Sonu Sood : ಬಾಲಿವುಡ್ ನಟ ಸೋನು ಸೂದ್‌ಗೆ ಸಂಕಷ್ಟ; ಕೋರ್ಟ್‌ನಿಂದ ಅರೆಸ್ಟ್ ವಾರಂಟ್!
ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ನ ಜನಪ್ರಿಯ ನಟ ಸೋನು ಸೂದ್ ವಿರುದ್ಧ ಪಂಜಾಬ್‌ನ ಲುಧಿಯಾನದ ನ್ಯಾಯಾಲಯವು ಬಂಧನ ವಾರಂಟ್ ಹೊರಡಿಸಿದೆ. ಪ್ರಮುಖ ಪ್ರಕರಣದ ಸಾಕ್ಷಿ ಹೇಳಲು ಸೋನು ಸೂದ್ ನ್ಯಾಯಾಲಯದ ಎದುರು ಹಾಜರಾಗಬೇಕಿತ್ತು. ಆದರೆ ನಟ ಗೈರು ಹಾಜರಿದ್ದರು. ಇದರಿಂದ ನ್ಯಾಯಾಲಯವು ಬಂಧನ ವಾರಂಟ್ ಹೊರಡಿಸಿದೆ.
![Sonu Sood](https://cdn-vishwavani-prod.hindverse.com/media/images/Sonu_Sood.max-1280x720.jpg)
![Profile](https://vishwavani.news/static/img/user.png)
ಮುಂಬೈ: ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ನ ಜನಪ್ರಿಯ ನಟ ಸೋನು ಸೂದ್ (Sonu Sood) ವಿರುದ್ಧ ಪಂಜಾಬ್‌ನ ಲುಧಿಯಾನದ ನ್ಯಾಯಾಲಯವು ಬಂಧನ ವಾರಂಟ್ ಹೊರಡಿಸಿದೆ. ಲುಧಿಯಾನ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ರಮಣಪ್ರೀತ್ ಕೌರ್ ಅವರು ಈ ವಾರಂಟ್ ಹೊರಡಿಸಿದ್ದಾರೆ. ಪ್ರಮುಖ ಪ್ರಕರಣದ ಸಾಕ್ಷಿ ಹೇಳಲು ಸೋನು ಸೂದ್ ನ್ಯಾಯಾಲಯದ ಎದುರು ಹಾಜರಾಗಬೇಕಿತ್ತು. ಆದರೆ ನಟ ಗೈರು ಹಾಜರಿದ್ದರು. ಇದರಿಂದ ನ್ಯಾಯಾಲಯವು ಬಂಧನ ವಾರಂಟ್ ಹೊರಡಿಸಿದೆ.
ಲೂಧಿಯಾನ ಮೂಲದ ವಕೀಲ ರಾಜೇಶ್ ಖನ್ನಾ ಅವರು ಮೋಹಿತ್ ಶುಕ್ಲಾ ವಿರುದ್ಧ 10 ಲಕ್ಷ ರೂ. ವಂಚನೆ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ನಕಲಿ ರಿಜಿಕಾ ನಾಣ್ಯದಲ್ಲಿ ಹೂಡಿಕೆ ಮಾಡುವಂತೆ ಆಮಿಷವೊಡ್ಡಲಾಗಿದೆ ಎಂದು ಆರೋಪಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಸಾಕ್ಷಿ ಹೇಳಲು ಸೋನು ಸೋದ್ ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ಪ್ರಕರಣದಲ್ಲಿ ಸಾಕ್ಷಿ ಹೇಳಲು ನ್ಯಾಯಾಲಯವು ಸೋನು ಸೂದ್ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಆದರೆ ಅವರು ಗೈರಾದ ಹಿನ್ನೆಲೆ ಬಂಧನದ ವಾರಂಟ್ ಜಾರಿಗೊಳಿಸಲಾಗಿದೆ.
Punjab | Ludhiana's Judicial Magistrate Ramanpreet Kaur has issued an arrest warrant against Bollywood actor Sonu Sood.
