಚಿನ್ನಸಂದ್ರ ಕಡೆಯಿಂದ ಹಾದಿಗೆರೆ ಕಡೆ ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಚಿಂತಾಮಣಿ ತಾಲೂಕಿನ ಹಾದಿಗೆರೆ ಗ್ರಾಮದ ಶಿವಪ್ಪ(49)ಎಂಬುವರಿಗೆ ಗಾಯಗಳಾಗಿದ್ದು ಕಾರಿನಲ್ಲಿದ್ದ ಕೆಲ ವ್ಯಕ್ತಿಗಳಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಘಟನೆಯ ವಿಷಯ ತಿಳಿದ ತಕ್ಷಣ 112 ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