— ANI (@ANI) February 6, 2025
The summon has been issued in connection with a fraud case of Rs 10 lakh filed by a Ludhiana-based lawyer Rajesh Khanna against one Mohit Shukla, in which he… pic.twitter.com/XjXA2YVBw1
ಲುಧಿಯಾನ ನ್ಯಾಯಾಲಯವು ತನ್ನ ಆದೇಶದಲ್ಲಿ, ಮುಂಬೈನ ಅಂಧೇರಿ ಪಶ್ಚಿಮದಲ್ಲಿರುವ ಓಶಿವಾರಾ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿಗೆ ಸೋನು ಸೂದ್ ಅವರನ್ನು ಬಂಧಿಸುವಂತೆ ನಿರ್ದೇಶಿಸಿದೆ.ನ್ಯಾಯಾಲಯಕ್ಕೆ ಹಾಜರಾಗುವಂತೆ ಸೋನು ಸೂದ್ ಅವರಿಗೆ ಕ್ರಮಾನುಸಾರವಾಗಿ ಸಮನ್ಸ್ ನೀಡಲಾಗಿದೆ. ಆದರೆ ಅವರು ನ್ಯಾಯಾಲಯಕ್ಕೆ ಹಾಜರಾಗಿಲ್ಲ. ಹೀಗಾಗಿ ಸೋನು ಸೂದ್ ಅವರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಆದೇಶಿಸಲಾಗಿದೆ. ಫೆ.10ರ ಒಳಗಾಗಿ ಅದೇಶ ಪಾಲನೆ ಆಗದಿದ್ದರೆ, ಕಾರಣ ನೀಡಬೇಕು ಎಂದು ನ್ಯಾಯಾಲಯದ ಆದೇಶದ ಪ್ರತಿಯಲ್ಲಿ ಹೊರಡಿಸಲಾಗಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಫೆ.10ಕ್ಕೆ ಮುಂದೂಡಲಾಗಿದೆ.
ಈ ಸುದ್ದಿಯನ್ನೂ ಓದಿ: Sonu Sood: ಬಾಲಿವುಡ್ ನಟ ಸೋನು ಸೂದ್‌ಗೆ ಸಿಎಂ ಸ್ಥಾನ ಆಫರ್? ಭಾರೀ ವೈರಲ್ ಆಗ್ತಿದೆ ಈ ವಿಡಿಯೊ
ಸೋನು ಸೂದ್ ಕೇವಲ ನಟ ಮಾತ್ರ ಅಲ್ಲದೆ ಸಮಾಜ ಸೇವೆಯಲ್ಲಿಯೂ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಕೊರೋನಾದಂತಹ ಸಮಯದಲ್ಲಿಯೂ ಸಾಕಷ್ಟು ಕೆಲಸ ಮಾಡಿ ಮೆಚ್ಚುಗೆಯನ್ನು ಗಳಿಸಿದ್ದಾರೆ. ಇತ್ತೀಚೆಗೆ ಸೋನು ಸೂದ್ ಆಂಧ್ರಪ್ರದೇಶದ ಮುಖ್ಯ ಮಂತ್ರಿ ಚಂದ್ರ ಬಾಬು ನಾಯ್ಡು ಅವರನ್ನು ಭೇಟಿ ಮಾಡಿ ಆಂಧ್ರಕ್ಕೆ ನಾಲ್ಕು ಆಂಬ್ಯುಲೆನ್ಸ್‌ಗಳನ್ನು ದಾನ ಮಾಡಿದ್ದರು. ಕೆಲ ದಿನಗಳ ಹಿಂದೆ ಇಂಡಿಯಾ ಗೇಟ್‌ನಲ್ಲಿ ಪಾಪ್‌ಕಾರ್ನ್ ಮಾರಾಟ ಮಾಡುತ್ತಿದ್ದ ವ್ಯಕ್ತಿಗೆ ಸಹಾಯ ಮಾಡುವ ಭರವಸೆಯನ್ನು ಅವರು ನೀಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.